AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗ್ಗೆ ಎದ್ದರೂ ಆಯಾಸವೇ? ಸುಸ್ತು ಕಡಿಮೆ ಮಾಡಿಕೊಳ್ಳಲು ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿ

ಎಂಟು ಗಂಟೆಗಳ ನಿದ್ದೆ ಮಾಡಿದರೂ ಬೆಳಗ್ಗೆ ಎದ್ದಾಗ ಸುಸ್ತು ಮತ್ತು ನಿಶ್ಶಕ್ತಿ ಕಾಡುತ್ತಿದೆಯೇ? ರಕ್ತಹೀನತೆ, ವಿಟಮಿನ್ ಕೊರತೆ, ಥೈರಾಯ್ಡ್ ಸಮಸ್ಯೆ, ಮಾನಸಿಕ ಒತ್ತಡ ಸೇರಿದಂತೆ ಹಲವು ಕಾರಣಗಳು ನಿರಂತರ ಆಯಾಸಕ್ಕೆ ಕಾರಣವಾಗಬಹುದು. ಸುಸ್ತು ಕಡಿಮೆ ಮಾಡಲು ಆಹಾರ ಪದ್ಧತಿ, ನಿದ್ರೆ ಮತ್ತು ದೈನಂದಿನ ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳ ಬಗ್ಗೆ ಉಡುಪಿಯ ಎಸ್ ಡಿ ಎಮ್ ಆಯುರ್ವೇದ ಫಾರ್ಮಸಿಯ ಜನರಲ್ ಮ್ಯಾನೇಜರ್ ಡಾ. ಮುರಳೀಧರ ಬಲ್ಲಾಳ್ ಹೇಳಿದ್ದಾರೆ.

ಬೆಳಗ್ಗೆ ಎದ್ದರೂ ಆಯಾಸವೇ? ಸುಸ್ತು ಕಡಿಮೆ ಮಾಡಿಕೊಳ್ಳಲು ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿ
Constant Tiredness And WeaknessImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Nov 04, 2026 | 7:28 PM

Share

ನೀವು ರಾತ್ರಿ 8 ಗಂಟೆ ನಿದ್ದೆ ಮಾಡಿದ್ದೀರಿ. ಆದರೂ ಬೆಳಿಗ್ಗೆ ಎದ್ದಾಗ, ಸುಸ್ತು, ನಿಶ್ಶಕ್ತಿ ಮತ್ತು ದೇಹದಲ್ಲಿ ಚೈತನ್ಯದ ಕೊರತೆ ಅನುಭವಿಸುತ್ತಿದ್ದರೆ ಅದನ್ನು ನಿರಂತರ ಆಯಾಸ ಅಥವಾ ದೀರ್ಘಕಾಲದ ಸುಸ್ತು (Chronic Fatigue) ಎಂದು ಕರೆಯಲಾಗುತ್ತದೆ. ಇದು ಕೇವಲ ರೆಸ್ಟ್ ತೆಗೆದುಕೊಂಡರೆ ಹೋಗುವ ಸುಸ್ತಲ್ಲ, ಇದು ನಿಮ್ಮ ದೇಹ ನಿಮಗೆ ಕಳುಹಿಸುತ್ತಿರುವ ಒಂದು ಎಚ್ಚರಿಕೆಯ ಸಂದೇಶ. ನಮ್ಮ ಪೂರ್ವಜರು ನಮಗಿಂತ ಹತ್ತು ಪಟ್ಟು ಹೆಚ್ಚು ದೈಹಿಕ ಕೆಲಸ ಮಾಡುತ್ತಿದ್ದರು ಆದರೂ ಅವರಿಗೆ ಈ ರೀತಿಯ ಸಮಸ್ಯೆ ಕಂಡುಬರುತ್ತಿರಲಿಲ್ಲ. ಇಂದು ನಾವು ದೈಹಿಕವಾಗಿ ಅತ್ಯಂತ ಕಡಿಮೆ ಕೆಲಸ ಮಾಡುತ್ತಿದ್ದೇವೆ, ಆದರೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಅತ್ಯಂತ ಹೆಚ್ಚು ಬಳಲುತ್ತಿದ್ದೇವೆ. ಇದಕ್ಕೆ ಆಹಾರ ಪದ್ಧತಿ, ನಿದ್ರೆಯ ಗುಣಮಟ್ಟ, ಮಾನಸಿಕ ಒತ್ತಡ ಅಥವಾ ಕೆಲವು ಆರೋಗ್ಯ ಸಮಸ್ಯೆಗಳು ಕಾರಣವಾಗಿರಬಹುದು. ಈ ಬಗ್ಗೆ ಉಡುಪಿಯ ಎಸ್ ಡಿ ಎಮ್ ಆಯುರ್ವೇದ ಫಾರ್ಮಸಿಯ ಜನರಲ್ ಮ್ಯಾನೇಜರ್ ಡಾ. ಮುರಳೀಧರ ಬಲ್ಲಾಳ್ ಅವರು ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಡಾ. ಮುರಳೀಧರ ಬಲ್ಲಾಳ್ ಅವರು ಹೇಳುವ ಪ್ರಕಾರ, ಭಾರತದಲ್ಲಿ ನಡೆಸಿದ ಸಮೀಕ್ಷೆಗಳ ಪ್ರಕಾರ, ಸುಮಾರು 12% ರಷ್ಟು ಮಹಿಳೆಯರು ದೀರ್ಘಕಾಲದ ಆಯಾಸದಿಂದ (Chronic Fatigue) ಬಳಲುತ್ತಿದ್ದಾರೆ. ಇನ್ನು ಕಾರ್ಪೊರೇಟ್ ವಲಯದ ಕಥೆ ಕೇಳಲೇಬೇಡಿ, 2019 ರ ಒಂದು ಅಧ್ಯಯನದ ಪ್ರಕಾರ 80% ರಷ್ಟು ಉದ್ಯೋಗಿಗಳು ಮಧ್ಯಮದಿಂದ ತೀವ್ರತರದ ಆಯಾಸ (Moderate to Severe Fatigue) ಅನುಭವಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಇದಕ್ಕೆ ಆಧುನಿಕ ವೈದ್ಯಕೀಯ ಶಾಸ್ತ್ರ ನೀಡುವ ಕಾರಣಗಳೆಂದರೆ ರಕ್ತಹೀನತೆ (Anemia), ವಿಟಮಿನ್ ಬಿ12 ಅಥವಾ ಡಿ ಕೊರತೆ ಮತ್ತು ಥೈರಾಯ್ಡ್ ಸಮಸ್ಯೆಗಳು. ಆದರೆ ಎಷ್ಟೋ ಬಾರಿ, ಇವೆಲ್ಲಾ ರಿಪೋರ್ಟ್ಗಳು ನಾರ್ಮಲ್ ಇದ್ದರೂ ಸುಸ್ತು ಮಾತ್ರ ಹೋಗಿರುವುದಿಲ್ಲ.

ಆಯುರ್ವೇದದಲ್ಲಿ ಸುಸ್ತಿನ ಬಗ್ಗೆ ಹೇಳಿರುವುದೇನು?

ಆಯುರ್ವೇದ ಪದ್ಧತಿಯಲ್ಲಿ ದೇಹದ ಶಕ್ತಿ, ದೋಷಗಳ ಸಮತೋಲನ ಮತ್ತು ಜೀರ್ಣಶಕ್ತಿಗೆ ಮಹತ್ವ ನೀಡಲಾಗುತ್ತದೆ. ಮಂದಾಗ್ನಿ ಮತ್ತು ಓಜಸ್ಸಿನ ಕ್ಷಯದಂತಹ ಪರಿಕಲ್ಪನೆಗಳ ಮೂಲಕ ಆಯಾಸವನ್ನು ವಿವರಿಸಲಾಗುತ್ತದೆ.

ಮಂದಾಗ್ನಿ: ಆಯುರ್ವೇದದ ಪ್ರಕಾರ ಜೀರ್ಣಶಕ್ತಿ ದುರ್ಬಲವಾದಾಗ ಆಹಾರದ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು. ಇದನ್ನು ಮಂದಾಗ್ನಿ ಎಂದು ಕರೆಯಲಾಗುತ್ತದೆ. ಹಸಿವು ಕಡಿಮೆಯಾಗುವುದು, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಫೈಬರ್ ಅಂಶದ ಕೊರತೆ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವೇ? ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ

ಓಜಕ್ಷಯ: ಆಯುರ್ವೇದದಲ್ಲಿ ಓಜಸ್ಸನ್ನು ದೇಹದ ಚೈತನ್ಯ ಮತ್ತು ಶಕ್ತಿಗೆ ಸಂಬಂಧಿಸಿದ ಪರಿಕಲ್ಪನೆಯಾಗಿ ಪರಿಗಣಿಸಲಾಗುತ್ತದೆ. ನಿರಂತರ ಒತ್ತಡ, ಸರಿಯಾದ ನಿದ್ರೆಯ ಕೊರತೆ ಮತ್ತು ಅನಾರೋಗ್ಯಕರ ಜೀವನಶೈಲಿ ದೇಹದ ಚೈತನ್ಯದ ಮೇಲೆ ಪರಿಣಾಮ ಬೀರಬಹುದು.

ಸುಸ್ತು ಕಡಿಮೆ ಮಾಡಲು ಆಯುರ್ವೇದದಲ್ಲಿ ಸೂಚಿಸುವ ಮನೆಮದ್ದುಗಳು

ಶುಂಠಿ ಮತ್ತು ಧನಿಯಾ ನೀರು: ಸಾಮಾನ್ಯವಾಗಿ ಶುಂಠಿ ಮತ್ತು ಧನಿಯಾ ಬೀಜಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವ ಪದ್ಧತಿ ಇದೆ. ಬೆಳಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಬದಲು ಇದನ್ನು ಪ್ರಯತ್ನಿಸಿ. 1 ಲೀಟರ್ ನೀರಿಗೆ ¼ ಚಮಚ ಒಣ ಶುಂಠಿ ಪುಡಿ (Dry Ginger), 1 ಚಮಚ ಧನಿಯಾ (Coriander seeds) ಹಾಕಿ ಕುದಿಸಿ. ಅದನ್ನು ಸೋಸಿ ದಿನವಿಡೀ ಕುಡಿಯಿರಿ. ಶುಂಠಿಯು ಆಮ ಅಥವಾ ಟಾಕ್ಸಿನ್ಗಳನ್ನು ಕರಗಿಸುವ ಅತ್ಯುತ್ತಮ ಆಮಪಾಚಕ (Bio-enhancer). ಧನಿಯಾ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ.

ನೆಲ್ಲಿಕಾಯಿ ಮತ್ತು ಜೇನುತುಪ್ಪ: ದಿನಕ್ಕೆ ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು (Amla) ಜೇನುತುಪ್ಪದೊಂದಿಗೆ ಸೇವಿಸಿ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿವೆ. ಆಹಾರದ ಭಾಗವಾಗಿ ನೆಲ್ಲಿಕಾಯಿಯನ್ನು ಸೇವಿಸಬಹುದು.

ಅರಿಶಿಣ ಮತ್ತು ಅಶ್ವಗಂಧ ಹಾಲು: ಅರಿಶಿಣವನ್ನು ಹಾಲಿನೊಂದಿಗೆ ಸೇವಿಸುವ ಪದ್ಧತಿ ಇದೆ. ರಾತ್ರಿ ಮಲಗುವ ಮುನ್ನ ಹಾಲಿಗೆ ಚಿಟಿಕೆ ಅರಿಶಿಣ, ಏಲಕ್ಕಿ ಮತ್ತು ಅಶ್ವಗಂಧ ಪುಡಿ (ವೈದ್ಯರ ಸಲಹೆಯ ಮೇರೆಗೆ) ಬೆರೆಸಿ, ಕುದಿಸಿ ಕುಡಿಯಿರಿ. ಅಶ್ವಗಂಧವನ್ನು ಬಳಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು.

ಸುಸ್ತು ಕಡಿಮೆ ಮಾಡಲು ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ

  • ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಎಚ್ಚರಗೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ.
  • ರಾತ್ರಿ ಊಟವನ್ನು ಹಗುರವಾಗಿ ಮತ್ತು ಮಲಗುವ ಕೆಲವು ಗಂಟೆಗಳ ಮೊದಲು ಸೇವಿಸಿ.
  • ಮಲಗುವ ಮುನ್ನ ಮೊಬೈಲ್ ಮತ್ತು ಇತರ ಪರದೆಗಳ ಬಳಕೆಯನ್ನು ಕಡಿಮೆ ಮಾಡಿ.
  • ಪ್ರತಿದಿನ ಸಾಧ್ಯವಾದಷ್ಟು ವಾಕಿಂಗ್ ಅಥವಾ ಲಘು ವ್ಯಾಯಾಮ ಮಾಡಿ.
  • ಪೌಷ್ಟಿಕಾಂಶಯುಕ್ತ ಸಮತೋಲಿತ ಆಹಾರ ಮತ್ತು ಸಾಕಷ್ಟು ನೀರು ಸೇವಿಸಿ.

ನಿರಂತರ ಸುಸ್ತನ್ನು ನಿರ್ಲಕ್ಷಿಸಬಾರದು. ಹಲವು ವಾರಗಳವರೆಗೆ ಆಯಾಸ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ. ಅಗತ್ಯವಿದ್ದರೆ ರಕ್ತಹೀನತೆ, ಥೈರಾಯ್ಡ್ ಮತ್ತು ವಿಟಮಿನ್ ಕೊರತೆಗಳ ಪರೀಕ್ಷೆ ಮಾಡಿಸಿಕೊಳ್ಳಬಹುದು. ಮನೆಮದ್ದುಗಳನ್ನು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಿ ಬಳಸಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ