ಸ್ಪೋರ್ಟ್ಸ್ ಇಂಜುರಿ ತಪ್ಪಿಸಲು ನಿಮ್ಮ ವೈದ್ಯರ ಈ ಸಲಹೆಗಳನ್ನು ತಪ್ಪದೆ ಪಾಲಿಸಿ

ಇತ್ತೀಚಿನ ದಿನಗಳಲ್ಲಿ, ಅನೇಕರು ಫಿಟ್ ಆಗಿರಲು ಜಿಮ್‌ಗೆ ಹೋಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ, ಗಾಯದ ಅಪಾಯ ಹೆಚ್ಚಾಗಬಹುದು. ಜಿಮ್ ಮತ್ತು ಕ್ರೀಡಾ ಚಟುವಟಿಕೆಗಳ ಸಮಯದಲ್ಲಿ ಗಾಯಗಳನ್ನು ತಪ್ಪಿಸುವುದು ಹೇಗೆ ಎಂದು ಡಾ. ಸ್ಕಂದ್ ಸಿನ್ಹಾ ಅವರು ತಿಳಿಸಿದ್ದು ಇದನ್ನು ಅನುಸರಿಸುವುದರಿಂದ ಸ್ಪೋರ್ಟ್ಸ್ ಇಂಜುರಿ ತಪ್ಪಿಸಬಹುದು. ಆ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಸ್ಪೋರ್ಟ್ಸ್ ಇಂಜುರಿ ತಪ್ಪಿಸಲು ನಿಮ್ಮ ವೈದ್ಯರ ಈ ಸಲಹೆಗಳನ್ನು ತಪ್ಪದೆ ಪಾಲಿಸಿ
Sports Injuries
Image Credit source: Getty images

Updated on: May 22, 2026 | 7:03 PM

ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಯುವಕರು ಜಿಮ್‌ಗೆ (Gym) ಹೋಗುವುದು, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಹೆಚ್ಚಾಗಿದೆ. ವ್ಯಾಯಾಮ ಮತ್ತು ಆಟಗಳು ಆರೋಗ್ಯಕ್ಕೆ ಒಳ್ಳೆಯದಾದರೂ, ಸರಿಯಾದ ವಿಧಾನ ಅನುಸರಿಸದಿದ್ದರೆ ಸ್ಪೋರ್ಟ್ಸ್ ಇಂಜುರಿ (Injuries) ಅಪಾಯವೂ ಹೆಚ್ಚಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಸಫ್ದರ್‌ಜಂಗ್ ಆಸ್ಪತ್ರೆಯ ಸ್ಪೋರ್ಟ್ಸ್ ಇಂಜುರಿ ಸೆಂಟರ್‌ನ ಹಿರಿಯ ಪ್ರೊಫೆಸರ್ ಹಾಗೂ ಆರ್ಥೋಪೆಡಿಕ್ಸ್ ತಜ್ಞ ಡಾ. ಸ್ಕಂದ್ ಸಿನ್ಹಾ ಅವರು ಹೇಳುವ ಪ್ರಕಾರ, ತಪ್ಪಾದ ಪೋಶ್ಚರ್, ವಾರ್ಮ್- ಅಪ್ ಮಾಡದೇ ವ್ಯಾಯಾಮ ಆರಂಭಿಸುವುದು ಮತ್ತು ದೇಹದ ಸಾಮರ್ಥ್ಯಕ್ಕಿಂತ ಹೆಚ್ಚು ವರ್ಕೌಟ್ ಮಾಡುವುದು ಗಾಯಗಳಿಗೆ ಪ್ರಮುಖ ಕಾರಣಗಳಾಗಿವೆ. ಆದರೆ ಈ ರೀತಿ ಆಗುವುದನ್ನು ತಡೆಯಲು ಕೆಲವು ಸಲಹೆಗಳನ್ನು ಅನುಸರಿಸುವುದು ಬಹಳ ಒಳ್ಳೆಯದು ಎನ್ನುತ್ತಾರೆ. ಹಾಗಾದರೆ ಸ್ಪೋರ್ಟ್ಸ್ ಇಂಜುರಿ ತಪ್ಪಿಸಲು ಏನು ಮಾಡಬೇಕು, ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯುವಕರಲ್ಲಿ ಹೆಚ್ಚು ಕಾಣಿಸುತ್ತಿರುವ ಸ್ಪೋರ್ಟ್ಸ್ ಇಂಜುರಿಗಳು ಯಾವುವು?

ಡಾ. ಸ್ಕಂದ್ ಸಿನ್ಹಾ ಅವರ ಪ್ರಕಾರ, ಇತ್ತೀಚೆಗೆ ಲಿಗಮೆಂಟ್ ಗಾಯ, ಸ್ನಾಯು ಎಳೆದಂತಾಗುವುದು, ಮೊಣಕಾಲು ನೋವು, ಭುಜದ ಗಾಯ ಮತ್ತು ಕೆಳ ಬೆನ್ನು ನೋವು ಹೆಚ್ಚು ಕಾಣಿಸುತ್ತಿವೆ. ಜಿಮ್‌ನಲ್ಲಿ ಸರಿಯಾದ ತಂತ್ರ ಪಾಲಿಸದೇ ವ್ಯಾಯಾಮ ಮಾಡುವುದು ಮತ್ತು ಅಗತ್ಯಕ್ಕಿಂತ ಹೆಚ್ಚು ತರಬೇತಿ ಪಡೆಯುವುದರಿಂದ ಈ ಸಮಸ್ಯೆಗಳು ಉಂಟಾಗುತ್ತವೆ. ಪ್ರತಿಯೊಬ್ಬರ ದೇಹದ ಸಾಮರ್ಥ್ಯ ವಿಭಿನ್ನವಾಗಿರುವುದರಿಂದ, ತಮ್ಮ ದೇಹಕ್ಕೆ ಹೊಂದುವ ರೀತಿಯಲ್ಲಿ ವ್ಯಾಯಾಮ ಮಾಡುವುದು ಬಹಳ ಮುಖ್ಯ ಎಂದು ಅವರು ಹೇಳುತ್ತಾರೆ.

ಸಣ್ಣ ಗಾಯವನ್ನೂ ನಿರ್ಲಕ್ಷಿಸುವುದು ಅಪಾಯಕಾರಿ

ಆರಂಭಿಕ ಹಂತದಲ್ಲಿರುವ ನೋವು, ಊತ ಅಥವಾ ಗಟ್ಟಿತನವನ್ನು ನಿರ್ಲಕ್ಷಿಸಿದರೆ ಅದು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಬಹುದು. ಒಂದು ಭಾಗವನ್ನು ಚಲಿಸಲು ತೊಂದರೆ ಆಗುವುದು ಅಥವಾ ನೋವು ದೀರ್ಘಕಾಲ ಮುಂದುವರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ತಜ್ಞರ ಪ್ರಕಾರ, ಆರಂಭದಲ್ಲೇ ಸರಿಯಾದ ಚಿಕಿತ್ಸೆ ಪಡೆಯುವುದರಿಂದ ದೀರ್ಘಕಾಲದ ಸಮಸ್ಯೆಗಳನ್ನು ತಪ್ಪಿಸಬಹುದು.

ವ್ಯಾಯಾಮಕ್ಕೂ ಮೊದಲು ವಾರ್ಮ್-ಅಪ್ ಏಕೆ ಅಗತ್ಯ?

ಯಾವುದೇ ಫಿಜಿಕಲ್ ಆಕ್ಟಿವಿಟಿ ಅಥವಾ ವರ್ಕೌಟ್ ಆರಂಭಿಸುವ ಮೊದಲು ಕನಿಷ್ಠ 10ರಿಂದ 15 ನಿಮಿಷಗಳ ವಾರ್ಮ್-ಅಪ್ ಮತ್ತು ಸ್ಟ್ರೆಚಿಂಗ್ ಮಾಡಬೇಕು. ಇದರಿಂದ ಸ್ನಾಯುಗಳು ಮತ್ತು ಸಂಧಿಗಳು ವ್ಯಾಯಾಮಕ್ಕೆ ಸಿದ್ಧಗೊಳ್ಳುತ್ತವೆ. ವಾರ್ಮ್-ಅಪ್ ಮಾಡುವುದರಿಂದ ರಕ್ತ ಸಂಚಾರ ಸುಧಾರಿಸಿ ಗಾಯದ ಅಪಾಯ ಕಡಿಮೆಯಾಗುತ್ತದೆ. ವಾರ್ಮ್-ಅಪ್ ನಂತರವೇ ಮುಖ್ಯ ವ್ಯಾಯಾಮ ಆರಂಭಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 30ರ ಹರಯದಲ್ಲಿ ಮೊಣಕಾಲು ನೋವು ಹೆಚ್ಚಾಗಿ ಕಂಡುಬರುತ್ತಿರುವುದಕ್ಕೆ ಕಾರಣವೇನು? ತಜ್ಞರು ನೀಡಿರುವ ಕಾರಣ ಇಲ್ಲಿದೆ

ಆಟ ಅಥವಾ ವ್ಯಾಯಾಮದ ವೇಳೆ ಗಾಯವಾದರೆ ತಕ್ಷಣ ಏನು ಮಾಡಬೇಕು?

  • ಗಾಯಗೊಂಡ ಭಾಗಕ್ಕೆ ವಿಶ್ರಾಂತಿ ನೀಡಿ
  • ಊತ ಕಡಿಮೆ ಮಾಡಲು ಐಸ್ ಹಾಕಿ
  • ಸೌಮ್ಯವಾಗಿ ಬ್ಯಾಂಡೇಜ್ ಕಟ್ಟಿರಿ
  • ಗಾಯಗೊಂಡ ಭಾಗವನ್ನು ಮೇಲಕ್ಕೆ ಇಡಿ
  • ನೋವು ಅಥವಾ ಊತ ಹೆಚ್ಚಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಸ್ಪೋರ್ಟ್ಸ್ ಇಂಜುರಿ ತಪ್ಪಿಸಿಕೊಳ್ಳಲು ಗಮನಿಸಬೇಕಾದ ವಿಷಯಗಳು:

  • ಸರಿಯಾದ ತಂತ್ರದಲ್ಲಿ ವ್ಯಾಯಾಮ ಮಾಡಬೇಕು
  • ನಿಯಮಿತವಾಗಿ ಸ್ಟ್ರೆಚಿಂಗ್ ಮಾಡಬೇಕು
  • ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡಬೇಕು
  • ಸಮತೋಲನ ಆಹಾರ ಸೇವಿಸಬೇಕು
  • ಸಾಕಷ್ಟು ನಿದ್ರೆ ಮಾಡಬೇಕು
  • ನೋವು ಅಥವಾ ಊತವನ್ನು ನಿರ್ಲಕ್ಷಿಸಬಾರದು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us