AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳನ್ನೂ ಕಾಡುತ್ತಿದೆ ಹೃದಯಾಘಾತದ ಸಮಸ್ಯೆ! ಆತಂಕ ಬೇಡ, ಜಾಗೃತಿ ಇರಲಿ ಎಂದ ಬೆಂಗಳೂರಿನ ವೈದ್ಯರು

ಮಕ್ಕಳಲ್ಲಿ ಕುಸಿದು ಬೀಳುವ ಮತ್ತು ಹೃದಯಾಘಾತದ ಘಟನೆಗಳು ತೀವ್ರ ಆತಂಕ ಮೂಡಿಸಿದ್ದು, ಬೆಂಗಳೂರಿನ ಜಯದೇವ ಸೇರಿದಂತೆ ಪ್ರಮುಖ ಆಸ್ಪತ್ರೆಗಳ ಹೃದ್ರೋಗ ತಜ್ಞರು ಭಯಪಡಬೇಡಿ ಎಂದು ಅಭಯ ನೀಡಿದ್ದಾರೆ. ಇಂತಹ ಪ್ರಕರಣಗಳು ಅತ್ಯಂತ ಅಪರೂಪವಾಗಿದ್ದು, ಶಾಲೆಗಳಲ್ಲಿ ಸಿಪಿಆರ್ ತರಬೇತಿ ಮತ್ತು ಮುನ್ನೆಚ್ಚರಿಕೆಯ ಜಾಗೃತಿ ವಹಿಸುವುದು ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಮಕ್ಕಳನ್ನೂ ಕಾಡುತ್ತಿದೆ ಹೃದಯಾಘಾತದ ಸಮಸ್ಯೆ! ಆತಂಕ ಬೇಡ, ಜಾಗೃತಿ ಇರಲಿ ಎಂದ ಬೆಂಗಳೂರಿನ ವೈದ್ಯರು
ಸಾಂದರ್ಭಿಕ ಚಿತ್ರImage Credit source: gettyimages.com
ಭಾವನಾ ಹೆಗಡೆ
|

Updated on: Jul 26, 2026 | 9:20 AM

Share

ಮುಖ್ಯಾಂಶಗಳು

  • ಮಕ್ಕಳಲ್ಲಿ ಹೃದಯಾಘಾತ ಅತ್ಯಂತ ಅಪರೂಪವಾಗಿದ್ದು ಪೋಷಕರು ಭಯಪಡುವ ಅಗತ್ಯವಿಲ್ಲ
  • ಜನ್ಮಜಾತ ತೊಂದರೆ ಮತ್ತು ಹೃದಯದ ಬಡಿತದ ಏರುಪೇರು ಮುಖ್ಯ ಕಾರಣ
  • ಶಾಲೆಗಳಲ್ಲಿ ಶಿಕ್ಷಕರಿಗೆ ಸಿಪಿಆರ್ ತರಬೇತಿ ಮತ್ತು ಜಾಗೃತಿ ಅತ್ಯಂತ ಅಗತ್ಯ

ಬೆಂಗಳೂರು, ಜುಲೈ 26: ಇತ್ತೀಚೆಗೆ ನಗರದ ಶಾಲಾ ಆವರಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಹೃದಯಾಘಾತದಿಂದ (Cardiac Arrest) ಕುಸಿದು ಬಿದ್ದ ಘಟನೆಗಳು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ಜಯದೇವ, ನಾರಾಯಣ ಹೆಲ್ತ್ ಹಾಗೂ ಸ್ಪರ್ಶ್ ಆಸ್ಪತ್ರೆಯ ಪ್ರಮುಖ ಹೃದ್ರೋಗ ತಜ್ಞರು, “ಮಕ್ಕಳಲ್ಲಿ ಇಂತಹ ಘಟನೆಗಳು ಸಂಭವಿಸುವುದು ಅತ್ಯಂತ ಅಪರೂಪ ಹಾಗೂ ಲಕ್ಷದಲ್ಲಿ ಒಂದೆರಡು ಪ್ರಕರಣಗಳು. ಹೀಗಾಗಿ ಪೋಷಕರು ಅನಗತ್ಯವಾಗಿ ಭೀತಿಗೆ ಒಳಗಾಗುವ ಅಗತ್ಯವಿಲ್ಲ, ಬದಲಿಗೆ ಜಾಗೃತಿ ಮತ್ತು ತುರ್ತು ಸಿದ್ಧತೆ ಹೆಚ್ಚಿಸಿಕೊಳ್ಳಬೇಕು” ಎಂದು ಸಲಹೆ ನೀಡಿದ್ದಾರೆ.

ಹಿರಿಯರಿಗೂ ಮಕ್ಕಳ ಹೃದಯಾಘಾತಕ್ಕೂ ಏನು ವ್ಯತ್ಯಾಸ?

ವೈದ್ಯರ ಪ್ರಕಾರ, ವಯಸ್ಕರಲ್ಲಿ ರಕ್ತನಾಳಗಳ ತಡೆಯಿಂದ (Blocked Arteries) ಹೃದಯಾಘಾತ ಸಂಭವಿಸಿದರೆ, ಮಕ್ಕಳಲ್ಲಿ ಜನ್ಮಜಾತ ಹೃದಯ ನ್ಯೂನತೆಗಳು (Congenital Heart Defects) ಅಥವಾ ಹೃದಯದ ವಿದ್ಯುತ್ ತರಂಗಗಳಲ್ಲಿ ಉಂಟಾಗುವ ಏರುಪೇರು (Arrhythmias) ಪ್ರಮುಖ ಕಾರಣವಾಗಿರುತ್ತದೆ. ಕ್ರೀಡೆ ಹಾಗೂ ಕಠಿಣ ದೈಹಿಕ ಶ್ರಮದ ಸಂದರ್ಭದಲ್ಲಿ ಇವು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳಬಹುದು. ಅನೇಕ ಮಕ್ಕಳಲ್ಲಿ ಇದು ಮುಂಚಿತವಾಗಿ ಯಾವುದೇ ರೋಗಲಕ್ಷಣ ತೋರಿಸದಿರುವುದು ದೊಡ್ಡ ಸವಾಲಾಗಿದೆ.

ಶಾಲೆಗಳು ಮತ್ತು ಪೋಷಕರು ವಹಿಸಬೇಕಾದ ಮುನ್ನೆಚ್ಚರಿಕೆಗಳು

ಪ್ರತಿ ಶಾಲೆಯಲ್ಲೂ ‘ಕಾರ್ಡಿಯಾಕ್ ಎಮರ್ಜೆನ್ಸಿ ಪ್ಲಾನ್’ ಇರಬೇಕು. ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರಿಗೆ ಸಿಪಿಆರ್ (CPR) ಮತ್ತು ಎಇಡಿ (AED – ಡಿಫಿಬ್ರಿಲೇಟರ್) ಸಾಧನ ಬಳಸುವ ತರಬೇತಿ ನೀಡಬೇಕು. ಘಟನೆ ನಡೆದ 3 ನಿಮಿಷದೊಳಗೆ ಸಿಪಿಆರ್ ನೀಡಿದರೆ ಮಗುವಿನ ಪ್ರಾಣ ಉಳಿಯುವ ಸಾಧ್ಯತೆ ಶೇ 70ಕ್ಕಿಂತ ಹೆಚ್ಚಿರುತ್ತದೆ.

ಆಟವಾಡುವಾಗ ಅಥವಾ ವ್ಯಾಯಾಮದ ವೇಳೆ ಎದೆನೋವು, ಅತಿಯಾದ ಆಯಾಸ, ತಲೆಸುತ್ತು ಅಥವಾ ಪ್ರಜ್ಞೆ ತಪ್ಪಿ ಬೀಳುವ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ತಪಾಸಣೆಗೊಳಪಡಿಸಬೇಕು. ಕುಟುಂಬದಲ್ಲಿ ಚಿಕ್ಕ ವಯಸ್ಸಿನಲ್ಲಿ ಯಾರಾದರೂ ಹೃದಯಾಘಾತಕ್ಕೆ ಒಳಗಾಗಿದ್ದ ಇತಿಹಾಸವಿದ್ದರೆ, ಮಕ್ಕಳಿಗೂ ಇಸಿಜಿ (ECG) ಸೇರಿದಂತೆ ಮೂಲಭೂತ ತಪಾಸಣೆ ಮಾಡಿಸುವುದು ಒಳಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್