Acidity: ಅಸಿಡಿಟಿಯಿಂದ ಪದೇ ಪದೇ ಬಳಲುತ್ತಿದ್ದೀರಾ? ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಇಲ್ಲವೆಂದಾದರೆ ಅಪಾಯ ತಪ್ಪಿದ್ದಲ್ಲ
Health Tips: ಅಸಿಡಿಟಿಯಿಂದ ಬಳಲುವುದು ಸಾಮಾನ್ಯ ಸಮಸ್ಯೆಯಾಗಿರಬಹುದು. ಆದರೆ ಇದು ಕ್ಯಾನ್ಸರ್ಗೂ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಅಸಿಡಿಟಿ (Acidity) ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಅನೇಕರು ಈ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ನಾವು ಸೇವಿಸುವ ಅದರಲ್ಲಿಯೂ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಈ ಅಸಿಡಿಟಿ ಉಂಟಾಗುತ್ತದೆ. ಅಷ್ಟೇ ಅಲ್ಲದೇ ಕೆಲವೊಮ್ಮೆ ಖಾಲಿ ಹೊಟ್ಟೆಯಲ್ಲಿಯೂ ಸಹ ಆಮ್ಲೀಯತೆಯು ನೋವುಂಟು ಮಾಡುತ್ತದೆ. ಆದರೆ ಹಲವರಿಗೆ ಮನೆಯಲ್ಲಿ ಊಟ ಮಾಡಿದ ಮೇಲೂ ಅಸಿಡಿಟಿ ಸಮಸ್ಯೆ ಕಾಡುತ್ತದೆ. ಆದರೆ ನಾವು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುವ ಅಪಾಯವಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಅದಕ್ಕಾಗಿಯೇ ಔಷಧಿಗಳು ಅಥವಾ ಮನೆಮದ್ದುಗಳ ಮೂಲಕ ಅಸಿಡಿಟಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸೂಚಿಸಲಾಗುತ್ತದೆ. ಇನ್ನೊಂದು ಪ್ರಮುಖ ಅಂಶವೆಂದರೇ ಅಸಿಡಿಟಿ ಸಮಸ್ಯೆ ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ಇತ್ತೀಚಿನ ಅನೇಕ ಸಂಶೋಧನೆಗಳು ಬಹಿರಂಗಪಡಿಸಿವೆ. ಹಾಗಾಗಿ ಅಸಿಡಿಟಿ ಸಮಸ್ಯೆಯನ್ನು ಕಡೆಗಣಿಸಬೇಡಿ.
ಇದನ್ನೂ ಓದಿ: Health Tips: ಐದು ಮಸಾಲೆಗಳಲ್ಲಿನ ಆರೋಗ್ಯದ ಪ್ರಯೋಜನಗಳು; ಪೌಷ್ಟಿಕತಜ್ಞರು ಹೇಳುವುದೇನು?
ಅಸಿಡಿಟಿ ಕ್ಯಾನ್ಸರ್ಗೆ ಕಾರಣವಾಗಬಹುದು?
ಅಸಿಡಿಟಿಯಿಂದ ಬಳಲುವುದು ಸಾಮಾನ್ಯ ಸಮಸ್ಯೆಯಾಗಿರಬಹುದು. ಆದರೆ ಇದು ಕ್ಯಾನ್ಸರ್ಗೂ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಇದು ಕ್ರಮೇಣ ಅನ್ನನಾಳದ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪ್ರಸ್ತುತ ಅನೇಕ ಜನರು ಇದೇ ಸಮಸ್ಯೆಯಿಂದ ಬಳಲುತ್ತಿದ್ದು, ಇದನ್ನು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಡಿಸೀಸ್ (GERD) ಎಂದು ಕರೆಯಲಾಗುತ್ತದೆ. ಕ್ರಮೇಣ ಅನ್ನನಾಳದ ಕ್ಯಾನ್ಸರ್ಗೆ ಕಾರಣವಾಗುವ ಅಪಾಯವಿದೆ ಎನ್ನಲಾಗಿದೆ. ಇತ್ತೀಚಿನ ಕೆಲವು ಸಂಶೋಧನೆಗಳ ಪ್ರಕಾರ, ಆಮ್ಲೀಯತೆಯನ್ನು ಹೊಂದಿರುವ ಜನರು ಮುಂದೆ ಅನ್ನನಾಳದ ಕ್ಯಾನ್ಸರ್ನಿಂದ ಬಳಲುತ್ತಾರೆ ಎನ್ನುತ್ತಾರೆ ತಜ್ಞರು. ಹೆಚ್ಚಿನ ಸಂದರ್ಭಗಳಲ್ಲಿ, ಅನ್ನನಾಳದ ಕ್ಯಾನ್ಸರ್ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ನೊಂದಿಗೆ ಸಂಬಂಧಿಸಿದೆ ಎಂದು ಈ ಸಂಶೋಧನೆಯಿಂದ ತಿಳಿದುಬಂದಿದೆ. ಬೊಜ್ಜು ಇರುವವರಿಗೆ ಅಸಿಡಿಟಿಯಿಂದ ಈ ಕಾಯಿಲೆ ಬರುತ್ತದೆ ಎಂದು ಕೂಡ ಹೇಳಲಾಗುತ್ತದೆ.
ತಜ್ಞರ ಸಲಹೆ ಏನು?
- ಕೆಲವು ಮುನ್ನೆಚ್ಚರಿಕೆಗಳಿಂದ ಅಸಿಡಿಟಿ ಸಮಸ್ಯೆಯನ್ನು ಹೋಗಲಾಡಿಸಬಹುದಾಗಿದೆ. ಆದರೆ ಈ ಸಮಸ್ಯೆಗಳು ಮತ್ತೆ ಮತ್ತೆ ಉದ್ಭವಿಸಿದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.
- ಅದೇ ರೀತಿ ನೀವು ಸೇವಿಸುವ ಆಹಾರದ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಮಲಗುವ 3-4 ಗಂಟೆಗಳ ಮೊದಲು ಆಹಾರವನ್ನು ಸೇವಿಸಬೇಕು.
- ಈ ಅಸಿಡಿಟಿ ಸಮಸ್ಯೆಯನ್ನು ನಿವಾರಿಸಲು ನೀವು ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದಾಗಿದೆ. ಆಮ್ಲಾ, ಜೀರಿಗೆ ಮತ್ತು ಕಪ್ಪು ಉಪ್ಪನ್ನು ಬಿಸಿನೀರಿನೊಂದಿಗೆ ದಿನಕ್ಕೆ ಒಮ್ಮೆ ಕುಡಿಯಿರಿ.
(ಸೂಚನೆ: ಈ ಮೇಲೆ ನೀಡಿದ ವಿಷಯವು ಮಾಹಿತಿಗಾಗಿ ಮಾತ್ರವಾಗಿದ್ದು, ಟಿವಿ9 ಡಿಜಿಟಲ್ಗೆ ಸಂಬಂಧಿಸಿರುವುದಿಲ್ಲ. ಸೂಕ್ತ ಮಾರ್ಗದರ್ಶನ ಅಥವಾ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.)