
ಬ್ರೈನ್ ಟ್ಯೂಮರ್ (Brain Tumor) ಎಂಬ ಕಾಯಿಲೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಇದೊಂದು ಗಂಭೀರ ಕಾಯಿಲೆಯಾಗಿದ್ದು, ಮೆದುಳಿನ ಭಾಗದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದನ್ನು ವೈದ್ಯಕೀಯ ಭಾಷೆಯಲ್ಲಿ ಬ್ರೈನ್ ಟ್ಯೂಮರ್ ಎಂದು ಕರೆಯುತ್ತಾರೆ. ಈ ಸಮಸ್ಯೆ ಚೆನ್ನಾಗಿ ಆರೋಗ್ಯವಾಗಿದ್ದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಕಂಡುಬರಬಹುದು. ಅದಕ್ಕಾಗಿಯೇ ಈ ಕಾಯಿಲೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್ 8 ರಂದು ವಿಶ್ವ ಆರೋಗ್ಯ ಸಂಸ್ಥೆಯು (World Health Organization) ವಿಶ್ವ ಬ್ರೈನ್ ಟ್ಯೂಮರ್ ದಿನವನ್ನು (World Brain Tumor Day) ಆಚರಿಸುತ್ತದೆ. ಹಾಗಾದರೆ ಈ ರೀತಿ ಸಮಸ್ಯೆ ಕಂಡುಬಂದಾಗ ಆತನಲ್ಲಿ ಯಾವ ರೀತಿಯ ಬದಲಾವಣೆಗಳು ಕಂಡುಬರುತ್ತದೆ? ಮೊದಲಿನಂತೆ ಇರಲು ಆ ವ್ಯಕ್ತಿಗೆ ಏಕೆ ಸಾಧ್ಯವಾಗುವುದಿಲ್ಲ ಎಂಬಂತಹ ವಿಷಯಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.
ಬ್ರೈನ್ ಟ್ಯೂಮರ್ ಯಾರಲ್ಲಿ ಬೇಕಾದರೂ ಕಂಡುಬರಬಹುದು ಇದಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ. ಇದು ಅನುವಂಶಿಯ ಕಾಯಿಲೆಯಲ್ಲ.
ಆದರೂ ಕೂಡ ಕುಟುಂಬದಲ್ಲಿ ಕಂಡು ಬರಬಹುದಾಗಿದೆ. ಈ ಕಾಯಿಲೆ ಹೆಚ್ಚಿನ ಸಮಯದಲ್ಲಿ ನಿರಂತರವಾಗಿ ಯಾವುದಾದರೂ ರೇಡಿಯೇಶನ್ ಪ್ರಕ್ರಿಯೆಗೆ ಒಳಗಾಗಿದ್ದರೆ, ಹೆಚ್ಚಾಗಿ ಸೆಲ್ ಫೋನ್ ಬಳಸುವುದರಿಂದ ಅಥವಾ ಯಾವುದಾದರೂ ರಾಸಾಯನಿಕಗಳ ನಿರಂತರ ಪ್ರಭಾವದಿಂದ ಈ ಸಮಸ್ಯೆ ಕಂಡು ಬರಬಹುದು.
ಈ ದಿನವನ್ನು ಮೊದಲ ಬಾರಿಗೆ 2000 ಜೂನ್ 8 ರಂದು ಜರ್ಮನಿಯ ಬ್ರೈನ್ ಟ್ಯೂಮರ್ ಅಸೋಸಿಯೇಷನ್ ಆಚರಿಸಿತು. ಈ ರೋಗಿಗಳಿಗೆ ಬೆಂಬಲ ನೀಡಲು ಜೊತೆಗೆ ರೋಗದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ವಿಶ್ವದಾದ್ಯಂತ ಮೆದುಳು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿ ಬ್ರೈನ್ ಟ್ಯೂಮರ್ ಬಗ್ಗೆ ಕೆಲವು ತಪ್ಪು ಕಲ್ಪನೆ ಗಳಿದ್ದು, ಅದನ್ನು ತೊಡೆದು ಹಾಕುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: ನಿರಂತರ ನಿದ್ರೆಯ ಕೊರತೆಯಿಂದಾಗಿ ಮೆದುಳಿಗೆ ಹಾನಿಯುಂಟಾಗಬಹುದು: ಅಧ್ಯಯನ
ಬ್ರೈನ್ ಟ್ಯೂಮರ್ ಇರುವ ರೋಗಿಗಳನ್ನು ನೋಡಿಕೊಳ್ಳುವುದು ಸುಲಭವಲ್ಲ ಹಾಗಾಗಿ ಅವರಿಗೆ ಆರೋಗ್ಯಕರ ಅಭ್ಯಾಸಗಳನ್ನು ಮಾಡಿಸಲು ಪ್ರಾರಂಭ ಮಾಡಿ. ಪ್ರತಿದಿನ ಯೋಗ, ಧ್ಯಾನ ಮತ್ತು ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡುವ ಮೂಲಕ ಅವರ ಒತ್ತಡವನ್ನು ನಿರ್ವಹಿಸಲು ಅವರನ್ನು ಪ್ರೇರೇಪಿಸಿ ಆರೋಗ್ಯಕರ ಜೀವನಶೈಲಿ ಮತ್ತು ಆರೋಗ್ಯಕರ ಆಹಾರ ಸೇವನೆ ಮಾಡಲು ಅವರನ್ನು ಪ್ರೇರೇಪಿಸಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ