Hagalakayi: ಆರೋಗ್ಯ ಕಾಪಾಡಿಕೊಳ್ಳಲು ಹಾಗಲಕಾಯಿ ಎಂಬ ಕಹಿ ತರಕಾರಿಯನ್ನು ಹೇಗೆಲ್ಲಾ ಬಳಸಬಹುದು ಗೊತ್ತಾ?

Bitter Gourd: ಹಾಗಲು, ಕಹಿಬೇವು, ಕರಿಬೇವು ಸಮಪ್ರಮಾಣದಲ್ಲಿ ಸೇವನೆಯಿಂದ ಶುಗರ್ ಹತೋಟಿಗೆ ಬರುತ್ತದೆ. ಹಾಗಲ ಎಲೆ ರಸವನ್ನು ಹೆಂಚಿನಲ್ಲಿ ಬಿಸಿ ಮಾಡಿ ನೋವು ಇರುವ ಜಾಗಕ್ಕೆ ಹಚ್ಚಿದರೆ ನೋವು ಗುಣವಾಗುತ್ತದೆ. ಹಾಗಲಕಾಯಿ ಪಶುರೋಗಗಳಿಗೂ ತುಂಬಾ ಉಪಯುಕ್ತ.

Hagalakayi: ಆರೋಗ್ಯ ಕಾಪಾಡಿಕೊಳ್ಳಲು ಹಾಗಲಕಾಯಿ ಎಂಬ ಕಹಿ ತರಕಾರಿಯನ್ನು ಹೇಗೆಲ್ಲಾ ಬಳಸಬಹುದು ಗೊತ್ತಾ?
ಆರೋಗ್ಯ ಕಾಪಾಡಿಕೊಳ್ಳಲು ಹಾಗಲಕಾಯಿ ಎಂಬ ಕಹಿ ತರಕಾರಿಯನ್ನು ಹೇಗೆಲ್ಲಾ ಬಳಸಬಹುದು ಗೊತ್ತಾ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 20, 2022 | 6:06 AM

ಹಾಗಲಕಾಯಿ (Hagalakayi) -ಮೊಮೊರ್ಡಿಕಾ ಚರಾಂತಿಯ, ಇಂಗ್ಲಿಷ್ ನಲ್ಲಿ ಬಿಟರ್ ಮೆಲನ್ ಅಥವಾ ಬಿಟರ್ ಗಾರ್ಡ್ (Bitter Gourd) ಎಂದು ಕರೆಯಲಾಗುವ ಇದು, ಸೌತೆಕಾಯಿಯಂತಹ ಜಾತಿಗೆ ಸೇರಿದ ಉಷ್ಣವಲಯದ ಬಳ್ಳಿಯಾಗಿದೆ. ಇದು ತಿನ್ನಲು ಯೋಗ್ಯವಾದ ಹಣ್ಣನ್ನು ಹೊಂದಿರುವ ಕಾರಣಕ್ಕೆ ಏಷಿಯಾ, ಆಫ್ರಿಕಾ, ಹಾಗೂ ವೆಸ್ಟ್ ಇಂಡೀಸ್ ದ್ವೀಪ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇದರ ಹಣ್ಣು ಇತರ ಎಲ್ಲ ಹಣ್ಣುಗಳಿಗಿಂತ ಅತ್ಯಧಿಕ ಕಹಿಯಾಗಿರುತ್ತದೆ. ಇದರಲ್ಲಿಯೂ ಮೂಲಭೂತವಾಗಿ ಹಣ್ಣಿನ ಆಕಾರ ಹಾಗು ಕಹಿಯಲ್ಲಿ ವ್ಯತ್ಯಾಸ ಹೊಂದಿರುವ ಹಲವು ಪ್ರಭೇದಗಳಿವೆ (Health Tips).

ಹಣ್ಣಿನ ಹೊರಭಾಗವು ಗಂಟುಳ್ಳ ಕಾಯಿಯಾಗಿರುತ್ತದಲ್ಲದೇ ಅದು ವಿಶಿಷ್ಟವಾಗಿ ಆಯತಾಕಾರ ಹೊಂದಿರುತ್ತದೆ. ಇದು ಅಡ್ಡಭಾಗದಲ್ಲಿ ಟೊಳ್ಳಾಗಿರುತ್ತದೆ. ದೊಡ್ಡದಾದ ಚಪ್ಪಟೆಯಾಕಾರದ ಬೀಜಗಳು ಹಾಗು ಕಾಂಡದಿಂದ ಭರ್ತಿಯಾದ ಮಧ್ಯಭಾಗದ ಬೀಜದ ಕುಳಿಯನ್ನು ತುಲನಾತ್ಮಕವಾಗಿ ತೆಳುವಾದ ತಿರುಳು ಹೊಂದಿರುವ ಚರ್ಮವು ಇದಕ್ಕೆ ಸುತ್ತುವರೆದಿರುತ್ತದೆ. ಹಣ್ಣನ್ನು ಸಾಮಾನ್ಯವಾಗಿ ಹಸಿರಾಗಿರುವಾಗ, ಅಥವಾ ಹಳದಿ ಬಣ್ಣಕ್ಕೆ ತಿರುಗಲು ಆರಂಭವಾದಾಗ ಸೇವಿಸಲಾಗುತ್ತದೆ.

ಈ ಹಂತದಲ್ಲಿ, ಹಣ್ಣಿನ ತಿರುಳಿನ ರಚನೆಯು ಸುಲಭವಾಗಿ ಒಡೆಯುವಂತಿರುವುದರ ಜೊತೆಗೆ ನೀರನ್ನೂ ಒಳಗೊಂಡಿರುತ್ತದೆ. ಹಣ್ಣು ಪಕ್ವವಾಗುತ್ತಿದ್ದಂತೆ, ತಿರುಳು ದಪ್ಪವಾಗಿ, ಹೆಚ್ಚು ಕಹಿಯಾಗುತ್ತದೆ, ಹಾಗು ತಿನ್ನಲು ಬಹಳ ಅರೋಚಕವಾಗಿರುತ್ತದೆ. ಮತ್ತೊಂದೆಡೆ, ತಿರುಳು ಬಹಳ ಮಧುರ ಹಾಗು ತೀಕ್ಷ್ಣ ಕೆಂಪಾಗಾಗುತ್ತದೆ; ಈ ಹಂತದಲ್ಲಿ ಇದನ್ನು ಬೇಯಿಸದೇ ಹಾಗೆ ತಿನ್ನಬಹುದು, ಹಾಗು ಕೆಲವು ಆಗ್ನೇಯ ಏಶಿಯನ್ ಸಲಾಡ್ ಗಳಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ.

ಹಣ್ಣು ಸಂಪೂರ್ಣ ಪಕ್ವಗೊಂಡಾಗ, ಇದು ಕಿತ್ತಳೆ ಬಣ್ಣಕ್ಕೆ ತಿರುಗುವುದರ ಜೊತೆಗೆ ಮೆತ್ತಗಿರುತ್ತದೆ, ಹಾಗು ವಿವಿಧ ಭಾಗಗಳಾಗಿ ಬೇರ್ಪಟ್ಟಿರುತ್ತದೆ. ಇವುಗಳು ಗಾಢವಾದ ಕೆಂಪು ತಿರುಳಿನಲ್ಲಿ ಸುತ್ತುವರಿದ ಬೀಜಗಳು ಆಕರ್ಷಕವಾಗಿ ಹಿಂದಕ್ಕೆ ಸುರುಟಿಕೊಂಡಿರುತ್ತವೆ.

ಹಾಗಲಕಾಯಿಯು ಹಲವು ಆಕಾರ ಹಾಗು ಗಾತ್ರಗಳಲ್ಲಿ ಬೆಳೆಯುತ್ತದೆ. ಸ್ಪಷ್ಟ ಲಕ್ಷಣವುಳ್ಳ ಹಾಗಲಕಾಯಿಯು 20-30 ಸೆಂ ಮೀ ಉದ್ದವಿರುತ್ತದೆ. ಒರಟಾದ ಕ್ರಮೇಣವಾಗಿ ದಪ್ಪ ಕಡಿಮೆಯಾಗುವ ಅಂಚಿನ ತುದಿಗಳೊಂದಿಗೆ ಆಯತಾಕಾರವಾಗಿರುತ್ತದೆ, ಹಾಗು ಮೆತ್ತಗೆ ಅಲೆಯಾಕಾರದ, ಗಂಟುಗಳುಳ್ಳ ಮೇಲ್ಮೈನೊಂದಿಗೆ ತೆಳು ಹಸಿರು ಬಣ್ಣ ಹೊಂದಿರುತ್ತದೆ. ಭಾರತದಲ್ಲಿ ಹೆಚ್ಚು ಮಾದರಿಯಾಗಿರುವ ಹಾಗಲಕಾಯಿಯು ಚೂಪಾದ ತುದಿಗಳೊಂದಿಗೆ ಸಂಕುಚಿತ ಆಕಾರ ಹೊಂದಿರುತ್ತದೆ.

ಹಾಗಲಕಾಯಿ, ಎಲೆ, ಹೂವು, ಬಳ್ಳಿ ಹೆಚ್ಚು ಔಷಧಿಯಾಗಿ ಉಪಯುಕ್ತ

  1. * ಅದರ ಔಷಧೀಯ ಗುಣಗಳಾದ ಆಂಟಿಡಯಾಬಿಟಿಕ್, ಆಂಟಿಕ್ಯಾನ್ಸರ್, ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಒಳ್ಳೆಯ ಅಹಾರ.
  2. * ಸೋಂಕುಗಳು ಮತ್ತು ಮುಟ್ಟಿನ ಸಮಸ್ಯೆಗಳ ಲ್ಲಿ ಸೊಪ್ಪಿನ ರಸದಿಂದ ತಯಾರಿಸಿ ಆಗಿಂದಾಗ್ಗೆ ಕುಡಿದರೆ ಗುಣವಾಗುತ್ತದೆ. ಅಹಾರದಲ್ಲಿ ಬಳಸಿದರೆ ಕಫದ ಕೀಲು ನೋವು ನಿವಾರಣೆಯಾಗುತ್ತದೆ.
  3. * ದೀರ್ಘಕಾಲದ ಜ್ವರದ ತಾಪ ಕಡಿಮೆಯಾಗುತ್ತದೆ. ಕಾಯಿಯ ಜ್ಯೂಸ್ ಕಾಮಾಲೆ ಮತ್ತು ಯಕೃತ್ತಿನ ಕಾಯಿಲೆಗಳು ಗುಣವಾಗುತ್ತದೆ‌.
  4. * ದೀರ್ಘಕಾಲದ ಚರ್ಮ ರೋಗಗಳ , ಸುಟ್ಟಗಾಯಗಳು ಮತ್ತು ದದ್ದುಗಳಿಗೆ ಹಚ್ಚಿದರೆ ಗುಣವಾಗುತ್ತದೆ.
  5. * ಹಾಗಲಕಾಯಿಯ ಮಾಗಿದ ಹಣ್ಣುಗಳಿಗೆ ಸ್ವಲ್ಪ ಉಪ್ಪು ಹಾಕಿ ಮೊಸರು ಸೇರಿಸಿ ತಿನ್ನುವುದರಿಂದ ಗ್ಯಾಸ್ಟ್ರಿಕ್ ಹುಣ್ಣುಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಸಹಾಯ. ಹಾಗಲಕಾಯಿ ರಸವನ್ನು ನಿಂಬೆಹಣ್ಣಿನ ರಸ ಅಥವಾ ಕಿತ್ತಳೆ ಹಣ್ಣಿನ ರಸ ಸೇರಿಸಿ ಮುಖ ಮೈಗೆ ಹಚ್ಚಿ ಮಸಾಜ್ ಮಾಡಿ ಒಣಗಿದ ನಂತರ ಸ್ನಾನ ಮಾಡಿದರೆ ಚರ್ಮದ ಕಾಂತಿ ಹೆಚ್ಚುತ್ತದೆ.
  6. * ಹಾಗಲಕಾಯಿ ಜ್ಯೂಸ್ ಕೂದಲಿಗೆ ಹಚ್ಚಿದರೆ ಹೊಳಪು ಬರುತ್ತದೆ. ಎಲೆರಸಕ್ಕೆ ಅರಿಶಿನ ಸೇರಿಸಿ ಕಷಾಯ ಮಾಡಿ ಕುಡಿದರೆ ತೇಗು ಮತ್ತು ವಾಯು ಬಾಧೆ ಗುಣವಾಗುತ್ತದೆ.
  7. * ಹೂವಿನ ರಸವನ್ನು ಕಿವಿಯಲ್ಲಿ ಹಾಕುವುದರಿಂದ ಕಿವಿಸೋರುವುದು ನಿಲ್ಲುತ್ತದೆ. ಹಾವು ಕಚ್ಚಿದ ಕೂಡಲೇ ಎಲೆಯರಸ ಕುಡಿಸಿದರೆ ವಾಂತಿ ಆಗಿ ವಿಷ ಇಳಿಯುತ್ತದೆ.
  8. * ಎಲೆರಸ ಅಥವಾ ಕಾಯಿ ರಸಕ್ಕೆ ಕಲ್ಲು ಸಕ್ಕರೆ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ರಕ್ತ ಮೂಲವ್ಯಾಧಿ ಗುಣವಾಗುತ್ತದೆ. ಎಲೆಗಳನ್ನು ರಸ ತೆಗೆದು ಆಗತಾನೆಆಗಿರುವ ಗಾಯಕ್ಕೆ ಹಚ್ಚಿದರೆ ರಕ್ತ ನಿಂತು ಗಾಯ ಬೇಗನೆ ವಾಸಿಯಾಗುತ್ತದೆ.
  9. * ಕಾಯಿ ಅಥವಾ ಎಲೆರಸಕ್ಕೆ ಮೊಸರು ಸೇರಿಸಿ ಮೈಗೆಲ್ಲಾ ಹಚ್ಚಿ ಒಣಗಿದ ನಂತರ ಸ್ನಾನ ಮಾಡಿದರೆ ಪಿತ್ತ ಗುಣವಾಗುತ್ತದೆ. ಈರುಳ್ಳಿ ಮತ್ತು ಹಾಗಲು ಸೇರಿಸಿ ರಸ ತೆಗೆದು ಅರ್ಧ ಗಂಟೆಗೆ ಒಮ್ಮೆ ಕುಡಿಯುತ್ತಿದ್ದರೆ ಕಾಲರಾ ಗುಣವಾಗುತ್ತದೆ.
  10. * ವಾರಕ್ಕೊಮ್ಮೆ ಕಾಯಿ ಅಥವಾ ಎಲೆರಸಕ್ಕೆ ತೆಂಗಿನ ಹಾಲು ಸೇರಿಸಿ ಕುಡಿಯುತ್ತಿದ್ದರೆ ಭೇದಿ ಆಗಿ ಹೊಟ್ಟೆ ಹುಳು ಹೊರಹೋಗುವುದು. ಬಳ್ಳಿಯನ್ನು ಅರೆದು ಪೇಸ್ಟ್ ಮಾಡಿ ಅಂಗಾಲಿಗೆ ಹಚ್ಚಿದರೆ ಉರಿ ಶಮನವಾಗುತ್ತದೆ.
  11. * ಹಾಗಲು, ಕಹಿಬೇವು, ಕರಿಬೇವು ಸಮಪ್ರಮಾಣದಲ್ಲಿ ಸೇವನೆಯಿಂದ ಶುಗರ್ ಹತೋಟಿಗೆ ಬರುತ್ತದೆ. ಹಾಗಲ ಎಲೆ ರಸವನ್ನು ಹೆಂಚಿನಲ್ಲಿ ಬಿಸಿ ಮಾಡಿ ನೋವು ಇರುವ ಜಾಗಕ್ಕೆ ಹಚ್ಚಿದರೆ ನೋವು ಗುಣವಾಗುತ್ತದೆ. ಹಾಗಲಕಾಯಿ ಪಶುರೋಗಗಳಿಗೂ ತುಂಬಾ ಉಪಯುಕ್ತ.
  12. * ಹಾಗಲಕಾಯಿ ತರಕಾರಿ ತಿಂದ ನಂತರ ಮೂಲಂಗಿ ಅಥವಾ ಮೂಲಂಗಿಯಿಂದ ಮಾಡಿದ ಪದಾರ್ಥಗಳನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ದೇಹಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಮೂಲಂಗಿ ಮತ್ತು ಹಾಗಲಕಾಯಿಯ ಪರಿಣಾಮ ಬೇರೆ ಬೇರೆ. ಆದ್ದರಿಂದ ಹಾಗಲಕಾಯಿ ನಂತರ, ಮೂಲಂಗಿಯನ್ನು ತಪ್ಪಿಸಬೇಕು. (ಲೇಖನ- ಸುಮನಾ ಮಳಲಗದ್ದೆ)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್