ಚಹಾದೊಂದಿಗೆ ಈ 3 ಆಹಾರಗಳನ್ನು ಸೇವಿಸಬಾರದು? ಈ ಬಗ್ಗೆ ಪೌಷ್ಟಿಕತಜ್ಞರು ಹೇಳಿದ್ದೇನು?

ಪೌಷ್ಟಿಕ ತಜ್ಞೆ ದಿಶಾ ಸೇಥಿ ಅವರು ಚಹಾದೊಂದಿಗೆ ನೀವು ಎಂದಿಗೂ ಸೇವಿಸಬಾರದ ಮೂರು ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದು, ಚಹಾ ಪ್ರೀಯರು ಇದನ್ನು ಅರಿತುಕೊಳ್ಳಬೇಕಾಗಿದೆ. ಏಕೆಂದರೆ ನಾವು ದಿನನಿತ್ಯ ತಿಳಿಯದೇ ಚಹಾದೊಂದಿಗೆ ಹಲವು ರೀತಿಯ ಆಹಾರಗಳನ್ನು ತಿನ್ನುತ್ತೇವೆ. ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲದೇ ಇರಬಹುದು ಹಾಗಾಗಿ ತಜ್ಞರು ನೀಡಿದ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ದಿನನಿತ್ಯ ಪಾಲಿಸುವುದು ಉತ್ತಮ.

ಚಹಾದೊಂದಿಗೆ ಈ 3 ಆಹಾರಗಳನ್ನು ಸೇವಿಸಬಾರದು? ಈ ಬಗ್ಗೆ ಪೌಷ್ಟಿಕತಜ್ಞರು ಹೇಳಿದ್ದೇನು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 16, 2023 | 6:14 PM

ಒಂದು ಬಿಸಿ ಕಪ್ ಚಹಾದೊಂದಿಗೆ ಅನೇಕ ರೀತಿಯ ಆಹಾರ ಆನಂದಿಸಲು ಯಾರು ಇಷ್ಟಪಡುವುದಿಲ್ಲ? ವಿಶೇಷವಾಗಿ, ನೀವು ಚಹಾ ಪ್ರಿಯರಾಗಿದ್ದರೆ. ಖಡಕ್ ಚಹಾ ಇಲ್ಲದ ಒಂದು ದಿನವನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಮನೆಯಲ್ಲಿ ಮಾಡಿದ ತಿಂಡಿಗಳೊಂದಿಗೆ ಒಂದು ಬಿಸಿ ಕಪ್ ಚಹಾಕ್ಕಿಂತ ಉತ್ತಮ ಯಾವುದೂ ಇಲ್ಲ. ಬಿಸ್ಕತ್ತು, ಪಕೋಡಾ, ಸಮೋಸಾ ಹಾಗೂ ಮಸ್ಕಾ ಪಾವ್​​​ವರೆಗೆ, ಗರಿಗರಿಯಾದ ಕುರುಕಲು ತಿಂಡಿಗಳೊಂದಿಗೆ ಮಸಾಲಾ ಚಾಯ್ ಸವಿಯುವುದು ತುಂಬಾ ಖುಷಿ ನೀಡುತ್ತದೆ. ಆದರೆ ಚಹಾದೊಂದಿಗೆ ತಪ್ಪಿಸಬೇಕಾದ ಕೆಲವು ಆಹಾರ ಪದಾರ್ಥಗಳು ಇರಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಪೌಷ್ಟಿಕ ತಜ್ಞೆ ದಿಶಾ ಸೇಥಿ ಅವರು ಆ ಮೂರು ಆಹಾರ ಪದಾರ್ಥಗಳನ್ನು ಪಟ್ಟಿ ಮಾಡಿದ್ದಾರೆ. ಜೊತೆಗೆ ಅದನ್ನು ತನ್ನ ಇನ್ಸ್ಟಾಗ್ರಾಮ್ ಪುಟ ನ್ಯೂಟ್ರಿಫಿಟ್ನೆಸ್​​ನಲ್ಲಿ, ಚಹಾದೊಂದಿಗೆ ಸೇವಿಸಬಾರದ ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಚಹಾದೊಂದಿಗೆ ತಪ್ಪಿಸಬೇಕಾದ 3 ಆಹಾರಗಳು ಯಾವುದು? ಇಲ್ಲಿದೆ ಮಾಹಿತಿ

1. ಶೇಂಗಾ ಬೀಜಗಳನ್ನು ಚಹಾದೊಂದಿಗೆ ಸೇವಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪೌಷ್ಟಿಕ ತಜ್ಞೆ ದಿಶಾ ಸೇಥಿ ತಿಳಿಸಿದ್ದಾರೆ. ಏಕೆಂದರೆ ಚಹಾವು ಟ್ಯಾನಿನ್ ಅನ್ನು ಹೊಂದಿರುತ್ತದೆ, ಇದು ಫಿನೋಲಿಕ್ ಆಮ್ಲಗಳಿಂದ ಪಡೆದ ಸಂಕೀರ್ಣ ರಾಸಾಯನಿಕವಾಗಿದೆ. “ಇನ್ನು “ಬೀಜಗಳಲ್ಲಿ ಕಬ್ಬಿಣವಿದೆ, ನೀವು ಚಹಾದೊಂದಿಗೆ ಬೀಜಗಳನ್ನು ಸೇವಿಸಿದರೆ, ಅದು ಕಬ್ಬಿಣದ ಅಂಶವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ” ಎಂದು ಸೇಥಿ ಈ ಬಗ್ಗೆ ಬಹಿರಂಗಪಡಿಸಿದ್ದಾರೆ.

2. ಹಸಿರು ಎಲೆಯ ತರಕಾರಿಗಳಿಂದ ಮಾಡಿದ ಕರಿದ ತಿಂಡಿಗಳನ್ನು ಅಂದರೆ ಪಾಲಕ್ ಬಜ್ಜಿಗಳನ್ನು ಚಹಾದ ಜೊತೆ ಸವಿಯಲು ಇಷ್ಟಪಡುತ್ತೇವೆ. ಆದರೆ ದಿಶಾ ಸೇಥಿ ಅವರು ಹೇಳುವ ಪ್ರಕಾರ ಚಹಾದೊಂದಿಗೆ ಹಸಿರು ಎಲೆಯ ತರಕಾರಿಗಳಿಂದ ಮಾಡಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದಿದ್ದಾರೆ. ಚಹಾದೊಂದಿಗೆ ಹಸಿರು ಎಲೆಗಳ ತರಕಾರಿಗಳನ್ನು ಎಂದಿಗೂ ಸೇವಿಸಬೇಡಿ (ಚಹಾದಲ್ಲಿ ಟ್ಯಾನಿನ್ಗಳಿವೆ ಮತ್ತು ಎಲೆಗಳ ಸೊಪ್ಪುಗಳಲ್ಲಿ ಕಬ್ಬಿಣವಿದೆ)” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ಆರೋಗ್ಯಕರ ಓಟ್ಸ್ ರೆಸಿಪಿ

3. ಅರಿಶಿನವು ಯಾವುದೇ ಭಾರತೀಯರ ಅಡುಗೆ ಮನೆಯಲ್ಲಿ ಇದ್ದೇ ಇರುವಂತ ಪದಾರ್ಥವಾಗಿದೆ. ಅದು ಮಧ್ಯಾಹ್ನದ ಊಟಕ್ಕೆ ದಾಲ್ ಆಗಿರಲಿ ಅಥವಾ ರಾತ್ರಿ ಊಟಕ್ಕೆ ಕರಿ ಖಾದ್ಯವಾಗಿರಲಿ, ಅರಿಶಿನವಿಲ್ಲದೇ ಯಾವುದೇ ದೇಸಿ ಖಾದ್ಯವನ್ನು ತಯಾರಿಸುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ ದಿಶಾ ಸೇಥಿ ನಿಮ್ಮ ಚಹಾದ ಜೊತೆಗೆ ಅರಿಶಿನ ಬೆರೆಸಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಲು ಸಲಹೆ ನೀಡಿದ್ದಾರೆ. ಇದು “ನಿಮ್ಮ ಜೀರ್ಣಕ್ರಿಯೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದ್ದಾರೆ.

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ