
ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರು ಸ್ವದೇಶಿ ಉತ್ಪನ್ನಗಳ ಅಳವಡಿಕೆಗೆ ಒತ್ತು ನೀಡುತ್ತಾರೆ. ಅವರು ಯೋಗ ಮತ್ತು ಆಯುರ್ವೇದ ಎರಡನ್ನೂ ಪ್ರತಿ ಮನೆಗೆ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಪತಂಜಲಿ ವೆಲ್ನೆಸ್ ಮೂಲಕ, ಅವರು ಆಗಾಗ್ಗೆ ಆರೋಗ್ಯದ ವಿಚಾರಗಳಲ್ಲಿ ಸಲಹೆ ನೀಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ನಮ್ಮ ಬದಲಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಆರೋಗ್ಯಕ್ಕೆ ಹಾನಿ ಆಗುತ್ತಿದೆ. ವಯಸ್ಸಾದಾಗ ಬರುತ್ತಿದ್ದ ಕಾಯಿಲೆಗಳು ಈಗ ಕಿರಿಯ ವಯಸ್ಸಿನವರಲ್ಲೇ ಕಾಣಿಸಿಕೊಳ್ಳುತ್ತಿವೆ. ಹಿಂದಿನ ಕಾಲದಲ್ಲಿ, ಜನರು ಆಯುರ್ವೇದ ಉತ್ಪನ್ನಗಳು ಮತ್ತು ಮನೆಯಲ್ಲಿ ಬೇಯಿಸಿದ ಆಹಾರದ ಸೇವನೆ ಹೆಚ್ಚು ಮಾಡುತ್ತಿದ್ದರು. ಪ್ರಕೃತಿ ಚಿಕಿತ್ಸೆ ಮತ್ತು ಆಯುರ್ವೇದ ಉತ್ಪನ್ನಗಳ ಬಳಕೆ ಎಷ್ಟು ಮಹತ್ವದ್ದು ಎಂದು ಸಹ ಬಾಬಾ ರಾಮದೇವ್ ಒತ್ತಿಹೇಳುತ್ತಾರೆ. ನಮ್ಮ ಜೀವನದಿಂದ ಯಾವ ವಿಷಯಗಳನ್ನು ತೆಗೆದುಹಾಕಬೇಕು ಎಂಬುದನ್ನು ಸಹ ಅವರು ವಿವರಿಸಿದ್ದಾರೆ.
ನಮ್ಮ ಅನಾರೋಗ್ಯಕರ ಜೀವನಶೈಲಿ ನಿಧಾನವಾಗಿ ನಮಗೆ ಗೊತ್ತೇ ಆಗದಂತೆ ನಮ್ಮನ್ನು ಅನಾರೋಗ್ಯಕ್ಕೆ ಕೊಂಡೊಯ್ಯುತ್ತದೆ. ಚಿಕಿತ್ಸೆಗಾಗಿ ಆಸ್ಪತ್ರೆ, ಕ್ಲಿನಿಕ್ಗಳನ್ನು ಸುತ್ತುತ್ತೇವೆ. ಇದಕ್ಕೆ ಹಣ ವ್ಯಯವಾಗುವುದು ಮಾತ್ರವಲ್ಲ, ದೈಹಿಕ ಮತ್ತು ಮಾನಸಿಕ ಬಳಲಿಕೆಯೂ ಆಗುತ್ತದೆ. ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯುವುದು ಸರಿ. ಆದರೆ, ಕಾಯಿಲೆ ಬರದಂತೆಯೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಇನ್ನೂ ಉತ್ತಮ. ನಿಮ್ಮ ಜೀವನಶೈಲಿ ಮತ್ತು ಆಹಾರಕ್ರಮದಲ್ಲಿ ವಕ್ಕರಿಸಿರುವ ಕೆಲ ಅನಾರೋಗ್ಯಕರ ಸಂಗತಿಗಳನ್ನು ತೆಗೆದುಹಾಕಿದರೆ ಇದು ಸಾಧ್ಯವಾಗುತ್ತದೆ. ಬಾಬಾ ರಾಮದೇವ್ ಯಾವ ವಿಷಯಗಳನ್ನು ತೆಗೆದುಹಾಕಲು ಸಲಹೆ ನೀಡಿದ್ದಾರೆ, ಅದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕಿಡ್ನಿ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲ ಮನೆಮದ್ದುಗಳು; ಬಾಬಾ ರಾಮದೇವ್ ಸಲಹೆ ಇದು
ನಮ್ಮ ಜೀವನದಿಂದ ತೊಲಗಬೇಕೆಂದು ಬಾಬಾ ರಾಮದೇವ್ ಶಿಫಾರಸು ಮಾಡುವ ಬಿಳಿ ಆಹಾರಗಳಲ್ಲಿ ಸಕ್ಕರೆಯೂ ಒಂದು. ಇದು ಇಂದಿನ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಇದು ಬೊಜ್ಜು ಹೆಚ್ಚಿಸಿ ಮಧುಮೇಹಕ್ಕೆ ಕಾರಣವಾಗುತ್ತದೆ. ಅಲ್ಲದೆ, ಇದನ್ನು ಚರ್ಮಕ್ಕೆ ಹಾನಿಕಾರಕ ಆಹಾರವೆಂದೂ ಸಹ ಪರಿಗಣಿಸಲಾಗುತ್ತದೆ. ಬಿಳಿ ಹಿಟ್ಟು ಅಥವಾ ಮೈದಾವನ್ನು ನಮ್ಮ ಜೀವನದಿಂದ ತೆಗೆದುಹಾಕಬೇಕು ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಇದಲ್ಲದೆ, ಬಿಳಿ ಅಕ್ಕಿಯನ್ನು ತಪ್ಪಿಸಬೇಕು ಮತ್ತು ರೀಫೈನ್ಡ್ ಆಯಿಲ್ ಅನ್ನೂ ವ್ಯರ್ಜಿಸಬೇಕು ಎನ್ನುತ್ತಾರೆ.
ಬಾಬಾ ರಾಮದೇವ್ ಸ್ಥಳೀಯ ಮತ್ತು ನೈಸರ್ಗಿಕ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಾರೆ. ರಾಸಾಯನಿಕ ಆಧಾರಿತ ಶಾಂಪೂಗಳು, ಸೋಪುಗಳು, ಟೂತ್‌ಪೇಸ್ಟ್‌ಗಳು ಅಥವಾ ಪರ್ಸನಲ್ ಕೇರ್ ಐಟಂನಂತಹ ಸಿಂಥೆಟಿಕ್ ಉತ್ಪನ್ನಗಳಿಂದ ದೂರ ಉಳಿಯುವುದು ಒಳ್ಳೆಯದು. ಇದರ ಬದಲಾಗಿ, ನಾವು ನೈಸರ್ಗಿಕ ಪರ್ಯಾಯಗಳನ್ನು ಅಳವಡಿಸಿಕೊಳ್ಳಬೇಕು. ಅದೇ ರೀತಿ, ಶುಚಿಗೊಳಿಸುವ ಉತ್ಪನ್ನಗಳ ಬಳಕೆಯುಇ ಸಹ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವಾಸ್ತವವಾಗಿ, ರಾಸಾಯನಿಕ ಆಧಾರಿತ ಉತ್ಪನ್ನಗಳು ನಿಮ್ಮ ಲಿವರ್ನಿಂದ ಹಿಡಿದು ಕಿಡ್ನಿವರೆಗೆ ಅನೇಕ ಅಂಗಗಳಿಗೆ ಹಾನಿಗೊಳಿಸಬಹುದು.
ಇದನ್ನೂ ಓದಿ: Hair Fall Treatment: ಕೂದಲು ಉದುರುವಿಕೆ ನಿಲ್ಲಿಸಲು ಮನೆಮದ್ದುಗಳು: ಸರಳ ಪರಿಹಾರ ಸೂಚಿಸುವ ಬಾಬಾ ರಾಮದೇವ್
ರಾಸಾಯನಿಕ ಆಧಾರಿತ ಉತ್ಪನ್ನಗಳಿಗೆ ಪರ್ಯಾಯವಾಗಿರುವ ಅನೇಕ ಆರೋಗ್ಯಕರ ಉತ್ಪನ್ನಗಳು ಲಭ್ಯ ಇವೆ. ರೀಫೈನ್ಡ್ ಆಯಿಲ್ ಬದಲು ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆಯಂತಹ ನೈಸರ್ಗಿಕ ಎಣ್ಣೆಗಳನ್ನು ಬಳಸಬಹುದು. ಹಣ್ಣುಗಳು, ಬೀಜಗಳಿಂದ ಕೋಲ್ಡ್ ಪ್ರೆಸ್ ಮೂಲಕ ತೆಗೆಯುವ ವರ್ಜಿನ್ ಆಯಿಲ್ ಕೂಡ ಪ್ರಕೃತಿಯ ಶುದ್ಧ ರೂಪವೆಂದು ಬಾಬಾ ರಾಮದೇವ್ ಹೇಳುತ್ತಾರೆ. ಸಕ್ಕರೆ ಬದಲು ಬೆಲ್ಲ ಅಥವಾ ಕಚ್ಚಾ ಸಕ್ಕರೆಯನ್ನು (ಬ್ಲೀಚಿಂಗ್ ಏಜೆಂಟ್‌ಗಳನ್ನು ಬಳಸದ ಸಕ್ಕರೆಯ ಒಂದು ರೂಪ) ಬದಲಾಯಿಸಬಹುದು.
ಬಾಬಾ ರಾಮದೇವ್ ಹೇಳುವಂತೆ ನಾವು ಯಾವುದೇ ರೀತಿಯ ಸಿಂಥೆಟಿಕ್ ಉತ್ಪನ್ನಗಳ ಬಳಕೆ ತಪ್ಪಿಸಬೇಕು. ಇದರಲ್ಲಿ ದಂತ ಆರೈಕೆ, ಚರ್ಮ ಮತ್ತು ಕೂದಲಿನ ಆರೈಕೆ, ಮತ್ತು ಪಾತ್ರೆಗಳು, ಬಟ್ಟೆ ಮತ್ತು ಮನೆಯ ಕ್ಲೀನರ್‌ಗಳು ಸಹ ಸೇರಿವೆ. ಈ ರಾಸಾಯನಿಕಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈ ಉತ್ಪನ್ನಗಳು ಕ್ಯಾನ್ಸರ್ ಹಾಗು, ಕಿಡ್ನಿ ಮತ್ತು ಮೂತ್ರಪಿಂಡದ ಸಮಸ್ಯೆಗಳಂತಹ ಗಂಭೀರ ಕಾಯಿಲೆಗಳಿಗೆ ಸಹ ಕಾರಣವಾಗಬಹುದು. ಆದ್ದರಿಂದ, ನಾವು ನೈಸರ್ಗಿಕ ಉತ್ಪನ್ನಗಳನ್ನು ಬಳಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂಬುದು ಬಾಬಾ ಸಲಹೆ.
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:46 pm, Tue, 10 February 26