AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fitness Tips: ವಯಸ್ಕರು ಫಿಟ್​ ಆಗಿರಲು ಈ ಕೆಲವು ಯೋಗ ಆಸನಗಳು ಸಹಾಯಕ

ಕಾಯಿಲೆಗಳಿಂದ ದೂರವಿರಲು ನೀವು ನಿಯಮಿತವಾದ ವ್ಯಾಯಾಮ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳುವುದು ಉತ್ತಮ. ವ್ಯಾಯಾಮವು ಮನಸ್ಥಿತಿಯನ್ನು ಸುಧಾರಿಸಲು ಮತ್ತು ದೇಹವನ್ನು ಸದೃಢವಾಗಿರಲು ಸಹಾಯ ಮಾಡುತ್ತದೆ.

Fitness Tips: ವಯಸ್ಕರು ಫಿಟ್​ ಆಗಿರಲು ಈ ಕೆಲವು ಯೋಗ ಆಸನಗಳು ಸಹಾಯಕ
ಯೋಗಾಸನ
TV9 Web
| Updated By: preethi shettigar|

Updated on: Nov 19, 2021 | 10:01 AM

Share

ವಯಸ್ಸಾಗಿದೆ ಎಂದರೆ ಫಿಟ್ನೆಸ್​ ವ್ಯಾಯಾಮಗಳನ್ನೆಲ್ಲಾ ದೂರವಿಡಬೇಕು ಅಂದೇನಲ್ಲ. ದುರ್ಬಲ ಸ್ನಾಯುಗಳು ಮತ್ತು ಮೂಳೆಗಳ ಕಾರಣದಿಂದ ವೃದ್ಧಾಪ್ಯವು ದೇಹದ ಚಲನೆಗಳನ್ನು ತಡೆಹಿಡಿಯುತ್ತವೆ. ಹೀಗಿರುವಾಗ ವಯಸ್ಸಾದರೂ ಚಟುವಟಿಕೆಯಿಂದ ಕೂಡಿರಲು ಜೊತೆಗೆ ಫಿಟ್ ಆಗಿರಲು, ನೀವು ಸ್ನಾಯು ಮತ್ತು ಮೂಳೆಗಳ ಆರೋಗ್ಯವನ್ನು ಸುಧಾರಿಸಿಕೊಳ್ಳುವುದರ ಜೊತೆಗೆ ಹೃದಯನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ದೂರವಿರಲು ನೀವು ನಿಯಮಿತವಾದ ವ್ಯಾಯಾಮ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳುವುದು ಉತ್ತಮ. ವ್ಯಾಯಾಮವು ಮನಸ್ಥಿತಿಯನ್ನು ಸುಧಾರಿಸಲು ಮತ್ತು ದೇಹವನ್ನು ಸದೃಢವಾಗಿರಲು ಸಹಾಯ ಮಾಡುತ್ತದೆ. ಹಾಗಿರುವಾಗ ವಯಸ್ಕರು ರೂಢಿಯಲ್ಲಿಟ್ಟುಕೊಳ್ಳಬಹುದಾದ ಯೋಗ ಆಸನಗಳು ಯಾವುವು? ಎಂಬುದು ಈ ಕೆಳಗಿನಮತಿದೆ ತಿಳಿಯಿರಿ.

ವಯಸ್ಕರು ರೂಢಿಯಲ್ಲಿಟ್ಟುಕೊಳ್ಳಬಹುದಾದ ಯೋಗ ಭಂಗಿಗಳು ವಯಸ್ಕರಲ್ಲಿ ಆರೋಗ್ಯ ಸುಧಾರಣೆಗೆ ಮತ್ತು ದೇಹದ ಸದೃಢತೆಗೆ ರೂಢಿಯಲ್ಲಿಟ್ಟುಕೊಳ್ಳಬಹುದಾದ ಯೋಗ ಭಂಗಿಗಳು ಈ ಕೆಳಗಿನಂತಿವೆ.

ಬದ್ಧಕೋನಾಸನ ಈ ಯೋಗ ಆಸನವನ್ನು ಚಿಟ್ಟೆ ಭಂಗಿ ಎಂದೂ ಕರೆಯುತ್ತಾರೆ ನಿಮ್ಮ ಕಾಲುಗಳನ್ನು ಮಡಚಿ ಆರಾಮವಾಗಿ ಕುಳಿತುಕೊಳ್ಳಿ ನಿಮ್ಮ ಕಾಲಿನ ಪಾದಗಳನ್ನು ಒಟ್ಟಿಗೆ ಸೇರಿಸಿ ನಿಮ್ಮ ಕೈಗಳಿಂದ ಕಾಲುಗಳ ಪಾದವನ್ನು ಹಿಡಿದುಕೊಳ್ಳಿ ಮತ್ತು ನಿಮ್ಮ ಬೆನ್ನು ನೇರವಾಗಿರಲಿ ನೀವು ವಿಶ್ರಾಂತಿ ಪಡೆಯಿರಿ ಮತ್ತು ಆ ಆಸನದಲ್ಲಿಯೇ ಆದಷ್ಟು ಹೊತ್ತು ಕುಳಿತುಕೊಳ್ಳಿ

ಕಟಿಚಕ್ರಾಸನ ಈ ರೋಗವನ್ನು ಬೆನ್ನುಮೂಳೆಯ ಟ್ವಿಸ್ಟ್​ ಭಂಗಿ ಎಂದೂ ಕರೆಯುತ್ತಾರೆ ನೀವು ನೇರವಾಗಿ ನಿಂತುಕೊಳ್ಳಿ ನಿಮ್ಮ ಕೈಗಳನ್ನು ಮುಂದಕ್ಕೆ ಚಾಚಿ ನಿಮ್ಮ ಬೆನ್ನುಹುರಿ ನೇರವಾಗಿರಲಿ, ನಿಮ್ಮ ಸೊಂಟದಿಂದ ಮೇಲಿನ ಭಾಗವನ್ನು ಬಲಭಾಗಕ್ಕೆ ತಿರುಗಿಸಿ ಹಿಂದಕ್ಕೆ ನೋಡಿ ಇದನ್ನು ಮಾಡುವಾಗ ಒಂದು ಕೈಯನ್ನು ನಿಮ್ಮ ಭುಜದ ಮೇಲೆ ಹಾಗೂ ಮತ್ತೊಂದು ಕೈ ನಿಮ್ಮ ಬೆನ್ನಿನ ಹಿಂದೆ ಇರಿಸಿ

ಭುಜಂಗಾಸನ ನಿಮ್ಮ ಹೊಟ್ಟೆಯ ಮೇಲೆ ನೇರವಾಗಿ ಮಲಗಿಕೊಳ್ಳಿ ನಿಮ್ಮ ಅಂಗೈಗಳನ್ನು ನಿಮ್ಮ ಭುಜದ ಪಕ್ಕದಲ್ಲಿ ಊರಿ ಮೇಲೆದ್ದುಕೊಳ್ಳಿ ಮೇಲಕ್ಕೆ ನೋಡುತ್ತಿರಿ ಮತ್ತು ಉಸಿರಾಟವನ್ನು ನಿಯಂತ್ರಿಸಿ ಬಳಿಕ ನಿಮ್ಮ ದೇಹವನ್ನು ಆರಂಭಿಕ ಸ್ಥಾನಕ್ಕೆ ಹಿಂತಿರುಗಿಸಿ ಈ ಹಂತವನ್ನು ಕನಿಷ್ಠ 5 ಬಾರಿಯಾದರೂ ಪುನರಾವರ್ತಿಸಿ

ಶವಾಸನ ನೇರವಾಗಿ ಮಲಗಿಕೊಳ್ಳಿ ನಿಮ್ಮ ದೇಹಕ್ಕೆ ವಿಶ್ರಾಂತಿ ಕೊಡಿ ಉಸಿರಾಟ ಕ್ರಿಯೆಯನ್ನು ಗಮನಿಸಿ ತಲೆಯಿಂದ ಕಾಲ್ಬೆರಳುಗಳವರೆಗೆ ನಿಮ್ಮ ದೇಹದ ಪ್ರತಿಯೊಂದು ಭಾಗದ ಮೇಲೆ ಕೇಂದ್ರೀಕರಿಸಿ ಕನಿಷ್ಠ 5 ನಿಮಿಷಗಳ ಕಾಲ ಶಾಂತವಾಗಿ ಮಲಗಿಕೊಳ್ಳಿ

ಇದನ್ನೂ ಓದಿ:

Yogasana Benefits: ಮೂಳೆಗಳ ಬಲಕ್ಕೆ ಪ್ರತಿದಿನ ಈ ಯೋಗಾಸನಗಳನ್ನು ಮಾಡಿ

Health Benefits: ಕಟಿ ಚಕ್ರಾಸನ ಮಾಡುವುದು ಹೇಗೆ? ಹೊಟ್ಟೆಯಲ್ಲಿನ ಕೊಬ್ಬು ಕರಗಿಸಲು 15 ನಿಮಿಷಗಳ ಕಾಲ ಈ ಯೋಗಾಸನ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ