AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿಯೇ ನೈಸರ್ಗಿಕವಾಗಿ ಎದೆ ಹಾಲು ಹೆಚ್ಚಿಸಲು ಏನು ಮಾಡಬೇಕು? ಇಲ್ಲಿದೆ ಡಾ. ಸಹನಾ ಶಂಕರಿ ಸಲಹೆ

ಎದೆಹಾಲು ಉಣಿಸುವುದರಿಂದ ತಾಯಿ ಮತ್ತು ಮಗುವಿಗೆ ಅನೇಕ ರೀತಿಯ ಪ್ರಯೋಜನಗಳು ಸಿಗುತ್ತವೆ ಎಂಬುದು ತಿಳಿದ ವಿಚಾರ. ಅಷ್ಟೆಲ್ಲಾ ಪ್ರಯೋಜನಗಳಿರುವುದರಿಂದಲೇ ವಿಶ್ವಸಂಸ್ಥೆ ತಾಯಿಯ ಎದೆಹಾಲಿನ ಮಹತ್ವ ಮತ್ತು ಎದೆ ಹಾಲಿನ ಪ್ರಯೋಜನಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಆಗಸ್ಟ್‌ ಮೊದಲ ವಾರ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸುವ ನಿರ್ಧಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಟಿವಿ9 ಕನ್ನಡ ಕೂಡ ಸ್ತನ್ಯಪಾನದ ಪ್ರಯೋಜನಗಳ ಬಗ್ಗೆ ತಿಳಿಸುವ ಉದ್ದೇಶ ಇಟ್ಟುಕೊಂಡು ಮಾಹಿತಿ ಕಲೆ ಹಾಕಿದ್ದು, ಎಸ್‌ಡಿಎಮ್‌ ಆಯುರ್ವೇದ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ಡಾ. ಸಹನಾ ಶಂಕರಿ ಅವರು ಈ ಕುರಿತು ಮಾತನಾಡಿದ್ದು ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.

ಮನೆಯಲ್ಲಿಯೇ ನೈಸರ್ಗಿಕವಾಗಿ ಎದೆ ಹಾಲು ಹೆಚ್ಚಿಸಲು ಏನು ಮಾಡಬೇಕು? ಇಲ್ಲಿದೆ ಡಾ. ಸಹನಾ ಶಂಕರಿ ಸಲಹೆ
ಡಾ. ಸಹನಾ ಶಂಕರಿ ನೀಡಿರುವಂತಹ ಆರೋಗ್ಯ ಸಲಹೆ
ಪ್ರೀತಿ ಭಟ್​, ಗುಣವಂತೆ
|

Updated on: Aug 07, 2025 | 5:01 PM

Share

ತಾಯಿಯ ಎದೆಹಾಲು (breast milk) ಮಗುವಿಗೆ ಜೀವಾಮೃತವಿದ್ದಂತೆ. ಎದೆಹಾಲು ಉಣಿಸುವುದರಿಂದ ತಾಯಿ ಮತ್ತು ಮಗುವಿಗೆ ಅನೇಕ ರೀತಿಯ ಪ್ರಯೋಜನಗಳು ಸಿಗುತ್ತವೆ. ಜೊತೆಗೆ ತಾಯಿಯ ಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಅಗತ್ಯವಿರುವಂತಹ ಎಲ್ಲಾ ಪೋಷಕಾಂಶಗಳೂ ಸಿಗುವುದರಿಂದ ಇದು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಎದೆಹಾಲುಣಿಸುವುದರಿಂದ ತಾಯಿಯ ಗರ್ಭಾಶಯವು ಬೇಗನೆ ಮೊದಲಿನ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆ. ಇಷ್ಟೆಲ್ಲಾ ಪ್ರಯೋಜನಗಳಿರುವುದರಿಂದಲೇ ವಿಶ್ವಸಂಸ್ಥೆ ತಾಯಿಯ ಎದೆಹಾಲಿನ ಮಹತ್ವ ಮತ್ತು ಎದೆ ಹಾಲಿನ ಪ್ರಯೋಜನಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಆಗಸ್ಟ್‌ ಮೊದಲ ವಾರ ವಿಶ್ವ ಸ್ತನ್ಯಪಾನ ಸಪ್ತಾಹವನ್ನು (Breastfeeding Week) ಆಚರಿಸುವ ನಿರ್ಧಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಟಿವಿ9 ಕನ್ನಡ ಕೂಡ ಸ್ತನ್ಯಪಾನದ ಪ್ರಯೋಜನಗಳ ಬಗ್ಗೆ ತಿಳಿಸುವ ಉದ್ದೇಶ ಇಟ್ಟುಕೊಂಡು ಮಾಹಿತಿ ಕಲೆ ಹಾಕಿದ್ದು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉಡುಪಿ, ಎಸ್‌ಡಿಎಮ್‌ ಆಯುರ್ವೇದ ಕಾಲೇಜಿನ (SDM College of Ayurveda) ಸಹಾಯಕ ಪ್ರಾಧ್ಯಾಪಕಿ, ಡಾ. ಸಹನಾ ಶಂಕರಿ (Dr. Sahana Shankari) ಅವರು ಈ ವಿಷಯದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಮಗು ಮತ್ತು ತಾಯಿಗೆ ಇದರಿಂದ ಸಿಗುವಂತಹ ಪ್ರಯೋಜನ, ಅವಳಿ- ಜವಳಿ ಮಕ್ಕಳನ್ನು ಹೆತ್ತ ತಾಯಂದಿರಿಗೆ ಎದೆ ಹಾಲು ಕಡಿಮೆ ಆದಾಗ ಏನು ಮಾಡಬೇಕು? ಮನೆಯಲ್ಲಿ ನೈಸರ್ಗಿಕವಾಗಿ ಎದೆ ಹಾಲನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬಹುದು ಎಂಬುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಮಗುವಿಗೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತವೆ?

ಡಾ. ಸಹನಾ ಶಂಕರಿ ಅವರು ಹೇಳುವ ಪ್ರಕಾರ, “ಎದೆಹಾಲು ಕುಡಿದಂತಹ ಮಕ್ಕಳು ಬೇರೆ ಹಾಲನ್ನು ಕುಡಿದ ಮಕ್ಕಳಿಗಿಂತ ಎಂಟು ಪಟ್ಟು ಬುದ್ಧಿವಂತರಾಗಿರುತ್ತಾರೆ ಎಂದು ಸಂಶೋಧನೆಗಳಿಂದಲೇ ತಿಳುದು ಬಂದಿದೆ. ಅಂದರೆ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಮಗುವಿಗೆ ಬರುವಂತಹ ಹಲವಾರು ಕಾಯಿಲೆಗಳನ್ನು ತಡೆಗಟ್ಟುವ ಶಕ್ತಿ ಎದೆ ಹಾಲಿಗಿದೆ. ಉದಾಹರಣೆಗೆ ಅಲರ್ಜಿ, ಶ್ವಾಸಕೋಶಕ್ಕೆ ಸಂಬಂಧಿಸಿದಂತಹ ತೊಂದರೆಗಳು, ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು, ವಾಂತಿ, ಬೇಧಿ ಇತ್ಯಾದಿ ಕಾಯಿಲೆಗಳಿಂದ ಮಗುವನ್ನು ಕಾಪಾಡುತ್ತದೆ. ಮಾತ್ರವಲ್ಲ ಅತಿಸಾರ, ಉಸಿರಾಟದ ಸೋಂಕುಗಳು ಮತ್ತು ಇತರ ಸಾಂಕ್ರಾಮಿಕ ರೋಗಗಳ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ” ಎಂದು ಅವರು ಹೇಳಿದ್ದಾರೆ.

ಡಾ. ಸಹನಾ ಶಂಕರಿ ಅವರ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ
Image
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
Image
ಚಿಕ್ಕ ವಯಸ್ಸಿಗೆ ತಾಯಿಯಾಗುವವರೇ ಎಚ್ಚರ!
Image
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
Image
ಸಿಸೇರಿಯನ್‌, ನಾರ್ಮಲ್ ಡೆಲಿವರಿಯಾದ ಬಾಣಂತಿಯರಿಗೆ ಡಾ. ಶಿಲ್ಪಾ ಹೇಳೋದೇನು?

ತಾಯಿಗಿರುವಂತಹ ಪ್ರಯೋಜನಗಳೇನು?

ಡಾ. ಸಹನಾ ಶಂಕರಿ ಅವರು ನೀಡಿರುವ ಮಾಹಿತಿ ಅನುಸಾರ, “ಎದೆಹಾಲುಣಿಸುವುದರಿಂದ ಹೆರಿಗೆಯ ನಂತರ ಕಂಡುಬರುವಂತಹ ರಕ್ತಸ್ರಾವವನ್ನು ತಡೆಗಟ್ಟುವುದಲ್ಲದೆ ರಕ್ತಹೀನತೆಯಂತಹ ಸಮಸ್ಯೆಗಳಿಂದ ತಾಯಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಕೆಲವು ರೀತಿಯ ಕ್ಯಾನ್ಸರ್ ಬರುವ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ಉದಾಹರಣೆಗೆ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ. ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಾದ ಮಧುಮೇಹ ಮತ್ತು ಬೊಜ್ಜು ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ತೂಕ ಇಳಿಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ” ಎಂದಿದ್ದಾರೆ.

ಟ್ವಿನ್ಸ್ ಮಕ್ಕಳಾದಾಗ ಎದೆ ಹಾಲು ಕಡಿಮೆ ಆದ್ರೆ ಏನ್ ಮಾಡಬೇಕು?

ಡಾ. ಸಹನಾ ಶಂಕರಿ ಅವರು ತಿಳಿಸಿರುವಂತೆ, “ಅವಳಿ ಮಕ್ಕಳನ್ನು ಹೆತ್ತ ತಾಯಂದಿರ ಎದೆ ಹಾಲು ಕಡಿಮೆಯಾದರೆ ನಾಲ್ಕು ತಿಂಗಳ ನಂತರ ದನದ ಹಾಲನ್ನು ಕುಡಿಸಬಹುದು. ಯಾವುದೇ ರೀತಿಯ ನೀರಿನ ಬೆರಕೆ ಮಾಡದೆಯೇ ಕೊಡಬಹುದು. ಇತ್ತೀಚಿನ ದಿನಗಳಲ್ಲಿ ಮೊಲೆಗಳಿಂದ ಹಾಲನ್ನು ತೆಗೆದು ಶೇಖರಿಸಿ ಇಡುವಂತಹ ಅಭ್ಯಾಸ ಆರಂಭವಾಗಿದೆ. ಇದನ್ನು ಹೊರತೆಗೆದ ನಂತರ ಎಂಟು ಗಂಟೆ ವರೆಗೆ ಯಾವುದೇ ರೀತಿಯ ಪ್ರೊಟೆಕ್ಷನ್ ಇಲ್ಲದೆ ಇಡಬಹುದು. ಫ್ರಿಡ್ಜ್ ನಲ್ಲಿ ಇಟ್ಟರೆ 24 ಗಂಟೆ ವರೆಗೆ ಎದೆ ಹಾಲನ್ನು ಉಣಿಸಬಹುದು. ಆದರೆ ಫ್ರಿಡ್ಜ್ ನಿಂದ ಹೊರತೆಗೆದ ನಂತರ ಬಿಸಿ ನೀರಿನ ಪಾತ್ರೆಯಲ್ಲಿ ಇಟ್ಟು ಅದು ಸ್ವಲ್ಪ ಬೆಚ್ಚಗಾದ ಮೇಲೆ ಕುಡಿಸಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಕ್ಕಳಿಗೆ ಬೀದಿ ಬದಿ ಆಹಾರ ನೀಡುವ ಮುನ್ನ ಈ ವಿಚಾರ ತಿಳಿದಿರಲಿ: ಡಾ. ನಂದಿತಾ ರತ್ನಂ

ನೈಸರ್ಗಿಕವಾಗಿ ತಾಯಿಯ ಎದೆಹಾಲನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

ಡಾ. ಸಹನಾ ಶಂಕರಿ ಅವರು ನೀಡಿರುವ ಮಾಹಿತಿ ಅನುಸಾರ, “ಪ್ರತಿಯೊಬ್ಬ ತಾಯಿಯೂ ಕೂಡ ನಾನು ನನ್ನ ಮಗುವಿಗೆ ಪ್ರೀತಿಯಿಂದ ಎದೆ ಹಾಲನ್ನು ಕುಡಿಸುತ್ತೇನೆ ಎಂದು ಮಾನಸಿಕವಾಗಿ ಸಿದ್ಧರಾಗಿರಬೇಕು. ಈ ರೀತಿ ಮಾಡಿದರೆ ಎದೆ ಹಾಲಿಗೆ ಕೊರತೆ ಬರುವುದಿಲ್ಲ. ಯಾವುದೇ ರೀತಿಯ ಒತ್ತಡ, ಖಿನ್ನತೆಗೆ ಒಳಗಾಗದೆ ತನ್ನ ಮಗುವಿಗೆ ಎದೆಹಾಲು ನೀಡುವುದನ್ನೇ ಮೊದಲ ಆದ್ಯತೆಯನ್ನಾಗಿಸಿಕೊಂಡರೆ ತಾಯಿಗೆ ಎದೆ ಹಾಲು ಕಡಿಮೆ ಆಗುವುದಿಲ್ಲ. ಇದಕ್ಕೆ ಆಕೆಯ ಸುತ್ತುಮುತ್ತಲಿರುವವರು ಕೂಡ ಪ್ರೋತ್ಸಾಹ ನೀಡಬೇಕು. ಜೊತೆಗೆ ಪೋಷಕಾಂಶದಿಂದ ಸಮೃದ್ದವಾಗಿರುವಂತಹ ಆಹಾರಗಳು ಕೂಡ ಎದೆ ಹಾಲು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ. ಆಯುರ್ವೇದದಲ್ಲಿ ಹೇಳಿರುವಂತಹ ಮನೆಮದ್ದುಗಳನ್ನು ಬಳಸಬಹುದು. ಉದಾಹರಣೆಗೆ, ಶುಂಠಿ, ಪಿಪ್ಪಲಿ, ತಾಯಿಬೇರು, ಮೆಂತ್ಯ, ಕಾಳ ಜೀರಿಗೆ, ಶತಪುಷ್ಪ, ಸಬ್ಬಸ್ಸಿಗೆ ಹೀಗೆ ಹಲವಾರು ರೀತಿಯ ಪದಾರ್ಥಗಳನ್ನು ಪ್ರತಿನಿತ್ಯ ಸೇವನೆ ಮಾಡುವ ಆಹಾರದಲ್ಲಿ ಸೇರಿಸಿಕೊಂಡಲ್ಲಿ ಮಗುವಿಗೆ ಅಗತ್ಯವಿರುವಷ್ಟು ಹಾಲನ್ನು ಕೊಡಬಹುದಾಗಿದೆ. ಕೆಲವು ಬಾರಿ ಎದೆಹಾಲುಣಿಸುವಾಗ ತಾಯಿ ಮತ್ತು ಮಗು ಇಬ್ಬರಲ್ಲಿಯೂ ನಾನಾ ರೀತಿ ಸಮಸ್ಯೆಗಳು ಕಂಡು ಬರಬಹುದು ಅಂತಹ ಸಂದರ್ಭದಲ್ಲಿ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಮಾಲೋಚನೆ ನಡೆಸಿ ಪರಿಹಾರ ಪಡೆದುಕೊಳ್ಳಬೇಕು” ಎಂದು ಹೇಳಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!