AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Corbevax vaccine ಬಯಾಲಾಜಿಕಲ್ ಇ ಕಂಪನಿಯ ಕೊವಿಡ್-19 ಲಸಿಕೆ ಕಾರ್ಬೆವಾಕ್ಸ್‌ ಬೆಲೆ 250 ರೂ.ಗೆ ಇಳಿಕೆ

ತನ್ನ ಲಸಿಕೆಯನ್ನು ಹೆಚ್ಚು ಕೈಗೆಟುಕುವ ಉದ್ದೇಶದಿಂದ ಮತ್ತು ವೈರಸ್ ವಿರುದ್ಧ ಗರಿಷ್ಠ ಸಂಖ್ಯೆಯ ಮಕ್ಕಳನ್ನು ರಕ್ಷಿಸಲು ಸಹಾಯ ಮಾಡುವ ಉದ್ದೇಶದಿಂದ ಬೆಲೆಯನ್ನು ಕಡಿಮೆ ಮಾಡಲಾಗಿದೆ ಎಂದು ಬಯಾಲಾಜಿಕಲ್ ಇ ಹೇಳಿದೆ.

Corbevax  vaccine ಬಯಾಲಾಜಿಕಲ್ ಇ ಕಂಪನಿಯ ಕೊವಿಡ್-19 ಲಸಿಕೆ ಕಾರ್ಬೆವಾಕ್ಸ್‌ ಬೆಲೆ 250 ರೂ.ಗೆ ಇಳಿಕೆ
ಕಾರ್ಬೆವಾಕ್ಸ್
TV9 Web
| Edited By: |

Updated on: May 16, 2022 | 4:33 PM

Share

ಹೈದರಾಬಾದ್ ಮೂಲದ ಲಸಿಕೆ ಮತ್ತು ಔಷಧೀಯ ಸಂಸ್ಥೆ ಬಯಾಲಾಜಿಕಲ್ ಇ. ಲಿಮಿಟೆಡ್ (Biological E. Limited) ಸೋಮವಾರ ಖಾಸಗಿ ಲಸಿಕೆ ಕೇಂದ್ರಗಳಿಗೆ ತನ್ನ ಕೊವಿಡ್-19 ಲಸಿಕೆ (Covid19 Vaccine) ಕಾರ್ಬೆವಾಕ್ಸ್‌ನ (Corbevax) ಬೆಲೆಯನ್ನು ಜಿಎಸ್‌ಟಿ ಒಳಗೊಡಂತೆ   ₹840 ರಿಂದ ರೂ.250 ಕ್ಕೆ ಇಳಿಸಿದೆ ಎಂದು ಹೇಳಿದೆ. ಅಂತಿಮ ಬಳಕೆದಾರರಿಗೆ, ತೆರಿಗೆಗಳು ಮತ್ತು ನೀಡಿಕೆ ಶುಲ್ಕಗಳು ಸೇರಿದಂತೆ ಒಂದು ಡೋಸ್ ಬೆಲೆ ರೂ.400 ಆಗಿರುತ್ತದೆ ಎಂದು ಅದು ಹೇಳಿದೆ.  ಲಸಿಕೆಗೆ ಹಿಂದಿನ ಖಾಸಗಿ ಮಾರುಕಟ್ಟೆ ಬೆಲೆಯು ತೆರಿಗೆ ಮತ್ತು ಲಸಿಕೆ ನೀಡಿಕೆ ಶುಲ್ಕಗಳು ಸೇರಿದಂತೆ ಒಂದು ಡೋಸ್ ರೂ.990 ಆಗಿತ್ತು. ತನ್ನ ಲಸಿಕೆಯನ್ನು ಹೆಚ್ಚು ಕೈಗೆಟುಕುವ ಉದ್ದೇಶದಿಂದ ಮತ್ತು ವೈರಸ್ ವಿರುದ್ಧ ಗರಿಷ್ಠ ಸಂಖ್ಯೆಯ ಮಕ್ಕಳನ್ನು ರಕ್ಷಿಸಲು ಸಹಾಯ ಮಾಡುವ ಉದ್ದೇಶದಿಂದ ಬೆಲೆಯನ್ನು ಕಡಿಮೆ ಮಾಡಲಾಗಿದೆ ಎಂದು ಬಯಾಲಾಜಿಕಲ್ ಇ ಹೇಳಿದೆ. ಬಯೋಲಾಜಿಕಲ್ ಇ. ಲಿಮಿಟೆಡ್ 5 ಮತ್ತು 12 ವರ್ಷ ವಯಸ್ಸಿನ ಮಕ್ಕಳಿಗೆ ತುರ್ತು ಬಳಕೆಯ ಅಧಿಕಾರವನ್ನು (EUA) ಸ್ವೀಕರಿಸಿದ ವಾರಗಳಲ್ಲಿ ಈ ನಿರ್ಧಾರವು ಬಂದಿದೆ . ಲಸಿಕೆಗಾಗಿ ತುರ್ತು ಬಳಕೆಯ ಅಧಿಕಾರವನ್ನು ಸ್ವೀಕರಿಸುವ ಮೊದಲು, ಕಂಪನಿಯು 5-12 ಮತ್ತು 12-18 ವಯಸ್ಸಿನ 624 ಮಕ್ಕಳಲ್ಲಿ ಹಂತ II ಮತ್ತು III ಮಲ್ಟಿಸೆಂಟರ್ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿತು. ಕಾರ್ಬೆವಾಕ್ಸ್ ಅನ್ನು ಒಂದೇ ಡೋಸ್ ಬಾಟಲಿಯಲ್ಲಿ ನೀಡಲಾಗುತ್ತದೆ. ಇದು ಲಸಿಕೆ ನೀಡಿಕೆಗೆ ಹೆಚ್ಚು ಅನುಕೂಲಕರವಾಗಿದ್ದು, ಲಸಿಕೆ ವ್ಯರ್ಥವನ್ನು ನಿವಾರಿಸುತ್ತದೆ ಎಂದು ಅದು ಹೇಳಿದೆ.

ಕೊವಿನ್ (Co-WIN) ಅಪ್ಲಿಕೇಶನ್ ಅಥವಾ 12 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ Co-WIN ಪೋರ್ಟಲ್ ಮೂಲಕ ಕೊವಿಡ್ ಲಸಿಕೆ ಕಾರ್ಬೆವಾಕ್ಸ್‌ ಗಾಗಿ ಲಸಿಕೆ ಸ್ಲಾಟ್ ಅನ್ನು ಬುಕ್ ಮಾಡಬಹುದು ಎಂದು ಬಯಾಲಾಜಿಕಲ್ ಇ ಹೇಳಿದೆ. ಬಯಾಲಾಜಿಕಲ್ ಇ. ಲಿಮಿಟೆಡ್ ಸರ್ಕಾರಕ್ಕೆ ಸುಮಾರು 100 ಮಿಲಿಯನ್ ಡೋಸ್‌ಗಳನ್ನು ಪೂರೈಸಿದೆ.

ಟೆಕ್ಸಾಸ್ ಚಿಲ್ಡ್ರನ್ಸ್ ಹಾಸ್ಪಿಟಲ್ ಮತ್ತು ಬೇಲರ್ ಕಾಲೇಜ್ ಆಫ್ ಮೆಡಿಸಿನ್ ಸಹಯೋಗದೊಂದಿಗೆ ಬಯಾಲಾಜಿಕಲ್ ಇ. ಲಿಮಿಟೆಡ್ ಕಾರ್ಬೆವಾಕ್ಸ್ ಅನ್ನು ಅಭಿವೃದ್ಧಿಪಡಿಸಿದೆ.