Benefits of Ice Bath: ತಣ್ಣೀರಿನ ಸ್ನಾನ ದೇಹಕ್ಕೆ ಒಳ್ಳೆಯದು ಎಂಬುದಕ್ಕೆ ಇಲ್ಲಿದೆ ಕಾರಣಗಳು

ವೃತ್ತಿಪರ ಕ್ರೀಡಾಪಟುಗಳು ಆಟ ಮುಗಿದ ಬಳಿಕ ತಣ್ಣೀರಿನ ಸ್ನಾನ ಯಾಕಾಗಿ ಮಾಡುತ್ತಾರೆ ಗೊತ್ತಾ? ಕೋಲ್ಡ್ ಬಾತ್ ಅಥವಾ ತಣ್ಣೀರಿನ ಸ್ನಾನ ಕ್ರಯೋಥೆರಪಿಯ ಒಂದು ರೂಪವಾಗಿದ್ದು, ಇದರಲ್ಲಿ ತಣ್ಣೀರನ್ನು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಅನೇಕ ಸೆಲೆಬ್ರಿಟಿಗಳು ಕೂಡ ತಣ್ಣೀರಿನ ಸ್ನಾನವನ್ನು ಇಷ್ಟಪಡುತ್ತಾರೆ. ಈ ರೀತಿಯ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ! ಆ ಬಗ್ಗೆ ಮಾಹಿತಿ ಇಲ್ಲಿದೆ.

Benefits of Ice Bath: ತಣ್ಣೀರಿನ ಸ್ನಾನ ದೇಹಕ್ಕೆ ಒಳ್ಳೆಯದು ಎಂಬುದಕ್ಕೆ ಇಲ್ಲಿದೆ ಕಾರಣಗಳು
Benefits of ice bath
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Jan 07, 2024 | 6:20 PM

ತಣ್ಣೀರಿನ ಸ್ನಾನ ಮಾಡಲು ಇಷ್ಟಪಡುತ್ತೀರಾ? ಅದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ವೃತ್ತಿಪರ ಕ್ರೀಡಾಪಟುಗಳು ಆಟ ಮುಗಿದ ಬಳಿಕ ತಣ್ಣೀರಿನ ಸ್ನಾನ ಯಾಕಾಗಿ ಮಾಡುತ್ತಾರೆ ಗೊತ್ತಾ? ಕೋಲ್ಡ್ ಬಾತ್ ಅಥವಾ ತಣ್ಣೀರಿನ ಸ್ನಾನ ಕ್ರಯೋಥೆರಪಿಯ ಒಂದು ರೂಪವಾಗಿದ್ದು, ಇದರಲ್ಲಿ ತಣ್ಣೀರನ್ನು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಅನೇಕ ಸೆಲೆಬ್ರಿಟಿಗಳು ಕೂಡ ತಣ್ಣೀರಿನ ಸ್ನಾನವನ್ನು ಇಷ್ಟಪಡುತ್ತಾರೆ. ಈ ರೀತಿಯ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ! ಆ ಬಗ್ಗೆ ಮಾಹಿತಿ ಇಲ್ಲಿದೆ.

ಈ ಅಭ್ಯಾಸವು ಹೊಸದಲ್ಲ, ಆದರೆ ಇದು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಜನರು ಶತಮಾನಗಳಿಂದ ತಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ತಣ್ಣೀರಿನಲ್ಲಿ ಸ್ನಾನ ಮಾಡುತ್ತಾ ಬಂದಿದ್ದಾರೆ. ಇದರ ಅಭ್ಯಾಸ ಇರುವ ಜನರಿಗೆ ನೋಯುತ್ತಿರುವ ಸ್ನಾಯುಗಳನ್ನು ಶಮನಗೊಳಿಸುವ ಶಕ್ತಿ ಇರುತ್ತದೆ, ದೇಹಕ್ಕೆ ವಿಶ್ರಾಂತಿ ನೀಡುತ್ತದೆ ಮತ್ತು ಉತ್ತಮ ನಿದ್ರೆಗೆ ಜಾರಲು ನಿಮ್ಮನ್ನು ಪ್ರೇರೇಪಿಸುತ್ತದೆ. ತಣ್ಣೀರಿನ ಸ್ನಾನದ ಪ್ರಯೋಜನಗಳ ಬಗ್ಗೆ ಹೆಲ್ತ್ ಶಾಟ್ಸ್ ಮುಂಬೈನ ಕಾಸ್ಮೆಟಾಲಜಿಸ್ಟ್ ಮತ್ತು ಟ್ರೈಕಾಲಜಿಸ್ಟ್ ಡಾ. ಪ್ರೀತಿ ಮಹಿರ್ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ತಣ್ಣೀರಿನ ಸ್ನಾನದ ಪ್ರಯೋಜನಗಳೇನು?

ಇದು ಒಂದು ರೀತಿಯ ಚಿಕಿತ್ಸೆ, ಅವುಗಳ ಸಂಭಾವ್ಯ ಪ್ರಯೋಜನಗಳಿಂದಾಗಿ, ವಿಶೇಷವಾಗಿ ಕ್ರೀಡಾಪಟುಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಆದರೆ ಇದನ್ನು ಪ್ರಾರಂಭಿಸುವ ಮೊದಲು, ಸಂಭಾವ್ಯ ಪ್ರಯೋಜನಗಳು ಮತ್ತು ನ್ಯೂನತೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

1. ನೋವನ್ನು ನಿವಾರಿಸುತ್ತದೆ:

“ಕಠಿಣ ವ್ಯಾಯಾಮದ ನಂತರ ಸ್ನಾಯು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ತಣ್ಣೀರಿನ ಸ್ನಾನವನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ. ತಣ್ಣೀರು ನೋವು ಗ್ರಾಹಿಗಳನ್ನು ಮರಗಟ್ಟಿಸುತ್ತದೆ, ಸಂಧಿವಾತ ಮತ್ತು ತೀವ್ರವಾದ ಸ್ನಾಯು ಸೆಳೆತದಂತಹ ಪರಿಸ್ಥಿತಿಗಳಿಂದ ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ “ಎಂದು ಡಾ. ಪ್ರೀತಿ ಮಹಿರೆ ಹೇಳುತ್ತಾರೆ.

2. ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ:

“ತಣ್ಣೀರಿನ ಸ್ನಾನವು ಮನಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ, ಅಲ್ಲದೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ” ಎಂದು ತಜ್ಞರು ಹೇಳುತ್ತಾರೆ. ನಿಮ್ಮ ದೇಹವನ್ನು ತಣ್ಣೀರಿಗೆ ಒಡ್ಡುವುದು ಒತ್ತಡದ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ ಮತ್ತು ನರಮಂಡಲವನ್ನು ಸಕ್ರಿಯಗೊಳಿಸುತ್ತದೆ.

3. ಉತ್ತಮ ನಿದ್ರೆ ಮಾಡಲು ಸಹಕಾರಿ:

ತಣ್ಣೀರಿನ ಸ್ನಾನ ನಿದ್ರೆಯನ್ನು ಉತ್ತೇಜಿಸುತ್ತದೆ. ಏಕೆಂದರೆ ಸ್ನಾನದ ನಂತರ ನಮ್ಮ ದೇಹವು ವಿಶ್ರಾಂತಿ ಪಡೆಯುತ್ತದೆ ಮತ್ತು ಅದು ರಾತ್ರಿಯಲ್ಲಿ ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಅಲ್ಲದೆ, ಇದು ಚರ್ಮದ ಪರಿಚಲನೆ ಮತ್ತು ತಾರುಣ್ಯದಿಂದ ಕಾಣುವ ಚರ್ಮಕ್ಕೂ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಹಾಲುಣಿಸುವ ತಾಯಂದಿರಲ್ಲಿ ಮೊಲೆತೊಟ್ಟುಗಳ ಬಿರುಕು ಅಥವಾ ರಕ್ತಸ್ರಾವಕ್ಕೆ ಕಾರಣವೇನು? ಪರಿಹಾರ ಇಲ್ಲಿದೆ

ತಣ್ಣೀರು ಸ್ನಾನದ ಅಡ್ಡಪರಿಣಾಮಗಳು ಯಾವುವು?

1. ಅಸ್ವಸ್ಥತೆ ಮತ್ತು ಅಪಾಯಗಳು:

ತಣ್ಣೀರು ಸ್ನಾನ ಸ್ವಭಾವತಃ ಅಹಿತಕರವಾಗಿವೆ, ಮತ್ತು ತಣ್ಣೀರಿನ ಆರಂಭಿಕದಲ್ಲಿ ಉಸಿರಾಟದಲ್ಲಿ ತೊಂದರೆ, ಪ್ಯಾನಿಕ್ ಅಟ್ಯಾಕ್ ಗಳಿಗೆ ಕಾರಣವಾಗಬಹುದು.

2. ಚರ್ಮದಲ್ಲಿ ಕಿರಿಕಿರಿ:

ದೀರ್ಘಕಾಲದವರೆಗೆ ತಣ್ಣೀರು ಸ್ನಾನ ಮಾಡುವುದರಿಂದ ಕೆಲವರಲ್ಲಿ ಚರ್ಮದಲ್ಲಿ ಕಿರಿಕಿರಿ ಉಂಟಾಗಬಹುದು. ದದ್ದು ಮತ್ತು ತುರಿಕೆ ಕಾಣಿಸಿಕೊಳ್ಳಬಹುದು.

3. ಹೃದಯ ರಕ್ತನಾಳದ ತೊಂದರೆಗಳು:

ತಣ್ಣೀರು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ಹೃದಯವನ್ನು ತಾತ್ಕಾಲಿಕ ಒತ್ತಡಕ್ಕೆ ಒಳಪಡಿಸುತ್ತದೆ. ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡದಂತಹ ಹೃದಯರಕ್ತನಾಳದ ಕಾಯಿಲೆಗಳನ್ನು ಹೊಂದಿರುವ ಜನರಿಗೆ ಇದು ಅಪಾಯಕಾರಿಯಾಗಿದೆ.

4. ಹೈಪೋಥರ್ಮಿಯಾ ಅಪಾಯ:

ತಣ್ಣೀರಿನಲ್ಲಿ ಅನೇಕ ಸಲ ಸ್ನಾನ ಮಾಡುವುದು ದೇಹದ ತಾಪಮಾನಕ್ಕೆ ಅಪಾಯಕಾರಿಯಾಗಿದೆ, ವಿಶೇಷವಾಗಿ ಮಕ್ಕಳು ಮತ್ತು ವಯಸ್ಸಾದವರಲ್ಲಿ ಮಾರಣಾಂತಿಕವಾಗಿದೆ. ಇದರ ಇತರ ಅಪಾಯಗಳಲ್ಲಿ ಮೂರ್ಛೆ, ತಲೆ ತಿರುಗುವಿಕೆ ಮತ್ತು ತಲೆನೋವು ಕೂಡ ಕಂಡು ಬರಬಹುದು.

ಸೂಚನೆ:

ಯಾವುದೇ ಚಿಕಿತ್ಸೆ ಅಥವಾ ಸೆಲೆಬ್ರಿಟಿ ಹ್ಯಾಕ್ ಅನ್ನು ಅನುಸರಿಸುವ ಮೊದಲು ಯಾವಾಗಲೂ ಸುರಕ್ಷತೆಗೆ ಆದ್ಯತೆ ನೀಡಿ ಮತ್ತು ವೈಯಕ್ತಿಕಗೊಳಿಸಿದ ಸಲಹೆಗಾಗಿ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?