ಗರ್ಭಾವಸ್ಥೆಯಲ್ಲಿ ಕ್ಯಾನ್ಸರ್ ಕಂಡುಬಂದರೆ ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ?

ಗರ್ಭಾವಸ್ಥೆಯಲ್ಲಿ ಕ್ಯಾನ್ಸರ್ ಅಪರೂಪವಾದರೂ ಅದು ಗಂಭೀರ ಸ್ಥಿತಿಯಾಗಿದೆ. ತಾಯಿ ಮಾತ್ರವಲ್ಲದೆ ಗರ್ಭದಲ್ಲಿರುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆಯೇ ಎಂಬ ಆತಂಕ ಸಹಜವಾಗಿ ಎಲ್ಲರಲ್ಲಿಯೂ ಇರುತ್ತದೆ. ಹಾಗಾದರೆ ಅಂತಹ ಸಮಯದಲ್ಲಿ ಮಗುವಿಗೆ ಕ್ಯಾನ್ಸರ್ ಹರಡುತ್ತದೆಯೇ, ಈ ರೀತಿಯಾದಾಗ ಏನು ಮಾಡಬೇಕು? ಯಾವ ರೀತಿಯ ಔಷಧಿ ಸೇವನೆ ಮಾಡಬೇಕು ಎಂಬುದನ್ನು ತಜ್ಞರು ನೀಡಿರುವ ಸಲಹೆ ಮೂಲಕ ತಿಳಿದುಕೊಳ್ಳಿ.

ಗರ್ಭಾವಸ್ಥೆಯಲ್ಲಿ ಕ್ಯಾನ್ಸರ್ ಕಂಡುಬಂದರೆ ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ?
Cancer During Pregnancy
Image Credit source: Getty Images

Updated on: Apr 29, 2026 | 6:08 PM

ಗರ್ಭಾವಸ್ಥೆಯಲ್ಲಿ (Pregnancy) ಮಹಿಳೆಯ ದೇಹದಲ್ಲಿ ಅನೇಕ ಹಾರ್ಮೋನಲ್ ಹಾಗೂ ದೈಹಿಕ ಬದಲಾವಣೆಗಳು ಕಂಡುಬರುತ್ತದೆ. ಇದು ಬಹಳ ಸಾಮಾನ್ಯ ಆದರೆ ಇಂತಹ ಸಮಯದಲ್ಲಿ ಕ್ಯಾನ್ಸರ್ ಪತ್ತೆಯಾದರೆ, ಅದು ತಾಯಿ ಮಾತ್ರವಲ್ಲದೆ ಗರ್ಭದಲ್ಲಿರುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆಯೇ ಎಂಬ ಆತಂಕ ಸಹಜವಾಗಿ ಎಲ್ಲರಲ್ಲಿಯೂ ಇರುತ್ತದೆ. ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಕ್ಯಾನ್ಸರ್ ಕಂಡುಬರುವುದು ಅಪರೂಪವಾದರೂ ಕೂಡ ಗಂಭೀರ ಸ್ಥಿತಿಯಾಗಿದೆ ಎನುತ್ತಾರೆ. ಹಾಗಾದರೆ ಅಂತಹ ಸಮಯದಲ್ಲಿ ಮಗುವಿಗೆ ಕ್ಯಾನ್ಸರ್ ಹರಡುತ್ತದೆಯೇ, ಈ ರೀತಿಯಾದಾಗ ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಗುವಿಗೆ ಕ್ಯಾನ್ಸರ್ ಹರಡುತ್ತದೆಯೇ?

ವೈದ್ಯರ ಅಭಿಪ್ರಾಯದಂತೆ, ಹೆಚ್ಚಿನ ಸಂದರ್ಭಗಳಲ್ಲಿ ಕ್ಯಾನ್ಸರ್ ನೇರವಾಗಿ ಮಗುವಿಗೆ ಹರಡುವುದಿಲ್ಲ. ಆದರೆ ತಾಯಿಯ ಆರೋಗ್ಯ ಬಹಳ ದುರ್ಬಲವಾಗಿದ್ದರೆ, ಅದರ ಪರಿಣಾಮವಾಗಿ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು. ಗರ್ಭಿಣಿಯ ಆರೋಗ್ಯ ಸ್ಥಿತಿ, ಕ್ಯಾನ್ಸರ್‌ನ ಪ್ರಕಾರ ಮತ್ತು ಅದರ ಹಂತದ ಮೇಲೆ ಪರಿಣಾಮ ಬದಲಾಗುತ್ತದೆ. ಅದರಲ್ಲಿಯೂ ಗರ್ಭಾವಸ್ಥೆಯಲ್ಲಿ ನೀಡುವ ಕೆಲ ಔಷಧಿಗಳು ಮತ್ತು ಥೆರಪಿಗಳು, ವಿಶೇಷವಾಗಿ ಆರಂಭಿಕ ತಿಂಗಳಲ್ಲಿ, ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ವೈದ್ಯರು ಚಿಕಿತ್ಸೆ ನೀಡುವಾಗ ತಾಯಿ ಮತ್ತು ಮಗುವಿನ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸುತ್ತಾರೆ. ಕೆಲವೊಮ್ಮೆ ಚಿಕಿತ್ಸೆ ಮುಂದೂಡಲಾಗಬಹುದು ಅಥವಾ ಸುರಕ್ಷಿತ ವಿಧಾನಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಮಹಿಳೆಯರೇ… ಗರ್ಭಪಾತದ ನಂತರ, ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬೇಡಿ

ವೈದ್ಯಕೀಯ ಮೇಲ್ವಿಚಾರಣೆ ಏಕೆ ಮುಖ್ಯ?

ಗರ್ಭಿಣಿಯ ಆರೋಗ್ಯವನ್ನು ನಿರಂತರವಾಗಿ ಗಮನಿಸುವುದು ಅತ್ಯಂತ ಅಗತ್ಯ. ವೈದ್ಯರು ತಾಯಿಯ ಸ್ಥಿತಿಯನ್ನು ಪರಿಶೀಲಿಸಿ, ಅವಳಿಗೆ ಮತ್ತು ಮಗುವಿಗೆ ಅಪಾಯ ಕಡಿಮೆ ಇರುವಂತಹ ರೀತಿಯಲ್ಲಿ ಚಿಕಿತ್ಸೆ ಯೋಜಿಸುತ್ತಾರೆ. ಹಾಗಾಗಿ ಕ್ಯಾನ್ಸರ್ ಚಿಕಿತ್ಸೆಯ ಸಮಯ ಮತ್ತು ವಿಧಾನ ಅತ್ಯಂತ ಪ್ರಮುಖವಾಗಿವೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪ್ರಾರಂಭಿಸುವುದು ಮತ್ತು ಸುರಕ್ಷಿತ ಆಯ್ಕೆಯನ್ನು ಆರಿಸುವುದು ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಸಹಕಾರಿ. ಗರ್ಭಾವಸ್ಥೆಯಲ್ಲಿ ಕ್ಯಾನ್ಸರ್ ಇದ್ದರೂ ಎಲ್ಲ ಸಂದರ್ಭಗಳಲ್ಲಿ ಮಗುವಿಗೆ ಅಪಾಯವಾಗುವುದಿಲ್ಲ. ತಜ್ಞರ ಸಲಹೆ, ಸಮಯೋಚಿತ ಚಿಕಿತ್ಸೆ ಮತ್ತು ನಿಯಮಿತ ಪರೀಕ್ಷೆಗಳ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us