AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಕೊರೊನಾ ಹಾವಳಿ: ಹೊಸ ರೂಪಾಂತರ ಎಷ್ಟು ಅಪಾಯಕಾರಿ? ಲಸಿಕೆ ಅವುಗಳ ವಿರುದ್ಧ ಪರಿಣಾಮಕಾರಿಯೇ?

ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಈ ಮಧ್ಯೆ, ಎರಡು ಹೊಸ ರೂಪಾಂತರಗಳನ್ನು ಗುರುತಿಸಲಾಗಿದ್ದು ಪ್ರಸ್ತುತ ಲಸಿಕೆಗಳು ಈ ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಜೊತೆಗೆ ಈ ಹಿಂದೆ ಕೋವಿಡ್‌ನ ಬಂದಾಗ ಕಂಡು ಬಂದಿದ್ದ ಲಕ್ಷಣ, ರುಚಿ ಮತ್ತು ವಾಸನೆಯ ನಷ್ಟವು ಈಗ ಬಹುತೇಕ ಕಣ್ಮರೆಯಾಗಿದೆ. ಕೋವಿಡ್ ರೋಗಿಗಳಲ್ಲಿ ಈ ಲಕ್ಷಣ ಕಂಡುಬಂದಿಲ್ಲ. ಹಾಗಾದರೆ ಇದಕ್ಕೆ ಕಾರಣವೇನು? ತಜ್ಞರು ಈ ಬಗ್ಗೆ ಹೇಳುವುದೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

ಮತ್ತೆ ಕೊರೊನಾ ಹಾವಳಿ: ಹೊಸ ರೂಪಾಂತರ ಎಷ್ಟು ಅಪಾಯಕಾರಿ? ಲಸಿಕೆ ಅವುಗಳ ವಿರುದ್ಧ ಪರಿಣಾಮಕಾರಿಯೇ?
ಕೊರೊನಾ ಹೊಸ ರೂಪಾಂತರImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: May 29, 2025 | 4:21 PM

Share

ದೇಶದಲ್ಲಿ ಮತ್ತೊಮ್ಮೆ ಕೊರೊನಾ (Coronavirus) ಹಾವಳಿ ಶುರುವಾಗಿದೆ. ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ ಸಾವಿರ ದಾಟಿದೆ. ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಉಸಿರಾಟ ಸಮಸ್ಯೆ ಮತ್ತು ಹೃದಯಸಂಬಂಧಿ ಕಾಯಿಲೆ ಇರುವವರಿಗೆ ಕಡ್ಡಾಯವಾಗಿ ಕೋವಿಡ್​ ಟೆಸ್ಟ್​ ಮಾಡುವಂತೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ (Dinesh Gundu Rao)​ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಮಧ್ಯೆ, ವೈರಸ್‌ನ ಎರಡು ಹೊಸ ರೂಪಾಂತರ NB.1.8.1 ಮತ್ತು LF.7 ಪತ್ತೆ ಹಚ್ಚಲಾಗಿದೆ. ಇದು ಮತ್ತೊಮ್ಮೆ ಜನರಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಈ ರೂಪಾಂತರಗಳಿಂದ ಸೋಂಕಿಗೆ ಒಳಗಾದ ರೋಗಿಗಳಲ್ಲಿ ಶೀತ, ಕೆಮ್ಮು, ಸೌಮ್ಯ ಜ್ವರ ಮತ್ತು ದೇಹದ ನೋವುಗಳಂತಹ ಸೌಮ್ಯ ಲಕ್ಷಣಗಳು ಕಂಡು ಬಂದಿದೆ ಎಂಬುದು ವರದಿಯಾಗಿದೆ. ತಜ್ಞರ ಪ್ರಕಾರ, ಈ ರೂಪಾಂತರಗಳ ಬಗ್ಗೆ ಹೆಚ್ಚಿನ ಮೇಲ್ವಿಚಾರಣೆ ಮಾಡಲಾಗುತ್ತಿದ್ದು ಅವುಗಳ ಲಕ್ಷಣ, ಪ್ರಸರಣ ಸಾಮರ್ಥ್ಯ ಮತ್ತು ತೀವ್ರತೆಯ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಆರಂಭದಲ್ಲಿ, ಈ ಲಕ್ಷಣಗಳು ಸೌಮ್ಯವಾಗಿದ್ದರೂ ಕೂಡ ಇದನ್ನು ನಿರ್ಲಕ್ಷಿಸಿದರೆ, ಸೋಂಕು ತೀವ್ರವಾಗಬಹುದಾಗಿದೆ. ಹಾಗಾದರೆ ಈ ಹೊಸ ರೂಪಾಂತರಗಳು ಎಷ್ಟು ಅಪಾಯಕಾರಿ? ಲಸಿಕೆಗಳು ಅವುಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯೇ? ಈ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಲಸಿಕೆ ಪರಿಣಾಮಕಾರಿಯಾಗಿದೆಯೇ?

ಡಾ. ಅಜಯ್ ಕುಮಾರ್ ಅವರು ನೀಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ಕೊರೊನಾ ವೈರಸ್ ರೂಪಾಂತರಗಳಿಗೆ ಜನರು ಹೆದರುವ ಅವಶ್ಯಕತೆ ಇರುವುದಿಲ್ಲ. ವೈರಸ್ ಕಾಲಾನಂತರದಲ್ಲಿ ಬದಲಾವಣೆಗಳಿಗೆ ಒಳಗಾಗುತ್ತದೆ, ಇದನ್ನು ರೂಪಾಂತರಗಳು ಎಂದು ಕರೆಯಲಾಗುತ್ತದೆ, ಇದು ಮತ್ತೆ ಹೊಸ ರೂಪಾಂತರಗಳ ರಚನೆಗೆ ಕಾರಣವಾಗುತ್ತದೆ. ಈ ರೂಪಾಂತರಗಳ ವಿರುದ್ಧ ಲಸಿಕೆಯ ಪರಿಣಾಮ ಸ್ವಲ್ಪ ಕಡಿಮೆಯಾಗಬಹುದಾದರೂ, ಲಸಿಕೆ ನಿಷ್ಪರಿಣಾಮಕಾರಿಯಾಗಿದೆ ಎಂಬುದು ಇದರ ಅರ್ಥವಲ್ಲ. ಲಸಿಕೆಯು ಸೋಂಕನ್ನು ಎದುರಿಸಲು ನಮ್ಮ ದೇಹವನ್ನು ಸಿದ್ಧಪಡಿಸುತ್ತದೆ. ಹಾಗಾಗಿ ಲಸಿಕೆಯ ಎರಡೂ ಡೋಸ್‌ಗಳನ್ನು ಅಥವಾ ಬೂಸ್ಟರ್ ಡೋಸ್ ಅನ್ನು ಪಡೆದ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

ಇನ್ನು, ಲಸಿಕೆಯ ಪ್ರಭಾವದಿಂದ ರೋಗನಿರೋಧಕ ಶಕ್ತಿ ಜಾಸ್ತಿಯಾಗಿರುವುದರಿಂದ, ಇದರ ಪರಿಣಾಮವಾಗಿ, ವೈರಸ್ ದೇಹದಲ್ಲಿ ಹರಡುವ ಸಾಮರ್ಥ್ಯ ಮತ್ತು ತೀವ್ರವಾಗಿ ಕಂಡುಬರುವ ಲಕ್ಷಣಗಳು ಕಡಿಮೆಯಾಗಿವೆ. ಇದು ಹೊಸ ಸಂಶೋಧನೆಗಳಿಂದಲೂ ಬಹಿರಂಗಗೊಂಡಿದ್ದು ಅಮೆರಿಕ ಮತ್ತು ಯುರೋಪ್‌ನಲ್ಲಿ ನಡೆಸಿದ ಅಧ್ಯಯನ ಕೋವಿಡ್ ಸೋಂಕಿಗೆ ಒಳಗಾದ 90% ಕ್ಕಿಂತ ಹೆಚ್ಚು ರೋಗಿಗಳಲ್ಲಿ ರುಚಿ ಅಥವಾ ವಾಸನೆಯ ನಷ್ಟವಾಗುವುದು ಅನುಭವಕ್ಕೆ ಬಂದಿಲ್ಲ ಎಂದು ಹೇಳಿದೆ. ಆದರೆ, ಇದರ ಅರ್ಥ ಇನ್ನು ಮುಂದೆ ಕಂಡು ಬರುವ ವೈರಸ್ ಅಪಾಯಕಾರಿಯಲ್ಲ ಎಂದಲ್ಲ. ಕೆಲವು ಹೊಸ ರೂಪಾಂತರಗಳು ಜ್ವರ, ತಲೆನೋವು, ಕೆಮ್ಮು ಮತ್ತು ಆಯಾಸದಂತಹ ತೀವ್ರ ಲಕ್ಷಣಗಳು ಕಂಡುಬರಬಹುದು. ಆದ್ದರಿಂದ, ಈ ವಿಷಯದಲ್ಲಿ ಎಚ್ಚರಿಕೆ ಮತ್ತು ಜಾಗರೂಕತೆ ಅಗತ್ಯ.

ಇದನ್ನೂ ಓದಿ
Image
ಮತ್ತೆ ಬಂತು ಮಹಾಮಾರಿ, ಈ ಬಾರಿ ಈ ಎಚ್ಚರವಹಿಸಲೇಬೇಕು
Image
ಮಕ್ಕಳಿಗೆ ಕೊರೊನಾ ಬರದಂತೆ ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್
Image
ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ: ಇನ್ಮುಂದೆ ಕೋವಿಡ್ ಟೆಸ್ಟ್ ಕಡ್ಡಾಯ
Image
ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋವಿಡ್: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಹೊಸ ರೂಪಾಂತರದಲ್ಲಿ ಹಳೆ ಲಕ್ಷಣಗಳು ಕಂಡುಬರುತ್ತದೆಯೇ?

ಕೊರೊನಾ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡಾಗ ಹಲವಾರು ರೀತಿಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇಂತಹ ಲಕ್ಷಣಗಳಲ್ಲಿ ಒಂದು ರುಚಿ ಮತ್ತು ವಾಸನೆಯ ನಷ್ಟ, ಅಂದರೆ ಸೋಂಕಿತ ವ್ಯಕ್ತಿಯು ಆಹಾರದ ರುಚಿ ಮತ್ತು ವಾಸನೆಯನ್ನು ತಿಳಿಯಲು ಸಾಧ್ಯವಾಗದಿರುವಂತಹ ಸ್ಥಿತಿ. ಆದರೆ ಈಗ, ಈ ರೀತಿಯ ರೋಗಲಕ್ಷಣ ಕೊರೊನಾ ವೈರಸ್‌ನ ಹೊಸ ರೂಪಾಂತರದಲ್ಲಿ ಕಡಿಮೆಯಾಗಿರುವುದನ್ನು ವೈದ್ಯರು ಗಮನಿಸಿದ್ದಾರೆ. ತಜ್ಞ ಡಾ. ಜುಗಲ್ ಕಿಶೋರ್ ಅವರ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ, ಕೋವಿಡ್ ರೋಗಿಗಳಲ್ಲಿ ಈ ಲಕ್ಷಣ ಕಂಡುಬಂದಿಲ್ಲ. ಓಮಿಕ್ರಾನ್ ರೂಪಾಂತರ ಬಂದ ಮೇಲೆ ವೈರಸ್‌ನ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿದೆ. ಓಮಿಕ್ರಾನ್ ಈಗ ಗಂಟಲು ಮತ್ತು ಮೂಗನ್ನು ಬಿಟ್ಟು ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದಲ್ಲಿ ಹೆಚ್ಚು ಸಕ್ರಿಯವಾಗಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅದಕ್ಕಾಗಿಯೇ ಇದು ಮೂಗಿನೊಳಗಿನ ವಾಸನೆಗೆ ಸಂಬಂಧಿಸಿದ ನರಗಳ ಮೇಲೆ ಮೊದಲಿನಂತೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ನಿಮ್ಮನ್ನು ಕೊರೊನಾ ಕಾಡಬಾರದೆಂದರೆ ತಪ್ಪದೇ ಈ ಸಲಹೆ ಪಾಲಿಸಿ

ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು?

ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸಿ.

ಸೋಪ್ ಅಥವಾ ಸ್ಯಾನಿಟೈಸರ್ ಬಳಸಿ ನಿಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ.

ಜ್ವರ, ಶೀತ ಅಥವಾ ಕೆಮ್ಮು ಇದ್ದರೆ, ನಿಮ್ಮನ್ನು ಪ್ರತ್ಯೇಕಿಸಿ ಮತ್ತು ಪರೀಕ್ಷೆಗೆ ಒಳಪಡಿಸಿ.

ಸಮತೋಲಿತ ಆರೋಗ್ಯಕರ ಆಹಾರ ಮತ್ತು ವ್ಯಾಯಾಮ ಮಾಡುವ ಅಭ್ಯಾಸವಿರಲಿ.

ಶೀತ ಅಥವಾ ಜ್ವರ ಕಂಡುಬಂದಾಗ ಅದನ್ನು ಲಘುವಾಗಿ ಪರಿಗಣಿಸಬೇಡಿ.

ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಮರೆಯಬೇಡಿ.

ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳನ್ನು ಬಳಸುವುದನ್ನು ಮರೆಯಬೇಡಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!