ಪ್ರೆಗ್ನನ್ಸಿಗೆ ಪ್ರಯತ್ನಿಸುತ್ತಿದ್ದೀರಾ? ಹಾಗಿದ್ರೆ ನೀವು ಈ ಆಹಾರಗಳನ್ನು ಸೇವಿಸಲೇಬೇಕು
ವಿವಾಹಿತ ದಂಪತಿ ಪೋಷಕರಾಗುವುದಕ್ಕೆ ಬಯಸುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ, ಅನೇಕರು ಬಂಜೆತನ, ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ನಾವು ಸೇವಿಸುವಂತಹ ಆಹಾರ ಮತ್ತು ಜೀವನಶೈಲಿ ಕೂಡ ಕಾರಣವಾಗಿರಬಹುದು. ಹಾಗಾಗಿ ತಾಯಿಯಾಗಲು ಬಯಸುವವರು ಮೊದಲು ಕಟ್ಟುನಿಟ್ಟಾದ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಬೇಕು. ಗರ್ಭಧಾರಣೆಗೂ ಮುಂಚೆಯೇ ತಮ್ಮ ಆಹಾರದಲ್ಲಿ ಕೆಲವು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಹಾಗಾದರೆ ಗರ್ಭ ಧರಿಸುವುದಕ್ಕಿಂತ ಮೊದಲು ಆಹಾರ ಪದ್ಧತಿ ಹೇಗಿರಬೇಕು? ಯಾವ ಆಹಾರ ದೇಹಕ್ಕೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ತಾಯ್ತನ ಎನ್ನುವಂಥದ್ದು ದೇವರು ಹೆಣ್ಣಿಗೆ ಕೊಟ್ಟಂತಹ ಒಂದು ದೊಡ್ಡ ವರದಾನ. ಮದುವೆಯ ನಂತರ, ಪ್ರತಿ ಹೆಣ್ಣು ಕೂಡ ‘ತಾಯಿ’ ಎಂದು ಕರೆಸಿಕೊಳ್ಳುವುದಕ್ಕೆ ಶ್ರಮಿಸುತ್ತಾಳೆ. ಆದರೆ ಪ್ರಸ್ತುತ ದಿನದಲ್ಲಿ, ಬಂಜೆತನದ (infertility) ಸಮಸ್ಯೆಗಳು ಅಗಾಧವಾಗಿ ಕಂಡುಬರುತ್ತಿವೆ. ತಾಯಿಯಾಗುವುದಕ್ಕೆ ಅನೇಕ ರೀತಿಯ ಸವಾಲುಗಳು ಎದುರಾಗುತ್ತಿದೆ. ಹಾಗಾಗಿ ತಾಯಿಯಾಗಲು ಬಯಸುವವರು ಮೊದಲು ಕಟ್ಟುನಿಟ್ಟಾದ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಬೇಕು. ಗರ್ಭಧಾರಣೆಗೂ (pregnancy) ಮುಂಚೆಯೇ ತಮ್ಮ ಆಹಾರದಲ್ಲಿ ಕೆಲವು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಹಾಗಾದರೆ ಗರ್ಭ ಧರಿಸುವುದಕ್ಕಿಂತ ಮೊದಲು ಆಹಾರ ಪದ್ಧತಿ ಹೇಗಿರಬೇಕು? ಯಾವ ಆಹಾರ ದೇಹಕ್ಕೆ ಒಳ್ಳೆಯದು (Fertility- Boosting Foods) ಎಂಬುದನ್ನು ತಿಳಿದುಕೊಳ್ಳಿ.
ಓಟ್ಸ್
ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಓಟ್ಸ್ ತಿನ್ನುವುದಕ್ಕೆ ಎಲ್ಲರೂ ಇಷ್ಟಪಡುತ್ತಾರೆ. ಅದಲ್ಲದೆ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದರಲ್ಲಿ ಸುಮಾರು 8 ರಿಂದ 12 ಗ್ರಾಂ ಪ್ರೋಟೀನ್ ಇದ್ದು, ಕಾರ್ಬೋಹೈಡ್ರೇಟ್‌ಗಳೂ ಸಮೃದ್ಧವಾಗಿವೆ. ಇದು ಅತಿ ವೇಗವಾಗಿ ಹೊಟ್ಟೆ ತುಂಬಿದ ಭಾವನೆಯನ್ನು ನೀಡುವುದಲ್ಲದೆ, ದೇಹಕ್ಕೆ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಆದ್ದರಿಂದ, ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಖಂಡಿತವಾಗಿಯೂ ಓಟ್ಸ್ ಅನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ದ್ವಿದಳ ಧಾನ್ಯಗಳು
ಹೆಚ್ಚಿನ ಪ್ರೋಟೀನ್ ನೀಡುವಲ್ಲಿ ದ್ವಿದಳ ಧಾನ್ಯಗಳು ಮುಂಚೂಣಿಯಲ್ಲಿರುತ್ತವೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ನಿಮ್ಮ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ಸೇರಿಸಿಕೊಳ್ಳಲು ಸಲಹೆ ನೀಡುತ್ತಾರೆ. ಅದಲ್ಲದೆ ದಿನಕ್ಕೆ ಕನಿಷ್ಠ 100 ಗ್ರಾಂ ಕಡಲೆ ಸೇವಿಸುವುದರಿಂದ ದೇಹಕ್ಕೆ 12 ರಿಂದ 15 ಗ್ರಾಂ ಪ್ರೋಟೀನ್ ದೊರೆಯುತ್ತದೆ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ಗರ್ಭಿಣಿಯರು ಯಾವುದೇ ಕಾರಣಕ್ಕೂ ಬ್ಯೂಟಿ ಪಾರ್ಲರ್ಗಳಲ್ಲಿ ಇವುಗಳನ್ನು ಮಾಡಿಸಬಾರದು
ಹಣ್ಣುಗಳು
ಆರೋಗ್ಯ ಕಾಪಾಡಿಕೊಳ್ಳಲು ಹಣ್ಣುಗಳು ತುಂಬಾ ಸಹಕಾರಿಯಾಗಿದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ಒಂದು ಹಣ್ಣನ್ನು ತಿನ್ನಬೇಕು ಎಂದು ಹೇಳಲಾಗುತ್ತದೆ, ಈ ರೀತಿಯ ಅಭ್ಯಾಸ ಎಲ್ಲರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಾತ್ರವಲ್ಲ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ.
ಬೀಜಗಳು
ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬೀಜಗಳನ್ನು ಸೇವನೆ ಮಾಡಬೇಕು. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅವುಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿರುತ್ತದೆ. ಆದ್ದರಿಂದ, ಗರ್ಭ ಧರಿಸುವುದಕ್ಕಿಂತ ಮುಂಚೆ ಮತ್ತು ಆ ಬಳಿಕ ಪ್ರತಿದಿನ ಒಂದು ಹಿಡಿ ಬೀಜಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಇದು ದೇಹಕ್ಕೆ ಉತ್ತಮ ಪೋಷಣೆಯನ್ನು ನೀಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








