AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹದಲ್ಲಿ ರಕ್ತವನ್ನು ಹೆಚ್ಚಿಸುವ ಆಹಾರಗಳು ಇವು; ಇವುಗಳನ್ನು ತಿಂದರೆ ಲೀಟರ್ ಗಟ್ಟಲೆ ರಕ್ತ ವೃದ್ಧಿಸುತ್ತದೆ

ತೋಟದ ಸೊಪ್ಪುಗಳಲ್ಲಿ ಕಬ್ಬಿಣದ ಅಂಶ ಹೆಚ್ಚು. ಆದ್ದರಿಂದ ತೋಟದ ಸೊಪ್ಪುಗಳನ್ನು ಆಹಾರದ ಭಾಗವಾಗಿ ತೆಗೆದುಕೊಳ್ಳುವುದರಿಂದ ಸೋಡಿಯಂ ಜೊತೆಗೆ ಇತರೆ ಪೋಷಕಾಂಶಗಳೂ ಲಭ್ಯವಾಗುತ್ತವೆ. ಹಾಗೆಯೇ ಜೀರ್ಣಾಂಗ ವ್ಯವಸ್ಥೆಯೂ ಸುಧಾರಿಸುತ್ತದೆ. ಅದರಲ್ಲೂ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.

ದೇಹದಲ್ಲಿ ರಕ್ತವನ್ನು ಹೆಚ್ಚಿಸುವ ಆಹಾರಗಳು ಇವು; ಇವುಗಳನ್ನು ತಿಂದರೆ ಲೀಟರ್ ಗಟ್ಟಲೆ ರಕ್ತ ವೃದ್ಧಿಸುತ್ತದೆ
ದೇಹದಲ್ಲಿ ರಕ್ತವನ್ನು ಹೆಚ್ಚಿಸುವ ಆಹಾರಗಳು ಇವು
ಸಾಧು ಶ್ರೀನಾಥ್​
|

Updated on:Jan 15, 2024 | 3:03 PM

Share

ಇತ್ತೀಚೆಗೆ ಬಹಳಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಪುರುಷರು 5 ಲೀಟರ್ ರಕ್ತವನ್ನು ಹೊಂದಿರಬೇಕು ಮತ್ತು ಮಹಿಳೆಯರು 4 ಲೀಟರ್ ರಕ್ತವನ್ನು ಹೊಂದಿರಬೇಕು. ರಕ್ತ ಕಣಗಳನ್ನು ಉತ್ಪಾದಿಸಲು.. ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗಿ ಹೊಂದಲು.. ಕಬ್ಬಿಣದ ಅಗತ್ಯವಿದೆ. ಅದಕ್ಕಾಗಿಯೇ ಕಡಿಮೆ ರಕ್ತದೊತ್ತಡ ಹೊಂದಿರುವ ಜನರಿಗೆ ಕಬ್ಬಿಣದ ಅಂಶವನ್ನು ಹೊಂದಿರುವ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ. ಕಬ್ಬಿಣದ ಅಂಶವನ್ನು ಹೊಂದಿರುವ ಸಿರಪ್ ಮತ್ತು ಕ್ಯಾಪ್ಸುಲ್ಗಳು ಸಹ ಇವೆ. ಆದರೆ ಔಷಧಗಳನ್ನು ಬಳಸುವ ಬದಲು ದೇಹದಲ್ಲಿ ನೈಸರ್ಗಿಕವಾಗಿ ರಕ್ತವನ್ನು ಉತ್ಪಾದಿಸಬಹುದು. ಹೆಚ್ಚಿನ ಕಬ್ಬಿಣದ ಶೇಕಡಾವಾರು ಆಹಾರವನ್ನು ತೆಗೆದುಕೊಳ್ಳುವುದು ಉತ್ತಮ. ಪ್ರತಿದಿನ ದೇಹಕ್ಕೆ 30 ಮಿಲಿಗ್ರಾಂ ಕಬ್ಬಿಣದ ಅಗತ್ಯವಿರುತ್ತದೆ.

ತೋಟದ ಸೊಪ್ಪುಗಳು: ತೋಟದ ಸೊಪ್ಪುಗಳಲ್ಲಿ ಕಬ್ಬಿಣದ ಅಂಶ ಹೆಚ್ಚು. ಆದ್ದರಿಂದ ತೋಟದ ಸೊಪ್ಪುಗಳನ್ನು ಆಹಾರದ ಭಾಗವಾಗಿ ತೆಗೆದುಕೊಳ್ಳುವುದರಿಂದ ಸೋಡಿಯಂ ಜೊತೆಗೆ ಇತರೆ ಪೋಷಕಾಂಶಗಳೂ ಲಭ್ಯವಾಗವುತ್ತವೆ. ಹಾಗೆಯೇ ಜೀರ್ಣಾಂಗ ವ್ಯವಸ್ಥೆಯೂ ಸುಧಾರಿಸುತ್ತದೆ. ಅದರಲ್ಲೂ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ತೋಟದ ಸೊಪ್ಪುಗಳ ಸಾಂಬಾರು ಸೇವನೆಯಿಂದ ದೇಹಕ್ಕೆ ಕಬ್ಬಿಣಾಂಶ ದೊರೆಯುವುದಲ್ಲದೆ ಇತರ ಆರೋಗ್ಯ ಪ್ರಯೋಜನಗಳೂ ಇವೆ. 100 ಗ್ರಾಂ ಸೊಪ್ಪಿನಲ್ಲಿ 39 ಮಿಲಿ ಗ್ರಾಂ ಕಬ್ಬಿಣ ಇರುತ್ತದೆ.

Also Read: ಖಾಲಿ ಹೊಟ್ಟೆಯಲ್ಲಿ ದಿನಾ ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಅದ್ಭುತ ಆರೋಗ್ಯ ಲಾಭಗಳಿವೆ

ಕಾಲಿ ಫ್ಲವರ್: ಅನೇಕ ಜನರು ಕಾಲಿ ಫ್ಲವರ್​​ ಅನ್ನು ಬೇಯಿಸಿಕೊಂಡು ತಿನ್ನುತ್ತಾರೆ. ಕಾಲಿ ಹೂವು ಕಬ್ಬಿಶಾಂಶದಲ್ಲಿ ಸಮೃದ್ಧವಾಗಿದೆ. ಇವುಗಳಲ್ಲಿ 40 ಮಿ ಗ್ರಾಂ ಕಬ್ಬಿಣವಿದೆ. ಆದ್ದರಿಂದ ಅವುಗಳನ್ನು ಹೆಚ್ಚಾಗಿ ಬಳಸಿ. ಈ ರೀತಿ ಕಾಲಿ ಹೂವಿನ ಎಲೆಗಳನ್ನು ಆಹಾರದಲ್ಲಿ ಸೇವಿಸಿದರೆ ಕಬ್ಬಿಣಾಂಶವನ್ನು ಪಡೆಯಬಹುದು.

ಅಕ್ಕಿ ಹೊಟ್ಟು (ತವುಡು): ಅದೇ ರೀತಿ ಅಕ್ಕಿ ಹೊಟ್ಟಿನಲ್ಲಿಯೂ ಕಬ್ಬಿಣದ ಶೇಕಡಾವಾರು ಪ್ರಮಾಣವೂ ಹೆಚ್ಚಾಗಿರುತ್ತದೆ. 100 ಗ್ರಾಂ ಅಕ್ಕಿ ಹೊಟ್ಟು 45 ಮಿಲಿಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ನೀವು ಒಣ ರೂಪದಲ್ಲಿ ಅಕ್ಕಿ ಹೊಟ್ಟು ತಿನ್ನಬಹುದು, ಆದರೆ ನೀವು ಅದನ್ನು ಲಡ್ಡು ಉಂಡೆಗಳಾಗಿ ತಯಾರಿಸಿ ತಿನ್ನಬಹುದು. ಹೀಗೆ ಮಾಡುವುದರಿಂದ ರಕ್ತಹೀನತೆಯ ಸಮಸ್ಯೆಯಿಂದ ಬೇಗನೆ ಮುಕ್ತಿ ಸಿಗುತ್ತದೆ.

Also Read: ಛೀ! ಪಾಚೀನಾ ಅಂತಾ ಮೂಗುಮುರಿಯಬೇಡಿ, ತಿನ್ನಿ ಪರವಾಗಿಲ್ಲ – ಸ್ಪಿರುಲಿನಾ ಅದ್ಭುತ ಆರೋಗ್ಯ ಪ್ರಯೋಜನಗಳು

ಅಗಸೆ ಬೀಜಗಲು: ಕಬ್ಬಿಣದ ಶೇಕಡಾವಾರು ಪ್ರಮಾಣವು ಅಗಸೆ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. 100 ಗ್ರಾಂ ಎಳ್ಳು ಬೀಜಗಳಲ್ಲಿ 100 ಮಿಲಿಗ್ರಾಂ ಕಬ್ಬಿಣವಿರುತ್ತದೆ. ಇವುಗಳನ್ನು ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆಯಿಂದ ಬೇಗನೆ ಮುಕ್ತಿ ಸಿಗುತ್ತದೆ. ಇವುಗಳನ್ನು ಲಡ್ಡು ಮತ್ತು ಒಣಗಿಸಿ ಪುಡಿಯನ್ನಾಗಿ ಮಾಡಿಕೊಂಡು ತಿನ್ನಬಹುದು. ಇದು ಮಕ್ಕಳಿಗೆ ತುಂಬಾ ಒಳ್ಳೆಯದು. ಇವುಗಳನ್ನು ತಿನ್ನುವುದರಿಂದ ಕಬ್ಬಿಣದಂಶವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಇತರ ಆರೋಗ್ಯ ಪ್ರಯೋಜನಗಳನ್ನೂ ಪಡೆಯಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:01 pm, Mon, 15 January 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ