ಲಿವರ್ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನೀವು ಈ ಮೂರು ಆಹಾರಗಳಿಂದ ದೂರವಿರಲೇಬೇಕು!

ಇತ್ತೀಚಿನ ದಿನಗಳಲ್ಲಿ ಯಕೃತ್ತಿಗೆ ಅಥವಾ ಲಿವರ್ ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಯಕೃತ್ತನ್ನು ಆರೋಗ್ಯವಾಗಿಡಲು ಆಹಾರದ ಬಗ್ಗೆ ವಿಶೇಷ ಗಮನ ಹರಿಸುವುದು ಬಹಳ ಮುಖ್ಯ. ಹಾಗಾದರೆ ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರ ಸೇವನೆ ಮಾಡಬಾರದು ಮತ್ತು ಯಾವ ಆಹಾರಗಳ ಸೇವನೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಲಿವರ್ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನೀವು ಈ ಮೂರು ಆಹಾರಗಳಿಂದ ದೂರವಿರಲೇಬೇಕು!
Protect Your Liver: Top 3 Foods to Avoid Daily
Image Credit source: Getty Images

Updated on: Apr 01, 2026 | 7:28 PM

ಇತ್ತೀಚಿನ ದಿನಗಳಲ್ಲಿ ಲಿವರ್ (Liver) ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿರುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಪ್ರಮುಖ ಕಾರಣಗಳು ಅಸ್ವಸ್ಥ ಜೀವನಶೈಲಿ, ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ಹೆಚ್ಚುತ್ತಿರುವ ಜಂಕ್ ಫುಡ್ ಸೇವನೆಯಾಗಿದೆ. ಲಿವರ್ ನಮ್ಮ ದೇಹದ ಪ್ರಮುಖ ಅಂಗವಾಗಿದ್ದು, ದೇಹವನ್ನು ಡಿಟಾಕ್ಸ್ ಮಾಡುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮತ್ತು ಅಗತ್ಯ ಪೋಷಕಾಂಶಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತದೆ. ಹಾಗಾಗಿ ಲಿವರ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಫ್ಯಾಟಿ ಲಿವರ್, ಹೆಪಟೈಟಿಸ್ ಮತ್ತು ಲಿವರ್ ಹಾನಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರ ಮತ್ತು ಉತ್ತಮ ಜೀವನಶೈಲಿ ಅಗತ್ಯವಾಗಿದೆ. ಆಹಾರದಲ್ಲಿ ಅಲಕ್ಷ್ಯ ತೋರಿದರೆ ಲಿವರ್ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ, ಅದರ ಕಾರ್ಯಕ್ಷಮತೆ ನಿಧಾನವಾಗಿ ಕುಂದುತ್ತದೆ. ಹೀಗಾಗಿ ದೈನಂದಿನ ಜೀವನದಲ್ಲಿ ಸಮತೋಲನಯುತ ಆಹಾರವನ್ನು ಸೇರಿಸಿಕೊಳ್ಳುವುದು ಮತ್ತು ಹಾನಿಕಾರಕ ಆಹಾರಗಳಿಂದ ದೂರವಿರುವುದು ಮುಖ್ಯ. ಹಾಗಾದರೆ ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರ ಸೇವನೆ ಮಾಡಬಾರದು ಮತ್ತು ಯಾವ ಆಹಾರಗಳ ಸೇವನೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಲಿವರ್ ಆರೋಗ್ಯವಾಗಿರಲು ಯಾವ ಆಹಾರಗಳ ಸೇವನೆ ಮಾಡಬಾರದು?

ಲೆಡಿ ಹಾರ್ಡಿಂಗ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ನಿರ್ದೇಶಕ ಹಾಗೂ ಎಚ್‌ಒಡಿ ಡಾ. ಎಲ್. ಎಚ್. ಘೋಟೇಕರ್ ಅವರ ಪ್ರಕಾರ, ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಮೂರು ವಿಧದ ಆಹಾರಗಳಿಂದ ದೂರವಿರಬೇಕು:

ಹೆಚ್ಚು ಎಣ್ಣೆಯಲ್ಲಿ ತಯಾರಿಸಿದ ಹಾಗೂ ಕರಿದ ಆಹಾರಗಳು: ಇವು ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತವೆ ಮತ್ತು ಫ್ಯಾಟಿ ಲಿವರ್ ಸಮಸ್ಯೆಯನ್ನು ಹೆಚ್ಚಿಸಬಹುದು.

ಅತಿಯಾದ ಸಕ್ಕರೆ ಇರುವ ಆಹಾರಗಳು: ಹೆಚ್ಚು ಸಿಹಿ ಪದಾರ್ಥಗಳು ಲಿವರ್‌ನಲ್ಲಿ ಕೊಬ್ಬನ್ನು ಹೆಚ್ಚಿಸಿ ಇನ್ಸುಲಿನ್ ಪ್ರತಿರೋಧದ ಸಮಸ್ಯೆಗೆ ಕಾರಣವಾಗಬಹುದು.

ಪ್ರೊಸೆಸ್ಡ್ ಮತ್ತು ಪ್ಯಾಕೇಜ್ಡ್ ಫುಡ್‌ಗಳು: ಇವುಗಳಲ್ಲಿ ಪ್ರಿಸರ್ವೇಟಿವ್‌ಗಳು ಮತ್ತು ಹಾನಿಕಾರಕ ರಾಸಾಯನಿಕಗಳು ಇರುವುದರಿಂದ ಲಿವರ್ ಮೇಲೆ ದುಷ್ಪರಿಣಾಮ ಬೀರುತ್ತವೆ.

ಇದನ್ನೂ ಓದಿ: ಫ್ಯಾಟಿ ಲಿವರ್ ಯಾವಾಗ ಅಪಾಯಕಾರಿಯಾಗಬಹುದು? ಲಕ್ಷಣಗಳು ಹೇಗಿರುತ್ತವೆ ತಿಳಿದುಕೊಳ್ಳಿ

ಲಿವರ್ ಆರೋಗ್ಯಕ್ಕಾಗಿ ಯಾವ ಆಹಾರಗಳ ಸೇವನೆ ಮಾಡಬೇಕು?

ಸಾಮಾನ್ಯವಾಗಿ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಸಿರು ತರಕಾರಿ, ಹಣ್ಣು ಮತ್ತು ಫೈಬರ್‌ ಸಮೃದ್ಧ ಆಹಾರಗಳನ್ನು ಸೇವಿಸಬೇಕು. ವಿಶೇಷವಾಗಿ ಪಾಲಕ್, ಬ್ರೋಕೋಲಿ, ಕ್ಯಾರೆಟ್ ಮತ್ತು ಬೀಟ್‌ರೂಟ್ ಲಿವರ್‌ಗೆ ಬಹಳ ಉಪಯುಕ್ತ. ಇದರ ಜೊತೆಗೆ ಬೆಳ್ಳುಳ್ಳಿ ಮತ್ತು ಅರಿಶಿನ ಲಿವರ್ ಡಿಟಾಕ್ಸ್ ಮಾಡಲು ಸಹಾಯ ಮಾಡುತ್ತವೆ. ಸಾಕಷ್ಟು ನೀರು ಕುಡಿಯುವುದು ಕೂಡ ಅಗತ್ಯ, ಇದರಿಂದ ದೇಹದಲ್ಲಿನ ವಿಷಪದಾರ್ಥಗಳು ಹೊರಹೋಗುತ್ತವೆ. ಸಮತೋಲನಯುತ ಮತ್ತು ಪೌಷ್ಟಿಕ ಆಹಾರ ಲಿವರ್ ಅನ್ನು ಬಲವಾಗಿಡಲು ನೆರವಾಗುತ್ತದೆ. ಆಹಾರ ಮಾತ್ರವಲ್ಲ, ಜೀವನಶೈಲಿಯೂ ಮುಖ್ಯವಾಗುತ್ತದೆ. ಪ್ರತಿದಿನ ವ್ಯಾಯಾಮ ಮಾಡುವುದು, ತೂಕವನ್ನು ನಿಯಂತ್ರಣದಲ್ಲಿಡುವುದು ಮತ್ತು ಮದ್ಯಪಾನದಿಂದ ದೂರವಿರುವುದು ಅಗತ್ಯ. ಜೊತೆಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಲಿವರ್ ಸಂಬಂಧಿತ ಸಮಸ್ಯೆಗಳನ್ನು ಸಮಯಕ್ಕೆ ಮುನ್ನ ಗುರುತಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us