Figs Side Effects: ಅಂಜೂರವನ್ನು ಇಷ್ಟ ಪಡುವವರು ಅದರ ಅಡ್ಡಪರಿಣಾಮಗಳನ್ನು ತಿಳಿಯಬೇಕು

ಅಂಜೂರವು ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ನೀಡುತ್ತದೆ. ಅದಲ್ಲದೆ ಇದರಲ್ಲಿ ಅನೇಕ ರೀತಿಯ ಔಷಧೀಯ ಗುಣಗಳಿದ್ದು ಪ್ರತಿದಿನ ಅಂಜೂರವನ್ನು ತಿನ್ನುವುದರಿಂದ ದೇಹಕ್ಕೆ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ತಾಮ್ರ ಮತ್ತು ಮೆಗ್ನೀಸಿಯಮ್ನಂತಹ ಅನೇಕ ರೀತಿಯ ಖನಿಜಗಳನ್ನು ಒದಗಿಸುತ್ತದೆ. ಇದು ವಿಶೇಷವಾಗಿ ಪುರುಷರಲ್ಲಿ ಫಲವತ್ತತೆ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಅಂಜೂರವನ್ನು ಅತಿಯಾಗಿ ತಿನ್ನುವುದರಿಂದ ಗಂಭೀರ ರೀತಿಯ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

Figs Side Effects: ಅಂಜೂರವನ್ನು ಇಷ್ಟ ಪಡುವವರು ಅದರ ಅಡ್ಡಪರಿಣಾಮಗಳನ್ನು ತಿಳಿಯಬೇಕು
ಅಂಜೂರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 07, 2024 | 2:33 PM

ಅಂಜೂರದ ಹಣ್ಣುಗಳಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿರಬಹುದು. ಅದರಲ್ಲಿಯೂ ಇದನ್ನು ಸೇವನೆ ಮಾಡುವುದರಿಂದ ಮತ್ತೆ ಮತ್ತೆ ತಿನ್ನಬೇಕು ಎಂಬ ಆಸೆ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಇದನ್ನು ದೇಹದ ಆರೋಗ್ಯ ಕಾಪಾಡಿಕೊಳ್ಳಲು ಫಿಟ್ನೆಸ್ ಪ್ರೀಯರು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಏಕೆಂದರೆ ಅಂಜೂರವು ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ನೀಡುತ್ತದೆ. ಅದಲ್ಲದೆ ಇದರಲ್ಲಿ ಅನೇಕ ರೀತಿಯ ಔಷಧೀಯ ಗುಣಗಳಿದ್ದು ಪ್ರತಿದಿನ ಅಂಜೂರವನ್ನು ತಿನ್ನುವುದರಿಂದ ದೇಹಕ್ಕೆ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ತಾಮ್ರ ಮತ್ತು ಮೆಗ್ನೀಸಿಯಮ್ನಂತಹ ಅನೇಕ ಖನಿಜಗಳನ್ನು ಒದಗಿಸುತ್ತದೆ. ಇದು ವಿಶೇಷವಾಗಿ ಪುರುಷರಲ್ಲಿ ಫಲವತ್ತತೆ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಅಂಜೂರವನ್ನು ಅತಿಯಾಗಿ ತಿನ್ನುವುದರಿಂದ ಗಂಭೀರ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಿಂದ ಅನೇಕ ರೀತಿಯ ಅನಾನುಕೂಲಗಳಾಗುತ್ತವೆ ಎಂದು ಹೇಳಲಾಗುತ್ತದೆ ಹಾಗಾಗಿ ಅಂಜೂರ ಪ್ರೀಯರು ಇದರ ಆರೋಗ್ಯ ಪ್ರಯೋಜನ ಮಾತ್ರವಲ್ಲ ಇದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆಯೂ ಹೆಚ್ಚಿನ ಗಮನಹರಿಸಬೇಕು. ಹಾಗಾದರೆ ಇದನ್ನು ಹೆಚ್ಚು ಹೆಚ್ಚು ಸೇವನೆ ಮಾಡಬಾರದು ಎಂದು ಹೇಳಲು ಕಾರಣವೇನು? ಇದರಿಂದ ದೇಹಕ್ಕೆ ಯಾವ ರೀತಿಯ ತೊಂದರೆ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

  • ಅತಿಯಾಗಿ ಅಂಜೂರ ಸೇವನೆ ಮಾಡುವುದರಿಂದ ಕ್ಯಾಲ್ಸಿಯಂ ಕೊರತೆಗೆ ಕಾರಣವಾಗಬಹುದು. ಅಲ್ಲದೆ ಇದನ್ನು ತಿನ್ನುವುದರಿಂದ ದೇಹದಲ್ಲಿ ಸಲ್ಫೈಟ್ ಹೆಚ್ಚಾಗುತ್ತದೆ. ಇದು ಮೈಗ್ರೇನ್ ಗೆ ಕಾರಣವಾಗಬಹುದು. (ಅಂಜೂರದ ಈ ಅಡ್ಡಪರಿಣಾಮಗಳು ಅವುಗಳನ್ನು ಅತಿಯಾಗಿ ಸೇವಿಸಿದಾಗ ಮಾತ್ರ ಉಂಟಾಗುತ್ತದೆ.
  • ಯಾವುದೇ ರೀತಿಯ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ಅಂಜೂರವನ್ನು ತಿನ್ನಬಾರದು. ಇದರಿಂದ ಅವರಿಗೆ ತುರಿಕೆ, ದದ್ದುಗಳು ಕಂಡು ಬರಬಹುದು.
  • ಅಂಜೂರದ ಹಣ್ಣುಗಳನ್ನು ಅತಿಯಾಗಿ ತಿನ್ನುವುದರಿಂದ ದಂತಕ್ಷಯಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ತಜ್ಞರು ಇದನ್ನು ಮಿತವಾಗಿ ಸೇವನೆ ಮಾಡಿ ಎಂದು ಎಚ್ಚರಿಕೆ ನೀಡುತ್ತಾರೆ.
  • ಅಂಜೂರದಲ್ಲಿ ಸಕ್ಕರೆ ಅಂಶವಿದೆ. ಅದಕ್ಕಾಗಿಯೇ ಅತಿಯಾಗಿ ತಿನ್ನುವುದು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಕಬ್ಬಿಣಾಂಶ ಭರಿತ ಅಂಜೂರವನ್ನು ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳಿದ್ದರೂ ಅತಿಯಾಗಿ ತಿಂದರೆ ಅನೇಕ ರೀತಿಯ ಅನಾನುಕೂಲಗಳು ಇವೆ.
  • ಅಂಜೂರದ ಹಣ್ಣುಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ ಅವುಗಳಲ್ಲಿರುವ ಫೈಬರ್ ಅಂಶ ಗ್ಯಾಸ್ ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. ಶಸ್ತ್ರಚಿಕಿತ್ಸೆಯ ನಂತರ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ರಕ್ತಸ್ರಾವದ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ವೈದ್ಯರ ಅನುಮತಿ ಇಲ್ಲದೆ ಇದನ್ನು ಸೇವನೆ ಮಾಡಬೇಡಿ.
  • ಮೂತ್ರಪಿಂಡದ ಸಮಸ್ಯೆ ಇರುವವರು ಕೂಡ ಅಂಜೂರ ಸೇವನೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಇದು ಅನುಕೂಲಕ್ಕಿಂತ ಅನಾನುಕೂಲಕ್ಕೆ ಕಾರಣವಾಗಬಹುದು.

ಸೂಚನೆ: ಅಂಜೂರದ ಈ ಅಡ್ಡಪರಿಣಾಮಗಳು ಅವುಗಳನ್ನು ಅತಿಯಾಗಿ ಸೇವಿಸಿದಾಗ ಮಾತ್ರ. ಹಾಗಾಗಿ ಇದನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದರೂ ಇದನ್ನು ಸೇವನೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ