AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೇನುನೊಣ ಬಾಯಿಯೊಳಗೆ ಹೋದ್ರೆ ಹೃದಯಾಘಾತ ಆಗುತ್ತಾ? ಹೃದ್ರೋಗ ತಜ್ಞ ಡಾ. ಕೇಶವ ಹೇಳಿದ್ದೇನು?

ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ನಮ್ಮ ಜೀವನಶೈಲಿ ಅಥವಾ ಆಹಾರ ಕ್ರಮಗಳಿಂದ ಮಾತ್ರವಲ್ಲ ಒಂದು ಜೇನುನೊಣದಿಂದಲೂ ಸಾವು ಬರಬಹುದು ಎಂದರೆ ನಂಬುತ್ತೀರಾ? ಹೌದು. ಜೇನುನೊಣ ಬಾಯಿಯೊಳಗೆ ಹೋಗಿ ಅಂದರಿಂದ ಹೃದಯಾಘಾತವಾಗಿ ಪ್ರಾಣ ಬಿಟ್ಟವರು ಕೂಡ ಇದ್ದಾರೆ. ಇದನ್ನೆಲ್ಲಾ ಕೇಳಿದಾಗ ಅದು ಹೇಗೆ ಸಾಧ್ಯವಿರಬಹುದು ಎಂಬ ಪ್ರಶ್ನೆ ಮೂಡುತ್ತದೆ. ಈ ವಿಷಯವಾಗಿ ಮಣಿಪಾಲ ಆಸ್ಪತ್ರೆಯ ಹೆಚ್‌ಒಡಿ ಮತ್ತು ಕನ್ಸಲ್ಟೆಂಟ್- ಕಾರ್ಡಿಯಾಲಾಜಿಸ್ಟ್ ಡಾ. ಕೇಶವ ಆರ್ ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದು ಜೇನುನೊಣ ಬಾಯಿಯೊಳಗೆ ಹೋದಾಗ ಹೃದಯಾಘಾತವಾಗುವುದಕ್ಕೆ ಹೇಗೆ ಸಾಧ್ಯ? ಯಾಕೆ ಈ ರೀತಿ ಆಗುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಜೇನುನೊಣ ಬಾಯಿಯೊಳಗೆ ಹೋದ್ರೆ ಹೃದಯಾಘಾತ ಆಗುತ್ತಾ? ಹೃದ್ರೋಗ ತಜ್ಞ ಡಾ. ಕೇಶವ ಹೇಳಿದ್ದೇನು?
Dr Keshav
ಪ್ರೀತಿ ಭಟ್​, ಗುಣವಂತೆ
|

Updated on: Jul 16, 2025 | 4:45 PM

Share

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ (heart attack) ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲೆಲ್ಲಾ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಈ ಸಮಸ್ಯೆ ಈಗ ಯಾವ ವಯಸ್ಸಿನವರನ್ನು ಬಿಟ್ಟಿಲ್ಲ. ಸಾಮಾನ್ಯವಾಗಿ, ಇವುಗಳಿಗೆ ಕಾರಣವೇನು? ಯಾಕಾಗಿ ಈ ರೀತಿಯ ಸಮಸ್ಯೆ ಕಂಡು ಬರುತ್ತಿದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಆದರೆ ಅದಕ್ಕೆ ಸರಿಯಾದ ಉತ್ತರವಿಲ್ಲ. ಏಕೆಂದರೆ ಹೃದಯಾಘಾತವಾಗುವುದಕ್ಕೆ ಹಲವಾರು ಕಾರಣಗಳಿರಬಹುದು. ಒಬ್ಬ ವ್ಯಕ್ತಿ ಅನುಸರಿಸಿಕೊಂಡು ಬಂದಂತಹ ಅಭ್ಯಾಸಗಳು ಕೂಡ ಈ ರೀತಿ ಸಮಸ್ಯೆ ಕಂಡು ಬರುವುದಕ್ಕೆ ಮುಖ್ಯ ಕಾರಣವಾಗಿರಬಹುದು. ಮಾತ್ರವಲ್ಲ, ಕೆಲವೊಮ್ಮೆ ಜೇನುನೊಣ (Bee Sting) ಬಾಯಿಯೊಳಗೆ ಹೋಗಿ ಅಂದರಿಂದ ಹೃದಯಾಘಾತವಾಗಿ ಪ್ರಾಣ ಬಿಟ್ಟವರು ಕೂಡ ಇದ್ದಾರೆ. ಹೌದು. ಇವೆಲ್ಲಾ ನಮಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ವೈದ್ಯರು ಈ ರೀತಿ ಪ್ರಕರಣಗಳು ನಡೆಯಬಹುದು ಎಂದು ಹೇಳಿದ್ದಾರೆ. ಈ ವಿಷಯದ ಕುರಿತು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯ ಹೆಚ್‌ಒಡಿ ಮತ್ತು ಕನ್ಸಲ್ಟೆಂಟ್- ಕಾರ್ಡಿಯಾಲಾಜಿಸ್ಟ್ ಡಾ. ಕೇಶವ ಆರ್ (DR. KESHAVA R) ಟಿವಿ9 ಕನ್ನಡ ಜೊತೆ ಮಾತನಾಡಿದ್ದು ಜೇನುನೊಣ ಬಾಯಿಯೊಳಗೆ ಹೋದಾಗ ಹೃದಯಾಘಾತವಾಗುವುದಕ್ಕೆ ಹೇಗೆ ಸಾಧ್ಯ? ಯಾಕೆ ಈ ರೀತಿ ಆಗುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಡಾ. ಕೇಶವ ಅವರು ತಿಳಿಸಿರುವ ಮಾಹಿತಿ ಪ್ರಕಾರ, ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿದ್ದು, ನಮ್ಮ ಜೀವನಶೈಲಿ, ಆಹಾರಕ್ರಮ ಸರಿಯಾಗಿ ಇಲ್ಲದಿರುವುದು, ಸಕ್ಕರೆ ಕಾಯಿಲೆ, ಬಿಪಿ, ಅಧಿಕ ರಕ್ತದೊತ್ತಡ, ಧೂಮಪಾನ, ಮದ್ಯಪಾನ, ಬೊಜ್ಜು, ವ್ಯಾಯಾಮದ ಕೊರತೆ, ಡಿಸ್ಲಿಪಿಡೆಮಿಯಾದಂತಹ ಅಪಾಯಕಾರಿ ಅಂಶಗಳು ಇವುಗಳಿಗೆ ಮುಖ್ಯ ಕಾರಣವಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಅಲರ್ಜಿಗಳಿಂದ ಕೂಡ ಹೃದಯಾಘಾತವಾಗುತ್ತದೆ. ಈ ರೀತಿ ಪ್ರಕರಣಗಳು ಕಂಡುಬರುವುದು ತುಂಬಾ ವಿರಳವಾಗಿದ್ದರೂ ಕೂಡ ಕೆಲವು ಸಂದರ್ಭಗಳಲ್ಲಿ ಇವು ಪ್ರಾಣಕ್ಕೆ ಕಂಟಕವಾಗಬಹುದು. ವೈದ್ಯಕೀಯ ಕ್ಷೇತ್ರದಲ್ಲಿ ಜೇನುನೊಣದಿಂದಲೂ ಕೂಡ ಹೃದಯಾಘಾತವಾಗಬಹುದು ಎಂಬ ಮಾತು ಸತ್ಯ ಎಂದಿದ್ದಾರೆ.

ಡಾ. ಕೇಶವ ಅವರ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ
Image
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
Image
ಚಿಕ್ಕ ವಯಸ್ಸಿಗೆ ತಾಯಿಯಾಗುವವರೇ ಎಚ್ಚರ!
Image
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
Image
ಸಿಸೇರಿಯನ್‌, ನಾರ್ಮಲ್ ಡೆಲಿವರಿಯಾದ ಬಾಣಂತಿಯರಿಗೆ ಡಾ. ಶಿಲ್ಪಾ ಹೇಳೋದೇನು?

ಹೃದಯಾಘಾತಕ್ಕೆ ಕಾರಣವೇನು?

ಕೇವಲ ಒಂದು ಚಿಕ್ಕ ಕೀಟ ಒಬ್ಬ ವ್ಯಕ್ತಿಯ ಪ್ರಾಣಕ್ಕೆ ಸಂಚಕಾರ ತರಬಹುದು ಎಂಬುದನ್ನು ನಂಬುವುದು ಬಹಳ ಕಷ್ಟವಾಗಬಹುದು. ಆದರೆ ಡಾ. ಕೇಶವ ಅವರು ಇದು ಯಾವ ರೀತಿ ಸಾಧ್ಯವಿದೆ ಎಂಬುದನ್ನು ತಿಳಿಸಿದ್ದಾರೆ. ಅವರು ತಿಳಿಸಿರುವ ಮಾಹಿತಿ ಅನುಸಾರ, ಜೇನುನೊಣಗಳು ಮೂಗು ಬಾಯಿಗೆ ಹೋದಾಗ ಬಿಪಿ ಬಹಳ ಜಾಸ್ತಿ ಆಗುತ್ತದೆ. ಇದರಿಂದ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಅಂತಹ ಸಂದರ್ಭದಲ್ಲಿ ಸಣ್ಣ ಸಣ್ಣ ಬ್ಲಾಕ್ ಗಳಿದ್ದರೆ ಅದು ಬ್ಲಡ್ ಕ್ಲಾಟ್ ಆಗಿ ಹೃದಯಾಘಾತ ಆಗುವ ಸಂಭವ ಹೆಚ್ಚಾಗಿರುತ್ತದೆ. ಅದರಲ್ಲಿಯೂ ಈ ರೀತಿ ಪ್ರಕರಣದಲ್ಲಿ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕಿಂತ ಮುಂಚೆಯೇ ಹೃದಯ ಸ್ತಂಭನವಾಗಿ ಪ್ರಾಣ ಬಿಡುತ್ತಾರೆ. ಹಾಗಾಗಿ ನಾವು ಎಷ್ಟು ಬೇಗ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೋ ಅಷ್ಟು ಒಳ್ಳೆಯದು.

ಇದನ್ನೂ ಓದಿ: ಮಕ್ಕಳಿಗೆ ಬೀದಿ ಬದಿ ಆಹಾರ ನೀಡುವ ಮುನ್ನ ಈ ವಿಚಾರ ತಿಳಿದಿರಲಿ: ಡಾ. ನಂದಿತಾ ರತ್ನಂ

ಸಂಜಯ್ ಕಪೂರ್ ಸಾವು

ಇದಕ್ಕೆ ಪೂರಕವೆಂಬಂತೆ, ನಿಮಗೆ ತಿಳಿದಿರಬಹುದು ಸ್ವಲ್ಪ ದಿನಗಳ ಹಿಂದೆ ಹೃದಯಾಘಾತದಿಂದ ನಟಿ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಸಾವನ್ನಪ್ಪಿದ್ದರು. ಅವರು ಇಂಗ್ಲೆಂಡ್‌ನಲ್ಲಿ ಪೋಲೋ ಆಡುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು. ಪೋಲೋ ಆಡುವಾಗ ಆಕಸ್ಮಿಕವಾಗಿ ಜೇನುನೊಣ ನುಂಗಿದ ಕಾರಣ ಹೃದಯಾಘಾತಕ್ಕೆ ಕಾರಣವಾಯಿತು ವೈದ್ಯರು ತಕ್ಷಣ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಕೆಲವು ವರದಿಗಳು ತಿಳಿಸಿವೆ. ಹಾಗಾಗಿ ಈ ರೀತಿಯಾಗಿ ಜೇನುನೊಣ ಬಾಯಿಯೊಳಗೆ ಹೋದಾಗಲೂ ಕೂಡ ಸಾವು ಬರಬಹುದು. ಇದು ಆಕಸ್ಮಿಕವಾಗಿ ಆಗಿದ್ದಾದರೂ ಕೂಡ ಈ ರೀತಿ ಆಗುವ ಸಂಭವ ಇರುತ್ತದೆ ಎಂಬುದು ತಿಳಿದಿರಬೇಕಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ