AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಟೆಗಟ್ಟಲೆ ಕುಳಿತು ಕೆಲಸ ಮಾಡಿ ಮತ್ತೆ ವಾಕ್ ಮಾಡಿದ್ರೆ ಪ್ರಯೋಜನವಿಲ್ಲ ಎನ್ನುತ್ತಾರೆ ಡಾ. ಸುಮಿತ್!

ಕುಳಿತು ಕೆಲಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು 10,000 ಹೆಜ್ಜೆ ನಡೆಯುತ್ತೀರಾ? ಇದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎನ್ನುತ್ತಾರೆ ವೈದ್ಯರು. ಹೌದು, ಬೆಳಿಗ್ಗೆ 9 ರಿಂದ ಸಂಜೆ 7ರ ವರೆಗೆ ಒಂದೇ ಕಡೆ ಕುಳಿತು ಸಂಜೆ ಅಥವಾ ಬೆಳಿಗ್ಗೆ ಸಮಯ ಸಿಕ್ಕಾಗ ಸಾವಿರ, ಸಾವಿರ ಹೆಜ್ಜೆ ನಡೆಯುವುದರಿಂದ ಕುಳಿತು ಕೆಲಸ ಮಾಡುವುದರಿಂದ ಉಂಟಾಗುವ ಹಾನಿಯನ್ನು ತಡೆಯಲು ಸಾಧ್ಯವಿಲ್ಲ. ಹಾಗಾದರೆ ಕುಳಿತು ಕೆಲಸ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ? ಅದನ್ನು ತಡೆಯಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಗಂಟೆಗಟ್ಟಲೆ ಕುಳಿತು ಕೆಲಸ ಮಾಡಿ ಮತ್ತೆ ವಾಕ್ ಮಾಡಿದ್ರೆ ಪ್ರಯೋಜನವಿಲ್ಲ ಎನ್ನುತ್ತಾರೆ ಡಾ. ಸುಮಿತ್!
ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದರ ಅಡ್ಡಿಪರಿಣಾಮ
ಪ್ರೀತಿ ಭಟ್​, ಗುಣವಂತೆ
|

Updated on: Nov 24, 2025 | 6:35 PM

Share

ನೀವು ಮನೆಯಲ್ಲಿಯೇ ಕುಳಿತು ಕೆಲಸ ಮಾಡತ್ತೀರಾ ಅಥವಾ ಕೆಲಸಕ್ಕಾಗಿ ಆಫೀಸಿನಲ್ಲಿ ಗಂಟೆಗಟ್ಟಲೆ ಊಟ ತಿಂಡಿಯ ಪರಿವಿಲ್ಲದಂತೆ ಕುಳಿತುಕೊಳ್ಳುತ್ತೀರಾ? ಈ ರೀತಿ ಅಭ್ಯಾಸ ನಿಮಗಿದ್ರೆ ಅಥವಾ ನೀವು ಕುಳಿತಲ್ಲಿಯೇ ಕೆಲಸ ಮಾಡುವವರಾಗಿದ್ದರೆ ತಪ್ಪದೆ ಈ ಸುದ್ದಿ ಓದಲೇ ಬೇಕು. ಹೌದು, ಕುಳಿತುಕೊಂಡು ಕೆಲಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ಹೆಣಗಾಡುವವರಿಗೆ, ಪ್ರತಿನಿತ್ಯ ಓಡಾಟವಿಲ್ಲದೆ ಕೆಲಸ ಮಾಡಿ ಬಳಿಕ 10,000 ಹೆಜ್ಜೆ ನಡಿಗೆ ಮಾಡುವವರಿಗಾಗಿ ಡಾ. ಸುಮಿತ್ ಕಪಾಡಿಯಾ (Dr Sumit Kapadia) ಎಂಬುವರು ಕೆಲವು ಸಲಹೆಗಳನ್ನು ನೀಡಿದ್ದು ಈ ಕುರಿತು ಇನ್ಸ್ಟಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಕುಳಿತು ಕೆಲಸ ಮಾಡುವುದು ಧೂಮಪಾನ ಮಾಡಿದಷ್ಟೇ ಹಾನಿಕಾರಕ. ಮಾತ್ರವಲ್ಲ ದಿನವಿಡೀ ಕುಳಿತಿದ್ದು ಬಳಿಕ ಗಂಟೆಗಳ ಕಾಲ ನಿರಂತರ ಸಾವಿರ ಹೆಜ್ಜೆಗಳ ನಡಿಗೆ ಮಾಡುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ, ಜೊತೆಗೆ ಅದರಿಂದ ಉಂಟಾಗುವ ಹಾನಿಯನ್ನು ಕೂಡ ನಿಯಂತ್ರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಹಾಗಾದರೆ ಕುಳಿತು ಕೆಲಸ ಮಾಡುವವರು ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಾಳೀಯ ಮತ್ತು ಉಬ್ಬಿರುವ ರಕ್ತನಾಳಗಳ ತಜ್ಞ ಡಾ. ಸುಮಿತ್ ಕಪಾಡಿಯಾ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ವಿಷಯದ ಕುರಿತು ಕೆಲವು ಮಾಹಿತಿ ಹಂಚಿಕೊಂಡಿದ್ದು, ಕುಳಿತು ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಇದನ್ನು ತಿಳಿದುಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ಇತ್ತೀಚಿನ ಜೀವನಶೈಲಿ ಮೊದಲಿನಂತಿಲ್ಲ. ಎಲ್ಲರೂ ಒಂದಿಲ್ಲೊಂದು ರೀತಿ ಒತ್ತಡ ಜೀವನವನ್ನು ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲ. ಕುಳಿತಲ್ಲಿಯೇ ಕೆಲಸ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಸಾಮಾನ್ಯವಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಆದರೆ ಕೆಲವರು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬೆಳಿಗ್ಗೆ ಅಥವಾ ಸಮಯ ಸಿಕ್ಕಾಗ 10,000 ಸ್ಟೆಪ್ಸ್ ನಡೆಯುವ ಚಾಲೆಂಜ್ ಹಾಕಿಕೊಳ್ಳುತ್ತಾರೆ. ಆದರೆ ಡಾ. ಸುಮಿತ್ ಕಪಾಡಿಯಾ ಅವರು, “ನೀವು ಗಂಟೆಗಳ ಕಾಲ ಕುಳಿತುಕೊಂಡು ಬಳಿಕ 10,000 ಸ್ಟೆಪ್ಸ್ ನಡೆಯುವುದರಿಂದ ಯಾವುದೇ ಪ್ರಯೋಜನ ಸಿಗುವುದಿಲ್ಲ. ನಾನು ನನ್ನ ಬಳಿ ಬರುವ ರೋಗಿಗಳಿಗೂ ಕೂಡ ಇದನ್ನೇ ಹೇಳುತ್ತೇನೆ. ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಒಂದೇ ಕಡೆ ಕುಳಿತಿದ್ದರೆ ಈಗಾಗಲೇ ನಿಮ್ಮ ರಕ್ತನಾಳಗಳು ಹಾನಿಗೊಳಗಾಗಿರುತ್ತವೆ. ಹಾಗಾಗಿ ನೀವು ನಡಿಗೆ ಮಾಡಿ ಉಪಯೋಗವಿಲ್ಲ. ಇದರ ಬದಲಾಗಿ, ನಿಮ್ಮ ದೈನಂದಿನ ಜೀವನಶೈಲಿಯಲ್ಲಿ ನೀವು ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು” ಎಂದಿದ್ದಾರೆ.

ಕುಳಿತು ಕೆಲಸ ಮಾಡುವುದರಿಂದ ಉಂಟಾಗುವ ಸಮಸ್ಯೆಗಳು?

ದೇಹದ ರಕ್ತ ಪರಿಚಲನೆ ನೀವು ಎಷ್ಟು ನಡೆಯುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುವುದಿಲ್ಲ. ಬದಲಿಗೆ, ನೀವು ಕುಳಿತಲ್ಲಿಂದ ಎಷ್ಟು ಬಾರಿ ಚಲಿಸಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಒಂದೇ ಕಡೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ರಕ್ತ ನಿಶ್ಚಲತೆ ಉಂಟಾಗುತ್ತದೆ, ಇದು ರಕ್ತನಾಳದ ಕವಾಟದ ದೌರ್ಬಲ್ಯ, ಊತ, ಉಬ್ಬಿರುವ ರಕ್ತನಾಳಗಳು ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ದಿನಕ್ಕೆ 10,000 ಹೆಜ್ಜೆ ನಡೆಯುವವರು ಈ ವಿಷಯ ತಿಳಿದುಕೊಳ್ಳಲೇಬೇಕು!

ಸಮಸ್ಯೆಯನ್ನು ತಡೆಗಟ್ಟುವ ಮಾರ್ಗಗಳು;

ಡಾ. ಕಪಾಡಿಯಾ ಪ್ರಕಾರ, ನಿಶ್ಚಲತೆ ಅಥವಾ ಒಂದೇ ಕಡೆ ಕುಳಿತುಕೊಳ್ಳುವ ಸಮಸ್ಯೆ ಮತ್ತು ಅದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅನುಸರಿಸಬೇಕಾದ ಸಲಹೆಗಳು ಇಲ್ಲಿವೆ.

  • ಪ್ರತಿ 45 ರಿಂದ 60 ನಿಮಿಷಗಳಿಗೊಮ್ಮೆ ಎದ್ದೇಳಿ.
  • ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡಲು ಸ್ಟ್ರೆಚಿಂಗ್ ಮಾಡಿ.
  • ಪ್ರತಿ ಬಾರಿ ಎದ್ದಾಗಲೂ 2 ನಿಮಿಷ ನಡೆಯಿರಿ.
  • 30 ನಿಮಿಷಗಳಿಗೊಮ್ಮೆ ಸರಳವಾದ, ಕುಳಿತುಕೊಂಡು ಮಾಡಬಹುದಾದ ಹೀಲ್ ರೈಸ್ ವ್ಯಾಯಾಮ ಮಾಡಿ.

ಈ ರೀತಿ ಸಣ್ಣ ಸಣ್ಣ ವಿರಾಮಗಳು ದೊಡ್ಡ ವ್ಯತ್ಯಾಸವನ್ನುಂಟುಮಾಡುತ್ತವೆ. ರಕ್ತನಾಳಗಳಿಗೆ ಮ್ಯಾರಥಾನ್‌ಗಳ ಅಗತ್ಯವಿರುವುದಿಲ್ಲ ಬದಲಾಗಿ ಅವುಗಳಿಗೆ ಚಲನೆ ಬೇಕಾಗುತ್ತದೆ.

ಈ ಲೇಖನವು ಮಾಹಿತಿಗಾಗಿ ಮಾತ್ರ. ಇದು ಯಾವುದೇ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಈ ಬಗ್ಗೆ ಯಾವುದೇ ರೀತಿಯ ಸಂದೇಹಗಳಿದ್ದರೂ ವೈದ್ಯರ ಸಲಹೆಯನ್ನು ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ