Ayurveda For Dandruff: ತಲೆ ಹೊಟ್ಟು ಸಮಸ್ಯೆಯ ಬಗ್ಗೆ ಚಿಂತಿಸದಿರಿ ಈ ಮನೆಮದ್ದುಗಳನ್ನು ಪ್ರಯತ್ನಿಸಿ
ತಲೆಹೊಟ್ಟು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಎದುರಿಸುತ್ತಿರುವ ಸಾಮಾನ್ಯ ಕೂದಲಿನ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ಸಮಾನ್ಯ ಸಮಸ್ಯೆಯಾಗಿದ್ದರೂ ಕೂಡ ನಿಮ್ಮನ್ನು ಸಾಕಷ್ಟು ಮುಜುಗರಕ್ಕೀಡು ಮಾಡುತ್ತದೆ.
ಇಂದಿನ ಬದಲಾದ ಜೀವನಶೈಲಿಯಿಂದಾಗಿ ಒತ್ತಡದ ಜೀವನವನ್ನು ಸಾಗಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಬರುವುದಂತೂ ಸಹಜ. ತಲೆಹೊಟ್ಟು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಎದುರಿಸುತ್ತಿರುವ ಸಾಮಾನ್ಯ ಕೂದಲಿನ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ಸಮಾನ್ಯ ಸಮಸ್ಯೆಯಾಗಿದ್ದರೂ ಕೂಡ ನಿಮ್ಮನ್ನು ಸಾಕಷ್ಟು ಮುಜುಗರಕ್ಕೀಡು ಮಾಡುತ್ತದೆ. ಅಂಗಡಿಗಳಲ್ಲಿ ನಿಮ್ಮ ಕೂದಲಿನ ಆರೋಗ್ಯಕ್ಕಾಗಿ ಹಲವಾರು ಶ್ಯಾಂಪೂಗಳು ಇದ್ದರೂ ಸಹ ಅದರ ಫಲಿತಾಂಶ ಕೇವಲ ತಾತ್ಕಲಿಕವಾಗಿರುತ್ತದೆ. ಆದರೆ ಶಾಶ್ವತವಾಗಿ ನಿಮ್ಮ ಕೂದಲಿನಿಂದ ತಲೆಹೊಟ್ಟು ತೆಗೆದು ಹಾಕಲು ಈ ಕೆಳಗಿನ ಮನೆಮದ್ದು ಒಮ್ಮೆ ಪ್ರಯತ್ನಿಸಿ ನೋಡಿ.
ಬೇವು:
ಚರ್ಮದ ಶಿಲೀಂಧ್ರಗಳ ಸೋಂಕು ತಲೆಹೊಟ್ಟುಗೆ ಕಾರಣವಾಗಿದ್ದರೆ, ಸೋಂಕುನಿವಾರಕ ಗುಣಗಳನ್ನು ಹೊಂದಿರುವ ಬೇವಿನ ಎಣ್ಣೆಯು ಒಂದು ಒಳ್ಳೆಯ ಔಷಧಿಯಾಗಿದೆ ಆರೋಗ್ಯ ತಜ್ಞರಾದ ಡಾ. ವಸಂತ್ ರವರ ದಿ ಕಂಪ್ಲೀಟ್ ಬುಕ್ ಆಫ್ ಆಯುರ್ವೇದಿಕ್ ಹೋಮ್ ರೆಮಿಡೀಸ್ ಪುಸ್ತಕದಲ್ಲಿ ತಿಳಿಸಿದ್ದಾರೆ. ಬೇವು ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದರ ಆಂಟಿಮೈಕ್ರೊಬಿಯಲ್ ಗುಣಗಳು ತಲೆಹೊಟ್ಟು ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದಲ್ಲದೇ ಬೇವಿನ ಎಲೆಗಳ ಪೇಸ್ಟ್ ಮಾಡಿ. ಜೊತೆಗೆ ಮೊಸರನ್ನು ಸೇರಿಸಿ ನೆತ್ತಿಯ ಮೇಲೆ ಹಚ್ಚಿ. ಇದನ್ನು 15-20 ನಿಮಿಷಗಳ ಕಾಲ ಬಿಡಿ ಮತ್ತು ನಂತರ ತೊಳೆಯಿರಿ. ಹಿತವಾದ ಮೊಸರಿನೊಂದಿಗೆ ಬೇವಿನ ಆಂಟಿಫಂಗಲ್ ಗುಣಲಕ್ಷಣಗಳು ತಲೆಹೊಟ್ಟು ವಿರುದ್ಧ ತುಂಬಾ ಸಹಾಯಕವಾಗಿದೆ.
ಮೊಟ್ಟೆ ಮತ್ತು ಲಿಂಬೆ:
ಎರಡು ಮೊಟ್ಟೆಯ ಒಡೆದು ಸಣ್ಣ ಜಾರ್ ಅಥವಾ ಪಾತ್ರೆಯಲ್ಲಿ ಹಾಕಿ. ನಂತರ ಇದಕ್ಕೆ ಲಿಂಬೆಯ ರಸವನ್ನು ಸೇರಿಸಿ. ಮೊಟ್ಟೆಯ ಬಿಳಿಭಾಗದಲ್ಲಿ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದ್ದು, ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಮತ್ತೊಂದೆಡೆ ವಿಟಮಿನ್ ಸಿ ಆಕ್ಸಿಡೇಟಿವ್ ಒತ್ತಡದ ವಿರುದ್ಧ ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿದೆ. ವಿಟಮಿನ್ ಸಿ ರಕ್ತ ಪರಿಚಲನೆ ಮತ್ತು ಕಾಲಜನ್ ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ನೆತ್ತಿಯ ಆರೋಗ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ನೆಲ್ಲಿಕಾಯಿ:
ನೆಲ್ಲಿಕಾಯಿಯ ವಿಟಮಿನ್ ಸಿ ಅಂಶವು ತಲೆಹೊಟ್ಟು ಸಮಸ್ಯೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ಹೆಚ್ಚುವರಿಯಾಗಿ, ತಲೆಹೊಟ್ಟು ಕಾರಣದಿಂದ ಉಂಟಾಗುವ ತುರಿಕೆಯನ್ನು ತಡೆಯಲು ಇದು ಸಹಾಯ ಮಾಡುತ್ತದೆ. ನೀರಿನಲ್ಲಿ ನೆಲ್ಲಿಕಾಯಿ ಪುಡಿಯ ಪೇಸ್ಟ್ ತಯಾರಿಸಿ ತಲೆಗೆ ಹಚ್ಚಿ. ಇದರ ಜೊತೆಗೆ ಸುಮಾರು 8-10 ತುಳಸಿ ಎಲೆಗಳನ್ನು ಸ್ವಲ್ಪ ನೀರಿನೊಂದಿಗೆ ಪುಡಿಮಾಡಿ ಎಲ್ಲವನ್ನು ಒಟ್ಟಿಗೆ ಮಿಶ್ರಣ ಮಾಡಿ ತಲೆಗೆ ಹಚ್ಚಿ. ಇದನ್ನು 30 ನಿಮಿಷಗಳ ಕಾಲ ಹಾಗೆಯೇ ಬಿಡಿ.
ಇದನ್ನು ಓದಿ: ಸೇಬು ತಿನ್ನುವುದರಿಂದ ತೂಕ ಹೆಚ್ಚುತ್ತಾ? ತಿನ್ನಲು ಸರಿಯಾದ ಸಮಯ ಯಾವುದು ತಿಳಿಯಿರಿ
ಮೆಂತ್ಯೆ ಕಾಳು:
ಮೆಂತ್ಯೆ ಬೀಜಗಳಲ್ಲಿ ಹೆಚ್ಚಿನ ಪ್ರೊಟೀನ್ ಮತ್ತು ನಿಕೋಟಿನಿಕ್ ಆಮ್ಲದ ಅಂಶವಿದೆ, ಇದು ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ತಡೆಯಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲಿನ ಶುಷ್ಕತೆ, ಬೋಳು ಮತ್ತು ಕೂದಲು ತೆಳುವಾಗುವುದು ಮುಂತಾದ ನೆತ್ತಿಯ ವಿವಿಧ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಮೂರು ಚಮಚ ಮೆಂತ್ಯ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ನೆನೆಸಿದ ಮೆಂತ್ಯ ಬೀಜಗಳನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿ. ಜೊತೆಗೆ ಇದಕ್ಕೆ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವನ್ನು ತಲೆಯ ನೆತ್ತಿಯ ಮೇಲೆ ಹಚ್ಚಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಕೂದಲನ್ನು ಮೃದುವಾಗಿ ತೊಳೆಯಿರಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: