ರೆಮಿಡೆಸಿವಿರ್ ಸಹ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸುತ್ತದೆ ಎನ್ನುತ್ತಾರೆ ವೈದ್ಯರು!
ಕೋವಿಡ್-19 ಸೋಂಕಿನ ಪ್ರಮಾಣ ಹೆಚ್ಚಾಗಿದ್ದರೆ ಅಂಥ ರೋಗಿಗಳಿಗೆ ವೈದ್ಯರು ರೆಮಿಡೆಸಿವಿರ್ ಇಂಜೆಕ್ಷನ್ ನೀಡುತ್ತಾರೆ. ಹಾಗಾಗೇ ಈ ಇಂಜೆಕ್ಷನ್ ಮಾರುಕಟ್ಟೆಯಲ್ಲಿ ಸಿಗದಂಥ ಸ್ಥಿತಿ ನಿರ್ಮಾಣವಾಗಿದೆ
ಕೊರೊನಾ ಪಿಡುಗು ದಿನಕ್ಕೊಂದು ಬಗೆಯ ಆತಂಕವನ್ನು ಸೃಷ್ಟಿಸುತ್ತಿದೆ. ನಮಗೆಲ್ಲ ಗೊತ್ತಿರುವ ಹಾಗೆ ಚಿಕಿತ್ಸೆ ಸಂದರ್ಭದಲ್ಲಿ ಸೋಂಕಿತರಿಗೆ ಸ್ಟಿರಾಯ್ಡ್ಗಳನ್ನು ನೀಡಲಾಗುತ್ತದೆ. ಇವುಗಳನ್ನು ತೆಗೆದುಕೊಂಡರೆ ರೋಗದಿಂದ ಗುಣಮುಖರಾಗುವ ಅವಧಿ ತ್ವರಿತಗೊಳ್ಳುತ್ತದಾದರೂ ಅವು ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚುಸುತ್ತಿವೆ. ಅದಾಗಲೇ ಕೊರೊನಾ ಸೋಂಕಿನಿಂದ ತತ್ತರಿಸಿರುವ ರೋಗಿಗಳಲ್ಲಿ ಇದು ಮತ್ತಷ್ಟು ಭೀತಿಯನ್ನು ಹುಟ್ಟಿಸುತ್ತಿದೆ. ಈಗ ಬೆಳಕಿಗೆ ಬಂದಿರುವ ಮತೊಂದು ಸಂಗತಿಯೇನೆಂದರೆ, ರೆಮಿಡೆಸಿವಿರ್ ಔಷಧಿ ಸಹ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ.
ಕೋವಿಡ್-19 ಸೋಂಕಿನ ಪ್ರಮಾಣ ಹೆಚ್ಚಾಗಿದ್ದರೆ ಅಂಥ ರೋಗಿಗಳಿಗೆ ವೈದ್ಯರು ರೆಮಿಡೆಸಿವಿರ್ ಇಂಜೆಕ್ಷನ್ ನೀಡುತ್ತಾರೆ. ಹಾಗಾಗೇ ಈ ಇಂಜೆಕ್ಷನ್ ಮಾರುಕಟ್ಟೆಯಲ್ಲಿ ಸಿಗದಂಥ ಸ್ಥಿತಿ ನಿರ್ಮಾಣವಾಗಿದೆ. ರೆಮಿಡೆಸಿವಿರ್ ಕೊವಿಡ್-19 ನಿಂದ ಬಳಲುತ್ತಿರುವವರ ಪ್ರಾಣ ಉಳಿಸುತ್ತದೆ ಎಂದು ವೈದ್ಯರು ಹೇಳುವುದು ನಿಜವೇ ಆದರೂ ಅದು ಕೇವಲ ನಾಣ್ಯದ ಒಂದು ಭಾಗವನದನು ಮಾತ್ರ ವ್ಯಾಖ್ಯಾನಿಸುತ್ತದೆ.
ರೆಮಿಡೆಸಿವಿರ್ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂಬ ಅಂಶವನ್ನು ವೈದ್ಯರು ಕಂಡುಕೊಂಡಿದ್ದಾರೆ. ಕೆಲವು ಸೋಂಕಿತರಲ್ಲಿ ಮಧುಮೇಹದ ಸಮಸ್ಯೆ ಇಲ್ಲದಾಗ್ಯೂ ರೆಮಿಡೆಸಿವಿರ್ ಇಂಜೆಕ್ಷನ್ ತೆಗೆದುಕೊಂಡ ಕಾರಣ ಅದು ಕಾಣಿಸಿಕೊಂಡಿದೆ.ಕೊರೊನಾದಿಂದ ಮುಕ್ತರಾದರೂ ಮಧುಮೇಹವನ್ನು ದೇಹದಲ್ಲಿ ತುಂಬಿಕೊಂಡು ಮನೆಗಳಿಗೆ ಅವರು ಹಿಂತಿರುಗಿದ್ದಾರೆ.
ಹಾಗಾಗೇ, ರೆಮಿಡೆಸಿವಿರ್ ಇಂಜೆಕ್ಷನ್ಗಳನ್ನು ಸೋಂಕಿತರಿಗೆ ನೀಡುವ ಮೊದಲು ಎರಡೆರಡು ಬಾರಿ ಯೋಚಿಸುವ ಅನಿವಾರ್ಯತೆ ವೈದ್ಯರಿಗೆ ಎದುರಾಗಿದೆ. ರಾಜಸ್ತಾನಲ್ಲಿ ಒಂದು ಆಧ್ಯಯನ ನಡೆಸಿದ ನಂತರ ಕೊರೊನಾದಿಂದ ನರಳುತ್ತಿರುವ ಮಧುಮೇಹಿಗಳಿಗೆ ರೆಮಿಡೆಸಿವಿರ್ ಇಂಜೆಕ್ಷನ್ ಕೊಡದಿರುವ ಬಗ್ಗೆ ಅಲ್ಲಿನ ವೈದ್ಯರು ತೀರ್ಮಾನಕ್ಕೆ ಬಂದಿದ್ದಾರೆ.
ಸ್ಟಿರಾಯ್ಡ್ಗಳ ಜೊತೆಗೆ ರೆಮಿಡಿಸಿವಿರ್ ಇಂಜೆಕ್ಷನ್ ತೆಗೆದುಕೊಂಡ ರೋಗಿಗಳಲ್ಲಿ ಸಕ್ಕರೆ ಪ್ರಮಾಣ 5 ರಿಂದ 10 ಪರ್ಸೆಂಟ್ನಷ್ಟು ಹೆಚ್ಚಾಗುತ್ತದೆ ಎಂದು ಡಾಕ್ಟರ್ಗಳು ಹೇಳುತ್ತಾರೆ. ಈ ಕಾರಣಕ್ಕಾಗೇ ರೆಮಿಡೆಸಿವಿರ್ ಇಂಜೆಕ್ಷನ್ ತೆಗೆದುಕೊಂಡ ಸೋಂಕಿತರ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಸದಾ ಮಾನಿಟರ್ ಮಾಡಬೇಕಿದೆ. ಅವರಲ್ಲಿ ಸಕ್ಕರೆ ಪ್ರಮಾಣ ತಹಬದಿಗೆ ತರಲು ಇನ್ಸುಲಿಲ್ ಅನ್ನು ವೈದ್ಯರು ನೀಡುತ್ತಿದ್ದಾರೆ.
ಆದರೆ ಬೇರೆ ಕೆಲವು ಡಾಕ್ಟರ್ಗಳಿ ಸ್ಟಿರಾಯ್ಡ್ಗಳನ್ನು ಸೀಡಿದಾಗ ಸಹಜವಾಗೇ ರಕ್ತದ ಪ್ರಮಾಣ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಒಮ್ಮೆ ಅವುಗಳ ಬಳಕೆ ನಿಲ್ಲಿಸಿದರೆ ಸಕ್ಕರೆ ಪ್ರಮಾಣ ತಾನಾಗಿಯೇ ಇಳಿಯುತ್ತದೆ ಅಂತ ಅವರು ಹೇಳುತ್ತಾರೆ.
ಇದನ್ನೂ ಓದಿ: Remdesivir: ರೆಮಿಡಿಸಿವರ್ ಇಂಜೆಕ್ಷನ್ಗೆ ಬಾಲಿವುಡ್ ಕೊರಿಯೋಗ್ರಾಫರ್ ಹೆಸರು; ಫನ್ನಿ ವಿಡಿಯೋ ವೈರಲ್