15 ದಿನಗಳ ಕಾಲ ಈ ಒಂದು ಅಭ್ಯಾಸ ರೂಢಿಸಿಕೊಂಡ್ರೆ ನಿಮ್ಮಲ್ಲಾಗುವ ಬದಲಾವಣೆಯನ್ನು ನೀವೇ ನಂಬಲ್ಲ!
ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳು ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ಅನೇಕ ರೀತಿಯ ರೋಗಗಳಿಂದ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಿರುತ್ತದೆ. ಆದರೆ, ಅವುಗಳ ಉಪಯೋಗಗಳ ಬಗ್ಗೆ ನಮಗೆ ತಿಳಿದಿರುವುದು ಬಹಳ ಮುಖ್ಯವಾಗುತ್ತದೆ. ಅಂತಹ ಒಂದು ಪದಾರ್ಥವೆಂದರೆ ಅದು ಮೆಂತ್ಯ. ಅದರಲ್ಲಿಯೂ ಮೆಂತ್ಯ ನೀರಿನ ನಿಯಮಿತ ಸೇವನೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಹಾಗಾದರೆ ಇದರ ನೀರನ್ನು ಸತತ 15 ದಿನಗಳ ಸೇವನೆ ಮಾಡಿದರೆ ಏನಾಗುತ್ತದೆ, ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಮ್ಮ ಅಡುಗೆ ಮನೆಯಲ್ಲಿರುವ ಅನೇಕ ಮಸಾಲೆ ಪದಾರ್ಥಗಳು (spice) ದೇಹದ ವಿವಿಧ ಕಾಯಿಲೆಗಳಿಗೆ ಶಾಶ್ವತ ಪರಿಹಾರ ನೀಡಲು ಸಹಾಯ ಮಾಡುತ್ತದೆ ಆದರೆ, ಅವುಗಳ ಉಪಯೋಗಗಳ ಬಗ್ಗೆ ನಮಗೆ ತಿಳಿದಿರುವುದು ಬಹಳ ಮುಖ್ಯವಾಗುತ್ತದೆ. ಅಂತಹ ಒಂದು ಪದಾರ್ಥವೆಂದರೆ ಅದು ಮೆಂತ್ಯ. ಇದರ ನಿಯಮಿತ ಸೇವನೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಅದರಲ್ಲಿಯೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ (Fenugreek Seed) ನೀರನ್ನು ಕುಡಿಯುವುದರಿಂದ ಸಾಕಷ್ಟು ಪ್ರಯೋಜನವಿದೆ. ಅದಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ಮೆಂತ್ಯವನ್ನು ಔಷಧೀಯ ಗಿಡಮೂಲಿಕೆಯಾಗಿ ಬಳಸಲಾಗುತ್ತಿದೆ. ಹಾಗಾದರೆ ಇದರ ನೀರನ್ನು ಸತತ 15 ದಿನಗಳ ಸೇವನೆ ಮಾಡಿದರೆ ಏನಾಗುತ್ತದೆ, ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮೆಂತ್ಯ ನೀರಿನ ಆರೋಗ್ಯ ಪ್ರಯೋಜನ:
ಮೆಂತ್ಯ ಬೀಜಗಳಲ್ಲಿ ಕಂಡುಬರುವ ನಾರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ಮೆಂತ್ಯವು ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನ್‌ನಂತೆ ಕಾರ್ಯನಿರ್ವಹಿಸುವ ನೈಸರ್ಗಿಕ ಸಂಯುಕ್ತವಾಗಿದೆ. ಅವು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಇದರ ನೀರನ್ನು ಕುಡಿಯುವುದು ಹೊಟ್ಟೆಯನ್ನು ಶುದ್ಧಗೊಳಿಸಿ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಮೆಂತ್ಯ ನೀರಿನ ನಿರ್ವಿಶೀಕರಣ ಮತ್ತು ಉರಿಯೂತ ನಿವಾರಕ ಗುಣಗಳು ಚರ್ಮದ ಮೇಲೂ ಗೋಚರಿಸುತ್ತವೆ. ಇದು ದೇಹದಿಂದ ವಿಷ ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುತ್ತದೆ. ಪರಿಣಾಮವಾಗಿ, ಮೊಡವೆಗಳು ಮಾಯವಾಗುತ್ತವೆ ಮತ್ತು ಚರ್ಮವು ನೈಸರ್ಗಿಕವಾಗಿ ಹೊಳೆಯುತ್ತದೆ. ಅದರಲ್ಲಿಯೂ ಮಧುಮೇಹ ಇರುವವರು ಈ ನೀರನ್ನು ಕುಡಿಯಲೇಬೇಕು, ಆರೋಗ್ಯಕ್ಕೆ ಬಹಳ ಒಳ್ಳೆಯದು.
ಇದನ್ನೂ ಓದಿ: ಅತಿಯಾದ ಒತ್ತಡದಿಂದ ಮುಕ್ತಿ ಪಡೆಯಲು ನೀವು ಕುಡಿಯಬೇಕಾದ ಪಾನೀಯಗಳಿವು
ಮಾಡುವುದು ಹೇಗೆ?
ಒಂದು ಟೀ ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ನೀರನ್ನು ಸೋಸಿ, ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಈ ಮೆಂತ್ಯ ಬೀಜಗಳನ್ನು ಸಹ ತಿನ್ನಬಹುದು. ಇದು ಫೈಬರ್ ಅಂಶವನ್ನು ಹೆಚ್ಚಿಸುತ್ತದೆ. ಈ ರೀತಿ 15 ದಿನ ತಪ್ಪದೆ ಮಾಡಿದರೆ ನಿಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತೆ. ನೀವು ಕೂಡ ಟ್ರೈ ಮಾಡಿ ನೋಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
