ಲಕ್ಷಣಗಳಿಲ್ಲದೇ ಕಾಯಿಲೆ ಬರಬಹುದೇ? ಇಲ್ಲಿದೆ ತಜ್ಞರು ನೀಡಿರುವ ಅಚ್ಚರಿ ಮಾಹಿತಿ

ಹಲವು ಬಾರಿ ದೇಹದಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡುಬರದೆಯೇ ಕಾಯಿಲೆಗಳಿಗೆ ತುತ್ತಾಗುತ್ತೇವೆ. ಏಕೆಂದರೆ ಕೆಲವು ರೋಗಗಳು ಲಕ್ಷಣಗಳಿಲ್ಲದೆಯೂ ಕಂಡುಬರುತ್ತದೆ. ಆದರೆ ಅಂತಹ ಕಾಯಿಲೆಗಳು ಯಾವವು, ಏಕೆ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ, ಈ ರೀತಿ ಕಾಯಿಲೆಗಳು ಬರದಂತೆ ತಡೆಯಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ನಿಮಗೆ ತಿಳಿದಿದೆಯೇ? ಈ ಬಗ್ಗೆ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಲಕ್ಷಣಗಳಿಲ್ಲದೇ ಕಾಯಿಲೆ ಬರಬಹುದೇ? ಇಲ್ಲಿದೆ ತಜ್ಞರು ನೀಡಿರುವ ಅಚ್ಚರಿ ಮಾಹಿತಿ
Silent Diseases
Image Credit source: Getty Images

Updated on: Apr 20, 2026 | 6:52 PM

ಸಾಮಾನ್ಯವಾಗಿ ದೇಹದಲ್ಲಿ ನೋವು, ದಣಿವು ಅಥವಾ ಕಿರಿಕಿರಿ ಆಗುತ್ತಿದ್ದರೆ ಆರೋಗ್ಯ ಸರಿ ಇಲ್ಲ ಎಂದು ಭಾವಿಸುತ್ತೇವೆ. ಆದರೆ ವೈದ್ಯರ ಪ್ರಕಾರ, ಕೆಲವು ಕಾಯಿಲೆಗಳು ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ನಿಧಾನವಾಗಿ ಬೆಳೆಯುತ್ತವೆ. ಇವುಗಳನ್ನು “ಸೈಲೆಂಟ್ ಡಿಸೀಸ್” (Silent Diseases) ಎಂದು ಕರೆಯಲಾಗುತ್ತದೆ. ಈ ರೀತಿಯ ಕಾಯಿಲೆಗಳು ದೀರ್ಘಕಾಲ ದೇಹದೊಳಗೆ ಹಾನಿ ಉಂಟುಮಾಡಿ, ತಡವಾಗಿ ಪತ್ತೆಯಾಗುವ ಅಪಾಯವಿರುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಅಂತಹ ಕಾಯಿಲೆಗಳು ಯಾವವು, ಏಕೆ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ, ಈ ರೀತಿ ಕಾಯಿಲೆಗಳು ಬರದಂತೆ ತಡೆಯಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಕಾಯಿಲೆಗಳು ಲಕ್ಷಣಗಳಿಲ್ಲದೆ ಕಾಣಿಸಿಕೊಳ್ಳುತ್ತದೆ?

ತಜ್ಞರ ಪ್ರಕಾರ, ಮಧುಮೇಹ, ಹೈ ಬ್ಲಡ್ ಪ್ರೆಶರ್, ಹೃದಯ ಸಂಬಂಧಿತ ಸಮಸ್ಯೆಗಳು, ಥೈರಾಯ್ಡ್ ಅಸಮತೋಲನ ಮತ್ತು ಕೆಲವು ಕ್ಯಾನ್ಸರ್‌ಗಳು ಆರಂಭಿಕ ಹಂತದಲ್ಲಿ ಲಕ್ಷಣಗಳಿಲ್ಲದೆ ಕಾಣಿಸಬಹುದು. ಇವು ನಿಧಾನವಾಗಿ ದೇಹದ ಅಂಗಾಂಗಗಳನ್ನು ಹಾನಿಗೊಳಿಸುತ್ತವೆ. ಹಲವರು ಸಾಮಾನ್ಯ ದಣಿವು ಅಥವಾ ದುರ್ಬಲತೆಯನ್ನು ನಿರ್ಲಕ್ಷಿಸುವುದರಿಂದ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇರುತ್ತದೆ.

ಲಕ್ಷಣಗಳು ಏಕೆ ತಕ್ಷಣ ಕಾಣಿಸಿಕೊಳ್ಳುವುದಿಲ್ಲ?

ಕೆಲವು ಕಾಯಿಲೆಗಳು ನಿಧಾನವಾಗಿ ಬೆಳೆಯುವ ಕಾರಣದಿಂದ ತಕ್ಷಣ ಲಕ್ಷಣಗಳು ಗೋಚರಿಸುವುದಿಲ್ಲ. ದೇಹವು ಒಳಗಿನ ಬದಲಾವಣೆಗಳನ್ನು ಕೆಲ ಕಾಲ ಸಮತೋಲನದಲ್ಲಿಡಲು ಪ್ರಯತ್ನಿಸುತ್ತದೆ. ಇದರ ಪರಿಣಾಮವಾಗಿ ವ್ಯಕ್ತಿಗೆ ಯಾವುದೇ ತೊಂದರೆ ಅನುಭವವಾಗುವುದಿಲ್ಲ. ಜೊತೆಗೆ, ಆರಂಭಿಕ ಲಕ್ಷಣಗಳು ಬಹಳ ಸಣ್ಣದಾಗಿರುವುದರಿಂದ ಅವನ್ನು ಸಾಮಾನ್ಯವೆಂದು ನಿರ್ಲಕ್ಷಿಸಲಾಗುತ್ತದೆ.

ಇದನ್ನೂ ಓದಿ: ಇದು ಸೈಲೆಂಟ್ ಕಿಲ್ಲರ್, ಸ್ವಲ್ಪ ಎಚ್ಚರ ತಪ್ಪಿದರು ಪ್ರಾಣ ಹೋಗುವುದು ಗ್ಯಾರಂಟಿ

ಮುನ್ನೆಚ್ಚರಿಕೆ ಹೇಗೆ ವಹಿಸಬೇಕು?

ಇಂತಹ ಕಾಯಿಲೆಗಳನ್ನು ತಡೆಗಟ್ಟಲು ನಿಯಮಿತ ಆರೋಗ್ಯ ತಪಾಸಣೆ ಬಹಳ ಮುಖ್ಯ. ವರ್ಷಕ್ಕೊಮ್ಮೆ ಅಥವಾ ವೈದ್ಯರ ಸಲಹೆಯಂತೆ ಚೆಕ್‌ಅಪ್ ಮಾಡಿಸಿಕೊಳ್ಳುವುದು ಉತ್ತಮ. ಸಮತೋಲನಯುತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿಯಂತ್ರಣ ಆರೋಗ್ಯ ಕಾಪಾಡಲು ಸಹಕಾರಿ. ಹಾಗಾಗಿ ದೇಹದಲ್ಲಿ ಸಣ್ಣ ಬದಲಾವಣೆಗಳನ್ನೂ ನಿರ್ಲಕ್ಷಿಸಬಾರದು. ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಮಯಕ್ಕೆ ಸರಿಯಾಗಿ ಕಾಯಿಲೆ ಪತ್ತೆ ಮಾಡಿದರೆ ಚಿಕಿತ್ಸೆ ಸುಲಭವಾಗುತ್ತದೆ ಮತ್ತು ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us