ಕಾಲಿನಲ್ಲಿ ಉಂಟಾಗುವ ನರಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾ? ಡಾ ಪ್ರತಿಭಾ ಜಿ ಭಟ್ ಅವರು ನೀಡಿರುವ ಸಲಹೆ ಇಲ್ಲಿದೆ
ಕಾಲಿನ ನರಗಳ ಸಮಸ್ಯೆ ಕಂಡು ಬರುವುದಕ್ಕೆ ಹಲವು ರೀತಿಯ ಕಾರಣಗಳಿರಬಹುದು. ಹಾಗಾಗಿ ಮೊದಲು ರೋಗನಿರ್ಣಯ ಮಾಡುವ ಮೂಲಕ ಅದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳಬೇಕು. ಆದರೆ ಇದಕ್ಕೆ ನಾನಾ ರೀತಿಯ ಔಷಧಗಳನ್ನು ಸೇವನೆ ಮಾಡುವ ಮೊದಲು ಆಯುರ್ವೇದ ಔಷಧಗಳ ಮೂಲಕ ಸುಲಭವಾಗಿ ಪರಿಹಾರ ಪಡೆಯಬಹುದು. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಬೆಂಗಳೂರು ಎಸ್ಡಿಎಂಐಎಹೆಚ್, ಪಂಚಕರ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ ಪ್ರತಿಭಾ ಜಿ ಭಟ್ ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.

ಇತ್ತೀಚಿನ ದಿನಗಳಲ್ಲಿ ಕಾಲಿನ ನರಗಳ ಸಮಸ್ಯೆ (Leg nerve problem) ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಹಲವು ರೀತಿಯ ಕಾರಣಗಳಿದ್ದು ನರ ಹಾನಿ, ರಕ್ತ ಪರಿಚಲನೆ ಸಮಸ್ಯೆ, ಅಥವಾ ಬೆನ್ನುಮೂಳೆಯ ಸಮಸ್ಯೆಗಳಿಂದ ಉಂಟಾಗಬಹುದು. ಈ ಸಮಸ್ಯೆಗಳು ನೋವು, ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಮತ್ತು ದೌರ್ಬಲ್ಯವನ್ನು ಉಂಟುಮಾಡಬಹುದು. ಹಾಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಲು ಆಯುರ್ವೇದದ ಮೊರೆ ಹೋಗಬಹುದು. ಆದರೆ ಅದಕ್ಕೂ ಮೊದಲು ಕಾಲಿನ ನರಗಳ ಸಮಸ್ಯೆ ಏಕೆ ಉಂಟಾಗುತ್ತದೆ? ಆಯುರ್ವೇದಲ್ಲಿನ ಪರಿಹಾರಗಳೇನು (Ayurvedic remedies) ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಉತ್ತಮ. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಬೆಂಗಳೂರು ಎಸ್ಡಿಎಂಐಎಹೆಚ್, ಪಂಚಕರ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ ಪ್ರತಿಭಾ ಜಿ ಭಟ್ (Dr. Pratibha G. Bhat) ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.
ಕಾಲಿನ ನರಗಳ ಸಮಸ್ಯೆ ಏಕೆ ಸಂಭವಿಸುತ್ತವೆ?
ಕಾಲಿನಲ್ಲಿನ ನರಗಳ ಸಮಸ್ಯೆಗೆ ಹಲವು ಕಾರಣಗಳಿವೆ ಅವುಗಳಲ್ಲಿ ಪ್ರಮುಖವಾಗಿ:
- ವಿಶ್ರಾಂತಿ ಇಲ್ಲದೆ ದೀರ್ಘಕಾಲ ನಿಂತುಕೊಳ್ಳುವುದು
- ಬೆನ್ನುಮೂಳೆಯ ಮೇಲೆ ಒತ್ತಡ (ಡಿಸ್ಕ್ ಬಲ್ಜ್ ಅಥವಾ ಡಿಸ್ಕ್ ಲೆಶನ್ನ ಕಾರಣಕ್ಕಾಗಿರಬಹುದು)
- ರಸ್ತೆ ಅಪಘಾತ ಅಥವಾ ಬೀಳುವುದರಿಂದ
- ಬೆನ್ನುಮೂಳೆಯ ಅರವಳಿಕೆಯೊಂದಿಗೆ (ಸ್ಪೈನಲ್ ಅನಸ್ತೇಶಿಯಾ) ಯಾವುದೇ ಶಸ್ರ್ತಚಿಕಿತ್ಸೆಗೆ ಒಳಪಟ್ಟಿದ್ದಲ್ಲಿ
ಆಯುರ್ವೇದಲ್ಲಿನ ಪರಿಹಾರಗಳು:
ಯಾವುದೇ ರೀತಿಯ ಚಿಕಿತ್ಸೆಯನ್ನು ಪ್ರಾರಂಭಿಸುವ ಮುನ್ನ ರೋಗನಿರ್ಣಯ ಮಾಡುವುದು (ಡಯಾಗೊನಿಸಿಸ್) ಅತೀ ಅವಶ್ಯಕ. ಹೀಗಾಗಿ ವೈದ್ಯರ ಸಲಹೆ ಪಡೆಯುವುದು ಉತ್ತಮ. ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ರೋಗನಿರ್ಣಯ ಮಾಡಿಸಿಕೊಂಡ ನಂತರ ಅದಕ್ಕನುಗುಣವಾಗಿ ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ಈ ಚಿಕಿತ್ಸೆಗಳಲ್ಲಿ ಓರಲ್ ಮೆಡಿಕೇಶನ್ (ಬಾಯಿ ಮೂಲಕ ಸೇವಿಸುವ ಔಷಧಗಳು), ಪಂಚಕರ್ಮ ಚಿಕಿತ್ಸೆ, ಪಿಸಿಯೋತೆರಪಿ ಹಾಗೂ ಆಕ್ಯಪಂಕ್ಚರ್ ಸೇರಿವೆ.
ನರಗಳ ಸಮಸ್ಯೆಗೆ ಸಹಾಯ ಮಾಡುವ ಕೆಲವು ಔಷಧಗಳು:
- ಬೃಹತ್ ವಾತ ಚಿಂತಾಮಣಿ ರಸ
- ಏಕಾಂಗ ವೀರ ರಸ
- ಮಹಾರಶ್ನಾದಿ ಕಷಾಯ
- ಸಹಚರಾದಿ ಕಷಾಯ
- ರಾಸ್ನೇರಂಡೈ ಕಷಾಯ
- ದಶಮೂಲಾರಿಷ್ಟ
- ಬಲಾರಿಷ್ಟ
- ಅಶ್ವಗಂಧಾರಿಷ್ಟ
ಆದರೆ ಈ ಔಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಸೇವಿಸಬೇಕು.
ಇದನ್ನೂ ಓದಿ: ಮನುಷ್ಯ ಸತ್ತ ಮೇಲೆ ಮಾತ್ರವಲ್ಲ ಬದುಕಿರುವಾಗಲೂ ಅಂಗಾಂಗ ದಾನ ಮಾಡಬಹುದು; ಈ ಬಗ್ಗೆ ಡಾ. ಪ್ರದೀಪ್ ರಂಗಪ್ಪ ಏನ್ ಹೇಳ್ತಾರೆ ನೋಡಿ
ನರಗಳ ಸಮಸ್ಯೆಗೆ ಚಿಕಿತ್ಸೆಗಳು:
- ಭಾಷ್ಪ ಸ್ವೇದದ ಜೊತೆಗೆ ಸರ್ವಾಂಗ ಅಭ್ಯಂಗ
- ಸರ್ವಾಂಗ ಪತ್ರಪಿಂಡ ಸ್ವೇದ
- ಬಸ್ತಿ ಚಿಕಿತ್ಸಾ
- ಸಿರಾವ್ಯಧ ಮತ್ತು ಅಗ್ನಿ ಕರ್ಮ
ಯಾವುದೇ ಪಂಚಕರ್ಮ ಚಿಕಿತ್ಸೆಗಳನ್ನು ನೋಂದಾಯಿತ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿದ ನಂತರ ಮಾತ್ರ ತೆಗೆದುಕೊಳ್ಳಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
