AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Osteoporosis Day 2022: ಮೂಳೆ ರೋಗದ ಕುರಿತು ತಜ್ಞರು ನೀಡಿರುವ ಎಚ್ಚರಿಕೆ ಮತ್ತು ಸಲಹೆಗಳೇನು?

ಆಸ್ಟಿಯೊಪೊರೋಸಿಸ್ ಮತ್ತು ಮೆಟಬಾಲಿಕ್ ಮೂಳೆ ಕಾಯಿಲೆಯ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 20 ರಂದು ವಿಶ್ವ ಆಸ್ಟಿಯೊಪೊರೋಸಿಸ್ ದಿನವನ್ನು ಆಚರಿಸಲಾಗುತ್ತದೆ.

World Osteoporosis Day 2022: ಮೂಳೆ ರೋಗದ ಕುರಿತು ತಜ್ಞರು ನೀಡಿರುವ ಎಚ್ಚರಿಕೆ ಮತ್ತು ಸಲಹೆಗಳೇನು?
OsteoporosisImage Credit source: HT
TV9 Web
| Updated By: ಅಕ್ಷತಾ ವರ್ಕಾಡಿ|

Updated on:Oct 19, 2022 | 6:10 PM

Share

ಆಸ್ಟಿಯೊಪೊರೋಸಿಸ್ ಮತ್ತು ಮೆಟಬಾಲಿಕ್ ಮೂಳೆ ಕಾಯಿಲೆಯ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 20 ರಂದು ವಿಶ್ವ ಆಸ್ಟಿಯೊಪೊರೋಸಿಸ್ ದಿನವನ್ನು ಆಚರಿಸಲಾಗುತ್ತದೆ. ಈ ಮೂಳೆ ರೋಗವು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ ಬದಲಾಗಿ ಇದು ಕ್ರಮೇಣ ಮೂಳೆಗಳ ರಂಧ್ರಗಳನ್ನು ಮತ್ತು ಹಾನಿಗೆ ಗುರಿಯಾಗುವಂತೆ ಮಾಡುತ್ತದೆ. ಆದ್ದರಿಂದ ಇದರ ಕುರಿತ ಎಚ್ಚರಿಕೆ ಮತ್ತು ಅದನ್ನು ತಡೆಗಟ್ಟುವ ಸಲಹೆಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ವಿಶ್ವ ಆಸ್ಟಿಯೊಪೊರೋಸಿಸ್ ದಿನ 2022: ಆಸ್ಟಿಯೊಪೊರೋಸಿಸ್ ನಿಮಗೆ ಹಠಾತ್ ಅಥವಾ ಅನಿರೀಕ್ಷಿತ ಮುರಿತದ ಜೊತೆಗೆ ಕೆಲವೊಮ್ಮೆ ಕೆಮ್ಮುವುದು ಮುಂತಾದ ಒತ್ತಡಗಳಿಂದಲೂ ರೋಗದ ಲಕ್ಷಣವನ್ನು ಕಾಣಬಹುದು. ಪ್ರಾರಂಭದಲ್ಲಿ ಇದು ಸಾಮಾನ್ಯ ಎನಿಸಿದರೂ ಕೂಡ , ಕ್ರಮೇಣ ಮೂಳೆಗಳನ್ನು ಸರಂಧ್ರವಾಗಿಸುತ್ತದೆ ಮತ್ತು ಹಾನಿಗೆ ಒಳಗಾಗುತ್ತದೆ.

ಈಸ್ಟ್ರೊಜೆನ್ ಹಾರ್ಮೋನ್ ಮಟ್ಟವು ಕಡಿಮೆಯಾಗುವುದರಿಂದ ಋತುಬಂಧಕ್ಕೆ ಹತ್ತಿರವಿರುವ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರ ಹೊರತಾಗಿ, ಧೂಮಪಾನ, ಮದ್ಯಪಾನ, ಕ್ಯಾಲ್ಸಿಯಂ ಅಥವಾ ವಿಟಮಿನ್ D ಯಂತಹ ಅಗತ್ಯ ಪೋಷಕಾಂಶಗಳ ಕೊರತೆ, ನಿಷ್ಕ್ರಿಯ ಜೀವನಶೈಲಿ ಕಂಡುಬರುತ್ತದೆ. ಇಂತಹ ರೋಗಲಕ್ಷಣಗಳನ್ನು ಪ್ರಾರಂಭದಲ್ಲಿಯೇ ನಿಯಂತ್ರಿಸದ್ದಿದ್ದಲ್ಲಿ , ಕ್ರಾಮೇಣವಾಗಿ ಈ ರೋಗ ಉಲ್ಬಣಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿದ್ದು, ಇದು ಆರೋಗ್ಯದ ಮೇಲೆ ನಿಧಾನವಾಗಿ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

ಭಾರತದಲ್ಲಿ ಸುಮಾರು 50 ಮಿಲಿಯನ್ ಜನರು ಕೆಲವು ರೀತಿಯ ಆಸ್ಟಿಯೊಪೊರೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಇದೆ. ಜೊತೆಗೆ ಋತುಬಂಧಕ್ಕೆ ಒಳಗಾಗುವ ಮಹಿಳೆಯರಲ್ಲಿ ಈ ರೋಗದ ಲಕ್ಷಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಆಸ್ಟಿಯೊಪೊರೋಸಿಸ್ ಮತ್ತು ಮೆಟಬಾಲಿಕ್ ಮೂಳೆ ಕಾಯಿಲೆಯ ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 20 ರಂದು ವಿಶ್ವ ಆಸ್ಟಿಯೊಪೊರೋಸಿಸ್ ದಿನವನ್ನು ಆಚರಿಸಲಾಗುತ್ತದೆ.

ಆಸ್ಟಿಯೊಪೊರೋಸಿಸ್ ಲಕ್ಷಣಗಳು, ಅಪಾಯಕಾರಿ ಅಂಶಗಳು, ಚಿಕಿತ್ಸೆ ಮತ್ತು ಆರಂಭಿಕ ಹಂತದಲ್ಲಿಯೇ ತಡೆಯಲು ತಜ್ಞರು ತಿಳಿಸಿರುವ ಸಲಹೆಗಳನ್ನು ತಿಳಿದು ಕೊಳ್ಳೋಣ ಬನ್ನೀ.

ಆಸ್ಟಿಯೊಪೊರೋಸಿಸ್ನಲ್ಲಿ ನಮ್ಮ ಮೂಳೆಗಳಿಗೆ ಏನಾಗುತ್ತದೆ

ಮಾನವ ದೇಹದಲ್ಲಿನ ಮೂಳೆ ದ್ರವ್ಯರಾಶಿ ಮತ್ತು ಸಾಂದ್ರತೆಯ ಮೇಲೆ ಪರಿಣಾಮ ಬೀರುವ ಸಾಮಾನ್ಯ ಅಸ್ಥಿಪಂಜರದ ಕಾಯಿಲೆ ಇದಾಗಿದ್ದು, ಆಸ್ಟಿಯೊಪೊರೋಸಿಸ್ ಮೂಳೆಗಳು ಸರಂಧ್ರವಾಗಲು ಮತ್ತು ಹಾನಿಗೊಳಗಾಗಲು ಕಾರಣವಾಗುತ್ತದೆ. ನಮ್ಮ ಮೂಳೆಗಳು ಎರಡು ಪದರಗಳ ಅಂಗಾಂಶಗಳನ್ನು ಕಾಂಪ್ಯಾಕ್ಟ್ ಮತ್ತು ಕ್ಯಾನ್ಸಲಸ್ ಒಳಗೊಂಡಿರುತ್ತವೆ.ಕಾಂಪ್ಯಾಕ್ಟ್ ಅಂಗಾಂಶಗಳು ನಮ್ಮ ಮೂಳೆಗಳನ್ನು ಗಟ್ಟಿಯಾದ ಮತ್ತು ರಕ್ಷಣಾತ್ಮಕ ಪದರದಲ್ಲಿ ಆವರಿಸುತ್ತವೆ. ಆದರೆ ಕ್ಯಾನ್ಸಲ್ಲಸ್ ಅಂಗಾಂಶಗಳು ರಂಧ್ರಗಳಿರುವ ಸ್ಪಂಜುಗಳನ್ನು ಹೋಲುತ್ತವೆ.

ಎಲ್ಲ ಅಂಗಾಂಶಗಳಂತೆ, ಮೂಳೆ ಅಂಗಾಂಶವು ಒಡೆದು ಮತ್ತೆ ಮರುನಿರ್ಮಾಣಗೊಳ್ಳುತ್ತದೆ, ಇದು ನಮ್ಮ ಮೂಳೆಗಳನ್ನು ಬಲಪಡಿಸುತ್ತದೆ.ಆದಾಗ್ಯೂ, ವಯಸ್ಸಾದಂತೆ, ಮೂಳೆಯ ರಚನೆಯು ನಿಧಾನಗೊಳ್ಳುವುದರ ಜೊತೆಗೆ ದಿನಗಳೆದಂತೆ ಮೂಳೆಯ ಬಲವನ್ನು ಕಳೆದುಕೊಳ್ಳುತ್ತದೆ.

ಪರಿಸ್ಥಿತಿಯ ನಿರ್ವಹಣೆಯು ಆಸ್ಟಿಯೋಪೆನಿಯಾವನ್ನು ತಡೆಯಲು ಸಹಾಯ ಮಾಡುತ್ತದೆ, ಇದು ಅಂತಿಮವಾಗಿ ಆಸ್ಟಿಯೊಪೊರೋಸಿಸ್ಗೆ ಕಾರಣವಾಗುತ್ತದೆ, ಎಂದು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಮೂಳೆ ಆರ್ಥೋಪೆಡಿಕ್ಸ್, ಡಾ. ಸುಭಾಷ್ ಧಿವಾರೆ, ಸಲಹೆ ನೀಡಿದ್ದಾರೆ.

ಆಸ್ಟಿಯೊಪೊರೋಸಿಸ್ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರಲು ಕಾರಣ

“ಋತುಬಂಧದ ಸಮಯದಲ್ಲಿ ಮಹಿಳೆಯರಿಗೆ ಒಳಗಾಗುವ ಈಸ್ಟ್ರೊಜೆನ್ ಮಟ್ಟಗಳಲ್ಲಿನ ಕಡಿತದಿಂದಾಗಿ, ಅವರು ಈ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದ್ದು , ಇದರ ಹೊರತಾಗಿ ಇತರ ಅಪಾಯಕಾರಿ ಅಂಶಗಳೆಂದರೆ ಕ್ಯಾಲ್ಸಿಯಂ ಅಥವಾ ವಿಟಮಿನ್ ಡಿ ಕೊರತೆ, ಆಲ್ಕೋಹಾಲ್ ಸೇವನೆ, ವೃದ್ಧಾಪ್ಯ ವಿವಿಧ ಅಪಾಯಕಾರಿ ಅಂಶಗಳು ಕಾರಣವಾಗುತ್ತದೆ ಎಂದು ಡಾ ಧಿವೇರ್ ಹೇಳುತ್ತಾರೆ. .

ಆಸ್ಟಿಯೊಪೊರೋಸಿಸ್ ಅಪಾಯದ ಅಂಶಗಳು

ಆಸ್ಟಿಯೊಪೊರೋಸಿಸ್‌ನಿಂದಾಗಿ 65 ವರ್ಷಕ್ಕಿಂತ ಮೇಲ್ಪಟ್ಟ ಮೂವರಲ್ಲಿ ಒಬ್ಬ ಮಹಿಳೆ ಮತ್ತು ಐದು ಪುರುಷರಲ್ಲಿ ಒಬ್ಬರು ಈ ಕಾಯಿಲೆಗೆ ತುತ್ತಾಗುತ್ತಾರೆ ಎಂದು ಮುಂಬಯಿಯ ಗ್ಲೋಬಲ್ ಹಾಸ್ಪಿಟಲ್‌ನ ಕನ್ಸಲ್ಟೆಂಟ್ ಎಂಡೋಕ್ರೈನಾಲಜಿಸ್ಟ್,ಡಾ ಸ್ನೇಹಾ ಕೊಠಾರಿ ಮಾಹಿತೆ ನೀಡಿದ್ದಾರೆ.

ಇದರ ಹೊರತಾಗಿ ಡಾ ಕೊಥಾರಿಯವರ ಪ್ರಕಾರ ಆಸ್ಟಿಯೊಪೊರೋಸಿಸ್‌ಗೆ ಈ ಕೆಳಗಿನ ಅಪಾಯಕಾರಿ ಅಂಶಗಳೆಂದರೆ: ಆರಂಭಿಕ ಋತುಬಂಧ, ಕಡಿಮೆ ತೂಕ,ಸಂಧಿವಾತ, ಮಧುಮೇಹ, ಸ್ತನ ಕ್ಯಾನ್ಸರ್, ಧೂಮಪಾನ ಮತ್ತು ಅತಿಯಾದ ಮದ್ಯಪಾನ, ಅಪೌಷ್ಟಿಕ ಆಹಾರ ಸೇವನೆ, ಮುಂತಾದ ಅಂಶಗಳನ್ನು ಹೊಂದಿದೆ.

ಆಸ್ಟಿಯೊಪೊರೋಸಿಸ್ ಅನ್ನು ಗುರುತಿಸಲು ನಮಗೆ ಸಹಾಯ ಮಾಡುವ ಕೆಲವು ಲಕ್ಷಣಗಳೆಂದೆ ಉಸಿರಾಟದ ತೊಂದರೆ, ಇದು ಸಂಕುಚಿತ ಡಿಸ್ಕ್ಗಳು, ಕುಳಿತು ಕೊಳ್ಳುವ ಭಂಗಿಯಲ್ಲಿನ ಬದಲಾವಣೆಗಳಿಂದಾಗಿ , ಬೆನ್ನಿನ ಕೆಳಭಾಗದಲ್ಲಿ ನೋವು ಉಂಟಾಗುತ್ತದೆ ಎಂದು ಡಾ ಧಿವಾರೆ ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ

Published On - 5:51 pm, Wed, 19 October 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್