AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ ಜ್ವರದ ಬಳಿಕವೂ ಕೆಮ್ಮು ಕಡಿಮೆಯಾಗದಿದ್ದರೆ ವೈದ್ಯರು ತಿಳಿಸಿರುವ ಈ ಸಲಹೆಗಳನ್ನು ಫಾಲೋ ಮಾಡಿ!

ವೈರಲ್ ಜ್ವರ, ಗಂಟಲು ನೋವು ಮತ್ತು ಶೀತ ಕಡಿಮೆಯಾದ ಬಳಿಕವೂ ಕೆಲವರಿಗೆ ಹಲವು ವಾರಗಳ ಕಾಲ ಕೆಮ್ಮು ಮುಂದುವರಿಯಬಹುದು. ಹಾಗಾಗಿ ಈ ರೀತಿ ಆಗುವುದಕ್ಕೆ ಕಾರಣವೇನು ಮತ್ತು ಇದನ್ನು ತಡೆಯಲು ಏನು ಮಾಡಬಹುದು ಎಂಬುದರ ಬಗ್ಗೆ ಡಾ. ಮೀನಾಕ್ಷಿ ಜೈನ್ ಅವರು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಿಮಗೂ ಈ ರೀತಿ ಆಗಿದ್ದರೆ ಅಥವಾ ಕೆಮ್ಮಿನಿಂದ ಹೈರಾಣವಾಗಿದ್ದರೆ ವೈದ್ಯರು ತಿಳಿಸಿರುವ ಈ ಸಲಹೆಗಳನ್ನು ಫಾಲೋ ಮಾಡಿ!

ವೈರಲ್ ಜ್ವರದ ಬಳಿಕವೂ ಕೆಮ್ಮು ಕಡಿಮೆಯಾಗದಿದ್ದರೆ ವೈದ್ಯರು ತಿಳಿಸಿರುವ ಈ ಸಲಹೆಗಳನ್ನು ಫಾಲೋ ಮಾಡಿ!
Cough After Viral InfectionImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 24, 2026 | 7:00 PM

Share

ವೈರಲ್ ಸೋಂಕಿನ ನಂತರ ಜ್ವರ, ಮೈಕೈ ನೋವು, ಗಂಟಲು ನೋವು ಹಾಗೂ ಮೂಗು ಕಟ್ಟುವಿಕೆ ಕಡಿಮೆಯಾದರೂ ಕೆಮ್ಮು ಮಾತ್ರ ಕೆಲವು ವಾರಗಳವರೆಗೆ ಮುಂದುವರಿಯುವುದು ಸಾಮಾನ್ಯವಾಗಿಬಿಟ್ಟಿದೆ. ಇದನ್ನು ಪೋಸ್ಟ್-ಇನ್ಫೆಕ್ಷಿಯಸ್ ಕಫ್ (Post-infectious cough) ಎಂದು ಕರೆಯಲಾಗುತ್ತದೆ. ವೈರಸ್ ದೇಹದಿಂದ ಹೊರಹೋದ ಬಳಿಕವೂ ಗಂಟಲು ಮತ್ತು ಉಸಿರಾಟದ ಮಾರ್ಗಗಳಲ್ಲಿ ಉರಿಯೂತ ಹಾಗೂ ಸಂವೇದನಾಶೀಲತೆ ಕೆಲಕಾಲ ಉಳಿಯಬಹುದು. ದೆಹಲಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಿನ್ಸಿಪಲ್ ಡೈರೆಕ್ಟರ್ ಆಗಿರುವ ಡಾ. ಮೀನಾಕ್ಷಿ ಜೈನ್ ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದು, ಕೆಮ್ಮು ಕಡಿಮೆಯಾಗದಿರುವುದಕ್ಕೆ ಕಾರಣ ಮತ್ತು ಅದನ್ನು ಕಡಿಮೆ ಮಾಡಲು ಏನು ಮಾಡಬಹುದು ಎಂಬುದನ್ನು ತಿಳಿಸಿದ್ದಾರೆ.

ತಣ್ಣನೆಯ ಗಾಳಿ, ಧೂಳು ಕೆಮ್ಮಿಗೆ ಕಾರಣವಾಗಬಹುದು

ವೈರಲ್ ಸೋಂಕಿನ ಬಳಿಕ ತಣ್ಣನೆಯ ಗಾಳಿ, ಧೂಳು, ಮಾತನಾಡುವುದು, ನಗುವುದು ಅಥವಾ ತೀವ್ರ ವಾಸನೆಯಂತಹ ಸಣ್ಣ ಪ್ರಚೋದನೆಗಳಿಗೂ ಕೆಮ್ಮು ಶುರುವಾಗಬಹುದು. ಸೋಂಕಿನ ಸಮಯದಲ್ಲಿ ಹೆಚ್ಚಾದ ಮ್ಯೂಕಸ್ ಕೂಡ ಕೆಮ್ಮಿಗೆ ಕಾರಣವಾಗಬಹುದು. ಮೂಗು ಅಥವಾ ಸೈನಸ್‌ನಿಂದ ಕಫ ಗಂಟಲಿನ ಹಿಂಭಾಗಕ್ಕೆ ಹರಿಯುವುದನ್ನು ಪೋಸ್ಟ್-ನೇಸಲ್ ಡ್ರಿಪ್ (Post-nasal drip) ಎನ್ನುತ್ತಾರೆ. ಇದು ವಿಶೇಷವಾಗಿ ರಾತ್ರಿ ವೇಳೆ ಗಂಟಲಿಗೆ ಕಿರಿಕಿರಿ ಉಂಟುಮಾಡಿ ಕೆಮ್ಮನ್ನು ಹೆಚ್ಚಿಸಬಹುದು.

ಕೆಮ್ಮು ಸಾಮಾನ್ಯವಾಗಿ ಎಷ್ಟು ದಿನಗಳವರೆಗೆ ಇರುತ್ತದೆ ?

ಸಾಮಾನ್ಯವಾಗಿ ವೈರಲ್ ಉಸಿರಾಟದ ಸೋಂಕಿನ ನಂತರ 3ರಿಂದ 8 ವಾರಗಳ ವರೆಗೆ ಇರುವ ಕೆಮ್ಮನ್ನು ಪೋಸ್ಟ್-ಇನ್ಫೆಕ್ಷಿಯಸ್ ಅಥವಾ ಸಬ್‌ಅಕ್ಯೂಟ್ ಕಫ್ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಇದು ಕ್ರಮೇಣ ಕಡಿಮೆಯಾಗುತ್ತದೆ. ಆದರೆ 8 ವಾರಗಳಿಗಿಂತ ಹೆಚ್ಚು ಸಮಯ ಕೆಮ್ಮು ಇದ್ದಲ್ಲಿ ವೈದ್ಯಕೀಯ ತಪಾಸಣೆ ಅಗತ್ಯವಾಗಬಹುದು. ಆಸ್ತಮಾ, ಆಸಿಡ್ ರಿಫ್ಲಕ್ಸ್, ದೀರ್ಘಕಾಲದ ಮೂಗಿನ ಸಮಸ್ಯೆಗಳು ಅಥವಾ ಇತರ ಶ್ವಾಸಕೋಶದ ಕಾಯಿಲೆಗಳಂತಹ ಕಾರಣಗಳನ್ನು ಪರಿಶೀಲಿಸಬೇಕಾಗಬಹುದು.

ಇದನ್ನೂ ಓದಿ: ಮಕ್ಕಳ ರೋಗನಿರೋಧಕ ಶಕ್ತಿಗೆ ಬೇಕು ಪೌಷ್ಟಿಕ ಆಹಾರ; ಪ್ಲೇಟ್ಅಲ್ಲಿ ತಪ್ಪದೆ ಈ 5 ಫುಡ್ಸ್ ಇರಲಿ

ಕೆಮ್ಮಿಗೆ ಆ್ಯಂಟಿಬಯಾಟಿಕ್ ಬೇಕೇ?

ವೈರಲ್ ಸೋಂಕಿನ ಬಳಿಕ ಕಂಡು ಬರುವ ಕೆಮ್ಮಿಗೆ ನೀವೇ ಆ್ಯಂಟಿಬಯಾಟಿಕ್ ತೆಗೆದುಕೊಳ್ಳಬಾರದು. ವೈರಸ್ ವಿರುದ್ಧ ಆ್ಯಂಟಿಬಯಾಟಿಕ್ ಕೆಲಸ ಮಾಡುವುದಿಲ್ಲ. ಅನಗತ್ಯ ಬಳಕೆಯಿಂದ ಅಡ್ಡಪರಿಣಾಮಗಳು ಉಂಟಾಗುವುದರ ಜೊತೆಗೆ ಆ್ಯಂಟಿಬಯಾಟಿಕ್ ರೆಸಿಸ್ಟೆನ್ಸ್ ಅಪಾಯವೂ ಹೆಚ್ಚಬಹುದು. ಬ್ಯಾಕ್ಟೀರಿಯಲ್ ನ್ಯುಮೋನಿಯಾ, ಬ್ಯಾಕ್ಟೀರಿಯಲ್ ಸೈನಸೈಟಿಸ್ ಅಥವಾ ವೂಪಿಂಗ್ ಕಫ್ ಇರಬಹುದು ಎಂಬ ಅನುಮಾನವಿದ್ದಾಗ ಮಾತ್ರ ವೈದ್ಯರ ಸಲಹೆ ಪಡೆದು ಆ ಬಳಿಕ ಆ್ಯಂಟಿಬಯಾಟಿಕ್ ಸೇವನೆ ಮಾಡಬಹುದು.

ಕೆಮ್ಮು ಕಡಿಮೆ ಮಾಡಲು ಏನು ಮಾಡಬಹುದು?

ಸಾಕಷ್ಟು ನೀರು ಕುಡಿಯುವುದು, ಆಗಾಗ ಬೆಚ್ಚಗಿನ ಪಾನೀಯವನ್ನು ಕುಡಿಯುವುದು ಮತ್ತು ಹೊಗೆಯಿಂದ ದೂರವಿರುವುದು ಕೆಮ್ಮು ಕಡಿಮೆ ಮಾಡಲು ಸಹಾಯ ಮಾಡಬಹುದು. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮತ್ತು ವಯಸ್ಕರಿಗೆ ಜೇನುತುಪ್ಪವನ್ನು ಬಳಸಬಹುದು. ಮೂಗಿನ ಸಮಸ್ಯೆ ಇದ್ದರೆ ಸಾಲೈನ್ ನಾಸಲ್ ರಿನ್ಸ್ ಸಹ ಉಪಯುಕ್ತವಾಗಬಹುದು. ಸ್ಟೀಮ್ ಕೆಲವರಿಗೆ ಆರಾಮ ನೀಡಬಹುದು, ಆದರೆ ಬಿಸಿ ನೀರಿನಿಂದ ಸುಟ್ಟ ಗಾಯಗಳಾಗದಂತೆ ಎಚ್ಚರಿಕೆ ವಹಿಸಬೇಕು.

ಈ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ

ಕೆಮ್ಮು ಕ್ರಮೇಣ ಕಡಿಮೆಯಾಗದೆ ಹೆಚ್ಚಾಗುತ್ತಿದ್ದರೆ ಅಥವಾ ಮೂರು ವಾರಗಳ ನಂತರವೂ ಸುಧಾರಣೆ ಕಾಣದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಕೆಮ್ಮಿನೊಂದಿಗೆ ಉಸಿರಾಟದ ತೊಂದರೆ, ಎದೆನೋವು, ವೀಸಿಂಗ್, ಹೆಚ್ಚಿನ ಜ್ವರ, ಕಫದಲ್ಲಿ ರಕ್ತ, ಕಾರಣವಿಲ್ಲದೆ ತೂಕ ಇಳಿಕೆ, ಧ್ವನಿ ಬದಲಾವಣೆ ಅಥವಾ ತೀವ್ರ ದೌರ್ಬಲ್ಯ ಕಂಡುಬಂದರೆ ವಿಶೇಷವಾಗಿ ವೈದ್ಯಕೀಯ ತಪಾಸಣೆ ಅಗತ್ಯ. ಕೆಲವರಿಗೆ ವೈದ್ಯರು ಅಗತ್ಯವಿದ್ದರೆ ಎದೆ ಎಕ್ಸ್-ರೇ, ಕ್ಲಿನಿಕಲ್ ಪರೀಕ್ಷೆ ಅಥವಾ ಲಂಗ್ ಫಂಕ್ಷನ್ ಟೆಸ್ಟ್‌ಗಳನ್ನು ಸೂಚಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ
LIVE: ವಿಧಾನ ಪರಿಷತ್​​ ಕಲಾಪದ ನಾಲ್ಕನೇ ದಿನದ ನೇರಪ್ರಸಾರ
LIVE: ವಿಧಾನ ಪರಿಷತ್​​ ಕಲಾಪದ ನಾಲ್ಕನೇ ದಿನದ ನೇರಪ್ರಸಾರ
ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದು ಯಾರು?
ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದು ಯಾರು?