
ಬಿಸಿಲಿರಲಿ, ಮಳೆಯಿರಲಿ ಅಥವಾ ಚಳಿ ಇರಲಿ ಹೆಚ್ಚಿನವರಿಗೆ ಎಸಿ ಬೇಕೇ ಬೇಕು. ಆದರೆ ಅತಿಯಾಗಿ ಏರ್ ಕಂಡೀಷನರ್ (AC) ಬಳಕೆ ಮಾಡಿದರೆ ಮತ್ತು ಎಸಿಯ ತಾಪಮಾನವನ್ನು ಅತಿ ಕಡಿಮೆಯಲ್ಲಿಟ್ಟು ಬಳಕೆ ಮಾಡುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ನಿಮಗೆ ಅರಿವಿಲ್ಲದನಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ದೇಹಕ್ಕೆ ಆರಾಮ ನೀಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡಲು ಸರಿಯಾದ ತಾಪಮಾನವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಹಾಗಾದರೆ ಆರೋಗ್ಯ ಕಾಪಾಡಲು ಎಸಿಯ ಸರಿಯಾದ ತಾಪಮಾನ ಎಷ್ಟಿರಬೇಕು, ತುಂಬಾ ಕಡಿಮೆ ತಾಪಮಾನದಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಭಾರತದ ವಿದ್ಯುತ್ ಸಚಿವಾಲಯ ಹಾಗೂ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಪ್ರಕಾರ, ಎಸಿಯನ್ನು 24°C ರಿಂದ 25°C ನಡುವೆ ಇಡುವುದು ಆರಾಮದಾಯಕ ಮತ್ತು ಆರೋಗ್ಯಕರ ಎಂದು ಪರಿಗಣಿಸಲಾಗಿದೆ. ಈ ತಾಪಮಾನ ದೇಹಕ್ಕೆ ತಂಪು ನೀಡುವುದರ ಜೊತೆಗೆ ವಿದ್ಯುತ್ ಉಳಿತಾಯಕ್ಕೂ ಸಹಕಾರಿಯಾಗುತ್ತದೆ. ಹೊರಗಿನ ಉಷ್ಣತೆ ಮತ್ತು ಒಳಗಿನ ತಾಪಮಾನ ನಡುವಿನ ಅಂತರ ಹೆಚ್ಚು ಇರದಂತೆ ನೋಡಿಕೊಳ್ಳುವುದು ಮುಖ್ಯ. ಇದರಿಂದ ದೇಹವು ತಾಪಮಾನಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ.
ಹೊರಗಿನ ಬಿಸಿಲಿನಿಂದ ನೇರವಾಗಿ ಅತೀ ತಂಪಾದ ಕೊಠಡಿಗೆ ಹೋಗುವುದು ದೇಹಕ್ಕೆ ಅಸಹಜತೆಯನ್ನು ಉಂಟುಮಾಡಬಹುದು.
ಮಕ್ಕಳು, ಹಿರಿಯರು, ಅಸ್ತಮಾ ಅಥವಾ ಅಲರ್ಜಿ ಸಮಸ್ಯೆ ಇರುವವರು ಎಸಿ ಬಳಕೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ದೀರ್ಘಕಾಲ ತಂಪಾದ ವಾತಾವರಣದಲ್ಲಿ ಇರುವುದು ಕೆಲವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಇದನ್ನೂ ಓದಿ: ನೀವು ಪದೇ ಪದೇ ಎಸಿ ಆನ್, ಆಫ್ ಮಾಡುತ್ತಿದ್ದರೆ ಏನಾಗುತ್ತದೆ?
ಸರಿಯಾದ ತಾಪಮಾನ ಇಡಿ: 24°C–25°C ನಡುವೆ ಎಸಿಯನ್ನು ಹೊಂದಿಸುವುದು ಉತ್ತಮ.
ಫಿಲ್ಟರ್ ಸ್ವಚ್ಛವಾಗಿರಲಿ: ಎಸಿ ಫಿಲ್ಟರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿದರೆ ಗಾಳಿಯ ಗುಣಮಟ್ಟ ಉತ್ತಮವಾಗಿರುತ್ತದೆ.
ಸಾಕಷ್ಟು ನೀರು ಕುಡಿಯಿರಿ: ಎಸಿ ಕೊಠಡಿಯಲ್ಲಿ ಹೆಚ್ಚು ಸಮಯ ಕಳೆದರೆ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು.
ನೇರ ಗಾಳಿ ತಗುಲದಂತೆ ನೋಡಿಕೊಳ್ಳಿ: ಎಸಿಯ ಗಾಳಿ ನೇರವಾಗಿ ಮುಖ ಅಥವಾ ದೇಹದ ಮೇಲೆ ಬೀಳದಂತೆ ವ್ಯವಸ್ಥೆ ಮಾಡಿಕೊಳ್ಳಿ.
ತಾಜಾ ಗಾಳಿಗೂ ಅವಕಾಶ ನೀಡಿ: ಕೊಠಡಿಯಲ್ಲಿ ಕೆಲಕಾಲ ಕಿಟಕಿ ಅಥವಾ ಬಾಗಿಲು ತೆರೆಯುವುದರಿಂದ ಗಾಳಿಯ ಸಂಚಾರ ಸುಧಾರಿಸುತ್ತದೆ.
ಬೇಸಿಗೆಯಲ್ಲಿ ಎಸಿ ಬಳಕೆ ಅಗತ್ಯವಾದರೂ, ಅದರ ತಾಪಮಾನವನ್ನು ಸರಿಯಾಗಿ ನಿರ್ವಹಿಸುವುದು ಆರೋಗ್ಯಕ್ಕೆ ಅತ್ಯಂತ ಮುಖ್ಯ. 24°C ರಿಂದ 25°C ನಡುವಿನ ತಾಪಮಾನ ದೇಹಕ್ಕೆ ಆರಾಮ ನೀಡುವುದರ ಜೊತೆಗೆ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ