Coffee vs Tea: ಕಾಫಿ-ಚಹಾ ಈ ಎರಡರಲ್ಲಿ ಯಾವುದು ಬೆಸ್ಟ್? ಆರೋಗ್ಯಕ್ಕೆ ಯಾವುದು ಅಪಾಯಕಾರಿ?

Caffeine or Nicotine: ಕೆಫೀನ್ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ಅನೇಕ ವಿಧದ ಪಾನೀಯಗಳಲ್ಲಿ ಕಂಡುಬರುತ್ತದೆ. ಚಹಾ ಅಥವಾ ಕಾಫಿಯ ಪ್ರಮುಖ ವಿಷಯವೆಂದರೆ ನೀವು ಅದನ್ನು ಯಾವ ಸಮಯದಲ್ಲಿ ಕುಡಿಯುತ್ತೀರಿ ಎಂಬುದು. ಮತ್ತು ಗಮನದಲ್ಲಿಟ್ಟುಕೊಳ್ಳಿ 400 ಗ್ರಾಂ ಕೆಫೀನ್ ಮಾತ್ರವೇ ಮನುಷ್ಯನಿಗೆ ಆರೋಗ್ಯಕರವಾಗಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಪ್ರಮಾದ ಎಂವುದು ಕಟ್ಟಿಟ್ಟಬುತ್ತಿ. ಈ ಎರಡೂ ಸಣ್ಣ ವಿಷಯವನ್ನು ಆದ್ಯವಾಗಿ ನೆನಪಿಟ್ಟುಕೊಳ್ಳಲು ಮರೆಯದಿರಿ. ಇದರಿಂದ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದೇ ಭಾವಿಸಿ.

Coffee vs Tea: ಕಾಫಿ-ಚಹಾ ಈ ಎರಡರಲ್ಲಿ ಯಾವುದು ಬೆಸ್ಟ್? ಆರೋಗ್ಯಕ್ಕೆ ಯಾವುದು ಅಪಾಯಕಾರಿ?
ಕಾಫಿ - ಚಹಾ ಈ ಎರಡರಲ್ಲಿ ಯಾವುದು ಬೆಸ್ಟ್?
Follow us
ಸಾಧು ಶ್ರೀನಾಥ್​
|

Updated on: Aug 17, 2023 | 4:39 PM

ಬಹಳಷ್ಟು ಜನರು ಚಹಾ (Tea) ಅಥವಾ ಕಾಫಿ ಇಲ್ಲಾಂದ್ರೆ ಒಂದು ದಿನವೂ ಕಳೆಯುವುದಿಲ್ಲ. ಹೆಚ್ಚಿನ ಜನರು ದಿನಕ್ಕೆ ಎರಡರಿಂದ ನಾಲ್ಕು ಕಪ್ ಚಹಾ ಅಥವಾ ಕಾಫಿ (Coffee) ಕುಡಿಯುತ್ತಾರೆ. ಅಷ್ಟಕ್ಕೂ.. 95 ಪ್ರತಿಶತ ಭಾರತೀಯರು ಬೆಳಗಿನ ಚಹಾ ಮತ್ತು ಕಾಫಿಯೊಂದಿಗೇ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಆಯಾಸವನ್ನು ಹೋಗಲಾಡಿಸಲು ಅವರು ಬೆಳಿಗ್ಗೆ ಅಥವಾ ಸಂಜೆ ಕಣ್ಣು ತೆರೆದ ತಕ್ಷಣ ಚಹಾ ಅಥವಾ ಕಾಫಿಯನ್ನು ಆಶ್ರಯಿಸುತ್ತಾರೆ. ಹಾಗಾದರೆ ಟೀ ಮತ್ತು ಕಾಫಿ ಆರೋಗ್ಯಕ್ಕೆ ಒಳ್ಳೆಯದಾ..? ಈ ಎರಡರಲ್ಲಿರುವ ಕೆಫೀನ್ ಪ್ರಮಾಣವನ್ನು ಹೋಲಿಕೆ ಮಾಡುವುದಾದರೆ.. ಕಾಫಿಯಲ್ಲಿರುವ ಕೆಫೀನ್ (Caffeine) ಚಹಾದಲ್ಲಿನ ನಿಕೋಟಿನ್​ಗಿಂತ (Nicotine) ಹೆಚ್ಚಿನ ಪ್ರಭಾವ, ಪ್ರಮಾಣದಲ್ಲಿರುತ್ತದೆ . ಆದರೆ ಚಹಾವನ್ನು ಕಡ್ಡಾಯವಾಗಿ ಫಿಲ್ಟರ್ ಮಾಡುವುದರಿಂದ ಅದರಲ್ಲಿರುವ ಕೆಫೀನ್ ಮತ್ತು ನಿಕೋಟಿನ್ ಪ್ರಮಾಣ ಕಡಿಮೆಯಾಗುತ್ತದೆ.

ಕೆಫೀನ್ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ಅನೇಕ ವಿಧದ ಪಾನೀಯಗಳಲ್ಲಿ ಕಂಡುಬರುತ್ತದೆ. ಚಹಾ ಅಥವಾ ಕಾಫಿಯ ಪ್ರಮುಖ ವಿಷಯವೆಂದರೆ ನೀವು ಅದನ್ನು ಯಾವ ಸಮಯದಲ್ಲಿ ಕುಡಿಯುತ್ತೀರಿ ಎಂಬುದು. ಮತ್ತು ಗಮನದಲ್ಲಿಟ್ಟುಕೊಳ್ಳಿ 400 ಗ್ರಾಂ ಕೆಫೀನ್ ಮಾತ್ರವೇ ಮನುಷ್ಯನಿಗೆ ಆರೋಗ್ಯಕರವಾಗಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಪ್ರಮಾದ ಎಂವುದು ಕಟ್ಟಿಟ್ಟಬುತ್ತಿ. ಈ ಎರಡೂ ಸಣ್ಣ ವಿಷಯವನ್ನು ಆದ್ಯವಾಗಿ ನೆನಪಿಟ್ಟುಕೊಳ್ಳಲು ಮರೆಯದಿರಿ. ಇದರಿಂದ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದೇ ಭಾವಿಸಿ.

ಅನೇಕ ಅಧ್ಯಯನಗಳ ಪ್ರಕಾರ, ಕೆಫೀನ್ 3-13 ಪ್ರತಿಶತದಷ್ಟು ಕ್ಯಾಲೊರಿಗಳನ್ನು ಹೊಂದಿದೆ. ಇದು ಕೊಬ್ಬನ್ನು ಸುಡುತ್ತದೆ. ಆದ್ದರಿಂದ, ನೀವು ತೂಕ ಇಳಿಸಿಕೊಳ್ಳಲು ಯೋಚಿಸುತ್ತಿದ್ದರೆ.. ಕಾಫಿ ಕುಡಿಯುವುದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಉತ್ಕರ್ಷಣ ನಿರೋಧಕಗಳು: ಚಹಾ ಮತ್ತು ಕಾಫಿ ಎರಡೂ ಉತ್ಕರ್ಷಣ ನಿರೋಧಕಗಳಾಗಿದ್ದು ಅದು ಅನೇಕ ರೀತಿಯ ಹಾನಿಗಳಿಂದ ನಮ್ಮನ್ನು ರಕ್ಷಿಸುತ್ತದೆ. ಅಲ್ಲದೆ, ಇದು ಅನೇಕ ರೋಗಗಳ ಹರಡುವಿಕೆಯನ್ನು ತಡೆಯುತ್ತದೆ.

ದೇಹದಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಚಹಾದಲ್ಲಿ ಕೆಫೀನ್ ಪ್ರಮಾಣ ಕಡಿಮೆ. ಎಲ್-ಥೈನೈನ್ ಸಮೃದ್ಧವಾಗಿದೆ. ಇದು ನಮ್ಮ ಮೆದುಳಿಗೆ ತುಂಬಾ ಒಳ್ಳೆಯದು. ನೀವು ಚಹಾವನ್ನು ಸೇವಿಸಿದಾಗ ಕೆಫೀನ್ ಜೊತೆಗೆ ಎಲ್-ಥೈನೈನ್ ಅನ್ನೂ ಕುಡಿಯುವುದರಿಂದ ನಿಮ್ಮನ್ನು ಹೆಚ್ಚು ಜಾಗರೂಕತೆಯಿಂದ ಇಟ್ಟಿರುತ್ತದೆ, ಕೇಂದ್ರೀಕೃತ ಗಮನ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅನೇಕ ಸಂಶೋಧನೆಗಳಿಂದ ತಿಳಿದುಬಂದಿದೆ.

ದಂತದ ಮೇಲೆ ಪರಿಣಾಮ ಹೀಗಿದೆ: ಚಹಾವು ನಿಮ್ಮ ಹಲ್ಲುಗಳ ಮೇಲೆ ಕಾಫಿಗಿಂತ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದು ನಿಮ್ಮ ಹಲ್ಲುಗಳನ್ನು ಬಿಳಿ ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗಿಸುತ್ತದೆ.

ತಜ್ಞರು ಏನು ಹೇಳುತ್ತಾರೆ? ತಜ್ಞರ ಪ್ರಕಾರ ಚಹಾವು ಕಾಫಿಗಿಂತ ಉತ್ತಮವಾಗಿದೆ. ಏಕೆಂದರೆ ಇದು ಕಡಿಮೆ ಕೆಫೀನ್ ಅನ್ನು ಹೊಂದಿರುತ್ತದೆ. ಇವೆರಡೂ ತಯಾರಿಸುವ ವಿಧಾನದಲ್ಲಿ ಬಹಳ ಭಿನ್ನವಾಗಿರುತ್ತವೆ. ನೀವು ಈ ಎರಡನ್ನು ಹೆಚ್ಚು ಕಾಲ ಕುದಿಸಿದರೆ, ಆಂಟಿಆಕ್ಸಿಡೆಂಟ್‌ಗಳು ಪರಿಣಾಮ ಬೀರುತ್ತವೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದೆಲ್ಲದರ ಜೊತೆಗೆ, ನೀವು ಸೇರಿಸುವ ಸಕ್ಕರೆಯ ಪ್ರಮಾಣವು ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ.

ಚಹಾ ಅಥವಾ ಕಾಫಿ: ಯಾವುದು ಉತ್ತಮ ಚಹಾ ಅಥವಾ ಕಾಫಿ.. ಅದು ನಿಮ್ಮ ವೈಯಕ್ತಿಕ ಆಯ್ಕೆಯಾಗಿದೆ. ಆದರೆ ಈ ಎರಡರ ಅತಿಯಾದ ಸೇವನೆಯು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ ಎರಡನ್ನೂ ಬಹಳ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಒಂದರಿಂದ ಎರಡು ಕಪ್ ಕಾಫಿ ಅಥವಾ ಒಂದರಿಂದ ಎರಡು ಕಪ್ ಟೀ ಕುಡಿಯುವುದು ಒಳ್ಳೆಯದು. ಇದಕ್ಕಿಂತ ಹೆಚ್ಚು ಕುಡಿಯುವುದು ಆರೋಗ್ಯಕ್ಕೆ ಹಾನಿಕರ.

(ಗಮನಿಸಿ: ಈ ವಿಷಯಗಳು ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ಇದನ್ನು ವೃತ್ತಿಪರ ಆರೋಗ್ಯ ಸಲಹೆಗಾರರ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.)

ಹೆಚ್ಚಿನ ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ