ಎಬೋಲಾ ವೈರಸ್‌ ಅಪಾಯಕಾರಿ, ಆದ್ರೆ ಈ ಸಲಹೆ ಪಾಲಿಸಿದ್ರೆ ಹತ್ತಿರವೂ ಸುಳಿಯಲ್ಲ!

ಎಬೋಲಾ ವೈರಸ್ ಬಗ್ಗೆ ದಿನದಿಂದ ದಿನಕ್ಕೆ ವಿಶ್ವಾದ್ಯಂತ ಕಳವಳ ಹೆಚ್ಚಾಗಿದೆ. ಇದೊಂದು ಗಂಭೀರವಾದ ವೈರಲ್ ಸೋಂಕಾಗಿರುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗುತ್ತದೆ. ಜೊತೆಗೆ ಎಬೋಲಾ ವೈರಸ್‌ನಿಂದ ಸಾವಿನ ಅಪಾಯ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು ಅದನ್ನು ತಡೆಗಟ್ಟಲು ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯ. ಇಲ್ಲವಾದಲ್ಲಿ ಈ ರೀತಿಯ ಸೋಂಕು ಎಲ್ಲೆಡೆ ಹರಡಿ ಮುಂದೆ ಇದನ್ನು ತಡೆಗಟ್ಟುವುದು ಬಹಳ ಕಷ್ಟವಾಗುತ್ತದೆ.

ಎಬೋಲಾ ವೈರಸ್‌ ಅಪಾಯಕಾರಿ, ಆದ್ರೆ ಈ ಸಲಹೆ ಪಾಲಿಸಿದ್ರೆ ಹತ್ತಿರವೂ ಸುಳಿಯಲ್ಲ!
ಸಾಂದರ್ಭಿಕ ಚಿತ್ರ
Image Credit source: gettyimages
Edited By:

Updated on: Jul 02, 2026 | 10:39 AM

ಇತ್ತೀಚಿನ ದಿನಗಳಲ್ಲಿ ಎಬೋಲಾ ವೈರಸ್ (Ebola Virus) ಕುರಿತು ಜಗತ್ತಿನಾದ್ಯಂತ ಆತಂಕ ಹೆಚ್ಚಾಗಿದೆ. ಇದು ಗಂಭೀರ ವೈರಲ್ ಸೋಂಕಾಗಿದ್ದು, “ಎಬೋಲಾ ವೈರಸ್ ಡಿಸೀಸ್ (EVD)” ಎಂಬ ಅಪಾಯಕಾರಿ ಕಾಯಿಲೆಗೆ ಕಾರಣವಾಗುತ್ತದೆ. ಸೋಂಕಿತ ವ್ಯಕ್ತಿಯ ರಕ್ತ, ದೇಹದ ದ್ರವಗಳು ಅಥವಾ ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಈ ವೈರಸ್ ಹರಡಬಹುದು. ಆಫ್ರಿಕಾದ ಕೆಲವು ದೇಶಗಳಲ್ಲಿ ಇತ್ತೀಚೆಗೆ ಎಬೋಲಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರಿಕೆ ನೀಡಲಾಗುತ್ತಿದೆ. ಅದರಲ್ಲಿಯೂ ಎಬೋಲಾವನ್ನು ಜಗತ್ತಿನ ಅತ್ಯಂತ ಅಪಾಯಕಾರಿ ವೈರಸ್‌ಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಹಿಂದೆ ಈ ಸೋಂಕಿಗೆ ತುತ್ತಾಗಿ ಜನ ಸಾವನ್ನಪ್ಪಿದ್ದಾರೆ. ಜೊತೆಗೆ ಆರಂಭಿಕ ಲಕ್ಷಣಗಳು ಸಾಮಾನ್ಯ ವೈರಲ್ ಜ್ವರದಂತೆಯೇ ಕಾಣಿಸಿಕೊಳ್ಳುವುದರಿಂದ ಸಮಯಕ್ಕೆ ಸರಿಯಾಗಿ ಗುರುತಿಸುವುದು ಕಷ್ಟವಾಗಬಹುದು. ಹಾಗಾದರೆ ಇದು ಎಷ್ಟು ಅಪಾಯಕಾರಿ, ಸೋಂಕಿನ ಲಕ್ಷಣಗಳು ಹೇಗಿರುತ್ತವೆ, ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇದನ್ನೂ ಓದಿ: ದೇಹದಲ್ಲಿ ಈ ರೀತಿ ಬದಲಾವಣೆ ಕಂಡು ಬಂದ್ರೆ ತಡಮಾಡದೆಯೇ ವೈದ್ಯರನ್ನು ಭೇಟಿ ಮಾಡಿ

ಎಬೋಲಾ ವೈರಸ್ ಎಷ್ಟು ಅಪಾಯಕಾರಿ?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಎಬೋಲಾ ಸೋಂಕು ದೇಹದಲ್ಲಿ ವೇಗವಾಗಿ ಹರಡಿ ಪ್ರಮುಖ ಅಂಗಾಂಗಗಳ ಕಾರ್ಯವೈಖರಿಯನ್ನು ಹಾನಿಗೊಳಿಸಬಹುದು ಎಂದು ಹೇಳಿದೆ. ಆರೋಗ್ಯ ತಜ್ಞರು ಕೂಡ ಈ ಸೋಂಕು ತೀವ್ರವಾದಾಗ ದೇಹದ ಸಾಮಾನ್ಯ ಕಾರ್ಯಗಳು ಅಸ್ತವ್ಯಸ್ತವಾಗುತ್ತವೆ. ಇದರ ಪರಿಣಾಮವಾಗಿ ರೋಗಿಯ ಸ್ಥಿತಿ ಬೇಗ ಗಂಭೀರವಾಗಬಹುದು. ಸಮಯಕ್ಕೆ ಸರಿಯಾದ ಚಿಕಿತ್ಸೆ ಮತ್ತು ವೈದ್ಯಕೀಯ ಮೇಲ್ವಿಚಾರಣೆ ದೊರೆತರೆ ಬದುಕುವ ಸಾಧ್ಯತೆ ಹೆಚ್ಚುತ್ತದೆ ಎಂದು ಹೇಳುತ್ತಾರೆ.

ಎಬೋಲಾ ಸೋಂಕಿನ ಲಕ್ಷಣಗಳು:

  • ಜ್ವರ
  • ತಲೆನೋವು
  • ದೌರ್ಬಲ್ಯ
  • ಸ್ನಾಯು ನೋವು
  • ಗಂಟಲು ನೋವು

ಸೋಂಕು ಹೆಚ್ಚಾದಂತೆ ಕೆಲವರಲ್ಲಿ ವಾಂತಿ, ಹೊಟ್ಟೆ ನೋವು ಮತ್ತು ತೀವ್ರ ಆಯಾಸವೂ ಕಾಣಿಸಬಹುದು. ಗಂಭೀರ ಸಂದರ್ಭಗಳಲ್ಲಿ ಇದು ದೇಹದ ಹಲವು ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ.

ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

ಎಬೋಲಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಸೋಂಕಿತ ವ್ಯಕ್ತಿಯ ರಕ್ತ ಅಥವಾ ದೇಹದ ದ್ರವಗಳ ನೇರ ಸಂಪರ್ಕವನ್ನು ತಪ್ಪಿಸಬೇಕು. ಸೋಂಕು ಹೆಚ್ಚಿರುವ ಪ್ರದೇಶಗಳಿಗೆ ಪ್ರಯಾಣಿಸುವಾಗ ಆರೋಗ್ಯ ಸಂಸ್ಥೆಗಳ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮಿತವಾಗಿ ಕೈ ತೊಳೆಯುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ಯಾವುದೇ ಅಸಾಮಾನ್ಯ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ಸಮಯೋಚಿತ ಎಚ್ಚರಿಕೆ ಮತ್ತು ಜಾಗೃತಿಯೇ ಈ ಅಪಾಯಕಾರಿ ಸೋಂಕಿನಿಂದ ರಕ್ಷಿಸಿಕೊಳ್ಳುವ ಉತ್ತಮ ಮಾರ್ಗವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:56 pm, Sun, 7 June 26

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us