Bladder cancer: ಮೂತ್ರಕೋಶದ ಕ್ಯಾನ್ಸರ್​​ನ ಅಪಾಯಕಾರಿ ಅಂಶಗಳು, ಅದರ ನಿರ್ವಹಣೆ ಹೇಗೆ, ಇಲ್ಲಿದೆ ತಜ್ಞರ ಸಲಹೆ

ಇತ್ತೀಚಿಗೆ ವಿಶ್ವದಾದ್ಯಂತ ಮೂತ್ರಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಇದು ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಅದನ್ನು ನಿರ್ಲಕ್ಷಿಸಬಾರದು. ಆರಂಭಿಕ ಹಂತದಲ್ಲಿಯೇ ಈ ರೋಗದ ಗುಣಲಕ್ಷಣಗಳನ್ನು ಪತ್ತೆಹಚ್ಚಿ ಸರಿಯಾದ ಚಿಕಿತ್ಸೆ ನಿಡುವ ಮೂಲಕ ರೋಗವನ್ನು ಗುಣಪಡಿಸಬಹುದು. ಮೂತ್ರಕೋಶದ ಕ್ಯಾನ್ಸರ್ ನ ಅಪಾಯಕಾರಿ ಅಂಶಗಳು ಮತ್ತು ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತಜ್ಞರು ಸಲಹೆಯನ್ನು ನೀಡಿದ್ದಾರೆ.

Bladder cancer: ಮೂತ್ರಕೋಶದ ಕ್ಯಾನ್ಸರ್​​ನ ಅಪಾಯಕಾರಿ ಅಂಶಗಳು, ಅದರ ನಿರ್ವಹಣೆ ಹೇಗೆ, ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 19, 2023 | 3:56 PM

ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ದೇಹದ ಯಾವುದೇ ಅಂಗಳಲ್ಲಿ ಅದು ಕಂಡುಬರಬಹುದು. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದರೆ ಅದರ ಚಿಕಿತ್ಸೆ ಸಾಧ್ಯ. ಆದರೆ ಆರಂಭಿಕ ಹಂತದಲ್ಲಿ ರೋಗಲಕ್ಷಣಗಳು ಕಂಡುಬರದಿದ್ದರೆ ರೋಗಿಯನ್ನು ಗುಣಪಡಿಸುವುದು ಕಷ್ಟ. ಇತ್ತೀಚಿಗೆ ವಿಶ್ವದಾದ್ಯಂತ ಮೂತ್ರಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಇದು ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಅದನ್ನು ನಿರ್ಲಕ್ಷಿಸಬಾರದು. ಆರಂಭಿಕ ಹಂತದಲ್ಲಿಯೇ ಈ ರೋಗದ ಗುಣಲಕ್ಷಣಗಳನ್ನು ಪತ್ತೆಹಚ್ಚಿ ಸರಿಯಾದ ಚಿಕಿತ್ಸೆ ನೀಡುವ ಮೂಲಕ ರೋಗವನ್ನು ಗುಣಪಡಿಸಬಹುದು. ಮೂತ್ರಶಾಸ್ತ್ರಜ್ಞ ಹಾಗೂ ಆಂಡ್ರೋಲೊಜಿಸ್ಟ್ ಡಾ. ಪ್ರಣವ್ ಛಾಜೆದ್ ಹೆಚ್.ಟಿ ಲೈಫ್ಸ್ಟೈಲ್ ಗೆ ನೀಡಿದ ಸಂದರ್ಶನದಲ್ಲಿ ಮೂತ್ರಕೋಶ ಕ್ಯಾನ್ಸರ್ ನ ಅಪಾಯಕಾರಿ ಅಂಶಗಳು ಹಾಗೂ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಅವರು ಹೆಳಿದರು, “ಮೂತ್ರನಾಳದ ಕ್ಯಾನ್ಸರ್ ಕ್ಯಾನ್ಸರ್ ನ ಸಾಮಾನ್ಯ ರೂಪಗಳಲ್ಲಿ ಒಂದಾಗಿದೆ. 2022 ರ ಗ್ಲೋಬೋಕನ್ ಸರ್ವೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 21,000 ಕ್ಕೂ ಹೆಚ್ಚು ಮೂತ್ರಕೋಶದ ಕ್ಯಾನ್ಸರ್ ಪ್ರಕರಣಗಳು ಕಂಡುಬರುತ್ತಿವೆ. ಮತ್ತು ಮೂತ್ರಕೋಶದ ಕ್ಯಾನ್ಸರ್ ನಿಂದಾಗಿ ವಾರ್ಷಿಕವಾಗಿ 11,000 ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ. ಈ ಕ್ಯಾನ್ಸರ್ ನ ಆರಂಭಿಕ ಹಂತದ ಯಶಸ್ವಿ ಚಿಕಿತ್ಸೆಯ ನಂತರವೂ ಮರುಕಳಿಸಬಹುದು. ಆದ್ದರಿಂದ ಮೂತ್ರಕೋಶದ ಪರಿಣಾಮಕಾರಿ ರೋಗ ನಿರ್ವಹಣೆಯ ಮೇಲೆ ಕೇಂದ್ರಿಕರಿಸುವುದು ಕಡ್ಡಾಯವಾಗಿದೆ. ಏಕೆಂದರೆ ರೋಗಿಗಳಿಗೆ ವರ್ಷಗಳವರೆಗೆ ಚಿಕಿತ್ಸೆ ನೀಡಬೇಕಾಗುತ್ತದೆ.”

ಮೂತ್ರಕೋಶದ ಕ್ಯಾನ್ಸರ್ ಗೆ ಸಂಬಂಧಿಸಿದ ಅಪಾಯಕಾರಿ ಅಂಶಗಳು:

ಡಾ. ಪ್ರಣವ್ ಛಾಜೆದ್ ಪ್ರಕಾರ, ಮೂತ್ರಕೋಶದ ಕ್ಯಾನ್ಸರ್ ನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಹೆಚ್ಚಿಸುವ ಹಲವಾರು ಅಪಾಯಕಾರಿ ಅಂಶಗಳಿವೆ. ಅವುಗಳೆಂದರೆ,

• ಧೂಮಪಾನ ಮತ್ತು ತಂಬಾಕು ಸೇವನೆ

• ಬೊಜ್ಜು ಮತ್ತು ಜೀವನಶೈಲಿ

• ಮರುಕಳಿಸುವ ಅಥವಾ ದೀರ್ಘಕಾಲದ ಮೂತ್ರದ ಸೋಂಕುಗಳು

• ಈ ಹಿಂದೆ ಯಾರಿಗಾದರೂ ಮೂತ್ರಕೋಶದ ಕ್ಯಾನ್ಸರ್ ಇದ್ದರೆ, ಆ ಕುಟುಂಬದ ಇತರ ಸದಸ್ಯರಲ್ಲಿಯೂ ಕಂಡುಬರಬಹುದು.

ಮೂತ್ರಕೋಶದ ಕ್ಯಾನ್ಸರ್ ಲಕ್ಷಣಗಳು:

• ಮೂತ್ರದಲ್ಲಿ ರಕ್ತ ಅಥವಾ ರಕ್ತ ಹೆಪ್ಪುಗಟ್ಟುವಿಕೆ

• ಆಗಾಗ್ಗೆ ಮೂತ್ರ ವಿಸರ್ಜನೆ

• ಮೂತ್ರ ವಿಸರ್ಜಿಸುವಾಗ ನೋವು

• ಕೆಲವೊಮ್ಮೆ ಹೊಟ್ಟೆಯ ಕೆಳಭಾಗದಲ್ಲಿ ನೋವು ಇರುತ್ತದೆ

• ಮೂತ್ರ ವಿಸರ್ಜಿಸುವಾಗ ನೋವು ಅಥವಾ ಉರಿ

ಇದನ್ನೂ ಓದಿ: Bladder Cancer: ಮೂತ್ರಕೋಶ ಕ್ಯಾನ್ಸರ್​ನ ಲಕ್ಷಣಗಳೇನು? ಪತ್ತೆ ಹೇಗೆ?

ಮೂತ್ರಕೋಶದ ಕ್ಯಾನ್ಸರ್ ನಿರ್ವಹಣೆ:

ಮೂತ್ರಕೋಶದ ಕ್ಯಾನ್ಸರ್ ನ ಪರಿಣಾಮಕಾರಿ ಚಿಕಿತ್ಸೆಗಾಗಿ ಡಾ. ಪ್ರಣವ್ ಭಾಜೆದ್ ಚಿಕಿತ್ಸೆಯ ಆಯ್ಕೆಗಳನ್ನು ಸೂಚಿಸಿದ್ದಾರೆ:

ಶಸ್ತ್ರ ಚಿಕಿತ್ಸೆ : ಇದು ಅತ್ಯಂತ ಸಾಮಾನ್ಯವಾದ ಚಿಕಿತ್ಸೆಯಾಗಿದೆ. ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರ್ ಗೆಡ್ಡೆ ಮತ್ತು ಅದರ ಸುತ್ತ ಮುತ್ತಲಿನ ದೇಹದ ಅಂಗಾಶವನ್ನು ತೆಗೆದುಹಾಕಲಾಗುತ್ತದೆ. ಓಪನ್ ಸರ್ಜರಿ, ಲ್ಯಾಪರೊಸ್ಕೋಪಿಕ್, ರೋಬೋಟಿಕ್ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮೂತ್ರಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲಾಗುತ್ತದೆ.

ಕೀಮೋಥೆರಪಿ: ಈ ಚಿಕಿತ್ಸೆಯು ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಔಷಧಿಗಳನ್ನಾಗಿ ಬಳಸಲಾಗುತ್ತದೆ. ಇದನ್ನು ಐವಿ ಇಂಜೆಕ್ಷನ್ ಮೂಲಕ ನೀಡಬಹುದು ಅಥವಾ ಮಾತ್ರೆಯ ರೂಪದಲ್ಲಿಯು ನೀಡಬಹುದು. ಯಾವುದೇ ಉಳಿದ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಸಹಾಯ ಮಾಡಲು ಕೀಮೋಥೆರಪಿಯನ್ನು ಶಸ್ತ್ರಚಿಕಿತ್ಸೆಯ ಮೊದಲು ಅಥವಾ ನಂತರ ನೀಡಲಾಗುತ್ತದೆ.

ಇಮ್ಯುನೊಥೆರಪಿ: ಈ ಚಿಕಿತ್ಸೆಯು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವುದಾಗಿದೆ. ಕೀಮೋಥೆರಪಿ ಅಥವಾ ವಿಕಿರಣ ಚಿಕಿತ್ಸೆಗಳೊಂದಿಗೆ ಇಮ್ಯುನೋಥೆರಪಿಯನ್ನು ಬಳಸಬಹುದು.

“ಆರೋಗ್ಯಕರ ಜೀವನಶೈಲಿ, ಹೆಚ್ಚಿನ ಪ್ರಮಾಣದ ಹಣ್ಣುಗಳು ಮತ್ತು ತರಕಾರಿಗಳ ಸೇವನೆಯೊಂದಿಗೆ ಸಮತೋಲಿತ ಆಹಾರ ಪದ್ದತಿಯನ್ನು ಪಾಲಿಸುವುದು, ನಿಯಮಿತವಾಗಿ ದೈಹಿಕ ವ್ಯಾಯಮವನ್ನು ಮಾಡುವುದು ಹಾಗೂ ನಿಯಮಿತವಾಗಿ ವೈದ್ಯಕೀಯ ವೃತ್ತಿಪರರೊಂದಿಗೆ ಸಮಾಲೋಚಿಸುವ ಮೂಲಕ ಮೂತ್ರಕೋಶದ ಕ್ಯಾನ್ಸರ್ ನ್ನು ತಡೆಯಲು ಸಾಧ್ಯವಿದೆ. ಅಲ್ಲದೆ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆಯನ್ನು ತಪ್ಪಿಸಲು ಆಲ್ಕೋಹಾಲ್ ಮತ್ತು ತಂಬಾಕು ಸೇವನೆಯನ್ನು ಬಿಟ್ಟುಬಿಡಬೇಕು. ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು” ಎಂದು ಡಾ. ಪ್ರಣವ್ ಭಾಜೆದ್ ಸಲಹೆ ನೀಡಿದ್ದಾರೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Mon, 19 June 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್