ನಮ್ಮ ಬೇರೆಲ್ಲಾ ಭಾವನೆಗಳಿಗಿಂತ ಆತಂಕವನ್ನು ಮರೆಮಾಚುವುದು ಅತ್ಯಂತ ಕಷ್ಟಕರವಾದ ಪ್ರಕ್ರಿಯೆ. ನಮ್ಮ ಭಾವನೆಗಳು ಹಂಚಿಕೊಳ್ಳಲು ಯೋಗ್ಯವಲ್ಲ ಎಂದು ನಾವು ಭಾವಿಸಿದಾಗ, ಆತಂಕವನ್ನು ಇತರ ಭಾವನೆಗಳೊಂದಿಗೆ ಮರೆ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಆತಂಕ ಮುಚ್ಚಿಡಲು ಸಾಧ್ಯವಿಲ್ಲ. ಈ ವಿಷಯವನ್ನು ಉದ್ದೇಶಿಸಿ, ತಜ್ಞರಾದ ಅಂಬರ್ ಸ್ಮಿತ್ ಕೆಲವು ಉಪಯೋಗಕರ ಸಂಗತಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ, ಅದೆನೆಂದರೆ "ಆತಂಕವನ್ನು ಮರೆಮಾಚುವುದು ತುಂಬಾ ದುಃಖಕರವಾಗಿರುತ್ತದೆ. ಜೊತೆಗೆ ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ನಾವು ಹೆಚ್ಚು ಹೆಚ್ಚು ಪ್ರತಿರೋಧಿಸಿದಷ್ಟೂ ಅದು ಕೆಟ್ಟದಾಗಿ ತೋರಬಹುದು. ನಮ್ಮ ಆತಂಕವನ್ನು ನಿಭಾಯಿಸಲು ಹೊಸ ಮಾರ್ಗಗಳನ್ನು ಕಂಡುಹಿಡಿಯುವುದು ಮಾತ್ರ ಇದಕ್ಕೆ ಪರಿಹಾರವನ್ನು ನೀಡಬಹುದು, ಇದರಿಂದ ನಮನ್ನು ಆತಂಕದಿಂದ ನಿಯಂತ್ರಿಸಲ್ಪಡುವುದನ್ನು ನಿಲ್ಲಿಸಬಹುದು" ಎಂದಿದ್ದಾರೆ. ಆತಂಕವನ್ನು ಮರೆಮಾಚಲು ನಾವು ಪ್ರಯತ್ನಿಸುವ ಕೆಲವು ಮಾರ್ಗಗಳ ಬಗ್ಗೆ ಅಂಬರ್ ಮತ್ತಷ್ಟು ಬೆಳಕು ಚೆಲ್ಲಿದ್ದಾರೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.