Clove Benefits: ದಿನನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗ ಸೇವಿಸುವುದರಿಂದ ಎಷ್ಟೇಲ್ಲಾ ಪ್ರಯೋಜನಗಳಿವೆ ತಿಳಿಯಿರಿ
ಲವಂಗವನ್ನು ಬಹುತೇಕರು ಇದನ್ನೂ ಅಡುಗೆಯ ರುಚಿ ಹೆಚ್ಚಿಸಲು ಹೆಚ್ಚಾಗಿ ಬಳಸುತ್ತಾರೆ. ರಚಿಯ ಜತೆಗೆ ಆರೋಗ್ಯಕ್ಕಾಗಿಯೂ ನಮ್ಮ ನಿತ್ಯದ ಬದುಕಿನಲ್ಲಿ ಇದರ ಬಳಕೆಯನ್ನು ರೂಡಿಸಿಕೊಳ್ಳಬಹುದು.
ಲವಂಗ (clove) ಖಾರದಿಂದ ಕೂಡಿದ ಪರಿಮಳಯುಕ್ತ ಸಾಂಬಾರ ವಸ್ತು. ನಾವು ನಿತ್ಯದ ನಮ್ಮ ಬದುಕಿನಲ್ಲಿ ಲವಂಗವನ್ನು ಬಳಸುತ್ತೇವೆ. ಆದರೆ ಬಹುತೇಕರು ಇದನ್ನೂ ಅಡುಗೆಯ ರುಚಿ ಹೆಚ್ಚಿಸಲು ಹೆಚ್ಚಾಗಿ ಬಳಸುತ್ತಾರೆ. ರಚಿಯ ಜತೆಗೆ ಆರೋಗ್ಯಕ್ಕಾಗಿಯೂ ನಮ್ಮ ನಿತ್ಯದ ಬದುಕಿನಲ್ಲಿ ಇದರ ಬಳಕೆಯನ್ನು ರೂಡಿಸಿಕೊಳ್ಳಬಹುದು. ಇದರಲ್ಲಿ ಜೀವಸತ್ವಗಳು, ಫೈಬರ್, ಪ್ರೋಟೀನ್ಗಳು, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ಮ್ಯಾಂಗನೀಸ್, ಕಾರ್ಬೋಹೈಡ್ರೇಟ್ಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ನೀವು ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ಸೇವಿಸಿದರೆ, ದೇಹವು ಅದರಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ.
ಇದನ್ನೂ ಓದಿ: Asthma: ಚಳಿಗಾಲದಲ್ಲಿ ಉಲ್ಬಣಗೊಳ್ಳುವ ಅಸ್ತಮಾ ತಡೆಗಟ್ಟಲು ವೈದ್ಯರ ಸಲಹೆ ಇಲ್ಲಿದೆ
ಲವಂಗದಿಂದಾಗುವ ಆರೋಗ್ಯ ಪ್ರಯೋಜನಗಳು ಹೀಗಿವೆ:
- ರೋಗನಿರೋಧಕ ಶಕ್ತಿ ಹೆಚ್ಚಳ: ಕೊರೊನಾ ವೈರಸ್ ಸಾಂಕ್ರಾಮಿಕದಿಂದ, ಅನೇಕ ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೆಚ್ಚು ಗಮನ ಹರಿಸುತ್ತಿದ್ದಾರೆ. ಬದಲಾಗುತ್ತಿರುವ ಹವಾಮಾನ, ಮಳೆಗಾಲ ಮತ್ತು ಚಳಿಗಾಲದಲ್ಲಿ ಶೀತ, ಕೆಮ್ಮು ಮತ್ತು ನೆಗಡಿಯಿಂದ ದೂರವಿರಲು ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ಜಗಿಯುವ ಅಭ್ಯಾಸ ಸಹ ಒಳ್ಳೆಯದು ಎನ್ನುತ್ತಾರೆ ತಜ್ಞರು. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಯಕೃತ್ತಿನ ರಕ್ಷಣೆ:ಯಕೃತ್ತು ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಏಕೆಂದರೆ ನಮ್ಮ ದೇಹ ಚೆನ್ನಾಗಿ ಕೆಲಸ ಮಾಡುತ್ತದೆ. ಆದ್ದರಿಂದ ನೀವು ಈ ಅಂಗಕ್ಕೆ ವಿಶೇಷ ಗಮನ ನೀಡಬೇಕು. ಲವಂಗವನ್ನು ತಿನ್ನುವುದರಿಂದ, ನಿಮ್ಮ ಯಕೃತ್ತು ಸಂಪೂರ್ಣವಾಗಿ ಆರೋಗ್ಯಕರವಾಗಿರುತ್ತದೆ.
- ದುರ್ವಾಸನೆ ಹೋಗಲಾಡಿಸುತ್ತದೆ: ದುರ್ವಾಸನೆ ಹೋಗಲಾಡಿಸಲು ಲವಂಗವನ್ನು ಸಹ ಬಳಸಬಹುದು. ಇದು ಒಂದು ರೀತಿಯಲ್ಲಿ ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ. ಬಾಯಿಯನ್ನು ಸರಿಯಾಗಿ ಶುಚಿಗೊಳಿಸದಿದ್ದಲ್ಲಿ ಹೆಚ್ಚಿನ ಬಾರಿ ದುರ್ವಾಸನೆ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಲವಂಗವನ್ನು ಬಳಸುವುದರಿಂದ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಲವಂಗವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಪ್ರತಿದಿನ ಬೆಳಗ್ಗೆ ಲವಂಗವನ್ನು ಅಗಿಯುತ್ತಿದ್ದರೆ ಬಾಯಿಯಲ್ಲಿರುವ ಸೂಕ್ಷ್ಮಾಣುಗಳು ನಾಶವಾಗುತ್ತವೆ ಮತ್ತು ತಾಜಾ ಉಸಿರಿನ ಅನುಭವವಾಗುತ್ತದೆ.
- ಹಲ್ಲುನೋವು ನಿವಾರಣೆ: ನಿಮಗೆ ಹಲ್ಲುನೋವು ಇದ್ದರೆ, ಲವಂಗವನ್ನು ನೋವು ನಿವಾರಕವಾಗಿ ಬಳಸಬಹುದು. ಹಲ್ಲುನೋವಿನ ಮೇಲೆ ಲವಂಗದ ತುಂಡನ್ನು ಲೇಪಿಸಿ. ಇದರಿಂದ ನೋವು ಕಡಿಮೆಯಾಗುತ್ತದೆ. ಏಕೆಂದರೆ ಲವಂಗವು ಬ್ಯಾಕ್ಟೀರಿಯಾವನ್ನು ಸುಲಭವಾಗಿ ಕೊಲ್ಲುತ್ತದೆ. ಇದು ಕೆಲವೇ ಗಂಟೆಗಳಲ್ಲಿ ನೋವನ್ನು ನಿವಾರಿಸುತ್ತದೆ.
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.