ಹಾಲಿನೊಂದಿಗೆ ಈ ಕೆಲವು ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸಲೇಬಾರದು; ಯಾವುವು? ಮಾಹಿತಿ ಇಲ್ಲಿದೆ

| Updated By: shruti hegde

Updated on: Jul 01, 2021 | 1:48 PM

ನಾಲಿಗೆಗೆ ರುಚಿ ನೀಡುವ ಕೆಲವು ಆಹಾರ ಪದಾರ್ಥಗಳು ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಹಾಗಾಗಿ ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿವಹಿಸಿ.

ಹಾಲಿನೊಂದಿಗೆ ಈ ಕೆಲವು ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸಲೇಬಾರದು; ಯಾವುವು? ಮಾಹಿತಿ ಇಲ್ಲಿದೆ
ಹಾಲು
Follow us on

ಪೌಷ್ಠಿಕಾಂಶಯುಕ್ತ ಅಹಾರವನ್ನು ನಾವು ಸೇವಿಸುವಾಗ ರುಚಿಕರವಾಗರುತ್ತದೆ ಎಂದು ವಿವಿಧ ಆಹಾರಗಳನ್ನು ಮಿಶ್ರಣ ಮಾಡಿ ಸೇವಿಸುತ್ತೇವೆ. ಮಿಲ್ಕ್​ಶೇಕ್​, ಸಲಾಡ್​ ಎನ್ನುತ್ತಾ ಹೊಸ ಹೊಸ ಪ್ರಯತ್ನದೊಂದಿಗೆ ರುಚಿಕರವಾದ ತಿಂಡಿಗಳನ್ನು ಸವಿಯುತ್ತೇವೆ. ಆದರೆ ಕೆಲವು ಆಹಾರ ಪದಾರ್ಥಗಳು ಮಿಶ್ರಣ ಮಾಡಿ ಸೇವಿಸುವುದು ಆರೋಗ್ಯಕ್ಕೆ ಸಮಸ್ಯೆಯನ್ನು ತಂದೊಡ್ಡಬಹುದು ಎಂದು ನಿಮಗೆ ತಿಳಿದಿದೆಯೇ? ಆಹಾರ ವಿಶ್ರಣವು ಹೊಟ್ಟೆನೋವು, ಹೊಟ್ಟೆ ಉಬ್ಬುವ ಸಮಸ್ಯೆ, ಆಯಾಸ, ಗ್ಯಾಸ್​ ಮತ್ತು ಅಸ್ವಸ್ಥತೆಯಂತಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ದೀರ್ಘಕಾಲದವರೆಗೆ ತಪ್ಪಾದ ಆಹಾರ ಕ್ರಮವನ್ನೇ ಸೇವಿಸುತ್ತಿದ್ದರೆ ಅದು ಉಸಿರಾಟ ತೊಂದರೆಯನ್ನುಂಟು ಮಾಡಬಹುದು. ಜತೆಗೆ ದೀರ್ಘಕಾಲದವರೆಗೆ ಜೀರ್ಣಕ್ರಿಯೆ ತೊಂದರೆಗೆ ಕಾರಣವಾಗಬಹುದು.

ವಿವಿಧ ಪೌಷ್ಠಿಕ ಆಹಾರವನ್ನು ಸೇವಿಸುವುದರ ಜತೆಗೆ ನಾವು ಹಾಲನ್ನು ಹೆಚ್ಚು ಉಪಯೋಗಿಸುತ್ತೇವೆ. ಹಾಲು ಕೆಲವರಿಗೆ ಅತ್ಯಂತ ಇಷ್ಟವಾದ ಆಹಾರ ಕೂಡಾ ಹೌದು. ಜತೆಗೆ ಫ್ರೂಟ್​ ಸಲಾಡ್​, ಐಸ್​ಕ್ರೀಮ್​, ಸ್ವೀಟ್ಸ್​ ಹೀಗೆ ಅನೇಕ ವಿವಿಧ ರುಚಿಯಾದ ತಿಂಡಿಯನ್ನು ಮಾಡಿ ಸವಿಯುತ್ತೇವೆ. ಆದರೆ ಕೆಲವು ಹಣ್ಣುಗಳನ್ನು ಅಥವಾ ಆಹಾರವನ್ನು ಹಾಲಿನೊಂದಿಗೆ ಬೆರೆಸಲೇಬಾರದು. ಈ ಮಿಶ್ರಣವು ನಿಮ್ಮ ಆರೋಗ್ಯದ ಮೇಲೆ ಅಡ್ಡಪಡಿಣಾಮವನ್ನು ಉಂಟು ಮಾಡುತ್ತವೆ. ಅಂತಹ ಆಹಾರ ಯಾವುದು ಎಂಬುದರ ಬಗ್ಗೆ ತಿಳಿಯೋಣ.

ಹಾಲಿನೊಂದಿಗೆ ಬೆರೆಸಲೇಬಾರದ ಕೆಲವು ಆಹಾರಗಳು
ಮೊಟ್ಟೆ, ಮಾಂಸ ಮತ್ತು ಮೀನು
ಮೀನು, ಮೊಟ್ಟೆ ಹಾಗೂ ಮಾಂಸಗಳನ್ನು ಹಾಲಿನೊಂದಿಗೆ ಸೇವಿಸುತ್ತಿದ್ದರೆ ಅದನ್ನು ಆದಷ್ಟು ತಪ್ಪಿಸಿ. ಏಕೆಂದರೆ ಇದು ಜೀರ್ಣಕಾರಿ ಸಮಸ್ಯೆಯನ್ನು ತಂದೊಡ್ಡುತ್ತದೆ. ಜತೆಗೆ ಹೊಟ್ಟೆ ಉಬ್ಬುವುದು. ಹೊಟ್ಟೆ ನೋವಿನಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಹುಳಿ ಪದಾರ್ಥಗಳು
ನೀವು ಸಿಟ್ರಸ್​ ಮತ್ತು ಆಮ್ಲೀಯ ಆಹಾರ ಪದಾರ್ಥಗಳನ್ನು ಯಾವಾಗಲೂ ಮಿಶ್ರಣ ಮಾಡಿ ಸೇವಿಸಬಾರದು. ವಿಟಮಿನ್​ ಸಿ ಪೌಷ್ಠಿಕಾಂಶದಿಂದ ಸಮೃದ್ಧವಾಗಿರುವ ಹಣ್ಣುಗಳನ್ನು ಹಾಲಿನೊಂದಿಗೆ ಸಂಯೋಜಿಸಬಾರದು. ಹಾಲು ಜೀರ್ಣಗೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಹಾಲು, ಲಿಂಬು ಮತ್ತು ಯಾವುದೇ ಸಿಟ್ರಸ್​ ಸಮೃದ್ಧವಾದ ಹಣ್ಣನ್ನು ಮಿಶ್ರಣ ಮಾಡಿದರೆ ಹಾಲು ಹೆಪ್ಪುಗಟ್ಟುತ್ತದೆ. ಇದು ನಿಮ್ಮ ಆರೋಗ್ಯದಲ್ಲಿ ಹೆಚ್ಚು ಪರಿಣಾಮವನ್ನು ಉಂಟು ಮಾಡುತ್ತದೆ.

ಬಾಳೆಹಣ್ಣು
ಹಾಲು ಮತ್ತು ಬಾಳೆಹಣ್ಣು ಎರಡೂ ಕೂಡಾ ತೂಕವನ್ನು ಹೆಚ್ಚಿಸಲು ಸಹಾಯ ಮಾಡುವ ಪದಾರ್ಥಗಳು. ಆದರೆ ಇವೆರಡನ್ನೂ ಒಟ್ಟಿಗೆ ಸೇವಿಸುವದರಿಂದ ಜೀರ್ಣಕ್ರಿಯೆ ಕಷ್ಟವಾಗಿತ್ತದೆ. ದೇಹಕ್ಕೆ ಹೆಚ್ಚು ಆಯಾಸವನ್ನು ಉಂಟು ಮಾಡುತ್ತದೆ. ಸಾಮಾನ್ಯವಾಗಿ ಬಾಳೆಹಣ್ಣಿನ ಮಿಲ್ಕ್​ಶೇಕ್​ಅನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಹೀಗಿರುವಾಗ ಮಿಲ್ಕ್​ಶೇಕ್​ಗೆ ಸ್ವಲ್ಪ ದಾಲ್ಚಿನ್ನಿ ಅಥವಾ ಜಾಯಿಕಾಯಿ ಪುಡಿಯನ್ನು ಸೇರಿಸಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮೊಸರು
ನೀವು ಹಾಲು ಮತ್ತು ಮೊಸರನ್ನು ಯಾವಾಗಲೂ ಮಿಶ್ರಣ ಮಾಡಿ ಸೇವಿಸಬಾರದು. ಆಯುರ್ವೇದದ ಪ್ರಕಾರ ಹೊಟ್ಟೆಯ ತೊಂದರೆ ಉಂಟಾಗಲು ಮುಖ್ಯವಾದ ಕಾರಣ ಹಾಲು ಮತ್ತು ಮೊಸರನ್ನು ಮಿಶ್ರಣ ಮಾಡಿ ಸೇವಿಸುವುದು. ಸಾಮಾನ್ಯವಾಗಿ ವಯಸ್ಕರು ರುಚಿಗೋಸ್ಕರ ಹಾಲು ಮತ್ತು ಮೊಸರನ್ನು ಒಟ್ಟಿಗೆ ಅನ್ನದ ಜೊತೆ ಕಲಸಿ ಊಟ ಮಾಡುತ್ತಾರೆ. ಜೀರ್ಣಕ್ರಿಯೆಗೆ ತೊಂದರೆಯುಂಟಾಗುವ ಇಂತಹ ಆಹಾರ ಪದಾರ್ಥಗಳು ಅನಾರೋಗ್ಯವನ್ನು ತಂದೊಡ್ಡುತ್ತದೆ.

ಮೂಲಂಗಿ
ಹಾಲು ಸಂಪೂರ್ಣ ಆಹಾರ. ಇದರೊಂದಿಗೆ ಇತರ ಪದಾರ್ಥಗಳನ್ನು ಸೇವಿಸಬಾರದು. ಮೂಲಂಗಿ ಸೇವಿಸುತ್ತಾ ಜತೆಗೆ ಹಾಲನ್ನು ಸೇವಿಸುವ ಅಭ್ಯಾಸ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಜತೆಗೆ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ.

ಸೂಚನೆ: ಇಂದಿನಿಂದಲೇ ನೀವು ನಿಮ್ಮ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಿ. ನಾಲಿಗೆಗೆ ರುಚಿ ನೀಡುವ ಕೆಲವು ಆಹಾರ ಪದಾರ್ಥಗಳು ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಹಾಗಾಗಿ ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿವಹಿಸಿ. ಆರೋಗ್ಯದಲ್ಲಿ ಏನೇ ಏರು-ಪೇರು ಕಂಡು ಬಂದರೂ ಸಹ ಹತ್ತಿರದ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

ಇದನ್ನೂ ಓದಿ:

Health Benefits: ಹಾಲು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ದರೆ ಸೇವಿಸುವ ಸಮಯದ ಬಗ್ಗೆ ತಿಳಿಯವುದನ್ನು ಮರೆಯಬೇಡಿ

Health Tips: ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗಾಗಿ ಒಂದಿಷ್ಟು ಸಲಹೆಗಳು