ಋತುಚಕ್ರದ ಸಮಯದಲ್ಲಿ ಈ ಆಹಾರಗಳನ್ನು ಕಡ್ಡಾಯವಾಗಿ ಸೇವಿಸಬೇಕು!

ಋತುಚಕ್ರದ ಸಮಯದಲ್ಲಿ ಪ್ರತಿನಿತ್ಯ ಸೇವಿಸುವ ಆಹಾರದ ಬಗ್ಗೆ ವಿಶೇಷ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಇದು ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಸರಿಯಾದ ಆಹಾರ ನೋವು ಮತ್ತು ದೌರ್ಬಲ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾದರೆ ಮುಟ್ಟಿನ ಸಮಯದಲ್ಲಿ ಯಾವ ರೀತಿಯ ಆಹಾರಗಳು ದೇಹಕ್ಕೆ ಒಳ್ಳೆಯದು ಮತ್ತು ಹೇಗೆ ಪ್ರಯೋಜನಕಾರಿ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಋತುಚಕ್ರದ ಸಮಯದಲ್ಲಿ ಈ ಆಹಾರಗಳನ್ನು ಕಡ್ಡಾಯವಾಗಿ ಸೇವಿಸಬೇಕು!
Eating Right for Period Pain Relief
Image Credit source: Getty Images

Updated on: Feb 18, 2026 | 7:13 PM

ಋತುಚಕ್ರ (Periods) ಅಥವಾ ಮುಟ್ಟಿನ ಸಮಯದಲ್ಲಿ ಆಹಾರದ ಬಗ್ಗೆ ವಿಶೇಷ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ಈ ಸಮಯದಲ್ಲಿ, ದೇಹದಲ್ಲಾಗುವ ಹಾರ್ಮೋನುಗಳ ಬದಲಾವಣೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಸಮಯದಲ್ಲಿ ಮಹಿಳೆಯರು ನೋವು, ಹೊಟ್ಟೆ ಸೆಳೆತ, ಆಯಾಸ, ದೌರ್ಬಲ್ಯ ಮತ್ತು ಮನಸ್ಥಿತಿಯಲ್ಲಿ ಬದಲಾವಣೆಗಳಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಕೆಲವರಿಗೆ ತಲೆನೋವು ಅಥವಾ ಬೆನ್ನುನೋವು ಕೂಡ ಕಾಡಬಹುದು. ಹಾಗಾಗಿ ಇಂತಹ ಸಮಯದಲ್ಲಿ ಸರಿಯಾದ ಆರೈಕೆ ಮತ್ತು ಸಮತೋಲಿತ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಇಲ್ಲವಾದಲ್ಲಿ ದೌರ್ಬಲ್ಯ ಮತ್ತು ಕಿರಿಕಿರಿ ಹೆಚ್ಚಾಗಬಹುದು. ಆದ್ದರಿಂದ, ದೇಹದ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಪೌಷ್ಟಿಕ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಒಳ್ಳೆಯದು. ಹಾಗಾದರೆ ಮುಟ್ಟಿನ ಸಮಯದಲ್ಲಿ ಯಾವ ರೀತಿಯ ಆಹಾರಗಳು ದೇಹಕ್ಕೆ ಒಳ್ಳೆಯದು ಮತ್ತು ಹೇಗೆ ಪ್ರಯೋಜನಕಾರಿ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪಿರಿಯಡ್ಸ್ ಸಮಯದಲ್ಲಿ ಸೇವಿಸಬೇಕಾದ ಆಹಾರಗಳು:

ಋತುಚಕ್ರದ ಸಮಯದಲ್ಲಿ ಕಬ್ಬಿಣಾಂಶಯುಕ್ತ ಆಹಾರವನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ ಏಕೆಂದರೆ ದೇಹದಿಂದ ರಕ್ತದ ಹೊರಹೋಗುವುದರಿಂದ ಸೊಪ್ಪು, ತರಕಾರಿ, ದಾಳಿಂಬೆ, ಬೀಟ್ರೂಟ್ ಮತ್ತು ಬೆಳೆ ಉತ್ತಮ ಆಯ್ಕೆಗಳಾಗಿವೆ. ಹಾಲು, ಮೊಸರು, ಬಾದಾಮಿ ಮತ್ತು ಎಳ್ಳಿನಂತಹ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರಗಳು ನೋವು ಮತ್ತು ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾಳೆಹಣ್ಣು ಮತ್ತು ಓಟ್ಸ್ ನಂತಹ ಆಹಾರಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ಶುಂಠಿ ಮತ್ತು ಅರಿಶಿನ ಬೆರೆಸಿದ ಹಾಲು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹವನ್ನು ಹೈಡ್ರೀಕರಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಾಕಷ್ಟು ನೀರು ಕುಡಿಯುವುದು ಕೂಡ ಬಹಳ ಮುಖ್ಯವಾಗುತ್ತದೆ. ಜೊತೆಗೆ ಸೂಪ್‌ ಮತ್ತು ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡುವುದು ದೇಹಕ್ಕೆ ಒಳ್ಳೆಯದು.

ಇದನ್ನೂ ಓದಿ: ಹೆರಿಗೆಯ ನಂತರ ಮುಟ್ಟು ವಿಳಂಬವಾಗುವುದು ಅಪಾಯಕಾರಿಯೇ? ಯಾವಾಗ ವೈದ್ಯರ ಸಲಹೆ ಪಡೆಯಬೇಕು?

ಮುಟ್ಟಿನ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬಾರದು?

ಋತುಚಕ್ರದ ಸಮಯದಲ್ಲಿ, ಅತಿಯಾದ ಉಪ್ಪು, ಕರಿದ ಮತ್ತು ಮಸಾಲೆಯುಕ್ತ ಆಹಾರಗಳ ಸೇವನೆ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ಅವು ಊತ ಮತ್ತು ಹೊಟ್ಟೆ ನೋವನ್ನು ಹೆಚ್ಚಿಸಬಹುದು. ಕಾಫಿ ಮತ್ತು ತಂಪು ಪಾನೀಯಗಳಂತಹ ಹೆಚ್ಚಿನ ಕೆಫೀನ್ ವಸ್ತುಗಳು ಆತಂಕ ಮತ್ತು ಚಡಪಡಿಕೆಯನ್ನು ಹೆಚ್ಚಿಸಬಹುದು. ಹೆಚ್ಚು ಸಕ್ಕರೆ ಸೇವಿಸುವುದರಿಂದ ಮನಸ್ಥಿತಿ ಬದಲಾವಣೆ ಮತ್ತು ಆಯಾಸವೂ ಹೆಚ್ಚಾಗುತ್ತದೆ. ಸಂಸ್ಕರಿಸಿದ ಆಹಾರಗಳು ಮತ್ತು ಪ್ಯಾಕ್ ಮಾಡಿದ ತಿಂಡಿಗಳ ಸೇವನೆ ಕೂಡ ಒಳ್ಳೆಯದಲ್ಲ. ಹಾಗಾಗಿ ಈ ರೀತಿಯ ಆಹಾರಗಳಿಂದ ಆದಷ್ಟು ದೂರವಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ