ಮೊದಲೇ ಸ್ವೀಟ್ಸ್​​ ಅಂದ್ರೆ ದೇಹಾರೋಗ್ಯಕ್ಕೆ ಅಷ್ಟಕ್ಕಷ್ಟೇ! ಅಂಥಾದ್ದರಲ್ಲಿ ಕಲಬೆರಕೆ ತಿಂದುಬಿಟ್ರೆ ಅಂತೂ… ಹುಷಾರಾಗಿ ನೋಡಿಕೊಂಡು ತಿನ್ನಿ!

ಕಲಬೆರಕೆ, ನಕಲಿ ಎಂಬುದು ಈಗ ಯಾವುದರಲ್ಲಿ ಇಲ್ಲ? ಎಲ್ಲಿ ಇಲ್ಲ? ಹೇಳೀ ನೋಡೋಣಾ... ಮೊದಲೇ ಸ್ವೀಟ್ಸ್​​ ಅಂದ್ರೆ ದೇಹಾರೋಗ್ಯಕ್ಕೆ ಅಷ್ಟಕ್ಕಷ್ಟೇ! ಅಂಥಾದ್ದರಲ್ಲಿ ಕಲಬೆರಕೆ ತಿಂದುಬಿಟ್ರೆ ಅಂತೂ... ಹುಷಾರಾಗಿ ನೋಡಿಕೊಂಡು ತಿನ್ನಿ!

ಮೊದಲೇ ಸ್ವೀಟ್ಸ್​​ ಅಂದ್ರೆ ದೇಹಾರೋಗ್ಯಕ್ಕೆ ಅಷ್ಟಕ್ಕಷ್ಟೇ! ಅಂಥಾದ್ದರಲ್ಲಿ ಕಲಬೆರಕೆ ತಿಂದುಬಿಟ್ರೆ ಅಂತೂ... ಹುಷಾರಾಗಿ ನೋಡಿಕೊಂಡು ತಿನ್ನಿ!
ಕಲಬೆರಕೆ ಸ್ವೀಟ್ಸ್​​ ... ಹುಷಾರಾಗಿ ನೋಡಿಕೊಂಡು ತಿನ್ನಿ!
Follow us
ಸಾಧು ಶ್ರೀನಾಥ್​
|

Updated on: Jun 06, 2023 | 7:15 PM

ಕಲಬೆರಕೆ, ನಕಲಿ ಎಂಬುದು ಈಗ ಯಾವುದರಲ್ಲಿ ಇಲ್ಲ? ಎಲ್ಲಿ ಇಲ್ಲ? ಹೇಳೀ ನೋಡೋಣಾ… ಜಗತ್ತೇ ಕಲಬೆರಕೆ ಆಗಿಬಿಟ್ಟಿದೆ. ಇನ್ನು ನಮ್ಮ ನಡುವಣ ಮಾರುಕಟ್ಟೆಯಲ್ಲಿ ಬಹಳಷ್ಟು ಮಂದಿ ಖಾದ್ಯ ಪದಾರ್ಥ ಅಂಗಡಿಕಾರರು ಕಲಬೆರಕೆ ವಸ್ತುಗಳನ್ನು ಬಳಸಿ ಸಿಹಿ ತಯಾರಿಸಿ (Adulterated fake Sweets) ಲಾಭ ಮಾಡಿಕೊಳ್ಳುವುದನ್ನೇ ದಂಧೆಯಾಗಿಸಿಕೊಂಡಿದ್ದಾರೆ. ಇದು ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಸಿಹಿತಿಂಡಿಗಳನ್ನು ತಯಾರಿಸಲು ಖೋವಾ, ತುಪ್ಪ, ಎಣ್ಣೆ, ಹಾಲು, ಕೃತಕ ಸುವಾಸನೆ, ಕೃತಕ ಬಣ್ಣವನ್ನು ಬಳಸಲಾಗುತ್ತದೆ. ಸಿಹಿತಿಂಡಿಗಳಲ್ಲಿ ಸೀಮೆಸುಣ್ಣ, ಯೂರಿಯಾ, ಸಾಬೂನು, ವೈಟನರ್‌ಗಳಂತಹ ಕೃತಕ ಪದಾರ್ಥಗಳನ್ನು (Adulteration) ಸೇರಿಸುವುದುಂಟು. ಇವುಗಳ ಪ್ರಮಾಣವನ್ನು ಹೆಚ್ಚಿಸುವುದರಿಂದ ಅನೇಕ ಆರೋಗ್ಯ ಅಪಾಯಗಳು ಉಂಟಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವ ನೃತ್ಯವಾಡುತ್ತಿದೆ. ಇತ್ತೀಚೆಗೆ, ಟಾಸ್ಕ್ ಫೋರ್ಸ್ ಪೊಲೀಸರು ಹೈದರಾಬಾದ್‌ನಲ್ಲಿ (hyderabad) ಕಲಬೆರಕೆ ಸಿಹಿತಿಂಡಿಗಳ ಗುಂಪನ್ನು ಭೇದಿಸಿದ್ದಾರೆ.

ನಕಲಿ ಕೋವಾ.. ಸಿಹಿ ತಿನಿಸಿಗೆ ಹಬ್ಬಿದೆ. ಮಹಾನಗರದ ದಕ್ಷಿಣ ವಲಯ ಟಾಸ್ಕ್ ಫೋರ್ಸ್ ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಹೈದರಾಬಾದ್‌ನ ಲಾಲ್​ ದರ್ವಾಜಾ ಪ್ರದೇಶದಲ್ಲಿ ನಕಲಿ ಸಿಹಿತಿಂಡಿಗಳ ದಂಧೆಯನ್ನು ಭೇದಿಸಿದ್ದಾರೆ. ಕಲಕಂಡ, ಅಜ್ಮೀರಿ ಕಲಕಂಡ ಮತ್ತು ಖೋವಾ ಮುಂತಾದ ಸಿಹಿತಿಂಡಿಗಳನ್ನು ಹಾಲಿನ ಪುಡಿ ಮತ್ತು ರಾಸಾಯನಿಕಗಳೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು.

Also Read: ಒಣ ಮೆಣಸಿನಕಾಯಿ ಮಾರಾಟದಲ್ಲೂ ಕಲಬೆರಕೆ ಅಪಾಯ! ಅದಕ್ಕೇ ಮೇಳ ಆಯೋಜನೆ, ಕೆಂಪು ಸುಂದರಿಗೆ ಇದೆ ಬಂಗಾರದ ಬೆಲೆ

ರಾಜಸ್ಥಾನ ಸರ್ಕಾರ ಬಾಲ ಗೋಪಾಲ್ ಯೋಜನೆ ಅಡಿಯಲ್ಲಿ ಉಚಿತವಾಗಿ ಹಾಲಿನ ಪುಡಿಯನ್ನು ನೀಡುತ್ತಿದೆ. ಅಲ್ಲಿಂದ ಸಂಘಟಕರು ಹಾಲಿನ ಪುಡಿಯನ್ನು ತೆಲಂಗಾಣಕ್ಕೆ ರವಾನೆ ಮಾಡುತ್ತಿದ್ದಾರೆ. ಆ ಹಾಲಿನ ಪುಡಿಯಲ್ಲಿ ವಿವಿಧ ರಾಸಾಯನಿಕಗಳನ್ನು ಬೆರೆಸಿ ಇಲ್ಲಿ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ. ತಪಾಸಣೆ ವೇಳೆ ಹಲವಾರು ನಕಲಿ/ಕಲಬೆರಕೆ ಸಿಹಿ ತಿಂಡಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಎಷ್ಟು ದಿನದಿಂದ ನಕಲಿ ದಂಧೆ ಮಾಡುತ್ತಿದ್ದರು? ಯಾವೆಲ್ಲಾ ಪ್ರದೇಶಗಳಿಗೆ ಸರಬರಾಜು ಮಾಡುತ್ತಿದ್ದರು ಎಂಬುದರ ಬಗ್ಗೆ ಪೊಲೀಸರು ಮತ್ತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಆರೋಗ್ಯ ಕುರಿತಾದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್