ರಾತ್ರಿ ನಿದ್ದೆ ಬರುತ್ತಿಲ್ಲವೇ? ಹಾಗಾದರೆ ಪ್ರತಿದಿನ ಶಂಖ ಊದಿ, ಇದು ಅಧ್ಯಯನದಿಂದ ಬಹಿರಂಗ
ಶಂಖದಲ್ಲಿ ದೈವಿಕ ಶಕ್ತಿ ಜತೆಗೆ ಆರೋಗ್ಯಕರ ಶಕ್ತಿ ಕೂಡ ಇದೆ ಎಂಬುದನ್ನು ಇದೀಗ ಅಧ್ಯಯನವೊಂದು ಸಾಬೀತು ಮಾಡಿದೆ. ಜೈಪುರದ ಎಟರ್ನಲ್ ಹಾರ್ಟ್ ಕೇರ್ ಸೆಂಟರ್ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆಸಲಾದ ಸಂಶೋಧನೆಯ ಪ್ರಕಾರ ಶಂಖ ಊದುವುದರಿಂದ ನಿದ್ರೆ ಮಾಡುವಾಗ ಉಸಿರುಕಟ್ಟುವ ಸಮಸ್ಯೆ ಇರುವ (OSA) ರೋಗಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಹೇಳಿದೆ.

ಶಂಖ (shankh) ಎನ್ನುವುದು ಅಧ್ಯಾತ್ಮಕ್ಕೆ ಸಂಬಂಧಿಸಿದ ವಸ್ತು ಅಲ್ಲ. ಅದು ಮನುಷ್ಯನ ಆರೋಗ್ಯಕ್ಕೂ ಒಳ್ಳೆಯದು. ಅದು ಹೇಗೆ ಎಂಬುದನ್ನು ಕೇಳಬಹುದು. ಆದರೆ ಇದನ್ನು ವಿಜ್ಞಾನವೇ ಒಪ್ಪಿಕೊಂಡಿದೆ. ಶಂಖ ಎನ್ನುವುದು ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ರೋಗ ದೇಹಕ್ಕೆ ಅಂಟಿಕೊಳ್ಳುವುದಿಲ್ಲ ಎನ್ನುವುದು ಅನೇಕ ತಜ್ಞರ ವಾದವಾಗಿದೆ. ಭಾರತದ ಹೊಸ ಅಧ್ಯಯನದ ಪ್ರಕಾರ ಶಂಖ ಊದುವುದರಿಂದ ನಿದ್ರೆ ಗುಣಮಟ್ಟ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಜೈಪುರದ ಎಟರ್ನಲ್ ಹಾರ್ಟ್ ಕೇರ್ ಸೆಂಟರ್ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆಸಲಾದ ಸಂಶೋಧನೆಯ ಪ್ರಕಾರ ಶಂಖ ಊದುವುದರಿಂದ ನಿದ್ರೆ ಮಾಡುವಾಗ ಉಸಿರುಗಟ್ಟುವ ಸಮಸ್ಯೆ ಇರುವ (OSA) ರೋಗಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಹೇಳಿದೆ. ನಿದ್ರೆಯ ಗುಣಮಟ್ಟವನ್ನು ಸುಧಾರಿಸುವುದಲ್ಲದೆ, ಹಗಲಿನ ಆಲಸ್ಯವನ್ನು ಕಡಿಮೆ ಮಾಡುತ್ತದೆ.
ಸ್ಲೀಪ್ ಅಪ್ನಿಯಾ (OSA) ಎಂದರೇನು?
ಸ್ಲೀಪ್ ಅಪ್ನಿಯಾ ಗಂಭೀರವಾದ ನಿದ್ರಾ ಸಮಸ್ಯೆಯಾಗಿದೆ. ನಿದ್ರೆಯ ಸಮಯದಲ್ಲಿ ಗಂಟಲಿನ ಸ್ನಾಯುಗಳು ಸಡಿಲಗೊಳ್ಳುತ್ತವೆ ಮತ್ತು ಶ್ವಾಸನಾಳವು ನಿರ್ಬಂಧಿಸಲ್ಪಡುತ್ತದೆ. ಇದರಿಂದಾಗಿ, ಉಸಿರಾಟವು ಕೆಲವು ಸೆಕೆಂಡುಗಳ ಕಾಲ ನಿಲ್ಲುತ್ತದೆ. ಸಾಮಾನ್ಯವಾಗಿ ಇದರ ಲಕ್ಷಣಗಳು ಜೋರಾಗಿ ಗೊರಕೆ ಹೊಡೆಯುವುದು, ಕೆಟ್ಟ ಉಸಿರಾಟ, ಇತ್ಯಾದಿ. ಇದರಿಂದಾಗಿ ನಿದ್ರೆಯ ಅಡಚಣೆಗಳು ಉಂಟಾಗುತ್ತದೆ.
6 ತಿಂಗಳ ಅಧ್ಯಯನ :
19 ರಿಂದ 65 ವರ್ಷ ವಯಸ್ಸಿನ 30 ರೋಗಿಗಳನ್ನು ಈ ಸಂಶೋಧನೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಅರ್ಧದಷ್ಟು ರೋಗಿಗಳಿಗೆ ಶಂಖ ಊದುವ ತರಬೇತಿ ನೀಡಲಾಯಿತು. ಉಳಿದವರಿಗೆ ಉಸಿರಾಟದ ವ್ಯಾಯಾಮಗಳನ್ನು ನೀಡಲಾಯಿತು. ಆರು ತಿಂಗಳ ಕಾಲ ಪ್ರತಿದಿನ 15 ನಿಮಿಷಗಳ ಕಾಲ ಶಂಖ ಊದಿದ ರೋಗಿಗಳು ಆಶ್ಚರ್ಯಕರ ಫಲಿತಾಂಶವನ್ನು ಪಡೆದಿದ್ದಾರೆ.
ಶಂಖ ಊದುವುದರಿಂದ ಆಗುವ ಪ್ರಯೋಜನಗಳು;
- ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
- ಹಗಲಿನ ಆಲಸ್ಯವು 34% ರಷ್ಟು ಕಡಿಮೆ ಮಾಡುತ್ತದೆ.
- ರಕ್ತದಲ್ಲಿನ ಆಮ್ಲಜನಕದ ಮಟ್ಟವು ಸುಧಾರಿಸುತ್ತದೆ.
- ಉಸಿರುಗಟ್ಟುವ ಸಮಸ್ಯೆಯನ್ನು ಗಂಟೆಗೆ 4-5 ಬಾರಿ ಕಡಿಮೆಯಾಗುತ್ತವೆ.
ಇದನ್ನೂ ಓದಿ: ಬೆಳಗಿನ ಸಮಯದ ಈ ಅಭ್ಯಾಸಗಳು ನಿಮ್ಮ ಆರೋಗ್ಯವನ್ನೇ ಹಾಳುಮಾಡುತ್ತೆ, ಎಚ್ಚರ
ಶಂಖ ಊದುವುದರಿಂದ ಏಕೆ ಪ್ರಯೋಜನ?
ಶಂಖವನ್ನು ಊದುವುದರಿಂದ ಗಂಟಲಿನ ಸ್ನಾಯುಗಳು ಮತ್ತು ಮೃದು ಅಂಗುಳ ಬಲಗೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಶಂಖದಿಂದ ಬರುವ ಕಂಪನಗಳು ಮತ್ತು ಗಾಳಿಯ ಪ್ರತಿರೋಧವು ಗಂಟಲನ್ನು ಟೋನ್ ಮಾಡುತ್ತದೆ ಮತ್ತು ಉಸಿರಾಟದ ಅಡಚಣೆಯನ್ನು ಕಡಿಮೆ ಮಾಡುತ್ತದೆ.
ಈ ಅಧ್ಯಯನದ ಆರಂಭಿಕ ಫಲಿತಾಂಶಗಳು ತುಂಬಾ ಸಕಾರಾತ್ಮಕವಾಗಿವೆ. ಈಗ ಇದನ್ನು ದೊಡ್ಡ ಪ್ರಮಾಣದಲ್ಲಿ ಮತ್ತು ವಿವಿಧ ಆಸ್ಪತ್ರೆಗಳ ಸಹಯೋಗದೊಂದಿಗೆ ಮುಂದುವರಿಸಲು ಯೋಜನೆಗಳಿವೆ. ಈ ತಂತ್ರವು ಗಂಟಲಿನ ಸ್ನಾಯುಗಳು, ಆಮ್ಲಜನಕದ ಮಟ್ಟಗಳು ಮತ್ತು ನಿದ್ರೆಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








