ಹಲ್ಲಿನ ನೋವಿನಿಂದ ಒದ್ದಾಡಬೇಡಿ, ಮನೆಯಲ್ಲೇ ಇದೆ ಮದ್ದು
ಹಲ್ಲಿನಲ್ಲಿ ಕ್ಯಾಲ್ಸಿಯಂ ಕಡಿಮೆಯಾದಾಗ ನೋವು ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ಹಲ್ಲು ಶುಚಿಯಾಗದೆ ಇದ್ದಾಗ ಹುಳುಕಾಗಿ ನೋವು ಹೆಚ್ಚಾಗುತ್ತದೆ. ಹಲ್ಲು ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿ ಮಾಡುವ ಮೊದಲು ಮನೆಯಲ್ಲೇ ನೋವಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ನನಗ್ಯಾಕಪ್ಪಾ ಈ ಶಿಕ್ಷೆ ದೇವರೇ. ನಾನು ಯಾವ ತಪ್ಪು ಮಾಡಿದ್ದೇನೆ. ಸಾಯುವಂತಾಗುತ್ತಿದೆ. ನನಗೆ ನೋವು ತಡೆದುಕೊಳ್ಳಲು ಆಗುತ್ತಿಲ್ಲ. ಬೇಗ ಹಲ್ಲು ನೋವು ಕಡಿಮೆಯಾಗಲಿ ಅಂತ ಸಾಮಾನ್ಯವಾಗಿ ಎಲ್ಲರೂ ಪರದಾಡುವುದು ಇದ್ದಿದ್ದೇ. ಮುನುಷ್ಯನ ದೇಹಕ್ಕೆ ಒಂದು ಚಿಕ್ಕ ಗಾಯವಾದರೂ ಅದನ್ನು ಸಹಿಸಿಕೊಳ್ಳುವುದು ಕಷ್ಟವೇ. ಅದರಲ್ಲೂ ಹಲ್ಲು ನೋವು ಬಂತು ಅಂದರೆ ಯಾರಿಗೂ ಬೇಡಪ್ಪಾ ಈ ನೋವು ಅಂತ ಕಣ್ಣು ದೊಡ್ಡ ಮಾಡುತ್ತಾರೆ. ಏನಾದರೂ ಗಟ್ಟಿ ವಸ್ತುವನ್ನು ತಿನ್ನೋಣ ಎಂದರೆ ಹಾಳಾದ ಹಲ್ಲು ನೋವು ಅಂತ ಗೊಣಗುವವರೇ ಹೆಚ್ಚು. ನೋವನ್ನು ತಾಳಲಾರದೆ ವೈದ್ಯರನ್ನು ಸಂಪರ್ಕಿಸುವಷ್ಟರಲ್ಲಿ ಜೀವ ಹೈರಾಣಾಗಿಬಿಡುತ್ತದೆ.
ಹಲ್ಲಿನಲ್ಲಿ ಕ್ಯಾಲ್ಸಿಯಂ ಕಡಿಮೆಯಾದಾಗ ನೋವು ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ಹಲ್ಲು ಶುಚಿಯಾಗದೆ ಇದ್ದಾಗ ಹುಳುಕಾಗಿ ನೋವು ಹೆಚ್ಚಾಗುತ್ತದೆ. ಹಲ್ಲು ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿ ಮಾಡುವ ಮೊದಲು ಮನೆಯಲ್ಲೇ ನೋವಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ನೋವು ವಿಪರೀತವಾದಾಗ ವೈದ್ಯರ ಸಲಹೆ ಅಗತ್ಯ. ಆದರೆ ಹಲ್ಲು ನೋವು ಸಹಜವಾಗಿ ಎಲ್ಲರಿಗೂ ಕಾಣಿಸಿಕೊಳ್ಳುತ್ತದೆ. ಇದರಿಂದ ಮನೆಯಲ್ಲೇ ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದು.
1. ಉಪ್ಪಿನ ನೀರು ಉಪ್ಪಿನ ನೀರಿನಲ್ಲಿ ಬಾಯಿಯನ್ನು ಮುಕ್ಕಳಿಸುವುದರಿಂದ ಊಟ ಮಾಡಿ ಹಲ್ಲಿನ ಸಂದಿಯಲ್ಲಿ ಸಿಲುಕಿಕೊಂಡ ಆಹಾರದ ಪದಾರ್ಥವನ್ನು ಹೊರಗೆ ತೆಗೆಯಬಹುದು. ಇದು ಬಹುತೇಕರಿಗೆ ತಿಳಿದಿದೆ. ಆದರೆ ಕೆಲವರಿಗೆ ಇದರ ಬಗ್ಗೆ ಗೊತ್ತಿಲ್ಲ. ಉಪ್ಪು ನೀರಿನಿಂದ ಬಾಯಿಯನ್ನು ಮುಕ್ಕಳಿಸುತ್ತಿದ್ದರೆ ಹಲ್ಲಿನ ನೋವು ತಾನಾಗೇ ಕಡಿಮೆಯಾಗುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ ಅರ್ಧ ಚಮಚ ಅಥವಾ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಉಪ್ಪನ್ನು ಸೇರಿಸಿ. ಆ ನಂತರ ಬಾಯಿಯ ಒಳಗೆ 30 ಸೆಕೆಂಡುಗಳ ಕಾಲ ನೀರನ್ನು ಇರಿಸಿಕೊಂಡು ಮುಕ್ಕಳಿಸಬೇಕು. ಈ ರೀತಿ 10 ರಿಂದ 12 ಬಾರಿ ಮಾಡಬೇಕು.
2. ಐಸ್ ಪ್ಯಾಕ್ ಹಲ್ಲು ನೋವು ಇರುವವರಿಗೆ ಐಸ್ ಪ್ಯಾಕ್ ಉತ್ತಮ ಮೆಡಿಸಿನ್ ಇದ್ದಂತೆ. ನೋವಿರುವ ಹಲ್ಲಿನ ಹೊರ ಭಾಗ ಅಂದರೆ ಕೆನ್ನೆಯ ಭಾಗದಲ್ಲಿ ಐಸ್ ಪ್ಯಾಕ್ ಇಡಬೇಕು. ಕೆಲವು ನಿಮಿಷಗಳ ಕಾಲ ಮುಖದಲ್ಲಿ ಐಸ್ ಪ್ಯಾಕ್ ಇಟ್ಟುಕೊಂಡರೆ ಹಲ್ಲಿನ ನೋವು ತಾನಾಗೇ ಕಡಿಮೆಯಾಗುತ್ತದೆ.
3. ಬೆಳ್ಳುಳ್ಳಿ ಬೆಳ್ಳುಳ್ಳಿ ಅಡುಗೆಗೆ ಹೊಸ ರುಚಿಯನ್ನೇ ಕೊಡುತ್ತದೆ. ಕೆಲವೊಮ್ಮ ಬೆಳ್ಳುಳ್ಳಿ ಇಲ್ಲದಿದ್ದಾಗ ಅಡುಗೆ ಮಾಡಿದರೂ ಹೇಳುವಂತಹ ರುಚಿ ಸಿಗುವುದಿಲ್ಲ. ಹಾಗಾಗಿ ಬೆಳ್ಳುಳ್ಳಿಗೆ ಅಡುಗೆ ಮನೆಯಲ್ಲಿ ಹೆಚ್ಚು ಬೇಡಿಕೆಯಿದೆ. ಅದರಂತೆ ನೂರಾರು ವರ್ಷಗಳಿಂದ ಇದನ್ನು ಔಷಧಿಗೂ ಬಳಸುತ್ತಾರೆ. ಇದು ಹಲ್ಲಿನ ಸಂದಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುವ ಗುಣವನ್ನು ಹೊಂದಿದೆ. ಇದನ್ನು ಮತ್ತು ಲವಂಗವನ್ನು ಪುಡಿಮಾಡಿ ಪೇಸ್ಟ್ ರೀತಿ ತಯಾರಿಸಿ ನೋವಿರುವ ಹಲ್ಲಿಗೆ ಇಟ್ಟರೆ ನೋವು ಕಡಿಮೆಯಾಗುತ್ತದೆ. ಪೆಸ್ಟ್ ತಯಾರಿಸುವಾಗ ಉಪ್ಪನ್ನು ಕೂಡಾ ಬಳಸಬಹುದು. ಇದರ ಬದಲಿಗೆ ಬೆಳ್ಳುಳ್ಳಿ ಮತ್ತು ಲವಂಗವನ್ನು ನಿಧಾನವಾಗಿ ನೋವಿರುವ ಹಲ್ಲಿನಲ್ಲಿ ಅಗಿಯಬಹುದು.
4. ವೆನಿಲ್ಲಾ ಸಾರ ವೆನಿಲ್ಲಾ ಸಾರ ಆಲ್ಕೋಹಾಲ್ ಅನ್ನು ಹೊಂದಿರುತ್ತದೆ. ಇದು ನೋವು ಶಮನಗೊಳಿಸಲು ಸಹಾಯ ಮಾಡುತ್ತದೆ. ವೆನಿಲ್ಲಾ ಸಾರವನ್ನು ನಿಮ್ಮ ಬೆರಳಿಗೆ ಅಥವಾ ಹತ್ತಿ ಚೆಂಡಿನ ಮೇಲೆ ಸ್ವಲ್ಪ ಹಾಕಿಕೊಂಡು ನೋವಿನ ಜಾಗಕ್ಕೆ ನೇರವಾಗಿ ಹಾಕಬೇಕು. ಇದನ್ನು ದಿನಕ್ಕೆ 3 ರಿಂದ 4 ಬಾರಿ ಮಾಡಿದರೆ ಬೇಗ ನೋವು ಕಡಿಮೆಯಾಗುತ್ತದೆ.
5. ಅಲೋವೆರಾ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಅಲೋವೆರಾ ಇದ್ದೇ ಇರುತ್ತದೆ. ಇದು ಬಹಳಷ್ಟು ಔಷಧಿ ಗುಣಗಳನ್ನು ಹೊಂದಿದೆ. ಹಲ್ಲಿನ ನೋವಿಗೆ ರಾಮಬಾಣ. ವಿಟಮಿನ್ ಇ ಯಿಂದ ಕೂಡಿರುವ ಅಲೋವೆರಾ ಹಲ್ಲಿನ ನೋವನ್ನು ಕಡಿಮೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲೋವೆರಾ ಜೆಲ್ ಅನ್ನು ಒಂದು ಬಟ್ಟಲಿಗೆ ಹಾಕಿಕೊಂಡು ನೋವಿರುವ ಹಲ್ಲಿಗೆ ಮಸಾಜ್ ಮಾಡಬೇಕು. ಇದರಿಂದು ನೋವು ಶಮನವಾಗುತ್ತದೆ.
ಇದನ್ನೂ ಓದಿ
ಬಿಸಿಬಿಸಿ ಚಹಾದ ಜೊತೆ ಸವಿಯಲು ಗರಿಗರಿ ಸಮೋಸಾ ಮಾಡುವ ವಿಧಾನ ಕಲಿಯಿರಿ
ಸ್ನಾನಗೃಹ ಅಲಂಕಾರಕ್ಕೆ ಇಲ್ಲಿವೆ 6 ವಿವಿಧ ಗಿಡಗಳು
(Best five medicine for Toothache in home)