ಹೆರಿಗೆಯ ನಂತರ ಮುಟ್ಟು ವಿಳಂಬವಾಗುವುದು ಅಪಾಯಕಾರಿಯೇ? ಯಾವಾಗ ವೈದ್ಯರ ಸಲಹೆ ಪಡೆಯಬೇಕು?
ಹೆರಿಗೆಯ ನಂತರ, ಮಹಿಳೆಯರ ದೇಹದಲ್ಲಿ ಊಹಿಸಲೂ ಸಾಧ್ಯವಾಗದ ಬದಲಾವಣೆಗಳು ಕಂಡುಬರುತ್ತದೆ. ಈ ಸಮಯದಲ್ಲಿ, ಮುಟ್ಟಿನ ಚಕ್ರವು ನಿಲ್ಲುವುದು ಅಥವಾ ತಡವಾಗಿ ಪ್ರಾರಂಭವಾಗುವುದು ಸಾಮಾನ್ಯ. ಆದರೆ ಹೆರಿಗೆಯ ನಂತರ ಮುಟ್ಟು ಯಾವಾಗ ಪ್ರಾರಂಭವಾಗಬೇಕು ಜೊತೆಗೆ ಅದು ವಿಳಂಬವಾದರೆ ಏನಾಗಬಹುದು ಎಂಬುದನ್ನು ಪ್ರತಿಯೊಬ್ಬ ಮಹಿಳೆಯೂ ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಹೆರಿಗೆಯ ನಂತರ ಯಾವಾಗ ಋತುಚಕ್ರ ಆರಂಭವಾಗುತ್ತದೆ, ಸಮಯಕ್ಕೆ ಸರಿಯಾಗಿ ಮುಟ್ಟಾಗದಿರುವುದು ಅಪಾಯಕಾರಿಯೇ, ಇಂತಹ ಸಮಯದಲ್ಲಿ ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೆರಿಗೆಯ ನಂತರ, ಮಹಿಳೆಯರ ದೇಹದಲ್ಲಿ ವಿವಿಧ ರೀತಿಯ ಬದಲಾವಣೆಗಳಾಗುತ್ತದೆ ಜೊತೆಗೆ ಹಾರ್ಮೋನುಗಳಲ್ಲಿ ವ್ಯತಾಸ ಉಂಟಾಗುತ್ತದೆ. ಈ ಸಮಯದಲ್ಲಿ, ಮುಟ್ಟಿನ ಚಕ್ರವು ನಿಲ್ಲುವುದು ಅಥವಾ ತಡವಾಗಿ ಪ್ರಾರಂಭವಾಗುವುದು ಸಾಮಾನ್ಯ. ಆದರೆ ಮಹಿಳೆಯರಿಗೆ ಇದರ ಬಗ್ಗೆ ಅನೇಕ ಗೊಂದಲ ಮತ್ತು ಬಗೆಹರಿಯದಂತಹ ಪ್ರಶ್ನೆಗಳಿರುತ್ತವೆ. ಕೆಲವರಿಗೆ, ಹೆರಿಗೆಯ (Delivery) ನಂತರ ಕೆಲವು ತಿಂಗಳುಗಳ ನಂತರ ಮುಟ್ಟು (Period) ಬರುತ್ತದೆ, ಇನ್ನುಕೆಲವರಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಈ ಪರಿಸ್ಥಿತಿ ಮಹಿಳೆಯಿಂದ ಮಹಿಳೆಗೆ ಬದಲಾಗಬಹುದು. ಆದರೆ ಹೆರಿಗೆಯ ನಂತರ ಮುಟ್ಟು ಯಾವಾಗ ಪ್ರಾರಂಭವಾಗಬೇಕು ಜೊತೆಗೆ ಅದು ವಿಳಂಬವಾದರೆ ಏನಾಗಬಹುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಹೆರಿಗೆಯ ನಂತರ ಯಾವಾಗ ಋತುಚಕ್ರ (Menstrual Cycle) ಆರಂಭವಾಗುತ್ತದೆ, ಸಮಯಕ್ಕೆ ಸರಿಯಾಗಿ ಮುಟ್ಟಾಗದಿರುವುದು ಅಪಾಯಕಾರಿಯೇ, ಇಂತಹ ಸಮಯದಲ್ಲಿ ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಹೆರಿಗೆ ನಂತರ ಮುಟ್ಟು ಯಾವಾಗ ಪ್ರಾರಂಭವಾಗಬೇಕು?
ಹೆರಿಗೆಯ ನಂತರ ಮುಟ್ಟು ಮಹಿಳೆಯ ದೈಹಿಕ ಸ್ಥಿತಿ ಮತ್ತು ದಿನಚರಿಯನ್ನು ಅವಲಂಬಿಸಿರುತ್ತದೆ ಎಂದು ಆರ್‌ಎಂಎಲ್ ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಸಲೋನಿ ಚಾಧಾ ಹೇಳುತ್ತಾರೆ. ಅವರು ಹೇಳುವ ಪ್ರಕಾರ, ಸಾಮಾನ್ಯವಾಗಿ ಎದೆಹಾಲುಣಿಸದ ಮಹಿಳೆಯರಿಗೆ 6 ರಿಂದ 8 ವಾರಗಳಲ್ಲಿ ಮುಟ್ಟು ಮರಳಬಹುದು. ಮತ್ತೊಂದೆಡೆ, ನಿಯಮಿತವಾಗಿ ಹಾಲುಣಿಸುವ ಮಹಿಳೆಯರಿಗೆ ಮುಟ್ಟು ಮರಳಲು 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ಒಂದು ವರ್ಷದವರೆಗೆ ಮಹಿಳೆ ಮುಟ್ಟಾಗದಿರಬಹುದು. ಈ ರೀತಿಯಾಗುವುದು ಬಹಳ ಸಾಮಾನ್ಯ. ಜೊತೆಗೆ ಆರಂಭದಲ್ಲಿ, ಮುಟ್ಟು ಅನಿಯಮಿತವಾಗಿರಬಹುದು, ಕ್ರಮೇಣ, ದೇಹವು ಅದರ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಬಳಿಕ ಋತುಚಕ್ರ ಅಥವಾ ಮುಟ್ಟು ನಿಯಮಿತವಾಗುತ್ತದೆ.
ಸಮಯಕ್ಕೆ ಸರಿಯಾಗಿ ಋತುಚಕ್ರವಾಗದಿರುವುದು ಅಪಾಯಕಾರಿಯೇ?
ಹೆರಿಗೆಯ ನಂತರ ತಡವಾಗಿ ಋತುಚಕ್ರವಾಗುವುದು ಅಪಾಯಕಾರಿಯಲ್ಲ. ಆದರೆ ಇದು ದೇಹದ ಸಾಮಾನ್ಯ ಚೇತರಿಕೆ ಪ್ರಕ್ರಿಯೆಯ ಭಾಗವಾಗಿದೆ. ಋತುಚಕ್ರ ದೀರ್ಘಕಾಲದವರೆಗೆ ಬರದಿದ್ದರೆ ಜೊತೆಗೆ ದೌರ್ಬಲ್ಯ, ತೀವ್ರ ಆಯಾಸ, ಹೊಟ್ಟೆ ನೋವು ಅಥವಾ ಅಸಹಜ ಸ್ರಾವದಂತಹ ಲಕ್ಷಣ ಕಂಡುಬಂದರೆ, ಅದು ಸಮಸ್ಯೆಯನ್ನು ಸೂಚಿಸುತ್ತದೆ. ಅಲ್ಲದೆ ಹಾರ್ಮೋನುಗಳ ಅಸಮತೋಲನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಋತುಚಕ್ರದ ಮೇಲೆ ನಿಗಾ ಇಡುವುದು ಮತ್ತು ಅಗತ್ಯವಿದ್ದಾಗ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.
ಇದನ್ನೂ ಓದಿ: ಪಿರಿಯಡ್ಸ್ ಸಮಯದಲ್ಲಿ ಈ ರೀತಿಯ ಆಹಾರಕ್ರಮ ಆರೋಗ್ಯ ಸಮಸ್ಯೆಗಳಿಂದ ದೂರವಿಡುತ್ತೆ!
ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?
- ಹೆರಿಗೆಯ ನಂತರ ಒಂದು ವರ್ಷದ ನಂತರವೂ ಮುಟ್ಟಾಗದಿದ್ದರೆ.
- ಮುಟ್ಟಿನ ಸಮಯದಲ್ಲಿ ತೀವ್ರ ನೋವು ಅಥವಾ ತಲೆತಿರುಗುವಿಕೆ ಕಂಡುಬರುತ್ತಿದ್ದರೆ.
- ಒಮ್ಮೆಲೇ ತೂಕ ಹೆಚ್ಚಾಗುವುದು ಅಥವಾ ಸುಸ್ತಾಗುತ್ತಿದ್ದರೆ.
- ಅಸಹಜ ಅಥವಾ ಮೂತ್ರ ವಿಸರ್ಜನೆ ಮಾಡುವಾಗ ದುರ್ವಾಸನೆ ಕಂಡುಬಂದರೆ.
ಇಂತಹ ಸಂದರ್ಭಗಳಲ್ಲಿ, ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವುದು ಮಹಿಳೆಯರ ಆರೋಗ್ಯಕ್ಕೆ ಬಹಳ ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




