Heart Health: ಪೌಷ್ಠಿಕತಜ್ಞರ ಪ್ರಕಾರ ಹೃದಯದ ಆರೋಗ್ಯಕ್ಕೆ ಉತ್ತಮವಾದ 7 ಸಮೃದ್ಧ ಆಹಾರಗಳು ಯಾವುವು?

ಈ ಏಳು ಸಮೃದ್ಧ ಆಹಾರಗಳು ನಮ್ಮ ದೇಹದ ಪೌಷ್ಠಿಕಾಂಶಗಳನ್ನು ಹೇಗೆ ಪೂರೈಸಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಜೊತೆಗೆ ನಮ್ಮ ಹೃದಯವನ್ನು ಯಾವ ರೀತಿಯಲ್ಲಿ ಆರೋಗ್ಯಕರವಾಗಿಸಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Heart Health: ಪೌಷ್ಠಿಕತಜ್ಞರ ಪ್ರಕಾರ ಹೃದಯದ ಆರೋಗ್ಯಕ್ಕೆ ಉತ್ತಮವಾದ 7 ಸಮೃದ್ಧ ಆಹಾರಗಳು ಯಾವುವು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 07, 2023 | 3:56 PM

ಪ್ರಪಂಚದಾದ್ಯಂತ ಪ್ರತಿ ವರ್ಷ 17.9 ದಶಲಕ್ಷಕ್ಕೂ ಹೆಚ್ಚು ಜೀವಗಳ ಮೇಲೆ ಪರಿಣಾಮ ಬೀರುವ ಹೃದಯ ಸಮಸ್ಯೆಗಳು, ಸಾವಿಗೆ ಪ್ರಮುಖ ಕಾರಣವಾಗಿದೆ. ಹಾಗಾಗಿ ಹೃದಯದ ಆರೋಗ್ಯವು ಅತ್ಯಂತ ಮುಖ್ಯ. ಇದನ್ನು ಸಾಬೀತುಪಡಿಸಲು ನಮಗೆ ಯಾವುದೇ ಅಧ್ಯಯನಗಳ ಅಗತ್ಯವಿಲ್ಲ. ನಿಮ್ಮ ಮೆದುಳು ಮತ್ತು ಹೃದಯವು ಇಡೀ ದೇಹವನ್ನು ನಿಯಂತ್ರಿಸುತ್ತದೆ. ಅದರಲ್ಲಿ ಎಲ್ಲಿಯಾದರೂ ಏರುಪೇರಾದಲ್ಲಿ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಉಂಟಾಗಿ ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡದಂತಹ ಪರಿಸ್ಥಿತಿಗಳು ಉದ್ಭವಿಸುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಹೃದಯದ ಅನಾರೋಗ್ಯಕ್ಕೆ ಒತ್ತಡವೂ ಒಂದು ಪ್ರಮುಖ ಅಂಶವಾಗಿದೆ ಜೊತೆಗೆ ನಿಮ್ಮ ದೈನಂದಿನ ಆಹಾರವು ಹೃದಯಕ್ಕೆ ಸಾಕಷ್ಟು ಆರೋಗ್ಯ ಒದಗಿಸುತ್ತದೆ ಎಂದು ನೀವು ಭಾವಿಸುತ್ತೀರಾ? ಎಚ್ ಟಿ ಲೈಫ್ ಸ್ಟೈಲ್​​ನ ಸ್ಥಾಪಕ ಮತ್ತು ನಿರ್ದೇಶಕ ಡಾ. ಅಮಿತ್ ದೇಶಪಾಂಡೆ ಅವರು ಎಚ್ ಟಿ ಲೈಫ್ ಸ್ಟೈಲ್​​ಗೆ ನೀಡಿದ ಸಂದರ್ಶನದಲ್ಲಿ, “ನೀವು ನಗರ ಪರಿಸರದಲ್ಲಿ ವಾಸಿಸುತ್ತಿದ್ದರೆ, ನೀವು ಸೇವಿಸುವ ಯಾವುದೂ 100% ಶುದ್ಧವಲ್ಲ.” ಕಲಬೆರಕೆ” ನೀವು ದಿನ ನಿತ್ಯ ಬಳಸುವ ವಸ್ತುಗಳನ್ನು ಸರಿಯಾಗಿ ತೊಳೆಯದಿದ್ದರೆ ಆರೋಗ್ಯ ಕೆಡುತ್ತದೆ. ಬಳಿಕ ಇದು ದೇಹದಲ್ಲಿ ಅಗತ್ಯ ಪೋಷಕಾಂಶಗಳ ದೊಡ್ಡ ಕೊರತೆಗೆ ಕಾರಣವಾಗುತ್ತದೆ. ಆದರೆ ನಿಮ್ಮ ಹೃದಯಕ್ಕೆ ಬೇಕಾಗುವ ಪೂರಕಗಳು ಅಥವಾ ಸಮೃದ್ಧ ಆಹಾರಗಳು ಈ ಪೌಷ್ಠಿಕಾಂಶದ ಅಂತರವನ್ನು ನಿವಾರಿಸುತ್ತವೆ ಎಂದಿದ್ದಾರೆ.

ಸಮೃದ್ಧ ಆಹಾರಗಳು ಸುಲಭವಾಗಿ ನಿಮಗೆ ಲಭ್ಯವಿದೆ. ಕೆಲವೊಮ್ಮೆ ಇದಕ್ಕೆ ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲ, ಆದರೆ ಇವುಗಳನ್ನು ತೆಗೆದುಕೊಳ್ಳಲು ಉತ್ತಮ ಮಾರ್ಗಗಳಿವೆ. ನಿಮ್ಮ ಬಿಡುವಿಲ್ಲದ ಸಮಯದಲ್ಲಿ ಪೌಷ್ಠಿಕಾಂಶ ಭರಿತ ಆಹಾರಕ್ಕೆ ಸ್ಥಳವಿಲ್ಲ ಮತ್ತು ಜಡ ಜೀವನಶೈಲಿಯೊಂದಿಗೆ ನಾವು ತುಂಬಾ ಆರಾಮದಾಯಕವಾಗಿದ್ದೇವೆ. ಜಂಕ್ ಫುಡ್, ಅಸಮತೋಲಿತ ನಿದ್ರೆಯ ದಿನಚರಿ, ಮಾನಸಿಕ ಒತ್ತಡ (ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್​​ಗಳಲ್ಲಿ ಗಂಟೆಗಟ್ಟಲೆ ಕಾಲ ಕಳೆಯುವುದು) ಮತ್ತು ಆರೋಗ್ಯದ ಬಗ್ಗೆ ಅಜ್ಞಾನ ಹೊಂದಿರುವುದು ನಮ್ಮ ಹೃದಯದ ಆರೋಗ್ಯಕ್ಕೆ ಹಾನಿ ಮಾಡುವ ಪ್ರಮುಖ ಅಂಶಗಳಾಗಿವೆ.

ಅವರ ಪ್ರಕಾರ, ನಾವು ನಮ್ಮ ದೇಹದ ಪೌಷ್ಠಿಕಾಂಶ ಪೂರೈಸಲು ಈ ಏಳು ಸಮೃದ್ಧ ಆಹಾರಗಳು ಸಹಾಯ ಮಾಡುತ್ತದೆ ಜೊತೆಗೆ ನಮ್ಮ ಹೃದಯವನ್ನು ಸಂತೋಷ ಮತ್ತು ಆರೋಗ್ಯಕರವಾಗಿಸಬಹುದು:

1. ಒಮೆಗಾ 3 ಕೊಬ್ಬಿನಾಮ್ಲಗಳು: ಈ ಸಮೃದ್ಧ ಆಹಾರದ ಟ್ರೈಗ್ಲಿಸರೈಡ್​​ಗಳು (ದೇಹದಲ್ಲಿನ ಅತ್ಯಂತ ಸಾಮಾನ್ಯ ರೀತಿಯ ಕೊಬ್ಬುಗಳು), ಉರಿಯೂತ, ಪಾರ್ಶ್ವವಾಯು ಮತ್ತು ಇತರ ಹೃದಯ ಪರಿಸ್ಥಿತಿಗಳನ್ನು ಕಡಿಮೆ ಮಾಡುವಲ್ಲಿ ಪವಾಡ ಸದೃಶವಾಗಿ ಕಾರ್ಯ ನಿರ್ವಹಿಸುತ್ತವೆ. ವಾಲ್ನಟ್, ಚಿಯಾ ಬೀಜಗಳು, ಮೀನು, ಅಗಸೆ ಬೀಜದ ಎಣ್ಣೆ ಮತ್ತು ಕನೋಲಾ ಎಣ್ಣೆಯಂತಹ ಆಹಾರ ಪದಾರ್ಥಗಳು ಒಮೆಗಾ 3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲಗಳಾಗಿವೆ. ಆಹಾರದ ಮೂಲಕ ಸಾಧ್ಯವಾಗದಿದ್ದರೆ ಒಮೆಗಾ 3 ಕೊಬ್ಬಿನಾಮ್ಲಗಳ ಕ್ಯಾಪ್ಸೂಲ್ಗಳನ್ನು ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಇದು ಹೃದಯ ರಕ್ತನಾಳದ ಕಾರ್ಯ ನಿರ್ವಹಣೆಗೆ ಮತ್ತು ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಾಣವನ್ನು ಕಡಿಮೆ ಮಾಡುವಾಗ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

2. ಮೆಗ್ನೀಸಿಯಮ್: ಅಧ್ಯಯನದ ಪ್ರಕಾರ, ಮೆಗ್ನೀಸಿಯಮ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಮೆಗ್ನೀಸಿಯಮ್ ಕೊರತೆಯು ಸ್ನಾಯು ಸಂಕೋಚನಗಳು, ಸೆಳೆತಗಳು, ಅಸಹಜ ಹೃದಯ ಲಯಗಳು(ಹಾರ್ಟ್ ಬೀಟ್ ಏರುಪೇರು), ವ್ಯಕ್ತಿತ್ವ ಬದಲಾವಣೆ ಮತ್ತು ಸೆಳೆತಗಳಿಗೆ ಕಾರಣವಾಗಬಹುದು. ಗೋಡಂಬಿ, ಬಾದಾಮಿ, ಧಾನ್ಯಗಳು, ದ್ವಿದಳ ಧಾನ್ಯಗಳು, ಬೀಜಗಳು ಮತ್ತು ಡೈರಿ ಉತ್ಪನ್ನಗಳು ಮೆಗ್ನೀಸಿಯಮ್ನ ಕೆಲವು ಸಮೃದ್ಧ ಮೂಲಗಳಾಗಿವೆ.

3. ಕಾಡ್ ಲಿವರ್ ಆಯಿಲ್: ಈ ಮೀನಿನ ಎಣ್ಣೆಯು ಮಾನವ ದೇಹಕ್ಕೆ ಹಲವಾರು ಪ್ರಯೋಜನಗಳಿಗೆ ಹೆಸರು ವಾಸಿಯಾಗಿದೆ. ಉತ್ಕರ್ಷಣ ನಿರೋಧಕಗಳು, ಆರೋಗ್ಯಕರ ಕೊಬ್ಬಿನಾಂಶ ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಕಾಡ್ ಲಿವರ್ ತೈಲವು ಹೃದ್ರೋಗಗಳಿಗೆ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತವನ್ನು, ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡಲು ಪರಿಣಾಮ ಕಾರಿಯಾಗಿದೆ. ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳ ಗಟ್ಟಿಗೊಳಿಸಲು ಕಾಡ್ ಲಿವರ್ ಎಣ್ಣೆ ಅತ್ಯುತ್ತಮವಾಗಿದೆ ಎಂದು ಹೇಳಲಾಗುತ್ತದೆ. ಇವುಗಳನ್ನು ಹೆಚ್ಚಾಗಿ ಆರೋಗ್ಯ ತಜ್ಞರು ಸೂಚಿಸುತ್ತಾರೆ ಮತ್ತು ಅವುಗಳನ್ನು ಸೇವಿಸಲು ಪ್ರಿಸ್ಕ್ರಿಪ್ಷನ್ ಅಥವಾ ವೈದ್ಯರ ಶಿಫಾರಸು ಬೇಕಿಲ್ಲ.

4. ಫೋಲೇಟ್ (ಫೋಲಿಕ್ ಆಮ್ಲ) : ಫೋಲಿಕ್ ಆಮ್ಲ (ವಿಟಮಿನ್ ಬಿ) ಅನೇಕ ಜನರಲ್ಲಿ ಹೃದಯಾಘಾತ ಮತ್ತು ಪಾರ್ಶ್ವ ವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ತರಕಾರಿಗಳು, ಬೀನ್ಸ್ ಮತ್ತು ಸಿಟ್ರಸ್ ಹಣ್ಣುಗಳು ಫೋಲೇಟ್ ನ ಅದ್ಭುತ ಮೂಲಗಳಾಗಿವೆ. ಈ ಸಮೃದ್ಧ ಆಹಾರವು ಸ್ವಾಭಾವಿಕವಾಗಿ ಅನೇಕ ಆಹಾರ ಪದಾರ್ಥಗಳಲ್ಲಿ ಇರುತ್ತದೆ ಬಹುಶಃ ಕ್ಯಾಪ್ಸೂಲ್ ಅಥವಾ ಇತರರ ರೂಪದಲ್ಲಿ ಇದು ನಿಮ್ಮ ದಿನಚರಿಯ ಭಾಗವಾಗಿರಬಹುದು. ನೀವು ಈಗಾಗಲೇ ಕೆಲವು ಔಷಧಿಗಳು, ಅಥವಾ ಚಿಕಿತ್ಸೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಫೋಲಿಕ್ ಆಮ್ಲದ ಸೇವನೆಯು ಪರಿಣಾಮಕಾರಿಯಾಗಿರದಿದ್ದರೆ, ಡೋಸೇಜ್ ಅನ್ನು ಪ್ರಾರಂಭಿಸುವ ಮೊದಲು ನೀವು ತಜ್ಞರೊಂದಿಗೆ ಮಾತನಾಡುವುದು ಉತ್ತಮ.

5. ದ್ರಾಕ್ಷಿ ಬೀಜದ ಸಾರ: ನೀವು ಅಧಿಕ ರಕ್ತದೊತ್ತಡವನ್ನು ಹೊಂದಿದ್ದರೆ, ದ್ರಾಕ್ಷಿ ಬೀಜದ ಸಾರವು ನಿಮ್ಮ ದಿನಚರಿಯಲ್ಲಿ ಸೇರಿಸಲು ಸರಿಯಾದ ವಿಷಯವಾಗಿದೆ. ಇದು ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅಧ್ಯಯನದ ಪ್ರಕಾರ, 8-16 ವಾರಗಳವರೆಗೆ ಪ್ರತಿದಿನ ಸುಮಾರು 100 ಮಿಗ್ರಾಂ ನಿಂದ 800 ಮಿಗ್ರಾಂ ದ್ರಾಕ್ಷಿ ಬೀಜದ ಸಾರವು ರಕ್ತದೊತ್ತಡ ಅಥವಾ ಪೂರ್ವ ಅಧಿಕ ರಕ್ತ ದೊತ್ತಡದಿಂದ ಬಳಲುತ್ತಿದ್ದರೆ ಅವರನ್ನು ಕಾಪಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಆರೋಗ್ಯಕರ ಚರ್ಮಕ್ಕಾಗಿ ಕ್ಯಾಪ್ಸಿಕಂ: ಹೊಳೆಯುವ ಚರ್ಮಕ್ಕಾಗಿ 5 ಪ್ರಯೋಜನಗಳು

6. ಮಲ್ಟಿವಿಟಮಿನ್​​ಗಳು: ಸ್ಕರ್ವಿ, ಬೆರಿಬೆರಿ, ಪೆಲ್ಲಗ್ರಾ ಮತ್ತು ರಿಕೆಟ್ಸ್ ವಿಟಮಿನ್ ಕೊರತೆಯ ಕೆಲವು ಅತ್ಯುತ್ತಮ ಉದಾಹರಣೆಗಳಾಗಿವೆ. ಅಭಿವೃದ್ಧಿಶೀಲ ದೇಶಗಳಲ್ಲಿ ಅಪೌಷ್ಟಿಕತೆ, ಮಲ್ಟಿವಿಟಮಿನ್ ಪೂರಕಗಳು ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದು. ಸಾಕಷ್ಟು ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೋಟೀನ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುವ ಊಟವು ಒಳ್ಳೆಯದು ಆದರೆ ಕೆಲವೊಮ್ಮೆ ಅದು ಸಾಕಾಗುವುದಿಲ್ಲ. ಹೃದಯರಕ್ತನಾಳದ ಕಾಯಿಲೆಗಳಂತಹ ದೀರ್ಘಕಾಲದ ಪರಿಸ್ಥಿತಿಗಳಿಂದ ಬಳಲುತ್ತಿರುವ ವ್ಯಕ್ತಿಗೆ, ಅಗತ್ಯ ಪೌಷ್ಠಿಕಾಂಶದ ಅಗತ್ಯವಿರುತ್ತದೆ. ಇಂತಹ ತೊಂದರೆ ತಪ್ಪಿಸಲು ನಿಮ್ಮ ಮುಂದಿನ ತಲೆಮಾರಿನವರಿಗೆ ಚಿಕ್ಕ ವಯಸ್ಸಿನಿಂದಲೇ ಈ ಸಮೃದ್ಧ ಆಹಾರಗಳನ್ನು ತಿನ್ನಿಸಲು ಪ್ರಾರಂಭಿಸಬೇಕು.

7. ಅಶ್ವಗಂಧ – ಅಧಿಕ ರಕ್ತದೊತ್ತಡ ಹೊಂದಿರುವ ಜನರಿಗೆ ಇದು ಪೂರಕ ಆಹಾರವಾಗಿದೆ. ಅಶ್ವಗಂಧವನ್ನು ಒಳಗೊಂಡಿರುವ ಸಮೃದ್ಧ ಆಹಾರಗಳು ಮೆದುಳನ್ನು ಶಾಂತಗೊಳಿಸುತ್ತವೆ, ಊತವನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತ ದೊತ್ತಡವನ್ನು ಕಡಿಮೆ ಮಾಡುತ್ತವೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ. ಅಶ್ವಗಂಧವನ್ನು ಯುಗಾಂತರಗಳಿಂದ ಬಳಸಲಾಗುತ್ತಿದೆ ಇವು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಅಶ್ವಗಂಧವು ಪ್ರೀಮಿಯಂ ಪಾನೀಯಗಳಲ್ಲಿ ಅಥವಾ ಪ್ರಮುಖ ಚಹಾದ ರೂಪಾಂತರವಾಗಿದೆ. ಹೃದಯದ ಆರೋಗ್ಯವನ್ನು ಸುಧಾರಿಸಲು ಇದನ್ನು ಅನೇಕ ರೀತಿಯಲ್ಲಿ ಬಳಸಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Wed, 7 June 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ