ಹೊರಾಂಗಣ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಬೇಡ ಅನ್ನುತ್ತಿದ್ದಾರೆ ತಜ್ಞರು, ಹಾಗಾದರೆ ಭಾರತ ಸುರಕ್ಷಿತವೇ? ಒಂದು ಜಿಜ್ಞಾಸೆ

ಕೋವಿಡ್ -19 ಪ್ರಕರಣಗಳು ಕಡಿಮೆಯಾದ ಕಾರಣ ದೇಶದ ಹಲವಾರು ಭಾಗಗಳಲ್ಲಿ ಕಳೆದ ಕೆಲವು ವಾರಗಳಲ್ಲಿ ಮಾಸ್ಕ್‌ಗಳು ವೇಗವಾಗಿ ಕಣ್ಮರೆಯಾಗುತ್ತಿವೆ. ಜನರು ಮಾಸ್ಕ್ ಧರಿಸುವುದು ಈಗ ಕಡಿಮೆಯಾಗಿದೆ. ಈ ಮಧ್ಯೆ, ಹೊರಾಂಗಣ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಬೇಡ ಅನ್ನುತ್ತಿದ್ದಾರೆ ತಜ್ಞರು, ಹಾಗಾದರೆ ಭಾರತ ಸುರಕ್ಷಿತವೇ? ಒಂದು ಜಿಜ್ಞಾಸೆ.

ಹೊರಾಂಗಣ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಬೇಡ ಅನ್ನುತ್ತಿದ್ದಾರೆ ತಜ್ಞರು, ಹಾಗಾದರೆ ಭಾರತ ಸುರಕ್ಷಿತವೇ? ಒಂದು ಜಿಜ್ಞಾಸೆ
ಹೊರಾಂಗಣ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಬೇಡ ಅನ್ನುತ್ತಿದ್ದಾರೆ ತಜ್ಞರು, ಹಾಗಾದರೆ ಭಾರತ ಸುರಕ್ಷಿತವೇ?
Follow us
S Chandramohan
| Updated By: ಸಾಧು ಶ್ರೀನಾಥ್​

Updated on:Mar 22, 2022 | 3:03 PM

ದೇಶದಲ್ಲಿ ಕೊರೊನಾ ಕೇಸ್ ಗಳು ನಿತ್ಯ ಕುಸಿಯುತ್ತಿವೆ. ದೇಶದಲ್ಲಿ ಕೊರೊನಾ ಸಕ್ರಿಯ ಕೇಸ್ ಗಳು ಮೂವತ್ತು ಸಾವಿರಕ್ಕಿಂತ ಕಡಿಮೆ ಇವೆ. ಹೀಗಾಗಿ ಇಂಥ ಸ್ಥಿತಿಯಲ್ಲಿ ದೇಶದಲ್ಲಿ ಮಾಸ್ಕ್ ಅನ್ನು ಕಡ್ಡಾಯ ಮಾಡಿರುವುದು ಸರಿಯಲ್ಲ. ಮಾಸ್ಕ್ ಧರಿಸುವುದನ್ನು ಜನರ ವಿವೇಚನೆಗೆ ಬಿಡಬೇಕೆಂದು ಆರೋಗ್ಯ ಕ್ಷೇತ್ರದ ತಜ್ಞರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಹೊರಾಂಗಣ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಬೇಡ ಎಂದ ತಜ್ಞರು ದೇಶದಲ್ಲಿ ಕೋವಿಡ್ ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ಹೆಚ್ಚಿನ ಹೊಸ ಸೋಂಕುಗಳು ಸೌಮ್ಯವಾಗಿರುವುದರಿಂದ ಕೆಲವು ಸಾರ್ವಜನಿಕ ಆರೋಗ್ಯ ತಜ್ಞರು ಹೊರಾಂಗಣ ಸ್ಥಳಗಳಲ್ಲಿ ಕೊರೊನಾ ವೈರಸ್ ವಿರುದ್ಧದ ಮಾಸ್ಕ್ ಅನ್ನು ಕಡ್ಡಾಯ ಮಾಡುವುದು ಸೂಕ್ತವಲ್ಲ, ಮಾಸ್ಕ್ ಧರಿಸುವುದನ್ನು ಜನರ ವಿವೇಚನೆಗೆ ಬಿಡುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕೇಂದ್ರ ಸರ್ಕಾರವು ಎಲ್ಲರಿಗೂ ಹೊರಾಂಗಣ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಆದೇಶವನ್ನು ತಕ್ಷಣವೇ ತೆಗೆದುಹಾಕಬೇಕು. ಮಾಸ್ಕ್ ಅನ್ನು ಸ್ವಯಂಪ್ರೇರಿತವಾಗಿ ಧರಿಸಲು ಅವಕಾಶ ನೀಡಬೇಕು ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಸಾರ್ವಜನಿಕ ನೀತಿ ತಜ್ಞ ಚಂದ್ರಕಾಂತ ಲಹರಿಯ ಹೇಳಿದ್ದಾರೆ. 0-17 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಮಾಸ್ಕ್ ಕಡ್ಡಾಯವಾಗಿದೆ. ಇದನ್ನು ತೆಗೆದುಹಾಕಬೇಕು ಎಂದು ಸಾಂಕ್ರಮಿಕ ರೋಗತಜ್ಞ ಚಂದ್ರಕಾಂತ್ ಲಹರಿಯ ಹೇಳಿದ್ದಾರೆ.

ಹೊಸ ಕೋವಿಡ್ -19 ಪ್ರಕರಣಗಳು ಕಡಿಮೆಯಾಗಿವೆ, ಇದು ಮಾಸ್ಕ್ ಕಡ್ಡಾಯ ನಿಯಮವನ್ನು ಸಡಿಲಿಸಲು ಭರವಸೆ ನೀಡುತ್ತಿದೆ. ಆಸ್ಪತ್ರೆಗೆ ದಾಖಲಾದವರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಹೆಚ್ಚಿನ ಪ್ರಮಾಣದ ಜನಸಂಖ್ಯೆಯು ವೈರಸ್ ವಿರುದ್ಧ ರಕ್ಷಣೆಯನ್ನು ಕೊರೊನಾ ಲಸಿಕೆ ಪಡೆದಿರುವುದರಿಂದ ಹೊಂದಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಚಂದ್ರಕಾಂತ್ ಲಹರಿಯಾ ಹೇಳಿದ್ದಾರೆ.

ಕೋವಿಡ್ -19 ಪ್ರಕರಣಗಳು ಕಡಿಮೆಯಾದ ಕಾರಣ ದೇಶದ ಹಲವಾರು ಭಾಗಗಳಲ್ಲಿ ಕಳೆದ ಕೆಲವು ವಾರಗಳಲ್ಲಿ ಮಾಸ್ಕ್‌ಗಳು ವೇಗವಾಗಿ ಕಣ್ಮರೆಯಾಗುತ್ತಿವೆ. ಜನರು ಮಾಸ್ಕ್ ಧರಿಸುವುದು ಈಗ ಕಡಿಮೆಯಾಗಿದೆ.

ಮಹಾರಾಷ್ಟ್ರದ ಸೇವಾಗ್ರಾಮದ ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನಗಳ ವೈದ್ಯಕೀಯ ಅಧೀಕ್ಷಕ ಎಸ್‌ಪಿ ಕಲಾಂತ್ರಿ ಅವರ ಪ್ರಕಾರ, ಜನರು ಮಾಸ್ಕ್ ಬಳಸಿ ಬೇಸತ್ತಿದ್ದಾರೆ. ಮಾಸ್ಕ್ ಮಾರ್ಗಸೂಚಿಗಳನ್ನು ಅನುಸರಿಸಲು ಸಾರ್ವಜನಿಕರನ್ನು ಮನವೊಲಿಸುವುದು ತುಂಬಾ ಕಷ್ಟಕರವಾಗಿದೆ ಎಂದು ಹೇಳಿದರು. ಕೊರೊನಾದ ಅಪಾಯವು ತುಂಬಾ ಕುಸಿದಿದೆ, ಮಾಸ್ಕ್ ಗಳ ನಿರಂತರ ಬಳಕೆಯಿಂದ ನೀಡಲಾಗುವ ರಕ್ಷಣೆಯು ತೊಂದರೆಗೆ ಯೋಗ್ಯವಾಗಿರುವುದಿಲ್ಲ” ಎಂದು ಅವರು ಹೇಳಿದರು.

ಕೇಂದ್ರದ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸೋಮವಾರ 24 ಗಂಟೆಗಳಲ್ಲಿ 1,549 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ದೇಶವು ಕೋವಿಡ್ -19 ಸಾವುಗಳಲ್ಲಿ ತೀವ್ರ ಕುಸಿತವನ್ನು ವರದಿ ಮಾಡಿದೆ, ಕಳೆದ 24 ಗಂಟೆಗಳಲ್ಲಿ 31 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಅಶೋಕ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಮತ್ತು ಜೀವಶಾಸ್ತ್ರದ ಪ್ರಾಧ್ಯಾಪಕ ಗೌತಮ್ ಮೆನನ್ ಕೂಡ, ಹೊರಾಂಗಣ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ಅಗತ್ಯವನ್ನು ಸಡಿಲಿಸಲು ಇದು ಉತ್ತಮ ಸಮಯ ಎಂದು ಹೇಳಿದರು.

ನಾನು ಪ್ರೋತ್ಸಾಹಿಸುತ್ತೇನೆ, ಆದರೆ ಒಳಾಂಗಣ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಜಾರಿಗೊಳಿಸುವುದನ್ನು ಮುಂದುವರಿಸಬೇಕಾಗಿಲ್ಲ ಎಂದು ಅವರು ತಿಳಿಸಿದರು. “ಸಾಮಾನ್ಯವಾಗಿ, ಕೆಟ್ಟ ಗಾಳಿ ಇರುವ ಸ್ಥಳಗಳಲ್ಲಿ ಮಾಸ್ಕ್ ಉಪಯುಕ್ತತೆಯ ಬಗ್ಗೆ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ನಡೆಸಲು ನಾನು ಸಲಹೆ ನೀಡುತ್ತೇನೆ, ವಿಶೇಷವಾಗಿ ಇತರರನ್ನು ರಕ್ಷಿಸುವ ಮಾರ್ಗವಾಗಿ ಮಾಸ್ಕ್ ಧರಿಸಬೇಕು ಎಂದು ಗೌತಮ್ ಮೆನನ್ ಹೇಳಿದ್ದಾರೆ.

ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ (ಪಿಎಚ್‌ಎಫ್‌ಐ) ಅಧ್ಯಕ್ಷ ಕೆ ಶ್ರೀನಾಥ್ ರೆಡ್ಡಿ ಅವರಂತಹ ಕೆಲವು ತಜ್ಞರು ಎಚ್ಚರಿಕೆಯಿಂದ ಸಲಹೆ ನೀಡಿದ್ದಾರೆ. ಕಿಕ್ಕಿರಿದ ಒಳಾಂಗಣ ಮತ್ತು ಹೊರಾಂಗಣ ಸ್ಥಳಗಳಲ್ಲಿ, ವಿಶೇಷವಾಗಿ ವಾತಾಯನ ಮತ್ತು ಗಾಳಿಯ ಹರಿವು ಕಳಪೆಯಾಗಿರುವಲ್ಲಿ ಮಾಸ್ಕ್ ಧರಿಸಲು ಇನ್ನೂ ಸಲಹೆ ನೀಡಲಾಗುತ್ತದೆ” ಎಂದು ಶ್ರೀನಾಥ ರೆಡ್ಡಿ ಹೇಳಿದರು. ಇತರ ಸ್ಥಳಗಳಲ್ಲಿ, ವಿಶೇಷವಾಗಿ ವಾತಾಯನ ಮತ್ತು ಗಾಳಿಯ ಹರಿವು ಉತ್ತಮವಾಗಿರುವಲ್ಲಿ ಮತ್ತು ಜನಸಂದಣಿ ಇಲ್ಲದಿರುವಲ್ಲಿ, ಮಾಸ್ಕ್ ಐಚ್ಛಿಕವಾಗಿರುತ್ತವೆ. ಅಲ್ಲಿಯೂ ಸಹ, ಮೇಲ್ಭಾಗದ ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳು ಮಾಸ್ಕ್ ಧರಿಸಬೇಕು ಎಂದು ಶ್ರೀನಾಥ್ ರೆಡ್ಡಿ ಹೇಳಿದರು.

Published On - 2:41 pm, Tue, 22 March 22