2050ರ ಹೊತ್ತಿಗೆ ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಕಾಡಲಿದೆ ಸಮೀಪದೃಷ್ಟಿ ದೋಷ

ಸಮೀಪದೃಷ್ಟಿ ಸಮಸ್ಯೆ, 2050 ರ ವೇಳೆಗೆ ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಇದನ್ನು ರೋಗವೆಂದು ವರ್ಗೀಕರಿಸಲಾಗಿದೆ. ಅದಲ್ಲದೆ ಇದನ್ನು ತಡೆಯಲು ಮಕ್ಕಳ ಹೊರಾಂಗಣ ಸಮಯವನ್ನು ಹೆಚ್ಚಿಸಬೇಕು ಎಂದು ಹೊಸ ವರದಿ ಹೇಳುತ್ತದೆ. ಹಾಗಾದರೆ ದೃಷ್ಟಿದೋಷ ಕಾಣಿಸಿಕೊಳ್ಳಲು ಕಾರಣವೇನು? ಲಕ್ಷಣಗಳೇನು? ಯಾವ ರೀತಿ ತಡೆಯಬಹುದು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

2050ರ ಹೊತ್ತಿಗೆ ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಕಾಡಲಿದೆ ಸಮೀಪದೃಷ್ಟಿ ದೋಷ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Oct 12, 2024 | 6:28 PM

ಇತ್ತೀಚಿನ ವರ್ಷಗಳಲ್ಲಿ ಮಯೋಪಿಯಾ ಊಹೆಗೂ ನಿಲುಕದಷ್ಟು ಹೆಚ್ಚಾಗಿದೆ. ಸಮೀಪದೃಷ್ಟಿ ಅಂದರೆ ದೂರದ ವಸ್ತುಗಳನ್ನು ನೋಡಲು ಕಷ್ಟವಾಗುವ ದೃಷ್ಟಿ ಸಮಸ್ಯೆಗೆ ಮಯೋಪಿಯಾ ಎಂದು ಕರೆಯಲಾಗುತ್ತದೆ ಅಥವಾ ಮಯೋಪಿಯಾ ಎಂದರೆ ಒಬ್ಬ ವ್ಯಕ್ತಿಯು ಒಂದು ವಸ್ತುವನ್ನು ಹತ್ತಿರದಿಂದ ಸ್ಪಷ್ಟವಾಗಿ ನೋಡುತ್ತಾನೆ ಆದರೆ ಅದು ದೂರದಲ್ಲಿದ್ದರೆ ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ದೂರದಲ್ಲಿರುವ ವಸ್ತುಗಳು ಮಸುಕಾಗಿ ಕಾಣುತ್ತದೆ. ಈ ಸಮಸ್ಯೆ ಈಗ ಏಷ್ಯಾದ ಕೆಲವು ದೇಶಗಳಲ್ಲಿ 88 ಪ್ರತಿಶತದಷ್ಟು ಜನಸಂಖ್ಯೆಯ ಮೇಲೆ ಪರಿಣಾಮ ಬೀರಿದೆ. ನಮ್ಮ ದೇಶದಲ್ಲಿ ಇದು ಹೆಚ್ಚು ತೀವ್ರವಾಗುತ್ತಿದೆಯಾದರೂ ಒಂದು ಅಂದಾಜಿನ ಪ್ರಕಾರ, 2050ರ ಹೊತ್ತಿಗೆ, ಐದು ಶತಕೋಟಿ ಜನರು ಅಂದರೆ ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಹತ್ತಿರದ ದೃಷ್ಟಿಯುಳ್ಳವರು ಅಂದರೆ ಸಮೀಪದೃಷ್ಟಿ ಸಮಸ್ಯೆಯಿಂದ ಬಳಲುತ್ತಾರೆ ಎಂದು ತಿಳಿದು ಬಂದಿದೆ. ಈ ಅಂಶಗಳು ಮಹತ್ವದ್ದಾಗಿದೆ. ಏಕೆಂದರೆ ಮಯೋಪಿಯಾ ದೃಷ್ಟಿ ದೌರ್ಬಲ್ಯಕ್ಕೆ ಪ್ರಮುಖ ಕಾರಣವಾಗಿದೆ.

ಈ ಹೆಚ್ಚುತ್ತಿರುವ ಸಮಸ್ಯೆಯನ್ನು ತಡೆಯಲು ಸ್ಪಷ್ಟ ಕ್ರಮಗಳಿಗಾಗಿ ಹುಡುಕಾಟ ನಡೆಯುತ್ತಿದೆ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಎಂಜಿನಿಯರಿಂಗ್ ಮತ್ತು ಮೆಡಿಸಿನ್ (ಎನ್ಎಎಸ್ಇಎಂ) ನ ತಜ್ಞರ ಸಮಿತಿಯು ಮಯೋಪಿಯಾ ಹೆಚ್ಚುತ್ತಿರಲು ಕಾರಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಎಂಬ ಶೀರ್ಷಿಕೆಯ ಅಡಿಯಲ್ಲಿ ವರದಿಯನ್ನು ಬಿಡುಗಡೆ ಮಾಡಿದ್ದು, ಇದು ಹಲವಾರು ಶಿಫಾರಸುಗಳನ್ನು ಮಾಡಿದೆ. ಅವುಗಳಲ್ಲಿ ಮಯೋಪಿಯಾವನ್ನು ವೈದ್ಯಕೀಯ ರೋಗನಿರ್ಣಯದ ಅಗತ್ಯವಿರುವ ಸಮಸ್ಯೆ ಎಂದು ಮರು ವರ್ಗೀಕರಿಸಲು ಸೆಂಟರ್ಸ್ ಫಾರ್ ಮೆಡಿಕೇರ್ & ಮೆಡಿಕೈಡ್ ಸರ್ವೀಸಸ್ಗೆ ಕರೆ ನೀಡಿದೆ. ಇನ್ನು ಮಯೋಪಿಯಾ ಪ್ರಕರಣಗಳನ್ನು ಇತರ ದೇಶಗಳಿಗೆ ಹೋಲಿಸಿದರೆ ಯುಎಸ್, 1970 ರ ದಶಕದ ಆರಂಭದಲ್ಲಿ 12 ರಿಂದ 54 ವರ್ಷ ವಯಸ್ಸಿನ ಜನರಲ್ಲಿ 25 ಪ್ರತಿಶತದಿಂದ, 2000 ರ ದಶಕದ ಆರಂಭದಲ್ಲಿ 42 ಪ್ರತಿಶತಕ್ಕೆ ಏರಿದೆ ಎಂದು ರಾಷ್ಟ್ರೀಯ ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿ: ಪುರುಷರಲ್ಲಿ ಕೆಟ್ಟ ಆಲೋಚನೆ ಬರದಂತೆ ತಡೆಯುವುದು ಹೇಗೆ? ಇಲ್ಲಿದೆ ಸರಳ ಆರೋಗ್ಯ ಸಲಹೆ

ದೃಷ್ಟಿದೋಷ ಕಾಣಿಸಿಕೊಳ್ಳಲು ಕಾರಣವೇನು?

ದೃಷ್ಟಿಯ ಸೂಕ್ಷ್ಮತೆಗೆ ಕೃಷ್ಣಪಟಲ (ಕಾರ್ನಿಯಾ) ಹಾಗೂ ಕಣ್ಣಿನ ಪರದೆಯ (ರೆಟಿನಾ), ಆಪ್ಟಿಕ್‌ ನರಗಳ ಸುಸ್ಥಿತಿಯ ಕಾರ್ಯನಿರ್ವಹಣೆ ಅಗತ್ಯವಾಗಿದೆ. ಇವುಗಳ ವಕ್ರೀಕರಣ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳು ಇದ್ದರೆ ದೃಷ್ಟಿದೋಷ ಕಾಣಿಸಿಕೊಳ್ಳುತ್ತದೆ. ಇದರಿಂದ ಮಂದ ದೃಷ್ಟಿ ಉಂಟಾಗುತ್ತದೆ. ಮುನ್ನೆಚ್ಚರಿಕೆ ವಹಿಸಿಸುವುದಲ್ಲದೆ ವೈದ್ಯರಿಂದ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.

ದೃಷ್ಟಿ ಸಮಸ್ಯೆಗಳ ಲಕ್ಷಣಗಳು:

  • ಮಸುಕಾದ ದೃಷ್ಟಿ
  • ಕಡಿಮೆ ಬೆಳಕಿನಲ್ಲಿ ನೋಡಲು ಕಷ್ಟ
  • ಕಣ್ಣಿನ ಆಯಾಸ ಅಥವಾ ಅಸ್ವಸ್ಥತೆ
  • ತಲೆನೋವು
  • ದೀಪಗಳ ಸುತ್ತ ಹಾಲೋಸ್
  • ಕೆಂಪು ಅಥವಾ ಕಿರಿಕಿರಿಗೊಂಡ ಕಣ್ಣುಗಳು
  • ರಾತ್ರಿ ದೃಷ್ಟಿ ಕಡಿಮೆಯಾಗುವುದು
  • ಬೆಳಕಿಗೆ ಸೂಕ್ಷ್ಮತೆ

ಅದರಲ್ಲಿಯೂ ಮಕ್ಕಳಲ್ಲಿ ಈ ದೃಷ್ಟಿ ಸಮಸ್ಯೆ ಹೆಚ್ಚಾಗುತ್ತಿದ್ದು ತಜ್ಞರು ಹೇಳುವ ಪ್ರಕಾರ, ಮಕ್ಕಳನ್ನು ಪ್ರತಿದಿನ ಒಂದರಿಂದ ಎರಡು ಗಂಟೆಗಳ ಕಾಲ ಹೊರಾಂಗಣದಲ್ಲಿ ಕಳೆಯಲು ಪೋಷಕರು ಅನುವುಮಾಡಿ ಕೊಡಬೇಕು ಎನ್ನುತ್ತಾರೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ, ಮಕ್ಕಳು ಯಾವಾಗಲೂ ಮನೆಯೊಳಗೆ ಇರುತ್ತಾರೆ ಅದಲ್ಲದೆ ಅವರು ಹೆಚ್ಚು ಹೊರಾಂಗಣ ಆಟ ಆಡುವುದಿಲ್ಲ. ಹೊರಗಿನ ಬೆಳಕು ಕೂಡ ಮಕ್ಕಳ ಮೇಲೆ ಬೀಳುವುದಿಲ್ಲ. ಇವೆಲ್ಲವೂ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಜನತೆ ಈ ಬಗ್ಗೆ ಎಚ್ಚೆತ್ತುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ