ಮನುಷ್ಯ ಸತ್ತ ಮೇಲೆ ಮಾತ್ರವಲ್ಲ ಬದುಕಿರುವಾಗಲೂ ಅಂಗಾಂಗ ದಾನ ಮಾಡಬಹುದು; ಈ ಬಗ್ಗೆ ಡಾ. ಪ್ರದೀಪ್ ರಂಗಪ್ಪ ಏನ್ ಹೇಳ್ತಾರೆ ನೋಡಿ
ಶ್ರೇಷ್ಠ ದಾನಗಳಲ್ಲಿ ಅಂಗಾಂಗ ದಾನವು ಕೂಡ ಒಂದು. ಆದರೆ ಈ ಬಗ್ಗೆ ಜನರಿಗೆ ಅಷ್ಟಾಗಿ ಮಾಹಿತಿ ಇಲ್ಲ. ಅದಕ್ಕಾಗಿಯೇ ಅಂಗಾಂಗ ದಾನ ಮಾಡುವವರ ಸಂಖ್ಯೆ ಕೂಡ ಕಡಿಮೆ. ಹಾಗಾಗಬಾರದು ನಮ್ಮ ಕೈಯಲ್ಲಿ ಮತ್ತೊಬ್ಬರ ಜೀವ ಉಳಿಸುವ ಅವಕಾಶವಿದ್ದಾಗ ಅದನ್ನು ಬಳಸಿಕೊಳ್ಳಬೇಕು. ಒಬ್ಬರ ಜೀವನಕ್ಕೆ ಬೆಳಕಾಗುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಅದಕ್ಕಾಗಿಯೇ ಟಿವಿ9 ಕನ್ನಡ ಅಂಗಾಂಗ ದಾನದ ಕುರಿತು ಜನರಿಗೆ ತಿಳಿಸಲು ಜೊತೆಗೆ ಅದರ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವಿಟ್ಟುಕೊಂಡು ಮಾಹಿತಿ ಕಲೆ ಹಾಕಿದ್ದು ಯಶವಂತಪುರ ಮಣಿಪಾಲ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಟ್ ಕ್ರಿಟಿಕ್ ಕೇರ್, ಡಾ. ಪ್ರದೀಪ್ ರಂಗಪ್ಪ ಅವರು ಅಂಗಾಂಗ ದಾನದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ಕುರಿತ ಮತ್ತಷ್ಟು ಮಾಹಿತಿಗಾಗಿ ಈ ಸ್ಟೋರಿ ಓದಿ.

ಅಂಗಾಂಗ ದಾನವನ್ನು ಅತ್ಯಂತ ಶ್ರೇಷ್ಠ ದಾನಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಪ್ರತಿವರ್ಷ ಆಗಸ್ಟ್ 13 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಅಂಗದಾನ ದಿನವನ್ನು (World Organ Donation Day) ಆಚರಿಸಲಾಗುತ್ತದೆ. ಮಾತ್ರವಲ್ಲ ಆಗಸ್ಟ್ ತಿಂಗಳು ಪೂರ್ತಿ ಈ ದಿನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನ ಮಾಡಲು ಜನರನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಇದಕ್ಕೆ ಪೂರಕವಾಗಿ ಟಿವಿ9 ಕನ್ನಡ ಕೂಡ ಅಂಗಾಂಗ ದಾನದ ಕುರಿತು ಜನರಿಗೆ ತಿಳಿಸಲು ಜೊತೆಗೆ ಅದರ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವಿಟ್ಟುಕೊಂಡು ಮಾಹಿತಿ ಕಲೆ ಹಾಕಿದ್ದು ಯಶವಂತಪುರ ಮಣಿಪಾಲ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಟ್ ಕ್ರಿಟಿಕಲ್ ಕೇರ್, ಡಾ. ಪ್ರದೀಪ್ ರಂಗಪ್ಪ (Dr. Pradeep Rangappa) ಅವರು ಅಂಗಾಂಗ ದಾನದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ಬಗೆಗಿನ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.
ಜೀವಂತವಿರುವ ವ್ಯಕ್ತಿ ಯಾವ ಅಂಗಗಳನ್ನು ದಾನ ಮಾಡಬಹುದು?
ಡಾ. ಪ್ರದೀಪ್ ರಂಗಪ್ಪ ಅವರು ಹೇಳುವ ಪ್ರಕಾರ, ಮನುಷ್ಯ ಜೀವಂತವಾಗಿದ್ದಾಗ ಯಾವ ರೀತಿಯ ಅಂಗಗಳನ್ನು ದಾನ ಮಾಡಬಹುದು ಎಂಬುದರ ಬಗ್ಗೆ, ಮಾತ್ರವಲ್ಲ ಮರಣಾನಂತರ ಅಂದರೆ ಬ್ರೇನ್ ಡೆಡ್ ಆದ ಮೇಲೆ ಯಾವ ಆರ್ಗನ್ ಗಳನ್ನು ಕೊಡಬಹುದು ಎಂಬ ಅನುಮಾನವಿರುತ್ತದೆ. ಒಬ್ಬ ವ್ಯಕ್ತಿ ಜೀವಂತವಿರುವಾಗ ಇದ್ದಂತಹ ಎರಡು ಕಿಡ್ನಿಗಳಲ್ಲಿ ಒಂದನ್ನು ದಾನ ಮಾಡಬಹುದು. ಆದರೆ ಅದಕ್ಕಿಂತ ಮೊದಲು ಸೂಕ್ತ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಅಂದರೆ ಕೊಡುವುದಕ್ಕೆ ಯೋಗ್ಯವಿದೆಯೋ? ಇಲ್ಲವೋ ಎಂಬುದನ್ನು ನೋಡಬೇಕಾಗುತ್ತದೆ. ಜೊತೆಗೆ ಲಂಗ್ಸ್ ಗಳನ್ನು ಕೂಡ ದಾನ ಮಾಡಬಹುದು. ಅಂದರೆ ಅದರಲ್ಲಿ ಒಂದು ಭಾಗವನ್ನು ನಾವು ಮತ್ತೊಬ್ಬರಿಗೆ ಕೊಡಬಹುದು. ಇದು ಜೀವಂತವಾಗಿದ್ದಾಗ ನಾವು ದಾನ ಮಾಡಬಹುದು. ಇದರ ಜೊತೆಗೆ ದೇಹದಲ್ಲಿ ಟಿಶ್ಯೂ ಗಳಿರುತ್ತೆ ಮತ್ತೆ ಪ್ಯಾಂಕ್ರಿಯಾಸ್ (ಮೇದೋಜೀರಕ ಗ್ರಂಥಿ) ಇದು ಡಯಾಬಿಟಿಸ್ ಕಂಟ್ರೋಲ್ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಇದು ಒಂದು ಅಂಗವಾಗಿದ್ದು ಇದರಲ್ಲಿ ಒಂದು ಭಾಗವನ್ನು ಮತ್ತೊಬ್ಬರಿಗೆ ಕೊಡುವುದಕ್ಕೆ ಅವಕಾಶವಿರುತ್ತದೆ. ಇವುಗಳೆಲ್ಲವನ್ನೂ ವ್ಯಕ್ತಿ ಜೀವಂತವಾಗಿದ್ದಾಗಲೇ ಮತ್ತೊಬ್ಬರಿಗೆ ದಾನ ಮಾಡಬಹುದು.
ಇದನ್ನೂ ಓದಿ: ಮನೆಯಲ್ಲಿಯೇ ನೈಸರ್ಗಿಕವಾಗಿ ಎದೆ ಹಾಲು ಹೆಚ್ಚಿಸಲು ಏನು ಮಾಡಬೇಕು? ಇಲ್ಲಿದೆ ಡಾ. ಸಹನಾ ಶಂಕರಿ ಸಲಹೆ
ಇನ್ನು ಒಬ್ಬ ವ್ಯಕ್ತಿಯ ಮರಣಾನಂತರ ಎಲ್ಲರಿಗೂ ತಿಳಿದಿರುವಂತೆ ಹೃದಯವನ್ನು ದಾನ ಮಾಡಬಹುದು. ಅದರ ಜೊತೆಗೆ ಎರಡು ಲಂಗ್ಸ್ ಗಳನ್ನು, ಕಿಡ್ನಿಗಳನ್ನು ಮತ್ತು ಕಣ್ಣುಗಳನ್ನು ದಾನ ಮಾಡಬಹುದು ಇದರ ಜೊತೆಗೆ ಬೊನ್ಸ್, ಚರ್ಮ, ಗರ್ಭಕೋಶವನ್ನು ದಾನ ಮಾಡಬಹುದು. ಇವೆಲ್ಲಾ ವ್ಯಕ್ತಿಯ ಬ್ರೇನ್ ಡೆಡ್ ಆದ ಮೇಲೆ ದಾನ ಮಾಡಬಹುದಾದಂತಹ ಅಂಗಗಳಾಗಿವೆ.
ಡಾ. ಪ್ರದೀಪ್ ರಂಗಪ್ಪ ಅವರ ವಿಡಿಯೋ ಇಲ್ಲಿದೆ ನೋಡಿ:
ಅಂಗದಾನ ಮಾಡಿದ ಮೇಲೆ ಯಾವ ರೀತಿ ಆರೋಗ್ಯ ಕಾಪಾಡಿಕೊಳ್ಳಬೇಕು?
ಡಾ. ಪ್ರದೀಪ್ ರಂಗಪ್ಪ ಅವರು ತಿಳಿಸಿರುವ ಮಾಹಿತಿ ಪ್ರಕಾರ, ಜೀವಂತ ಇರುವ ವ್ಯಕ್ತಿ ಅಂಗದಾನ ಮಾಡಿದ ಮೇಲೆ ಅವನಿಗೆ ಯಾವುದೇ ರೀತಿಯ ಸಮಸ್ಯೆಗಳು ಆಗುವುದಿಲ್ಲ. ಕೆಲವರಿಗೆ ಈ ಬಗ್ಗೆ ಗೊಂದಲಗಳಿರುತ್ತವೆ. ಆದರೆ ಅಂಗದಾನ ಮಾಡುವುದರಿಂದ ಯಾವ ರೀತಿಯ ತೊಂದರೆಗಳು ಬರುವುದಿಲ್ಲ. ಒಂದು ಕಿಡ್ನಿ ಅಥವಾ ಲಿವರ್ ಒಂದು ಭಾಗ ಕೊಟ್ಟಿದ್ದರೂ ಸಹ ನಾರ್ಮಲ್ ಆಗಿ ಜೀವನ ನಡೆಸಬಹುದು. ಮಾತ್ರವಲ್ಲ ಅವರಿಗೆ ತಾವು ಒಂದು ಅಂಗ ನೀಡಿ ಮೊತ್ತೊಬ್ಬರ ಜೀವ ಉಳಿಸಿದ್ದೇವೆ ಎಂಬ ಹೆಮ್ಮೆ ಯಾವಾಗಲು ಇರುತ್ತದೆ. ಇದೆಲ್ಲದರ ಜೊತೆಗೆ ಒಳ್ಳೆಯ ಆಹಾರ ಸೇವನೆ, ವ್ಯಾಯಾಮ ಮಾಡುವ ರೂಢಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಜೊತೆಗೆ ವರ್ಷಕ್ಕೆ ಒಂದು ಬಾರಿ ಚೆಕಪ್ ಮಾಡಿಕೊಳ್ಳುವುದು ಒಳ್ಳೆಯದು. ಮರಣ ಹೊಂದಿದ ವ್ಯಕ್ತಿಯಿಂದ ಅಂಗಗಳನನ್ನು ಪಡೆದಂತವರು ವೈದ್ಯರು ನೀಡಿರುವಂತಹ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. ಜೊತೆಗೆ ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ ಮಾಡುವುದನ್ನು ಮರೆಯಬಾರದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Mon, 25 August 25




