ಬಾಳೆ ಹೂವು ತಿನ್ನುವ ಅವಕಾಶ ಸಿಕ್ಕರೆ ಬಿಡಬೇಡಿ, ಇದರಲ್ಲಿ ನೀವು ಊಹಿಸಲೂ ಸಾಧ್ಯವಿಲ್ಲದ ಪ್ರಯೋಜನಗಳಿವೆ

ಬಾಳೆಹಣ್ಣಿನ ಹೂವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಇದರಲ್ಲಿ ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು ಈ ಹೂವನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ರೀತಿಯ ಗಂಭೀರ ಕಾಯಿಲೆಗಳಿಂದ ದೂರವಿರಬಹುದು. ಇಷ್ಟೆಲ್ಲಾ ಉಪಯೋಗವಿರುವ ಈ ಹೂವು ಯಾವ ರೀತಿಯ ಆರೋಗ್ಯ ಸಮಸ್ಯೆಗೆ ಒಳ್ಳೆಯದು? ಯಾಕೆ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬಾಳೆ ಹೂವು ತಿನ್ನುವ ಅವಕಾಶ ಸಿಕ್ಕರೆ ಬಿಡಬೇಡಿ, ಇದರಲ್ಲಿ ನೀವು ಊಹಿಸಲೂ ಸಾಧ್ಯವಿಲ್ಲದ ಪ್ರಯೋಜನಗಳಿವೆ
Banana Flower Benefits

Updated on: Sep 02, 2025 | 6:16 PM

ಬಾಳೆಹಣ್ಣು (Banana) ತಿನ್ನುವುದರಿಂದಾಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ ಬಾಳೆಹಣ್ಣಿನ ಹೂವು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಂಡಿದ್ದೀರಾ? ಹೌದು. ಪೌಷ್ಟಿಕ ತಜ್ಞರು ಹೇಳುವ ಪ್ರಕಾರ ಇದರಲ್ಲಿ ಹೇರಳವಾದ ಪೋಷಕಾಂಶಗಳಿವೆ. ಈ ಬಾಳೆ ಹೂವು (Banana Flower) ದೇಹದ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ. ಮಾತ್ರವಲ್ಲ ಇದರಲ್ಲಿ ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದ್ದು ಹಲವಾರು ರೀತಿಯ ಗಂಭೀರ ಕಾಯಿಲೆಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಭಾರತದ ವಿವಿಧ ರಾಜ್ಯಗಳಲ್ಲಿ ಇದನ್ನು ವಿಭಿನ್ನ ರೀತಿಯ ಖಾದ್ಯಗಳ ರೂಪದಲ್ಲಿ ಇದನ್ನು ಸೇವಿಸಲಾಗುತ್ತದೆ. ಮಾತ್ರವಲ್ಲ ಆಯುರ್ವೇದದಲ್ಲಿ ಔಷಧಿಯಾಗಿ ಬಳಸಲಾಗುತ್ತದೆ. ಇಷ್ಟೆಲ್ಲಾ ಉಪಯೋಗವಿರುವ ಈ ಹೂವು ಯಾವ ರೀತಿಯ ಆರೋಗ್ಯ ಸಮಸ್ಯೆಗೆ ಒಳ್ಳೆಯದು? ಯಾಕೆ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಮಧುಮೇಹ:

ಟೈಪ್ 2 ಮಧುಮೇಹ ರೋಗಿಗಳಿಗೆ ಬಾಳೆ ಹೂವು ಒಂದು ದೈವಿಕ ಔಷಧವಾಗಿದೆ. ಇದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಮೂಲಕ ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ನಿಯಮಿತವಾಗಿ ಈ ಹೂವನ್ನು ಸೇವನೆ ಮಾಡಲು ಹೇಳಲಾಗುತ್ತದೆ.

ಒತ್ತಡ, ಖಿನ್ನತೆಯಿಂದ ಮುಕ್ತಿ ನೀಡುತ್ತೆ:

ಬಾಳೆಹಣ್ಣಿನಲ್ಲಿ ಮೆಗ್ನೀಸಿಯಮ್, ಉತ್ಕರ್ಷಣ ನಿರೋಧಕಗಳು ಮತ್ತು ಖಿನ್ನತೆ- ಶಮನಕಾರಿ ಗುಣಲಕ್ಷಣಗಳು ಸಮೃದ್ಧವಾಗಿವೆ. ಇವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಒತ್ತಡವನ್ನು ನಿಭಾಯಿಸುವಲ್ಲಿ ಪರಿಣಾಮಕಾರಿಯಾಗಿದೆ ಮತ್ತು ಖಿನ್ನತೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮನ್ನು ದೂರವಿಡುತ್ತದೆ.

ಇದನ್ನೂ ಓದಿ
ವಿಚಿತ್ರ ಕನಸುಗಳು ಬೀಳುವುದಕ್ಕೆ ರಾತ್ರಿ ಸೇವನೆ ಮಾಡುವ ಆಹಾರವೇ ಕಾರಣ!
ಮಲಬದ್ಧತೆ ಸಮಸ್ಯೆ ಇದ್ಯಾ? ತಪ್ಪದೆ ಈ ಆಹಾರಗಳ ಸೇವನೆ ಮಾಡಿ
ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಬರುವುದಕ್ಕೆ ಈ ಆಹಾರಗಳ ಸೇವನೆಯೇ ಕಾರಣ
ಐವಿಎಫ್ ಮಾಡುವ ಮೊದಲು ಈ ಬಗ್ಗೆ ಗಮನ ನೀಡಿ, ಇದರ ವೆಚ್ಚ, ವಿಧಗಳು ಯಾವುವು?

ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ:

ಬಾಳೆಹಣ್ಣಿನ ಹೂವು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ದೂರವಿರಲು ಸಹಾಯ ಮಾಡುತ್ತದೆ. ನೀವು ಹೊಟ್ಟೆ ನೋವು, ವಾಂತಿ ಅಥವಾ ಅತಿಸಾರದಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಬಾಳೆ ಹೂವನ್ನು ನಿಯಮಿತವಾಗಿ ಸೇವಿಸುವುದು ಬಹಳ ಒಳ್ಳೆಯದು.

ಇದನ್ನೂ ಓದಿ: Guava vs Banana: ಪೇರಳೆ ಅಥವಾ ಬಾಳೆಹಣ್ಣು, ಇದರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್‌?

ರಕ್ತಹೀನತೆ:

ಕಬ್ಬಿಣದಿಂದ ಸಮೃದ್ಧವಾಗಿರುವ ಬಾಳೆ ಹೂವು ರಕ್ತದ ಕೊರತೆಯಾಗದಂತೆ ಪರಿಣಾಮಕಾರಿಯಾಗಿ ಔಷಧವಾಗಿ ಕೆಲಸ ಮಾಡುತ್ತದೆ. ಮಾತ್ರವಲ್ಲ ಇದು ರಕ್ತಹೀನತೆಗೆ ಸಂಬಂಧಿಸಿದ ಸೋಂಕುಗಳಿಂದ ದೂರವಿರಲು ಸಹಾಯ ಮಾಡುತ್ತದೆ. ನೀವು ಕೂಡ ರಕ್ತಹೀನತೆಯಿಂದ ಬಳಲುತ್ತಿದ್ದರೆ, ಬಾಳೆ ಹೂವನ್ನು ನಿಯಮಿತವಾಗಿ ಸೇವಿಸುವುದು ಬಹಳ ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ