AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಾಗ ತಲೆನೋವು ಬರುತ್ತಾ? ನಿರ್ಲಕ್ಷ್ಯ ಮಾಡಬೇಡಿ, ಇದು ಈ ಸಮಸ್ಯೆಗಳ ಮುನ್ಸೂಚನೆಯಾಗಿರಬಹುದು

ಕೆಲವರು ತಲೆನೋವು ಬಂದಾಗ, ಒಂದು ಮಾತ್ರೆ ತೆಗೆದುಕೊಂಡು ಅದರಿಂದ ಮುಕ್ತಿ ಪಡೆಯುತ್ತಾರೆ. ಆದರೆ ನಿಮಗೆ ಆಗಾಗ ತಲೆನೋವು ಬರುತ್ತಿದ್ದರೆ, ನೀವು ಬಹಳ ಜಾಗರೂಕರಾಗಿರಬೇಕಾಗುತ್ತದೆ. ಸಾಮಾನ್ಯವಾಗಿ ತಲೆನೋವಿನ ಬಗ್ಗೆ ಯಾರೂ ಕೂಡ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಪದೇ ಪದೇ ತಲೆನೋವು ಬರುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಇದು ಇತರ ಅನೇಕ ಆರೋಗ್ಯ ಸಮಸ್ಯೆಗಳ ಸೂಚಕವಾಗಿರಬಹುದು. ಹಾಗಾದರೆ, ಯಾವ ಸಮಸ್ಯೆಗಳು ಆಗಾಗ ತಲೆನೋವಿಗೆ ಕಾರಣವಾಗುತ್ತವೆ ಮತ್ತು ಈ ರೀತಿಯಾದಾಗ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಆಗಾಗ ತಲೆನೋವು ಬರುತ್ತಾ? ನಿರ್ಲಕ್ಷ್ಯ ಮಾಡಬೇಡಿ, ಇದು ಈ ಸಮಸ್ಯೆಗಳ ಮುನ್ಸೂಚನೆಯಾಗಿರಬಹುದು
Headache
ಪ್ರೀತಿ ಭಟ್​, ಗುಣವಂತೆ
|

Updated on: Jul 21, 2025 | 6:30 PM

Share

ಇತ್ತೀಚಿನ ದಿನಗಳಲ್ಲಿ ತಲೆನೋವು ಎನ್ನುವಂತಹದ್ದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಆದರೆ ಕೆಲವರಿಗೆ ಇದು ಆಗಾಗ ಕಂಡುಬರುತ್ತದೆ. ಹಾಗಾಗಿ ಆ ಕ್ಷಣಕ್ಕೆ ಅವರು ಅದನ್ನು ಕಡಿಮೆ ಮಾಡಿಕೊಳ್ಳಲು ತ್ವರಿತ ಪರಿಹಾರಗಳನ್ನು ಹುಡುಕುತ್ತಾರೆ. ಔಷಧಿ ತೆಗೆದುಕೊಳ್ಳುವುದು ಅಥವಾ ಮಸಾಜ್ ಮಾಡಿಸಿಕೊಳ್ಳುವುದು ಹೀಗೆ ವೇಗವಾಗಿ ಕೆಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಹುಡುಕುತ್ತಾರೆ. ಸಾಮಾನ್ಯವಾಗಿ ಕೆಲಸ ಹೆಚ್ಚಾದಾಗ ಅಥವಾ ನಿದ್ರೆ ಸಾಕಾಗದಿದ್ದಾಗ ಈ ರೀತಿಯ ಸಮಸ್ಯೆಗಳು ಕಂಡುಬರುತ್ತದೆ. ಆದರೆ ಪದೇ ಪದೇ ತಲೆನೋವು (Headache) ಬರುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಇದು ಇತರ ಅನೇಕ ಆರೋಗ್ಯ ಸಮಸ್ಯೆಗಳ ಸೂಚಕವಾಗಿರಬಹುದು. ಅನೇಕ ಜನರು ತಲೆನೋವು ಬಂದಾಗ ಸ್ವಲ್ಪ ಔಷಧಿ ತೆಗೆದುಕೊಂಡು ಸುಮ್ಮನಿರುತ್ತಾರೆ. ಆದರೆ ಈ ನಿರ್ಲಕ್ಷ್ಯ ದೀರ್ಘಕಾಲೀನ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ, ಯಾವ ಸಮಸ್ಯೆಗಳು ಆಗಾಗ ತಲೆನೋವಿಗೆ ಕಾರಣವಾಗುತ್ತವೆ ಮತ್ತು ಈ ರೀತಿಯಾದಾಗ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ನಿರ್ಜಲೀಕರಣ

ದೇಹದಲ್ಲಿ ನೀರಿನ ಅಂಶ ಅಗತ್ಯಕ್ಕಿಂತ ಕಡಿಮೆಯಾದಾಗ ತಲೆನೋವು ಬರುತ್ತದೆ. ಅಂದರೆ ದೇಹವು ನಿರ್ಜಲೀಕರಣಗೊಂಡಾಗ ತೀವ್ರ ತಲೆನೋವು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಅನೇಕ ಜನರನ್ನು ಕಾಡುವಂತಹ ಸಮಸ್ಯೆ. ದೇಹವು ನಿರ್ಜಲೀಕರಣಗೊಂಡಾಗಲೆಲ್ಲಾ ಅದು ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ತಲೆನೋವು ಬರುತ್ತದೆ. ನಿಮಗೂ ಕೂಡ ಆಗಾಗ ತಲೆನೋವು ಕಂಡುಬರುತ್ತಿದ್ದರೆ, ನಿಮ್ಮ ದೇಹ ಕೂಡ ನಿರ್ಜಲೀಕರಣಗೊಂಡಿರಬಹುದು. ಹಾಗಾಗಿ ಪ್ರತಿನಿತ್ಯ ಸರಿಯಾಗಿ ನೀರು ಕುಡಿಯಿರಿ ಜೊತೆಗೆ, ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಿ. ಇದರ ಜೊತೆಗೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಪ್ರಮುಖ ವಿಷಯವೆಂದರೆ ಹೈಡ್ರೇಟೆಡ್ ಆಗಿರಲು ಒಮ್ಮೆಲೇ ಲೀಟರ್ ಗಟ್ಟಲೆ ನೀರು ಕುಡಿಯುವುದು ಒಳ್ಳೆಯದಲ್ಲ. ದಿನಪೂರ್ತಿ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ನೀರು ಕುಡಿಯುವುದು ಬಹಳ ಉತ್ತಮ.

ತೀವ್ರ ಒತ್ತಡ

ಮೊದಲೇ ಹೇಳಿದಂತೆ, ಒತ್ತಡವು ತೀವ್ರ ತಲೆನೋವಿಗೆ ಕಾರಣವಾಗಬಹುದು. ಒತ್ತಡ ಹೆಚ್ಚಾದಾಗ, ಕುತ್ತಿಗೆಯ ಸ್ನಾಯುಗಳು ಬಿಗಿಯಾಗುತ್ತವೆ, ಇದರ ಪರಿಣಾಮವಾಗಿ ತಲೆ ನೋವು ಬರುತ್ತದೆ. ಅತಿಯಾದ ಕೆಲಸ ಇದ್ದಾಗ ಅಥವಾ ಒತ್ತಡದ ಸಂದರ್ಭಗಳನ್ನು ಎದುರಿಸುವಾಗ ಈ ರೀತಿಯ ತಲೆನೋವು ಉಂಟಾಗುತ್ತದೆ. ಸಮಸ್ಯೆಯೆಂದರೆ ಈ ತಲೆನೋವು ದೀರ್ಘಕಾಲದ ವರೆಗೆ ಇರುತ್ತದೆ ಜೊತೆಗೆ ಸುಲಭದಲ್ಲಿ ಕಡಿಮೆಯಾಗುವುದಿಲ್ಲ. ನೀವು ಸಂಪೂರ್ಣವಾಗಿ ವಿಶ್ರಾಂತಿ ಪಡೆಯುವ ವರೆಗೆ ನೋವು ಕಡಿಮೆಯಾಗುವುದಿಲ್ಲ. ಆದ್ದರಿಂದ, ಪ್ರಾಣಾಯಾಮ ಅಥವಾ ಧ್ಯಾನ ಅಥವಾ ಉಸಿರಾಟದ ವ್ಯಾಯಾಮಗಳನ್ನು ಮಾಡುವುದು ಸೂಕ್ತ. ಇವುಗಳ ಜೊತೆಗೆ, ಕೆಲವು ದೈಹಿಕ ಚಟುವಟಿಕೆಗಳು ಸಹ ಅತ್ಯಗತ್ಯ, ಏಕೆಂದರೆ ಇದು ನಿಮ್ಮ ಮನಸ್ಸನ್ನು ನಿರಾಳವಾಗಿಸಿ ತಲೆನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ
Image
ಪ್ರತಿ ರಾತ್ರಿ ಎರಡು ಬೆಳ್ಳುಳ್ಳಿ ಎಸಳು ತಿಂದರೆ, ಈ ಎಲ್ಲಾ ಕಾಯಿಲೆಗಳು ಮಾಯ
Image
ನೆನೆಸಿಟ್ಟ ವಾಲ್ನಟ್ಸ್ ತಿನ್ನುವ ಅಭ್ಯಾಸ ನಿಮಗಿದ್ರೆ ಈ ಸ್ಟೋರಿ ಓದಿ
Image
ಪ್ರತಿನಿತ್ಯ  ಒಂದು ಲವಂಗ ಸೇವನೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತೆ!
Image
ಮೆದುಳು ಚುರುಕಾಗಿ ಕೆಲಸ ಮಾಡಲು ತಪ್ಪದೆ ಈ ಆಹಾರಗಳನ್ನು ಸೇವನೆ ಮಾಡಿ

ನಿದ್ರಾಹೀನತೆ

ನಿದ್ರೆ ಸರಿಯಾಗಿ ಆಗದಿದ್ದರೂ ತಲೆ ನೋವು ಬರುತ್ತದೆ. ಸರಿಯಾದ ವಿಶ್ರಾಂತಿ ಸಿಗದಿದ್ದಾಗ ಅಥವಾ ನಿದ್ರೆ ಸರಿಯಾಗಿ ಆಗದಿದ್ದಾಗ, ತಲೆನೋವಿನಿಂದ ಬಳಲುತ್ತಾರೆ. ನಿದ್ರೆಯ ಮಾದರಿ ಇದ್ದಕ್ಕಿದ್ದಂತೆ ಬದಲಾದಾಗಲೂ ಈ ಸಮಸ್ಯೆ ಉದ್ಭವಿಸಬಹುದು. ಕನಿಷ್ಠ 6 ರಿಂದ 8 ಗಂಟೆಗಳ ನಿದ್ರೆ ಅಗತ್ಯ. ಕೇವಲ ಮೂರರಿಂದ ನಾಲ್ಕು ಗಂಟೆಗಳ ಕಾಲ ಮಾತ್ರ ನಿದ್ದೆ ಮಾಡಿದರೆ, ಮರುದಿನ ತಲೆನೋವು ಬರುವ ಸಾಧ್ಯತೆ ಇರುತ್ತದೆ. ಇದು ಮೆದುಳಿನ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತದೆ. ಕೆಲಸದ ಮೇಲೆ ಗಮನ ಕಡಿಮೆಯಾಗುತ್ತದೆ. ಹಾಗಾಗಿ ನಿದ್ದೆ ಸರಿಯಾಗಿ ಮಾಡಿ ತಲೆನೋವು ಬರುವುದು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಮಾತ್ರೆಗಳಿಲ್ಲದೆ ತಲೆನೋವನ್ನು ಕಡಿಮೆ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್

ಸೈನಸ್ ಅಥವಾ ಅಲರ್ಜಿ

ತಲೆನೋವಿಗೆ ಸೈನಸ್ ಅಥವಾ ಅಲರ್ಜಿ ಕೂಡ ಕಾರಣವಾಗಬಹುದು. ಈ ನೋವು ಹೆಚ್ಚಾಗಿ ತಲೆಯ ಹಿಂಭಾಗದಲ್ಲಿ ಕಂಡುಬರುತ್ತದೆ. ಇದು ಸೈನಸ್ ನೋವಾಗಿದ್ದರೆ, ಕಣ್ಣಿನಿಂದ ಹಿಡಿದು ತಲೆಯ ಹಿಂಭಾಗದ ವರೆಗೆ ತೀವ್ರವಾದ ನೋವಿರುತ್ತದೆ. ಸೋಂಕು ಅಥವಾ ಅಲರ್ಜಿಗಳಿಂದಾಗಿದ್ದರೆ ಮೂಗಿನ ಮಾರ್ಗಗಳು ಮುಚ್ಚಿಹೋಗುವುದು ಮತ್ತು ಮೂಗಿನಲ್ಲಿ ತೀವ್ರವಾದ ನೋವು ಮುಂತಾದ ಲಕ್ಷಣಗಳನ್ನು ಸಹ ಕಾಣಬಹುದು. ಅಲರ್ಜಿಯನ್ನು ಕಡಿಮೆ ಮಾಡಲು ಔಷಧಿಗಳನ್ನು ಬಳಸುವುದರಿಂದ ಸುಲಭವಾಗಿ ನಿವಾರಿಸಬಹುದು. ಆದರೆ ಈ ಸಮಸ್ಯೆ ದೀರ್ಘಕಾಲದ ವರೆಗೆ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸಿ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ.

ಕುತ್ತಿಗೆ ಮತ್ತು ಬೆನ್ನು ಮೂಳೆಯಲ್ಲಿನ ಸಮಸ್ಯೆಗಳು

ಬೆನ್ನುಹುರಿ ಮತ್ತು ಕುತ್ತಿಗೆಯ ನರಗಳಲ್ಲಿ ಸಮಸ್ಯೆಗಳಿದ್ದಾಗ, ತೀವ್ರ ತಲೆನೋವು ಬರುವ ಸಾಧ್ಯತೆ ಇರುತ್ತದೆ. ಇದನ್ನು ಸರ್ವಿಕೋಜೆನಿಕ್ ತಲೆನೋವು ಎಂದು ಕರೆಯಲಾಗುತ್ತದೆ. ನೋವು ತಲೆಯ ಹಿಂಭಾಗದಿಂದ ಕಣ್ಣುಗಳ ವರೆಗೆ ವಿಸ್ತರಿಸುತ್ತದೆ. ತಲೆಯ ಸ್ವಲ್ಪ ಚಲನೆಗಳು ಸಹ ನೋವನ್ನು ಉಂಟುಮಾಡಬಹುದು. ಹಾಗಾಗಿ ತಲೆನೋವು ತೀವ್ರವಾಗಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ತಲೆತಿರುಗುವಿಕೆ ಮತ್ತು ದೃಷ್ಟಿ ಮಂದವಾಗುವಂತಹ ಲಕ್ಷಣಗಳು ಕಂಡುಬಂದರೆ ಸಾಧ್ಯವಾದಷ್ಟು ಬೇಗ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ