ನಾಲಿಗೆಯಲ್ಲಿ ಹುಣ್ಣುಗಳಾಗುವುದಕ್ಕೆ ಕಾರಣ ಏನ್ ಗೊತ್ತಾ? ಇದು ಗಂಭೀರ ರೋಗದ ಮುನ್ಸೂಚನೆಯೇ? ಇಲ್ಲಿದೆ ಉತ್ತರ

ಅನೇಕರಿಗೆ ಪದೇ ಪದೇ ನಾಲಿಗೆ ಮೇಲೆ ಹುಣ್ಣಾಗುವುದನ್ನು ಗಮನಿಸಿರಬಹುದು. ಆದರೆ ಈ ಸಮಸ್ಯೆಯ ಬಗ್ಗೆ ಚಿಂತೆ ಮಾಡುವವರಿಗಿಂತ ಅದನ್ನು ಅಸಡ್ಡೆ ಮಾಡುವವರ ಸಂಖ್ಯೆಯೇ ಹೆಚ್ಚು. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸಬಾರದು, ಏಕೆಂದರೆ ಇದು ಕೆಲವು ರೋಗಗಳ ಸಂಕೇತವಾಗಿರಬಹುದು. ಹೌದು, ಈ ರೀತಿಯಾಗುವುದು ದೇಹದ ಒಳಗಿನ ಸಮಸ್ಯೆಗಳ ಸೂಚನೆಯಾಗಿರಬಹುದು. ಹಾಗಾಗಿ ನಾಲಿಗೆಯಲ್ಲಿ ಹುಣ್ಣುಗಳಾಗುವುದಕ್ಕೆ ಕಾರಣ, ಪದೇ ಪದೇ ಕಂಡುಬಂದರೆ ಅದು ಯಾವ ರೋಗದ ಲಕ್ಷಣ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಾಲಿಗೆಯಲ್ಲಿ ಹುಣ್ಣುಗಳಾಗುವುದಕ್ಕೆ ಕಾರಣ ಏನ್ ಗೊತ್ತಾ? ಇದು ಗಂಭೀರ ರೋಗದ ಮುನ್ಸೂಚನೆಯೇ? ಇಲ್ಲಿದೆ ಉತ್ತರ
Tongue Ulcers A Sign Of Serious Disease?
Image Credit source: Getty Images

Updated on: Apr 04, 2026 | 5:20 PM

ನೀವು ಗಮನಿಸಿರಬಹುದು ಕೆಲವರಿಗೆ ಪದೇ ಪದೇ ಬಾಯಲ್ಲಿ ಹುಣ್ಣುಗಳಾಗುತ್ತವೆ ಇದನ್ನು ಮೌತ್ ಅಲ್ಸರ್ (Tongue Ulcers) ಎಂದು ಕರೆಯಲಾಗುತ್ತದೆ. ಆದರೆ ಇದರ ಬಗ್ಗೆ ಯಾರೂ ಕೂಡ ಅಷ್ಟಾಗಿ ತೆಲೆಕೆಡಿಕೊಳ್ಳುವುದಿಲ್ಲ, ಬದಲಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಈ ರೀತಿ ಆಗುತ್ತದೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಹಾಗಾಗಿ ಎಲ್ಲರೂ ಕೂಡ ಇದನ್ನು ಸಾಮಾನ್ಯ ಸಮಸ್ಯೆ ಎಂದೇ ಎಂದುಕೊಳ್ಳುತ್ತಾರೆ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ರೀತಿ ಆಗುವುದನ್ನು ಸಾಮಾನ್ಯವೆಂದು ನಿರ್ಲಕ್ಷಿಸುವುದು ಸರಿಯಲ್ಲ, ಏಕೆಂದರೆ ಇದು ಕೆಲವೊಮ್ಮೆ ದೇಹದ ಒಳಗಿನ ಸಮಸ್ಯೆಗಳ ಸೂಚನೆಯಾಗಿರಬಹುದು. ಹಾಗಾದರೆ ನಾಲಿಗೆಯಲ್ಲಿ ಹುಣ್ಣುಗಳಾಗುವುದಕ್ಕೆ ಕಾರಣವೇನು, ಪದೇ ಪದೇ ಕಂಡುಬಂದರೆ ಅದು ಯಾವ ರೋಗದ ಲಕ್ಷಣ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದರ ಕುರಿತು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ನಾಲಿಗೆಯಲ್ಲಿ ಹುಣ್ಣುಗಳು ಕಂಡುಬರುವುದಕ್ಕೆ ಕಾರಣವೇನು?

  • ದೇಹದ ಉಷ್ಣತೆ ಹೆಚ್ಚಾದಾಗ
  • ವಿಟಮಿನ್ ಕೊರತೆ (ವಿಶೇಷವಾಗಿ B ಮತ್ತು C)
  • ಹೆಚ್ಚು ಮಸಾಲೆಯುಕ್ತ ಅಥವಾ ಬಿಸಿ ಆಹಾರ ಸೇವನೆ
  • ಬಾಯಿಯ ಸ್ವಚ್ಛತೆಯ ಕೊರತೆ
  • ನಾಲಿಗೆಗೆ ಪದೇಪದೇ ಗಾಯವಾಗುವುದು
  • ಮಾನಸಿಕ ಒತ್ತಡ ಮತ್ತು ಹಾರ್ಮೋನ್ ಬದಲಾವಣೆ

ಇದು ಯಾವ ರೋಗದ ಸೂಚನೆ?

  • ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು
  • ದುರ್ಬಲ ರೋಗನಿರೋಧಕ ಶಕ್ತಿ
  • ಪೋಷಕಾಂಶಗಳ ಕೊರತೆ
  • ಸೋಂಕು ಅಥವಾ ಅಲರ್ಜಿ ಸಮಸ್ಯೆ

ಹುಣ್ಣುಗಳಲ್ಲಿ ಹೆಚ್ಚು ನೋವು, ರಕ್ತಸ್ರಾವ ಕಂಡುಬಂದರೆ, ಇದು ಗಂಭೀರ ಸ್ಥಿತಿಯ ಸೂಚನೆಯಾಗಿರಬಹುದು. ಕೆಲವೊಮ್ಮೆ ಈ ರೀತಿ ಆಗುವುದಕ್ಕೆ ಬ್ಯಾಕ್ಟೀರಿಯಲ್ ಸೋಂಕು ಅಥವಾ ಬಾಯಿಯ ಅಶುದ್ಧತೆ ಕಾರಣವಾಗಿರಬಹುದು.

ಇದನ್ನೂ ಓದಿ: ಪದೇ ಪದೇ ಬಾಯಲ್ಲಿ ಹುಣ್ಣಾಗುತ್ತಿದ್ದರೆ ಡಾ. ಅಶೋಕ್ ಭಟ್ ಹೇಳಿದಂತೆ ಮಾಡಿ, ತಕ್ಷಣ ಪರಿಹಾರ ಸಿಗುತ್ತೆ

ತಡೆಗಟ್ಟುವುದು ಹೇಗೆ?

  • ನಾಲಿಗೆಯಲ್ಲಿ ಕಂಡುಬರುವ ಹುಣ್ಣುಗಳನ್ನು ತಡೆಯಲು ಆಹಾರ ಮತ್ತು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು
  • ಹೆಚ್ಚು ಮಸಾಲೆ, ಹುಳಿ ಮತ್ತು ಬಿಸಿ ಆಹಾರ ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು
  • ಪ್ರತಿನಿತ್ಯ ಬಾಯಿಯನ್ನು ಸ್ವಚ್ಛವಾಗಿ ತೊಳೆಯಬೇಕು
  • ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು
  • ವಿಟಮಿನ್ B ಮತ್ತು C ಇರುವ ಹಣ್ಣು, ಹಸಿರು ತರಕಾರಿಗಳನ್ನು ಸೇವನೆ ಮಾಡಬೇಕು
  • ಒತ್ತಡವನ್ನು ಕಡಿಮೆ ಮಾಡಿಕೊಂಡು ಸರಿಯಾಗಿ ನಿದ್ರೆ ಮಾಡಬೇಕು
  • ತಂಬಾಕು ಮತ್ತು ಮದ್ಯಪಾನದಿಂದ ದೂರವಿರಬೇಕು

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ನಾಲಿಗೆಯ ಹುಣ್ಣುಗಳು 10–15 ದಿನಗಳಲ್ಲಿ ಗುಣವಾಗದಿದ್ದರೆ ಅಥವಾ ಪದೇಪದೇ ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಜೊತೆಗೆ ತೀವ್ರ ನೋವು, ಊತ, ಜ್ವರ, ರಕ್ತಸ್ರಾವ ಕಂಡುಬಂದರೆ ನಿರ್ಲಕ್ಷಿಸಬಾರದು. ಊಟದಲ್ಲಿ ತೊಂದರೆ ಅಥವಾ ತೂಕ ಕಡಿಮೆಯಾಗುತ್ತಿರುವುದನ್ನು ಗಮನಿಸಿದರೆ ಕೂಡ ವೈದ್ಯರ ಸಲಹೆ ಪಡೆಯುವುದು ಮುಖ್ಯ. ಒಟ್ಟಿನಲ್ಲಿ, ನಾಲಿಗೆಯ ಹುಣ್ಣುಗಳು ಸಾಮಾನ್ಯವಾಗಿದ್ದರೂ, ದೀರ್ಘಕಾಲ ಇದ್ದರೆ ಅದು ಗಂಭೀರ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಗಮನ ನೀಡಿ, ಚಿಕಿತ್ಸೆ ಪಡೆಯುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us