AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಸಾರವಾಗಲಿದೆ ‘ಜಗದ್ಧಾತ್ರಿ’ ಧಾರಾವಾಹಿ: ಖಡಕ್ ಪಾತ್ರದಲ್ಲಿ ಮೋಕ್ಷಿತಾ-ವಿಜಯ್

ಜೀ ಕನ್ನಡ ವಾಹಿನಿಯಲ್ಲಿ ಸೆಪ್ಟೆಂಬರ್ 28 ರಿಂದ ಪ್ರತಿ ದಿನ ರಾತ್ರಿ 9 ಗಂಟೆಗೆ ಹೊಸ ಧಾರಾವಾಹಿ ‘ಜಗದ್ಧಾತ್ರಿ’ ಪ್ರಸಾರಗೊಳ್ಳಲಿದೆ. ಕೌಟುಂಬಿಕ ಕತೆಯ ಜೊತೆಗೆ ಆಕ್ಷನ್ ಥ್ರಿಲ್ಲರ್ ಕತೆಯನ್ನು ಹೊಂದಿರುವ ಧಾರಾವಾಹಿ ಇದಾಗಿದೆ. ಧಾರಾವಾಹಿಯಲ್ಲಿ ಮೋಕ್ಷಿತಾ ಪೈ, ವಿಜಯ್ ಲಲಿತಾ ಸೂರ್ಯ ಮತ್ತು ಕವಿತಾ ಗೌಡ ಮುಖ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ವಿಭಿನ್ನ ಕಥೆಗಳನ್ನ ಪ್ರೇಕ್ಷಕರಿಗೆ ಪರಿಚಯಿಸುತ್ತ ಬಂದಿರುವ ಜೀ ಕನ್ನಡ, ಈ ಬಾರಿ ಅಂಡರ್‌ಕವರ್ ಮಹಿಳಾ ಪೊಲೀಸ್ ಅಧಿಕಾರಿಯ ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದೆ.

ಪ್ರಸಾರವಾಗಲಿದೆ ‘ಜಗದ್ಧಾತ್ರಿ’ ಧಾರಾವಾಹಿ: ಖಡಕ್ ಪಾತ್ರದಲ್ಲಿ ಮೋಕ್ಷಿತಾ-ವಿಜಯ್
Jagadhadhtri
ಮಂಜುನಾಥ ಸಿ.
|

Updated on: Sep 27, 2026 | 8:05 PM

Share

ಮುಖ್ಯಾಂಶಗಳು

  • ಜ಼ೀ ಕನ್ನಡದಲ್ಲಿ ಸೆಪ್ಟೆಂಬರ್ 28 ರಿಂದ 'ಜಗದ್ಧಾತ್ರಿ' ಧಾರಾವಾಹಿ ಪ್ರಸಾರ ಆರಂಭ.
  • ಮೋಕ್ಷಿತಾ ಪೈ, ವಿಜಯ್ ಸೂರ್ಯ, ಕವಿತಾ ಗೌಡ ಕಿರುತೆರೆಗೆ ಮರಳಿದ್ದಾರೆ
  • ಅಂಡರ್‌ಕವರ್ ಮಹಿಳಾ ಪೊಲೀಸ್ ಅಧಿಕಾರಿಯ ಕಥೆ, ಕುಟುಂಬ ಮತ್ತು ಕರ್ತವ್ಯದ ಕತೆ

ಜೀ ಕನ್ನಡ ವಾಹಿನಿಯಲ್ಲಿ ಸೆಪ್ಟೆಂಬರ್ 28 ರಿಂದ ಪ್ರತಿ ದಿನ ರಾತ್ರಿ 9 ಗಂಟೆಗೆ ಹೊಸ ಧಾರಾವಾಹಿ ‘ಜಗದ್ಧಾತ್ರಿ’ ಪ್ರಸಾರಗೊಳ್ಳಲಿದೆ. ಕೌಟುಂಬಿಕ ಕತೆಯ ಜೊತೆಗೆ ಆಕ್ಷನ್ ಥ್ರಿಲ್ಲರ್ ಕತೆಯನ್ನು ಹೊಂದಿರುವ ಧಾರಾವಾಹಿ ಇದಾಗಿದೆ. ಧಾರಾವಾಹಿಯಲ್ಲಿ ಮೋಕ್ಷಿತಾ ಪೈ, ವಿಜಯ್ ಲಲಿತಾ ಸೂರ್ಯ ಮತ್ತು ಕವಿತಾ ಗೌಡ ಮುಖ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ವಿಭಿನ್ನ ಕಥೆಗಳನ್ನ ಪ್ರೇಕ್ಷಕರಿಗೆ ಪರಿಚಯಿಸುತ್ತ ಬಂದಿರುವ ಜೀ ಕನ್ನಡ, ಈ ಬಾರಿ ಅಂಡರ್‌ಕವರ್ ಮಹಿಳಾ ಪೊಲೀಸ್ ಅಧಿಕಾರಿಯ ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದೆ.

‘ಜಗದ್ಧಾತ್ರಿ’ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ಮುಖ್ಯಪಾತ್ರವಾದ ಪಾತ್ರವಾದ ಜಗದ್ಧಾತ್ರಿಗೆ ಜೀವ ತುಂಬಿದ್ದಾರೆ. ಕುಟುಂಬದೊಳಗೆ ಜವಾಬ್ದಾರಿಯುತ ಮಗಳಾಗಿ, ಹೊರಜಗತ್ತಿನಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಎರಡು ವಿಭಿನ್ನ ಆಯಾಮಗಳಲ್ಲಿ ಈ ಪಾತ್ರ ಕಾಣಿಸಿಕೊಳ್ಳಲಿದೆ. ಅಪ್ಪಟ ದೇಶಭಕ್ತೆಯಾಗಿದ್ದ ತನ್ನ ತಾಯಿಯ ಮೇಲೆ ಹೊರಿಸಲಾಗಿರುವ ದೇಶದ್ರೋಹದ ಆರೋಪವನ್ನ ತೊಡೆದುಹಾಕುವ ಪ್ರಯತ್ನದ ಸುತ್ತ ಕಥೆ ಹೆಣೆಯಲಾಗಿದ್ದು, ಮನೆಯವರ ಕಟುಮಾತುಗಳ ಸಹಿಸಿಕೊಂಡು ತಾಯಿಗೆ ನ್ಯಾಯ ದೊರಕಿಸಿಕೊಡುವ ಜಗದ್ಧಾತ್ರಿಯ ಪಯಣ ಧಾರಾವಾಹಿ ಕತೆಯ ಕೇಂದ್ರಬಿಂದುವಾಗಿದೆ.

ಧಾರಾವಾಹಿಯ ಡ್ಯುಯೆಟ್ ಹಾಡು ಇತ್ತೀಚೆಗೆ ಬಿಡಗುಡೆ ಆಗಿದ್ದು, ಹಾಡಿನ ಹುಕ್ ಸ್ಟೆಪ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದೆ. ಮೋಕ್ಷಿತಾ ಪೈ ಮತ್ತು ವಿಜಯ್ ಸೂರ್ಯ ಜೋಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಬ್ಬರೂ ಈ ಧಾರಾವಾಹಿಯಲ್ಲಿ ಐಪಿಎಸ್ ಅಧಿಕಾರಿಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇವರಿಬ್ಬರ ನಡುವಿನ ಪ್ರೇಮಕಥೆಯೂ ಧಾರಾವಾಹಿಯ ಒಂದು ಆಕರ್ಷಣೆಯಾಗಿದೆ. ಕೌಟುಂಬಿಕ ಕಥಾಹಂದರದ ಜೊತೆಗೆ ಭರ್ಜರಿ ಆಕ್ಷನ್ ದೃಶ್ಯಗಳೂ ಧಾರಾವಾಹಿಯಲ್ಲಿ ಇರಲಿವೆ.

ಇದನ್ನೂ ಓದಿ:100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಕಲರ್ಸ್ ಕನ್ನಡದ ‘ಅಗ್ನಿಸಾಕ್ಷಿ’ ಧಾರಾವಾಹಿ

ಗಿರಿಜಾ ಲೋಕೇಶ್, ಅರುಣಾ ಬಾಲರಾಜ್, ಲಕ್ಷ್ಮೀ ಸಿದ್ದಯ್ಯ, ಮೈಕೋ ಮಂಜು, ವಚನ್ ಹೊಸಮಠ, ರವಿ ಭಟ್, ಸೋನಿಯಾ ಪೊನ್ನಮ್ಮ ಹಾಗೂ ಮಾನಸಿ ಸುಧೀರ್ ಸೇರಿದಂತೆ ದೊಡ್ಡ ತಾರಾಗಣ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದೆ. ಬೆಳ್ಳಿತೆರೆಯ ಸಿನಿಮಾ ನಿರ್ದೇಶಿಸಿ ಖ್ಯಾತಿ ಗಳಿಸಿರುವ ಬರಹಗಾರ ಮಹೇಶ್‌ರಾವ್ ಮತ್ತು ಪ್ರಕಾಶ್ ಅವರ ನಿರ್ಮಾಣದಲ್ಲಿ, ಮಹೇಶ್ ಸಾರಂಗ್ ಅವರ ನಿರ್ದೇಶನದಲ್ಲಿ ಕೀರ್ತಿ ಅಕ್ಷಯ ನೆಟ್‌ವರ್ಕ್ ಬ್ಯಾನರ್ ಅಡಿಯಲ್ಲಿ ಈ ಧಾರಾವಾಹಿ ನಿರ್ಮಾಣವಾಗುತ್ತಿದೆ.

ಈ ಕುರಿತು ಮಾತನಾಡಿರುವ ಜೀ ಕನ್ನಡದ ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು, ಇಂದಿನ ಕಾಲಘಟ್ಟದಲ್ಲಿ ಪ್ರತಿ ಮನೆಯ ಹೆಣ್ಣುಮಗಳು ಎದುರಿಸುತ್ತಿರುವ ವಿಭಿನ್ನ ಸವಾಲುಗಳನ್ನ ಕಥೆಯ ರೂಪದಲ್ಲಿ ಕನ್ನಡಿಗರಿಗೆ ತಲುಪಿಸುವುದೇ ಜ಼ೀ ಕನ್ನಡದ ಉದ್ದೇಶ ಎಂದು ಹೇಳಿದ್ದಾರೆ. ಎಲ್ಲ ಸವಾಲುಗಳನ್ನ ಮೀರಿ ಸೂಪರ್ ಕಾಪ್ ಆಗಿ ಜಗತ್ತನ್ನ ಕಾಯುವ ಜಗದ್ಧಾತ್ರಿಯ ಕಥೆ ಪ್ರೇಕ್ಷಕರಿಗೆ ಹೊಸ ಅನುಭವ ಹಾಗೂ ಜನಪ್ರಿಯ ಮನರಂಜನೆ ನೀಡಲಿದೆ ಎಂಬ ವಿಶ್ವಾಸವನ್ನ ಅವರು ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ
ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ
ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ