ನಿಮ್ಮ ದೇಹದಲ್ಲಿ ಈ ಒಂದೇ ಒಂದು ಅಂಶವಿದ್ದರೂ ಕೊರೊನಾದಿಂದ ಬಚಾವಾಗುವ ಸಾಧ್ಯತೆ ಇದೆ: ಬ್ರಿಟನ್ ತಜ್ಞರ ವರದಿ

ಗಮನಾರ್ಹ ಸಂಗತಿಯೆಂದರೆ HLA-DRB1*04:01 ಧಾತುವು ಕೆಲ ಪ್ರದೇಶಗಳ ಜನರಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುವುದಾಗಿದ್ದು, ವಾತಾವರಣಕ್ಕೂ, ಇದಕ್ಕೂ ಸಂಬಂಧವಿರುವಂತೆ ಮೇಲ್ನೋಟಕ್ಕೆ ಗೋಚರಿಸುತ್ತಿದೆ.

ನಿಮ್ಮ ದೇಹದಲ್ಲಿ ಈ ಒಂದೇ ಒಂದು ಅಂಶವಿದ್ದರೂ ಕೊರೊನಾದಿಂದ ಬಚಾವಾಗುವ ಸಾಧ್ಯತೆ ಇದೆ: ಬ್ರಿಟನ್ ತಜ್ಞರ ವರದಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on: Jun 09, 2021 | 12:13 PM

ಕೊರೊನಾ ಇಡೀ ಜಗತ್ತನ್ನೇ ವ್ಯಾಪಿಸಿ ಸರಿಸುಮಾರು ಒಂದೂವರೆ ವರ್ಷ ಉರುಳಿಹೋಗಿದೆ. ಅಂದಿನಿಂದ ಇಂದಿನ ತನಕ ಸಾಕಷ್ಟು ಆಯಾಮಗಳಲ್ಲಿ ಅಧ್ಯಯನ ಸಾಗುತ್ತಿದೆಯಾದರೂ ಕೆಲವು ವಿಚಾರಗಳು ಒಗಟಾಗಿಯೇ ಉಳಿದಿವೆ. ಅದರಲ್ಲಿಯೂ ಎರಡನೇ ಅಲೆ ಬಂದ ನಂತರ ವೈರಾಣು ಯಾರ ದೇಹದಲ್ಲಿ ಯಾವ ರೀತಿ ವರ್ತಿಸುತ್ತದೆ ಹಾಗೂ ಅದು ತೀವ್ರವಾಗಲು ನಿರ್ದಿಷ್ಟ ಕಾರಣಗಳೇನು? ಕೆಲವರು ಬಲುಬೇಗನೆ ಚೇತರಿಸಿಕೊಂಡರೆ ಇನ್ನು ಕೆಲವರು ಯಾವುದೇ ಲಕ್ಷಣಗಳಿಲ್ಲದಾಗ್ಯೂ ತೊಂದರೆ ಅನುಭವಿಸುತ್ತಿರುವುದೇಕೆ? ಹೀಗೆ ತರಹೇವಾರಿ ಗೊಂದಲಗಳು ಉಳಿದುಕೊಂಡಿವೆ. ಇತ್ತೀಚೆಗೆ ಬ್ರಿಟನ್ ತಜ್ಞರು ನಡೆಸಿದ ಅಧ್ಯಯನದಲ್ಲಿ ಆಸಕ್ತಿದಾಯಕ ವಿಚಾರವೊಂದು ಬಹಿರಂಗವಾಗಿದೆ. ಕೆಲವರ ದೇಹದಲ್ಲಿ ಇರುವ ನಿರ್ದಿಷ್ಟವಾದ ಅನುವಂಶಿಕ ಧಾತು (ಜೀನ್​) ಕೊರೊನಾ ವಿರುದ್ಧ ಹೋರಾಡಲು ದೇಹಕ್ಕೆ ಸಹಕಾರಿಯಾಗಿದೆ ಎಂದು ಅಧ್ಯಯನದ ವರದಿ ತಿಳಿಸಿದೆ.

ಬ್ರಿಟನ್​ನ ನ್ಯೂ ಕ್ಯಾಸಲ್ ವಿಶ್ವವಿದ್ಯಾಲಯದ ತಜ್ಞರ ತಂಡ ನಡೆಸಿದ ಅಧ್ಯಯನದಲ್ಲಿ ಕೊರೊನಾ ಸೋಂಕಿಗೆ ತುತ್ತಾದರೂ ಯಾವುದೇ ಗುಣಲಕ್ಷಣಗಳನ್ನು ತೋರ್ಪಡಿಸದವರ ದೇಹದಲ್ಲಿ HLA-DRB1*04:01 ಎಂಬ ಧಾತು ಉಳಿದವರ ದೇಹಕ್ಕಿಂತ ಮೂರು ಪಟ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಈ ಅಂಶವು ಕೊರೊನಾ ಸೋಂಕಿನಿಂದ ದೇಹವನ್ನು ಕಾಪಾಡುವಲ್ಲಿ ಸಶಕ್ತವಾಗಿದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸುತ್ತಿದ್ದು, ಕೊರೊನಾದಿಂದ ತೀವ್ರ ಪರಿಣಾಮ ಎದುರಿಸುತ್ತಿರುವವರು ಹಾಗೂ ಆರಾಮಾಗಿ ಸೋಂಕಿನಿಂದ ಪಾರಾದವರು ಇಬ್ಬರನ್ನೂ ಸಂಶೋಧನೆಗೆ ಒಳಪಡಿಸಿ ಈ ವಿಚಾರವನ್ನು ಕಂಡುಕೊಂಡಿದ್ದಾರೆ.

ಗಮನಾರ್ಹ ಸಂಗತಿಯೆಂದರೆ HLA-DRB1*04:01 ಧಾತುವು ಕೆಲ ಪ್ರದೇಶಗಳ ಜನರಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುವುದಾಗಿದ್ದು, ವಾತಾವರಣಕ್ಕೂ, ಇದಕ್ಕೂ ಸಂಬಂಧವಿರುವಂತೆ ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಅಕ್ಷಾಂಶ, ರೇಖಾಂಶಗಳ ಸಹಾಯದಿಂದ ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಸದರಿ ಧಾತು ಯುರೋಪ್​ ಪ್ರಾಂತ್ಯದ ಉತ್ತರ ಹಾಗೂ ಪಶ್ಚಿಮ ಭಾಗದ ಜನರಲ್ಲಿ ಅಧಿಕ ಪ್ರಮಾಣದಲ್ಲಿರುವುದು ಕಂಡುಬಂದಿದೆ.

ಈ ಕಾರಣದಿಂದ ಉತ್ತರ ಹಾಗೂ ಪಶ್ಚಿಮ ಯುರೋಪ್ ಭಾಗದ ಜನರು ಕೊರೊನಾ ಸೋಂಕಿಗೆ ತುತ್ತಾದರೂ ಯಾವುದೇ ಗುಣಲಕ್ಷಣಗಳನ್ನು ತೋಪರ್ಡಿಸದೇ ಗುಣಮುಖರಾಗುವ ಸಂಭವ ಹೆಚ್ಚಿದೆ ಎಂದೂ ಆದರೆ, ಆ ಹಂತದಲ್ಲೂ ರೋಗ ಹರಡಿಸುವ ಎಲ್ಲಾ ಸಾಧ್ಯತೆಗಳನ್ನೂ ಒಳಗೊಂಡಿರುತ್ತಾರೆ ಎಂದೂ ಅಧ್ಯಯನ ತಿಳಿಸಿದೆ. ಜತೆಗೆ, ಯುರೋಪ್​ನ ಐದರಲ್ಲಿ ಒಬ್ಬ ವ್ಯಕ್ತಿ ಈ ಜೀನ್ ಹೊಂದಿರುವ ಸಾಧ್ಯತೆಯನ್ನೂ ಪುಷ್ಠೀಕರಿಸಿದೆ.

ಸದರಿ ಅಧ್ಯಯನದ ಬಗ್ಗೆ ಮಾತನಾಡಿರುವ ಡಾ. ಕಾರ್ಲೋಸ್, ಇದೊಂದು ಅತ್ಯಂತ ಪ್ರಮುಖ ಅಧ್ಯಯನವಾಗಿದ್ದು, ಮುಂದಿನ ಹಂತದಲ್ಲಿ ಲಸಿಕೆ ತಯಾರಿಸುವುದಕ್ಕೂ ಹಾಗೂ ಜನರನ್ನು ಸೋಂಕಿನಿಂದ ರಕ್ಷಿಸಲು ಹೊಸ ಮಾರ್ಗ ಅನುಸರಿಸುವುದಕ್ಕೂ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಗುಣಮುಖರಾದವರಲ್ಲಿ ಮತ್ತೊಂದು ಸಮಸ್ಯೆ.. ಕಾಲುಗಳು ಕಟ್ 

ಕೊರೊನಾ 3ನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ಆತಂಕ ಬೇಡ: ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೆರಿಯಾ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್