ABC juice: ಎಬಿಸಿ ಜ್ಯೂಸ್ ಎಂದರೇನು? ನಿಮ್ಮ ದಿನ ಉತ್ತಮವಾಗಿರಲು ಇದು ಹೇಗೆ ಸಹಾಯ?

ಎಬಿಸಿ ಜ್ಯೂಸ್ ನಿಮ್ಮ ದಿನವನ್ನು ಹಲವಾರು ಆರೋಗ್ಯ ಪ್ರಯೋಜನಗಳೊಂದಿಗೆ ಪ್ರಾರಂಭಿಸಲು ಸಹಾಯ ಮಾಡುತ್ತದೆ. ಜೊತೆಗೆ ಪೌಷ್ಟಿಕಾಂಶವನ್ನು ನೀಡುತ್ತದೆ. ಹಾಗಾದರೆ ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ABC juice: ಎಬಿಸಿ ಜ್ಯೂಸ್ ಎಂದರೇನು? ನಿಮ್ಮ ದಿನ ಉತ್ತಮವಾಗಿರಲು ಇದು ಹೇಗೆ ಸಹಾಯ?
ಸಾಂದರ್ಭಿಕ ಚಿತ್ರ
Edited By:

Updated on: Aug 11, 2023 | 6:24 PM

ಇಂದಿನ ವೇಗದ ಜಗತ್ತಿನಲ್ಲಿ, ನಿಮ್ಮ ದಿನವನ್ನು ಪ್ರಾರಂಭಿಸಲು ಆರೋಗ್ಯಕರ ಮತ್ತು ನೈಸರ್ಗಿಕ ಮಾರ್ಗವನ್ನು ಕಂಡುಹಿಡಿಯುವುದು ಅತ್ಯಗತ್ಯ. ಹಾಗಾಗಿ ಇದೆಲ್ಲದಕ್ಕೂ ಉತ್ತಮ ಮಾರ್ಗವೆಂದರೆ ಎಬಿಸಿ ಜ್ಯೂಸ್. ಅಂದರೆ ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್​​ನ ಶಕ್ತಿಯುತ ಮಿಶ್ರಣ. ಇದರಲ್ಲಿ ವ್ಯಾಪಕ ಶ್ರೇಣಿಯ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಕಿಣ್ವಗಳಿಂದ ತುಂಬಿದೆ, ಹಾಗಾಗಿ ಇದನ್ನು ಕುಡಿಯುವುದರಿಂದ ದಿನಪೂರ್ತಿ ನಿಮ್ಮನ್ನು ತಾಜಾತನದಿಂದಿರುವಂತೆ ನೋಡಿಕೊಳ್ಳುತ್ತದೆ. ಎಬಿಸಿ ಜ್ಯೂಸ್ ನಿಮ್ಮ ದಿನವನ್ನು ಹಲವಾರು ಆರೋಗ್ಯ ಪ್ರಯೋಜನಗಳೊಂದಿಗೆ ಪ್ರಾರಂಭಿಸಲು, ರುಚಿಕರವಾದ ಮತ್ತು ಪೌಷ್ಟಿಕಾಂಶಯುಕ್ತವಾದ ಆಯ್ಕೆಯಾಗಿದೆ. ಅದೆಲ್ಲದರ ಜೊತೆಗೆ ಈ ಜ್ಯೂಸ್ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಒಟ್ಟಾರೆ ನಿಮ್ಮ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ಹಾಗಾಗಿ ಇದು ಆರೋಗ್ಯಕರ ಜೀವನಶೈಲಿಗೆ ಅತ್ಯುತ್ತಮ ಸೇರ್ಪಡೆಯಾಗಿದೆ.

ನಿಮ್ಮ ದೈನಂದಿನ ದಿನಚರಿಯಲ್ಲಿ ಎಬಿಸಿ ಜ್ಯೂಸ್ ಸೇರಿಸಿಕೊಳ್ಳುವುದರಿಂದ ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಗಮನಾರ್ಹವಾಗಿ ಪ್ರಯೋಜನವಾಗಬಹುದು ಎಂಬುದಕ್ಕೆ ಐದು ಬಲವಾದ ಕಾರಣಗಳು ಇಲ್ಲಿವೆ.

ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ: ಎಬಿಸಿ ರಸವು ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ. ಸೇಬುಗಳ ಶಕ್ತಿ, ಬೀಟ್ರೂಟ್ ನಲ್ಲಿರುವ ಕಬ್ಬಿಣ ಮತ್ತು ಪೊಟ್ಯಾಸಿಯಮ್ ಹಾಗೂ ಕ್ಯಾರೆಟ್ ನಲ್ಲಿರುವ ಬೀಟಾ -ಕ್ಯಾರೋಟಿನ್ನೊಂದಿಗೆ ಸಂಯೋಜನೆಗೊಂಡಿರುತ್ತದೆ, ಹಾಗಾಗಿ ಇದು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳ ನೀಡುತ್ತದೆ.

ತ್ವರಿತ ಶಕ್ತಿ ವರ್ಧಕವಾಗಿದೆ: ಸೇಬುಗಳಲ್ಲಿನ ನೈಸರ್ಗಿಕ ಸಕ್ಕರೆಯ ಗುಣ, ಎಬಿಸಿಯಲ್ಲಿರುವ ಹೈಡ್ರೇಟಿಂಗ್ ಗುಣಲಕ್ಷಣಗಳೊಂದಿಗೆ, ತ್ವರಿತ ಶಕ್ತಿ ವರ್ಧಕವನ್ನು ಒದಗಿಸುತ್ತವೆ, ಇದು ದಿನವಿಡೀ ತಾಜಾತನದಿಂದರಲೂ ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ನಿಮ್ಮ ದೇಹಕ್ಕೆ ಸಮೃದ್ಧ ಪೋಷಣೆಯನ್ನು ನೀಡುವ ಎಬಿಸಿಜಿ ಜ್ಯೂಸ್

ಜೀರ್ಣಕಾರಿ ಆರೋಗ್ಯಕ್ಕೆ ಬೆಂಬಲ ನೀಡುತ್ತದೆ: ಸೇಬು ಮತ್ತು ಕ್ಯಾರೆಟ್​​ನಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ಬೀಟ್ರೂಟ್ ನಿರ್ವಿಷಗೊಳಿಸುವ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಆರೋಗ್ಯಕರ ಕರುಳನ್ನು ಉತ್ತೇಜಿಸುತ್ತವೆ ಮತ್ತು ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ಜೀರ್ಣಶಕ್ತಿಗೆ ಸಂಬಂಧ ಪಟ್ಟಂತೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಎಬಿಸಿ ಜ್ಯೂಸ್ ನಲ್ಲಿರುವ ಹೆಚ್ಚಿನ ವಿಟಮಿನ್ ಸಿ ಅಂಶವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೊತೆಗೆ ಉತ್ಕರ್ಷಣ ನಿರೋಧಕಗಳು ಫ್ರೀ ರಾಡಿಕಲ್​​​ಗಳ ವಿರುದ್ಧ ಹೋರಾಡುತ್ತವೆ, ಕಾಯಿಲೆಗಳನ್ನು ದೂರವಿಡುತ್ತವೆ.

ಸೌಂದರ್ಯ ವರ್ಧಕ: ಎಬಿಸಿ ಜ್ಯೂಸ್ ನಲ್ಲಿರುವ ವಿಟಮಿನ್ ಗಳು ಮತ್ತು ಉತ್ಕರ್ಷಣ ನಿರೋಧಕಗಳು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತವೆ ಮತ್ತು ನಿಮ್ಮ ಜೀವಕೋಶಗಳನ್ನು ರಕ್ಷಿಸುತ್ತವೆ. ಜೊತೆಗೆ ಇದು ಆರೋಗ್ಯಕರ ಚರ್ಮ ಮತ್ತು ಕೂದಲಿಗೆ ಉತ್ತಮ ಆಯ್ಕೆಯಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us