ಚಳಿಗಾಲದಲ್ಲಿ ಸೈನಸ್ ಸಮಸ್ಯೆಗಳು ಹೆಚ್ಚಾಗುವುದಕ್ಕೆ ಕಾರಣವೇನು? ತಡೆಯಲು ಈ ರೀತಿ ಮಾಡಿ
ಚಳಿಗಾಲದಲ್ಲಿ ಸೈನಸ್ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೆಯೇ ನಿರ್ಲಕ್ಷ್ಯ ಮಾಡುವುದರಿಂದ ವಿವಿಧ ರೀತಿಯ ಅಸ್ವಸ್ಥತೆಗೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ಮದ್ದು ಮಾಡದಿದ್ದರೆ ಅದು ಕಿವಿಯ ಸೋಂಕಿಗೆ ಕಾರಣವಾಗಬಹುದು. ಹಾಗಾಗಿ ಸೈನಸ್ ಕಂಡುಬರುವುದಕ್ಕೆ ಕಾರಣವೇನು? ಈ ರೀತಿಯ ಸಮಸ್ಯೆಯನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ತಿಳಿಯುವುದು ಬಹಳ ಅನಿವಾರ್ಯವಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಚಳಿಗಾಲದಲ್ಲಿ (Winter), ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವುದು ಬಹಳ ಸಾಮಾನ್ಯ. ಅದರಲ್ಲಿ ಸೈನಸ್ (Sinusitis) ಕೂಡ ಒಂದು. ಇದು ಒಬ್ಬ ವ್ಯಕ್ತಿಗೆ ಬಹಳಷ್ಟು ಕಿರಿಕಿರಿ ಉಂಟುಮಾಡಬಹುದು. ಅಷ್ಟೇ ಅಲ್ಲ, ನಿರಂತರ ಶೀತ, ಜ್ವರ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದೆಲ್ಲದರ ಜೊತೆಗೆ ಚಳಿಯಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದರಿಂದ, ಸಣ್ಣ ನಿರ್ಲಕ್ಷ್ಯವೂ ಕೂಡ ಶೀತ ಅಥವಾ ಜ್ವರ ಸೈನುಟಿಸ್ ಅಥವಾ ಕಿವಿ ಸೋಂಕಾಗಿ ಬದಲಾಗಬಹುದು. ಸಮಯಕ್ಕೆ ಸರಿಯಾಗಿ ಮದ್ದು ಮಾಡದಿದ್ದರೆ ಅದು ಕಿವಿಯ ಸೋಂಕಿಗೆ ಕಾರಣವಾಗಬಹುದು. ಹಾಗಾಗಿ ಸೈನಸ್ ಕಂಡುಬರುವುದಕ್ಕೆ ಕಾರಣವೇನು, ಈ ರೀತಿಯ ಸಮಸ್ಯೆಯನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ತಿಳಿಯುವುದು ಬಹಳ ಅನಿವಾರ್ಯವಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಮೂಗಿನಲ್ಲಿರುವ ಲೋಳೆಯಿಂತಿರುವ ಪೊರೆ ಒಣಗಿ, ಸೈನಸ್ ಸಮಸ್ಯೆ ಹೆಚ್ಚಾಗುತ್ತದೆ. ಹೆಚ್ಚಿನವರು ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ, ಆದರೆ ಅನೇಕರಲ್ಲಿ ಇದು ಕಿವಿ ಸಂಬಂಧಿತ ಸೋಂಕಿಗೆ ಕಾರಣವಾಗಬಹುದು ಮತ್ತು ಮೂಗಿನಲ್ಲಿ ಪೊರೆಗಳು ಸಂಗ್ರಹವಾಗಲು ಕಾರಣವಾಗಬಹುದು. ಮೂಗಿನ ಮಾರ್ಗದಲ್ಲಿ ಲೋಳೆಯ ಸಂಗ್ರಹವಾದಲ್ಲಿ ಅದು ಪೊರೆಯಂತಹ ಪದರವನ್ನು ರೂಪಿಸಬಹುದು. ಇಂತಹ ಪರಿಸ್ಥಿತಿಯಲ್ಲಿ, ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಬಹುದು.
ಯಾರಲ್ಲಿ ಈ ಸಮಸ್ಯೆ ಕಂಡುಬರುತ್ತದೆ?
ಸೈನಸ್ ಸಮಸ್ಯೆಗಳಿಂದ ಪದೇ ಪದೇ ಬಳಲುತ್ತಿರುವವರು ಚಳಿಗಾಲದ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಇದರ ಜೊತೆಗೆ, ಅಲರ್ಜಿ, ಅಸ್ತಮಾ ಅಥವಾ ಆಗಾಗ ಶೀತದಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ, ಧೂಮಪಾನ ಮಾಡುವವರಲ್ಲಿ ಈ ಅಪಾಯ ಹೆಚ್ಚಾಗಬಹುದು. ಏಕೆಂದರೆ ಹೊಗೆ ಮೂಗಿನ ಒಳಪದರವನ್ನು ಹಾನಿಗೊಳಿಸುತ್ತದೆ.
ಇದನ್ನೂ ಓದಿ: ಪದೇ ಪದೇ ಶೀತವಾಗುತ್ತಾ, ಕೆಮ್ಮು ಒಮ್ಮೆ ಶುರುವಾದರೆ ಕಡಿಮೆನೇ ಆಗ್ತಾ ಇಲ್ವಾ? ಇದಕ್ಕೆ ಕಾರಣ ಏನು ಗೊತ್ತಾ?
ಸೈನಸ್ ಸಮಸ್ಯೆಯನ್ನು ತಡೆಯುವುದು ಹೇಗೆ?
- ಹೊರಗಡೆ ಹೋಗುವಾಗ ಗಾಳಿ ಇದ್ದಲ್ಲಿ ಮೂಗು ಮತ್ತು ಕಿವಿಯನ್ನು ಮುಚ್ಚಿಕೊಳ್ಳುವ ಮೂಲಕ ಬೆಚ್ಚಗಿಟ್ಟುಕೊಳ್ಳಿ.
- ಲೋಳೆಯು ತೆಳುವಾಗಿಡಲು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
- ಧೂಳು ಇತ್ಯಾದಿ ಅಲರ್ಜಿ ಉಂಟುಮಾಡುವ ಅಂಶಗಳಿಂದ ದೂರವಿರಿ.
- ಮೂಗಿನ ದಟ್ಟಣೆ, ಕಿವಿ ನೋವು ಅಥವಾ ತಲೆತಿರುಗುವಿಕೆ ಕೆಲವು ದಿನಗಳವರೆಗೆ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




